ನಮ್ ಶಾಲೆಗೆ ಬನ್ನಿ ಸಾರ್… ಎನ್ನುವ ಪ್ರೀತಿಯ ಕರೆ

ಸಮುದಾಯದತ್ತ ಶಾಲೆ ಕಾರ್ಯಕ್ರಮಕ್ಕೆ ಅಲ್ಲಿನ  ಶಾಲೆಗಳಿಗೆ ಅಲ್ಲಿನ ಅಧ್ಯಾಪಕರ ಜೊತೆಗೆ ನಡೆದುಕೊಂಡೇ ಹೋಗಿ ಬಂದಾಗ ಅಲ್ಲಿನ ನಿಜವಾದ ಪರಿಸ್ಥಿತಿಯ ಅರಿವಾಗುತ್ತಿತ್ತು. ಶಾಲೆವರೆಗೂ ಬಂದರೆ ಆ ಶಾಲೆಯ ಅಧ್ಯಾಪಕರು ಬಹಳ ಪ್ರೀತಿಯಿಂದ ‘ಸಾರ್ ನೀವು ಶಾಲೆವರೆಗೂ ಬರುತ್ತೀರಿ ಅನ್ನುವುದೇ ಸಂತೋಷ. ಯಾವ ಅಧಿಕಾರಿಯೂ ಇಲ್ಲಿವರೆಗೆ ಬಂದುದ್ದೇ ಇಲ್ಲ’ ಎಂದು ತಮ್ಮ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಿದ್ದರು. ಗಣಿತ ಮೇಷ್ಟರ ಶಾಲಾ ಡೈರಿ ಸರಣಿಯಲ್ಲಿ ಅರವಿಂದ ಕುಡ್ಲ ಲೇಖನ 

Read More