Advertisement

Tag: ಆಸ್ಟ್ರೇಲಿಯಾ

ಜೋಡಿಯ ಜೊತೆ, ಪ್ರಧಾನಿಯ ಮದುವೆ: ವಿನತೆ ಶರ್ಮ ಅಂಕಣ

ಕಾಸ್ಟ್ ಆಫ್ ಲಿವಿಂಗ್ ಮತ್ತು ದುಬಾರಿ ಮನೆ ಬಾಡಿಗೆ – ಗಮನದಲ್ಲಿಟ್ಟುಕೊಂಡು ಪ್ರಧಾನಿ ತಮ್ಮ ಮದುವೆಯನ್ನು ಸರಳವಾಗಿ, ಮನೆಯಂಗಳದಲ್ಲೇ ಮಾಡಿಕೊಂಡರು ಎಂದು ಕೆಲವರ ಮಾತು. ಅದು ಪ್ರಧಾನಿಯ ಅಧಿಕೃತ ನಿವಾಸ, ಅವರ ಸ್ವಂತ ಮನೆಯೇನಲ್ಲ, ಅಧಿಕೃತ ನಿವಾಸವನ್ನು ಹೀಗೆ ಬಳಸಿಕೊಂಡಿದ್ದಕ್ಕೆ ಅವರು ಬಾಡಿಗೆ ಕೊಡಬೇಕಾಗಿತ್ತು ಎಂದು ಕೂಡ ಚುಚ್ಚುಮಾತು ಎದ್ದಿದೆ. ಮಾಧ್ಯಮದವರು ಇದೆ ವಿಷಯವನ್ನು ಇಟ್ಟುಕೊಂಡು ವಿರೋಧಪಕ್ಷದ ನಾಯಕಿ ಸೂಸನ್ ಲೇ ಅವರನ್ನು ಪ್ರಶ್ನಿಸಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಬೇಸಿಗೆ ತರಲಿರುವ ಅಸಹನೆ, ಆಕಾಂಕ್ಷೆ: ಡಾ. ವಿನತೆ ಶರ್ಮಾ ಅಂಕಣ

ಕ್ರಿಸ್ಮಸ್ ಲಂಚ್ ಮುಗಿಸಿಕೊಂಡು ವಾಪಸ್ ಬರುವಾಗ ನಾವು ‘ಕಂಟ್ರಿ ಸೈಡ್’ ದಾರಿ ಹಿಡಿದಿದ್ದೆವು. ನನಗೆ ಅದಾವುದರ ತಲೆಬುಡ ಗೊತ್ತಿರಲಿಲ್ಲ. ಕರೆದುಕೊಂಡು ಹೋದವರು ವಾಪಸ್ ಮನೆ ಸೇರಿಸುತ್ತಾರೆ ಎಂದು ನಿಶ್ಚಿಂತೆಯಿಂದ ಕಿಟಕಿಯಿಂದ ಕಾಣುತ್ತಿದ್ದ ಆಸ್ಟ್ರೇಲಿಯನ್ ಪೊದೆಕಾಡನ್ನು ನೋಡುತ್ತಾ ಕಳೆದುಹೋಗಿದ್ದೆ. ಇದ್ದಕ್ಕಿದ್ದಂತೆ ಕಾರಿನಲ್ಲಿ ತಾಪಮಾನ ಏರಿದಂತಾಯ್ತು. ಮುಖ ತಿರುಗಿಸಿದಾಗ ಆ ಕಡೆ ಕಂಡಿದ್ದು ಉದ್ದಾನುದ್ದಕ್ಕೆ ಹರಡಿಕೊಂಡು ಉರಿಯುತ್ತಿದ್ದ ಬೆಂಕಿಜ್ವಾಲೆ. ನಾನಿದ್ದ ಕಾರಿನಿಂದ ಸ್ಪಷ್ಟವಾಗಿ ಕಾಣುತ್ತಿದ್ದು, ಶಾಖದ ಅನುಭವವೂ ಚೆನ್ನಾಗಾಗುತ್ತಿತ್ತು. ಅಂದರೆ ಅಷ್ಟು ಹತ್ತಿರದಲ್ಲಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಹಿರಿಮೆ-ಗರಿಮೆ ಲೋಕದಲ್ಲಿ ಸಿಕ್ಕ ಆಸ್ಟ್ರೇಲಿಯನ್ ಹಕ್ಕಿ: ಡಾ. ವಿನತೆ ಶರ್ಮಾ ಅಂಕಣ

