ಅರ್ಥಲೋಕದ ಬೆರಗುಗಳ ಅನಾವರಣ
ಈ ಕಾದಂಬರಿಯ ಕಥನ ಶೈಲಿ ಸರಳವಾಗಿಲ್ಲ; ಯಾಕೆಂದರೆ, ಇಕೋ ತಾನು ಪ್ರಸ್ತುತ ಪಡಿಸುತ್ತಿರುವುದು ಮಧ್ಯಯುಗೀಯ ಅಧಿಕೃತ ಹಸ್ತಪ್ರತಿಯೆಂಬ ಕಲ್ಪನೆ ಓದುಗರಲ್ಲಿ ಮೂಡಿಸಲಿಕ್ಕಾಗಿ ಪ್ರಯತ್ನಿಸಿದ್ದಾನೆ. ಮಧ್ಯಯುಗದ ಐತಿಹಾಸಿಕ ವಿವರಗಳು, ಅಂದಿನ ಸಮಕಾಲೀನ ಚರ್ಚೆಗಳು, ಆವಿಷ್ಕಾರಗಳು, ಚರ್ಚು ಮತ್ತದರ ಆಂತರಿಕ ವಿವಾದಗಳು, ಇತ್ಯಾದಿ ಅನೇಕ ವಿವರಗಳನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಅನೇಕ ಸಮಕಾಲೀನ ವಿದ್ವಾಂಸರು, ಅನೇಕ ಭಾಷೆಗಳಲ್ಲಿರುವ ಅವರ ಬರಹಗಳನ್ನು, ಅನೇಕ ಪುರಾತನ ಉದ್ಧರಣಗಳನ್ನು ಉಲ್ಲೇಖಿಸಲಾಗಿದೆ.
ಉಂಬರ್ಟೋ ಇಕೋ ಬರೆದ “ದ ನೇಮ್ ಆಫ್ ದ ರೋಸ್”ಕಾದಂಬರಿಯ ಕುರಿತು ಬರೆದಿದ್ದಾರೆ ಕಮಲಾಕರ ಕಡವೆ