ಕಾರ್ತಿಕ್ ಕೃಷ್ಣ ಬರೆಯುವ “ಒಲಂಪಿಕ್ಸ್ ಅಂಗಣ” ಸರಣಿ ಇಂದಿನಿಂದ
ಭವ್ಯವಾದ ಉತ್ಸವದಲ್ಲಿ ಪಾಲ್ಗೊಳ್ಳುವುದೇ ಹಲವಾರು ಕ್ರೀಡಾಪಟುಗಳ ಕನಸು. ಅದನ್ನು ಸಾಕಾರಗೊಳಿಸಲು ಹಗಲಿರುಳು ಶ್ರಮಿಸುವ ಎಷ್ಟೋ ಅಥ್ಲೀಟ್‌ಗಳಲ್ಲಿ ಗುರಿಮುಟ್ಟುವುದು ಬೆರಳೆಣಿಕೆಯ ಮಂದಿಯಷ್ಟೇ! ಉಳಿದವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದೆ ತಮ್ಮ ಸೌಭಾಗ್ಯವೆಂದು ಮುಂದಿನ ನಾಲ್ಕು ವರುಷಗಳನ್ನು ಇನ್ನಷ್ಟು ತಯಾರಿಯೊಂದಿಗೆ ಕಳೆಯುತ್ತಾರೆ. ಸೋತವರು ಒಂದೆಡೆಯಾದರೆ, ಕೂದಲೆಳೆಯ ಅಂತರದಲ್ಲಿ ಪದಕ ವಂಚಿತರಾದವರು ಇನ್ನೊಂದೆಡೆ. ಇಲ್ಲಿ ದಾಖಲೆಗಳು ಸೃಷ್ಟಿಯಾಗುತ್ತವೆ, ದಾಖಲೆಗಳು ಧೂಳಿಪಟವಾಗುತ್ತವೆ. ಕಾರ್ತಿಕ್ ಕೃಷ್ಣ ಹೊಸ ಸರಣಿ “ಒಲಂಪಿಕ್ಸ್ ಅಂಗಣ” ಪ್ರತಿ ಶನಿವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ
Read More