ಕುತೂಹಲಕಾರಿ ವಿಷಯವೆಂದರೆ ಈ ವರ್ಷ ೨೦೨೫ರಲ್ಲಿ ಅಮೆರಿಕಾ ದೇಶವು ಹನ್ನೆರಡನೇ ಸ್ಥಾನಕ್ಕೆ ಇಳಿದಿದೆ. ಯು.ಎಸ್.ಎ ಪಾಸ್ಪೋರ್ಟ್ ಇರುವವರು ೧೮೦ ದೇಶಗಳಿಗೆ ವೀಸಾ ಪಡೆಯದೆ ಹೋಗಬಹುದು. ಹೆನ್ಲಿ ಸಂಸ್ಥೆಯ ಅಧ್ಯಯನದ ಪ್ರಕಾರ ೨೦೧೪ ನೇ ಇಸವಿಯಲ್ಲಿ ಅಮೆರಿಕೆಯು ಮೊಟ್ಟಮೊದಲ ಸ್ಥಾನದಲ್ಲಿದ್ದು ಪ್ರಪಂಚದ ಅತ್ಯಂತ ಪ್ರಭಾವಶಾಲಿ ಪಾಸ್‌ಪೋರ್ಟ್ ಎನ್ನುವ ಹಿರಿಮೆ, ಮಾನ್ಯತೆಯಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಹೀಗೊಂದು ಆಸ್ಟ್ರೇಲಿಯಾದ ಋತು-ಗಾನ: ಡಾ. ವಿನತೆ ಶರ್ಮ ಅಂಕಣ

ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗುವ ವಸಂತಋತುವಿನ ಮೊದಲ ಭಾಗದಲ್ಲಿ ಅದೇನೊ ಒಂದು ರೀತಿಯ ಕಾಯುವಿಕೆಯಿದೆ. ಮಳೆಗಾಗಿ ಕಾಯುತ್ತಿರುವುದು ಭೂಮಿ, ಪ್ರಾಣಿಪಕ್ಷಿಗಳು ಮತ್ತು ನಾವು ಮನುಷ್ಯರು. ನಮ್ಮ ಕಾಯುವಿಕೆ ಪ್ರಕೃತಿಮಾತೆಗೆ ನಿಧಾನವಾಗಿ ಅರ್ಥವಾಯಿತೇನೊ ಅನ್ನುವಂತೆ ಭಾಸವಾಗುವುದು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಬೀಸುವ ಬಿರುಗಾಳಿಯಿಂದ. ಇದು ಬರಲಿರುವ ಬೇಸಿಗೆಯ ಮಳೆಗಾಲದ ಚಿಹ್ನೆ. ಡಿಸೆಂಬರ್, ಜನವರಿ ತಿಂಗಳುಗಳಲ್ಲಿ ಮಳೆಗಾಲ. ಇದು ಒಮ್ಮೊಮ್ಮೆ ಫೆಬ್ರವರಿಗೂ ವಿಸ್ತರಿಸಿ ಅಲ್ಲಲ್ಲಿ ಪ್ರವಾಹಗಳು ಹರಿಯುತ್ತವೆ. ಮಾರ್ಚ್ ತಿಂಗಳಿಂದ ಮೇ ವರೆಗೆ ಶರತ್ಕಾಲ. ನಂತರ ಚಳಿಗಾಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ದೊಡ್ಡ ಜಿಜ್ಞಾಸೆಗಳು, ಸಣ್ಣ ನಿರ್ಧಾರಗಳು: ವಿನತೆ ಶರ್ಮಾ ಅಂಕಣ

ಶುಮಾಶೆರ್ ಹೇಳುವುದೇನೆಂದರೆ, ನಾವು ಮನುಷ್ಯರು ಪ್ರತಿಯೊಬ್ಬ ವ್ಯಕ್ತಿಗೂ ಸುಲಭವಾಗುವಂತೆ ಅವರ ಜೀವನ ಗುಣಮಟ್ಟ ವೃದ್ಧಿಸುವುದಕ್ಕೆ ಅನೂಕೂಲವಾಗುವಂತೆ ತಳಮಟ್ಟದಲ್ಲಿ ಪುಟ್ಟಪುಟ್ಟ ಮತ್ತು ಅನೇಕ ಬಹುತ್ವಗಳನ್ನು ಒಳಗೊಂಡ ತಾಂತ್ರಿಕತೆಗಳನ್ನು, ಕ್ರಮಗಳನ್ನು ಒಗ್ಗಿಸಿಕೊಳ್ಳಬೇಕು. ‘ದೊಡ್ಡದು’ ಅಥವಾ ಹಿರಿದು ಮುಖ್ಯ ಎನ್ನುವ ಆಲೋಚನಾಪರಿಯನ್ನು ಬದಲಿಸಿಕೊಳ್ಳಬೇಕು. ಅಂದರೆ ದೊಡ್ಡಮಟ್ಟದ ಅಭಿವೃದ್ಧಿಗಿಂತಲೂ ಸಣ್ಣ ಮಟ್ಟದ ಸ್ಥಳೀಯ ಅಭಿವೃದ್ಧಿ ಯೋಜನೆಗಳು ಜನರಿಗೆ ಹೆಚ್ಚು ಪ್ರಯೋಜನಕಾರಿ. ಇದೇ ಮಾತನ್ನು ಮಹಾತ್ಮ ಗಾಂಧಿ ಅವರೂ ಹೇಳಿದ್ದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