ದಿತ್ವಾ ಚಂಡಮಾರುತದ ಚಳಿಯಲ್ಲಿ
ಚಡಪಡಿಸುತ್ತೇನೆ
ನಿನ್ನ
ಸುಳಿವುಗೊಡದ
ನೆನಪುಗಳಿಗೆ
ಮುಪ್ಪು ಬಂದು
ಎಲ್ಲವನ್ನೂ
ಮರೆತಾಗ
ಕಾಲವಲ್ಲದ
ಕಾಲದಲ್ಲಿ
ಸೈಕ್ಲೋನುಗಳ ದಾಳಿಗೆ
ಒಂಟಿಯಾಗಿ
ಕಂಬಳಿಯೊಳಗೆ
ಹುಳವಾಗಿ
ದೇಹದ ಪೊರೆ ಕಳಚುವಾಗ
ಸತ್ತ
ಅನುಭವ
ನಿದ್ರೆಯನ್ನು
ತಿಂದು
ಕತ್ತಲೆಯನ್ನುಟ್ಟ
ಸುಂದರಿ
ಇಲ್ಲೇ ಎಲ್ಲೋ
ಕುಂತು
ಕಳೆದ ದಿನಗಳ
ಲೆಕ್ಕವಿಡುತ್ತಿದ್ದಾಳೆ
ಮೀನು
ಕಾವಲಿಯ
ಮೇಲೆ
ದೀರ್ಘ
ನಿದ್ರೆಗೆ ಜಾರಿದೆ;
ಅಲ್ಲೆಲ್ಲೋ
ಸಮುದ್ರದೊಡಲ
ಕಿಚ್ಚು
ಆರದೆ
ನೆತ್ತರನ್ನು ಕುದಿಸುತ್ತಿದೆ!
ಇವಳೂ
ಸೈಕ್ಲೋನು
ನಿಂತ
ಸುದ್ದಿಗಾಗಿ
ಪತ್ರಿಕೆಯವನಿಗೆ
ಚಳಿಯಲ್ಲೇ ಕಾಯುತ್ತಿದ್ದಾಳೆ..
(ದಿತ್ವಾ ಚಂಡಮಾರುತದ ದಿನಗಳ ಪ್ರಚಂಡ ಚಳಿಯಲ್ಲಿ ಬರೆದ ಕವಿತೆ)

ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ. ‘ಕಣ್ಣಿಲ್ಲದ ಕತ್ತಲರಾತ್ರಿ’ ಇವರ ಪ್ರಕಟಿತ ಕವನ ಸಂಕಲನ ಕಥೆಗಳನ್ನು ಬರೆಯುವುದು, ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು. ಸಧ್ಯ “ಮಹಿಳಾ ಕಾದಂಬರಿ ಆಧಾರಿತ ಚಲನಚಿತ್ರಗಳು : ಬಹುಮುಖಿ ಚಿಂತನೆ” ಎನ್ನುವ ವಿಷಯದ ಮೇಲೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪಿಎಚ್.ಡಿ ಪದವಿಗಾಗಿ ಸಂಶೋಧನೆ ನಡೆಸುತ್ತಿದ್ದಾರೆ.
