Advertisement
ಹಿಮಾಲಯದಲ್ಲಿ ಹಕ್ಕಿಗಳ ಚಿಲಿಪಿಲಿ: ಡಾ. ಖಂಡಿಗೆ ಮಹಾಲಿಂಗ ಭಟ್ ಅನುವಾದಿತ ರಸ್ಕಿನ್‌ ಬಾಂಡ್‌ ಬರಹ

ಹಿಮಾಲಯದಲ್ಲಿ ಹಕ್ಕಿಗಳ ಚಿಲಿಪಿಲಿ: ಡಾ. ಖಂಡಿಗೆ ಮಹಾಲಿಂಗ ಭಟ್ ಅನುವಾದಿತ ರಸ್ಕಿನ್‌ ಬಾಂಡ್‌ ಬರಹ

ಈ ಹಾಡು ನನ್ನನ್ನು ಯಾವಾಗಲೂ ಮರುಳುಗೊಳಿಸುತ್ತದೆ. ಈ ಪಕ್ಷಿಯು ಅನುಮಾನದಿಂದ ಕೂಗಿ, ಸರಿಯಾದ ರಾಗವನ್ನು ಪ್ರಯತ್ನಿಸುವಂತೆ, ಅನಂತರ ಆತ್ಮವಿಶ್ವಾಸದಿಂದ ಇಂಪಾಗಿ ಪೂರಾ ಹಾಡನ್ನು ಲಯ ಬದ್ಧವಾಗಿ ಬೆಟ್ಟದ ಸುತ್ತಲೂ ಕೇಳುವಂತೆ ಹಾಡಿತು. ಇದ್ದಕ್ಕಿದ್ದಹಾಗೇ ಸಂಗೀತವು ನಿಲ್ಲುವುದು, ಸ್ವರ ಆರೋಹಣದ ಮಧ್ಯೆ; ಮತ್ತು ನಾನು ಆಶ್ಚರ್ಯದಿಂದ ಹಕ್ಕಿ ಹಾಡುವುದನ್ನು ನಿಲ್ಲಿಸುವುದಕ್ಕೆ ಏನಾಗಿರಬಹುದು ಎಂಬುದಾಗಿ ಚಿಂತಿಸಿದೆ. ವಾಸ್ತವವಾಗಿ ಏನೂ ಆಗಿರಲಿಲ್ಲ ಯಾಕೆಂದರೆ ಕೆಲವು ನಿಮಿಷಗಳ ನಂತರ ಆ ಪಕ್ಷಿಯು ಹಾಡುವುದನ್ನು ಮುಂದುವರಿಸಿತು.
ಡಾ. ಖಂಡಿಗೆ ಮಹಾಲಿಂಗ ಭಟ್ ಅನುವಾದಿಸಿದ ರಸ್ಕಿನ್‌ ಬಾಂಡ್‌ ಅವರ “ರೇನ್‌ ಇನ್‌ ದ ಮೌಂಟೇನ್ಸ್‌” ಕೃತಿಯ ಒಂದು ಬರಹ ನಿಮ್ಮ ಓದಿಗೆ

ಪಕ್ಷಿಗಳ ವೀಕ್ಷಣೆಯು ಬೆಟ್ಟ, ಪರ್ವತ ಪ್ರದೇಶಗಳಲ್ಲಿ ಬಯಲು ಪ್ರದೇಶಗಳಿಂದ ಕಷ್ಟ (ಪ್ರಯಾಸ)ಕರ. ಹಲವು ಪಕ್ಷಿಗಳನ್ನು ದಟ್ಟವಾದ ವೃಕ್ಷಗಳ ಬದಲಾಗುತ್ತಿರುವ ಬಣ್ಣಗಳ ಛಾಯೆಯ ಹಿನ್ನೆಲೆಯಲ್ಲಿ ಕಂಡು ಹಿಡಿಯುವುದು ಸುಲಭವಲ್ಲ.

ಕೆಲವು ಪಕ್ಷಿಗಳು ಶಬ್ದ ಮಾಡದೇ ಮೌನವಾಗಿ ತುಂಬ ಹೊತ್ತು ಇರುತ್ತವೆ, ಆದರೂ ಒಬ್ಬನಿಗೆ ಅವುಗಳ ಇರವನ್ನು ಕರೆ ಅಥವಾ ಹಾಡುಗಳಿಂದ ಅರಿವಾಗುವುದು. ಪಕ್ಷಿಗಳ ಹಾಡು ಹಿಮಾಲಯದಲ್ಲಿ ಎಲ್ಲಾ ಕಡೆಯಲ್ಲೂ ನಿಮ್ಮ ಜೊತೆ ಇರುವುದು. ಹಿಮಾಲಯ ಬೆಟ್ಟಗಳ ತಪ್ಪಲಿಂದ ವೃಕ್ಷಗಳ ಸಾಲಿನ ತನಕ ಒಂದು ಪಕ್ಷಿಯನ್ನು ಅದರ ಶಬ್ಧದಿಂದ ಗುರುತಿಸುವುದು ಅದರ ಬಣ್ಣಗಳಿಂದ ಅರಿಯುವುದರಿಂದ ಸುಲಭ.

