ಗುಡುಗು, ಮಿಂಚು ಸುರಿಸುವ ಮಾಂತ್ರಿಕರು: ಇ.ಆರ್. ರಾಮಚಂದ್ರನ್ ಅಂಕಣ
ಆ ಪಂದ್ಯದಲ್ಲಿ ವಿವಿಎಸ್ 167 ರನ್ ಹೊಡೆದರು… ಚಚ್ಚಿದರು ಅನ್ನುವ ಪದ ಇನ್ನೂ ಸರಿಹೋಗಬಹುದು. ಮಿಕ್ಕವರ ಸ್ಕೋರ್? ಗಂಗೂಲಿ 25, ಬೋಲರ್‌ಗಳಾದ ಕುಂಬ್ಳೆ, ಶ್ರಿನಾಥ್ ತಲಾ 15! ಮಿಕ್ಕವರೆಲ್ಲರೂ ಒಂದು ಅಂಕಕ್ಕೆ ಔಟಾದರು! ಎಕ್ಸ್ಟ್ರಾಸ್ 21! ವಿಶೇಷವೆಂದರೆ ಆಸ್ಟ್ರೇಲಿಯಾದ ಹೆಸರಾಂತ ಬೋಲರ್‌ಗಳಾದ ಶೇನ್ ವಾರ್ನ್ 13 ಓವರ್‌ಗಳಿಗೆ 60 ರನ್ ಮತ್ತು ಫಾಸ್ಟ್ ಬೋಲರ್ ಬ್ರೆಟ್ ಲೀ 11 ಓವರ್‌ಗೆ 67 ರನ್ ಕೊಟ್ಟಿದ್ದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ವಿವಿಎಸ್ ಲಕ್ಷ್ಮಣ್ ಮತ್ತು ವೀರೇಂದ್ರ ಸೆಹ್ವಾಗ್ ಕುರಿತ ಬರಹ ನಿಮ್ಮ ಓದಿಗೆ