ಇದ್ದ ಮೂವರಲ್ಲಿ ಕದ್ದವರು ಯಾರು?

ಹಿಂದೊಮ್ಮೆ ಹುಸೇನ್ ಸಾಬ್‌ಗೆ ಹೊಲ ಮಾಡಲು ಕೊಟ್ಟಾಗ ಸುತ್ತಲೂ ಒಂದೈವತ್ತು ಅಪ್ಪೆ ಮಿಡಿ ಗಿಡಗಳನ್ನು ನೆಟ್ಟಿದ್ದೆ. ಸ್ವಲ್ಪ ಬೆಳೆದಾದ ಮೇಲೆ ಪೂರ್ತಿ ಗಿಡಗಳನ್ನು ಬೆಂಕಿ ಹಚ್ಚಿ ಇಲ್ಲದಂತೆ ಮಾಡಿದ್ದರು. ಬೆಂಕಿ ಹಚ್ಚಿದ್ದು ಯಾರು ಅಂತ ಕೊನೆಗೂ ಗೊತ್ತಾಗಲಿಲ್ಲ. ಒಬ್ಬರ ಮೇಲೆ ಒಬ್ಬರು ಹಾಕಿ ನನ್ನನ್ನು ಮಂಗ ಮಾಡಿದ್ದರು! ಇಲ್ಲಿನವರೆ ಕಳ್ಳರು, ಆ ಜಾತಿಯವರನ್ನು ನಂಬಬಾರದು ಅಂತೆಲ್ಲ ಹೇಳೋದೆಲ್ಲ ತಪ್ಪು. ಕಳ್ಳರದೇ ಒಂದು ಪ್ರತ್ಯೇಕ ಜಾತಿ! ಏನಾಗುತ್ತೋ ನೋಡೋಣ ಅಂತ ಸುಮ್ಮನಾದೆ. ಆದರೂ ಮುಂದೊಮ್ಮೆ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬೇಕು ಅಂತ ನಿರ್ಧರಿಸಿದೆ.
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣದ 17ನೇ ಕಂತು

Read More