(ರಸ್ಕಿನ್‌ ಬಾಂಡ್‌)

ಬಾರ್ಬೆಟ್ ಎಂಬ ಪಕ್ಷಿಯು ಕಾಣ ಸಿಗುವುದರಿಂದ ಹೆಚ್ಚಾಗಿ ಕೇಳುವುದು ಜಾಸ್ತಿಯಾಗಿದೆ. ಅದಕ್ಕೆ ಒಂದೇ ತರದ ವೈವಿಧ್ಯ ಇಲ್ಲದ ತುಂಬ ದೂರಕ್ಕೆ(ಸಾಧಾರಣ ಒಂದು ಮೈಲು) ಕೇಳಿಸುವ ಬೇಸರ ಹಿಡಿಸುವ ಕೂಗು ಇದೆ. ಈ ಹಕ್ಕಿಗಳು ಅವರದೇ ಸ್ವರವನ್ನು ಕೇಳುವುದಕ್ಕೆ ಇಷ್ಟ ಪಡುತ್ತವೆ, ಮತ್ತು ಹಲವು ಬಾರಿ ಎರಡು ಯಾ ಮೂರು ಒಂದಕ್ಕೆ ಇನ್ನೊಂದು ಬೇರೆ ಬೇರೆ ಮರಗಳಿಂದ ಉತ್ತರಿಸುತ್ತವೆ; ಪ್ರತಿಯೊಂದೂ ಉಳಿದವರನ್ನು ಸೋಲಿಸಲು ಕರ್ಕಶ, ಕಿರುಚುವ ಸ್ವರದಲ್ಲಿ ಕೂಗುವುದು. ಕೆಲವು ಮಂದಿ ಬಾರ್ಬೆಟ್‌ನ ಕೂಗನ್ನು ಅದ್ಭುತ ಹಾಗು ಇಂಪಾಗಿ ಇರುವುದಾಗಿ ತಿಳಿಯುತ್ತಾರೆ. ಇನ್ನು ಕೆಲವರು ಅದ್ಭುತವಾಗಿರುವುದಾಗಿ ತಿಳಿಯುವರು.

ಹೋಡ್ಜ್ಸೊನ್’ಸ್ ಬೂದು ಬಣ್ಣದ ತಲೆ ಇರುವ, ಹುಳಗಳನ್ನು ಹಿಡಿಯುವ ಇಂಚರ, ಇದು ಪಕ್ಷಿ ತಜ್ಞರು ಅವರ ಅಪಾರ ಜ್ಞಾನದಿಂದ ಒಂದು ಸಣ್ಣ ಪಕ್ಷಿಗೆ ನೀಡಿದ ಹೆಸರು ಆಗಿರುತ್ತದೆ ಪಶ್ಚಿಮ ಹಿಮಾಲಯ ಗಳಲ್ಲಿ ಈ ಚಿಕ್ಕ ನಿನಾದ ಮಾಡುವ ಪಕ್ಷಿಯ ಹಾಡು ಹೆಚ್ಚಾಗಿ ಕೇಳುವುದು, ಆದರೆ ಕಾಣಿಸುವುದು ಇತರ ಪಕ್ಷಿಗಳಿಗಿಂತ ವಿರಳ. ಇದರ ಸ್ವರವು ಪ್ರತೀ ಎರಡನೆಯ ಮರದಲ್ಲಿ ಕೇಳಿಸುವುದು, ಆದರೂ ಅಲ್ಲಿ ಕೆಲವರು ಅದು ಯಾವ ತರ ಇರುವುದಾಗಿ ಕೇಳುತ್ತಾರೆ. ಅದರ ಹಾಡು (ಹಾಗೆ ಹೇಳಬಹುದಾದರೆ )ಅಷ್ಟೊಂದು ಇಂಪಾಗಿ ಇಲ್ಲ ಮತ್ತು ಪಶ್ಚಿಮದ ಸೆಲೂನ್‌ಗಳಲ್ಲಿ ಕೆಲವೊಂದು ಬಾರಿ ಕಾಣಿಸುವ ನೋಟಿಸ್ ಮನಃ ಪಟಲದಲ್ಲಿ ಬರುತ್ತದೆ. ಅಲ್ಲಿ ಕೇಳುಗರಲ್ಲಿ ಪಿಯಾನೋ ಬಾರಿಸುವವನ ಮೇಲೆ ಏನನ್ನೂ ಎಸೆಯ ಬಾರದಾಗಿ ವಿನಂತಿಸಿಕೊಳ್ಳುತ್ತಾರೆ. ಏಕೆಂದರೆ ಆ ಸಂಗೀತವು ಎಷ್ಟೇ ಕರ್ಕಶವಾದರೂ ಪಿಯಾನೋ ವಾದಕನು ತನಗೆ ಸಾಧ್ಯವಾದಷ್ಟು ಪ್ರಯತ್ನಿಸುತ್ತಿರುವನು.

