ʻದ ಮಿಲ್ಕ್ ಆಫ್ ಸಾರೋʼ: ವಿಷಾದದ ಹನಿಗಳು
ಈ ಚಿತ್ರದಲ್ಲಿ ಮೊದಲ ಹಾಡಿನ ಭಾವದ ನೆಲೆಯಲ್ಲಿಯೇ ಚಿತ್ರದ ಕಥನವಿದೆ. ಚಿತ್ರ ತೆರೆದುಕೊಳ್ಳುತ್ತಿದ್ದಂತೆ ಈ ವಿಷಾದ ಭಾವವನ್ನು ಇನ್ನೊಂದು ರೀತಿಯಲ್ಲಿ ಸ್ಥಿರಪಡಿಸುತ್ತಾಳೆ ನಿರ್ದೇಶಕಿ. ಮದುವೆಗೆ ಸಿದ್ಧವಾಗುತ್ತಿರುವ ಮ್ಯಾಕ್ಸಿಮಾ ತನ್ನ ಸ್ಕರ್ಟಿನ ಸೊಂಟಕ್ಕಿರುವ ಬಟ್ಟೆಯ ಉದ್ದ ಸಾಲದೆಂದು ಕೂಗಾಡುವಾಗ ಮೆಲ್ಲನೆ ಹೆಜ್ಜೆ ಇಟ್ಟು ಬರುತ್ತಾಳೆ ಫಾಸ್ಟಾ. ಅವಳಿಗೆ ಎದುರಾಗುತ್ತದೆ ಮದುವೆಗೆ ಸಂಬಂಧಪಟ್ಟ ವಿಷಯ. ಮದುವೆ! ಅವಳಿಗೆ ಅಷ್ಟೇ ಸಾಕಾಗುತ್ತದೆ. ಗಂಡು-ಹೆಣ್ಣಿಗೆ ಸಂಬಂಧಿಸಿದ, ಅವರಿಬ್ಬರ ಸಮಾಗಮಕ್ಕೆ ಅನುವುಮಾಡಿಕೊಡುವ ವಿಷಯ!
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಪೆರು ದೇಶದ ʻದ ಮಿಲ್ಕ್ ಆಫ್ ಸಾರೋʼ