ನಮ್ಮ ಚಿಕ್ಕದಾದ ಬಾರ್ಬ್ಲರ್‌ ಅವನಿಗೆ ಸಾಧ್ಯವಾದಷ್ಟು ಒಳ್ಳೆಯದಾಗಿ, ಸತತವಾಗಿ ೪-೫ ಕಿವಿಗೆ ಹಿತವಲ್ಲದ ಹಾಡುಗಳು, ಆದರೂ ಸಂತೋಷದಾಯಕ ಹಾಗು ಕುಶಾಗ್ರಮತಿಗಳಿಗೆ ಒಪ್ಪುವ ಶ್ರುತಿಯಿಂದ ಹಾಡುತ್ತಿದ್ದನು.

ಇನ್ನೊಂದು ಸಣ್ಣ ಪಕ್ಷಿ ಕಾಣುವುದರಿಂದ ಹೆಚ್ಚಾಗಿ ಹಾಡುವುದೆಂದರೆ ಹಸಿರು ಬಣ್ಣದ ಪುಟ್ಟ ಪಕ್ಷಿ (ಗ್ರೀನ್ ಬ್ಯಾಕ್ಡ್‌ ಟಿಟ್), ಗುಬ್ಬಚ್ಚಿಯ ಗಾತ್ರದ ಚುರುಕಾಗಿರುವ ಹಕ್ಕಿ. ಇದು ತೀಕ್ಷ್ಣ, ಸುಮಾರು ಲೋಹದ, ಆದರೆ ಇಂಪಿರುವ ಕರೆಯುವ ‘ಕಿಸ್ ಮಿ’ ‘ಕಿಸ್ ಮಿ’ ‘ಕಿಸ್ ಮಿ’ ಎಂಬ ಶಬ್ದವನ್ನು ಮಾಡುವುದು.

ನಿಜವಾದ ಹಾಡುವವ ಬೂದು ಬಣ್ಣದ ಒಂದು ವಿಧದ ಸಣ್ಣ ಪಕ್ಷಿ ಘರ್ವಾಲ್ ಬೆಟ್ಟಗಳಲ್ಲಿ ಕಾಣಸಿಗುವುದು. ಬೇಸಿಗೆಯ ಪ್ರಾರಂಭದಲ್ಲಿ‌ ಈ ಪಕ್ಷಿಯು ವೃಕ್ಷ ಕೂಡಿದ ಬೆಟ್ಟಗಳಲ್ಲಿ ಕಿವಿಗೆ ಇಂಪಾದ ಸ್ವರದಲ್ಲಿ ಹಾಡುವುದನ್ನು ಕೇಳಿ ನೆಲ್ಸನ್ ಎಡ್ಡಿ ಎಂಬ ಅಮೆರಿಕಾದ ಗಾಯಕನಿಗೂ ಸಂತೋಷವಾಗಬಹುದು. ಈ ಪಕ್ಷಿಗಳೊಂದಿಗೆ ಕೆಲವು ಬಾರಿ ಹಸಿರು ಪಾರಿವಾಳವು ಅದರದ್ದೇ ಆದ ಸಂಗೀತದೊಂದಿಗೆ ಸೇರಿಕೊಳ್ಳುತ್ತದೆ. ಈ ಇಂಪಾದ ಗಾನವನ್ನು ತಮಾಷೆ ಮಾಡುವ ರೀತಿಯಲ್ಲಿ ಲಾಫಿಂಗ್ ತ್ರಷ್‌ಗಳು ಅವುಗಳ ವಿಚಿತ್ರ ಕರೆಗಳನ್ನು ಹೆವಿ ರಾಕ್ ಸಂಗೀತದಂತೆ ಹೊರ ಹಾಕುತ್ತವೆ.
‘ನೈಟ್ ಜಾರ್’ ಎಂಬ ಪಕ್ಷಿಯು ಹಗಲಿನ ಸಮಯದಲ್ಲಿ ಮರಗಳ ನೆರಳಿನಲ್ಲಿ ಅಡಗಿ ಇರುವುದು ಮತ್ತು ಮುಸ್ಸಂಜೆಯ ಹೊತ್ತು ರೆಕ್ಕೆಗಳ ಶಬ್ದ ಮಾಡದೇ ಕೀಟಗಳನ್ನು ಬೇಟೆ ಮಾಡಲು ಹೋಗುವುದು. ನೈಟ್ ಜಾರ್ ಪಕ್ಷಿಗೆ ದೊಡ್ಡದಾದ, ಕಪ್ಪೆಗೆ ಹೋಲುವ ಬಾಯಿ ಇರುವುದು. ಆದರೆ ಇದು ಮಾಡುವ ‘ಟೊಂಕ್ -ಟೊಂಕ್, ‘ಟೊಂಕ್-ಟೊಂಕ್’ ಎಂಬ ವಿಚಿತ್ರವಾದ ಕೂಗಿನಿಂದ ಗುರುತಿಸಲಾಗುವುದು. ಈ ಶಬ್ದವು ಒಂದು ಮರದ ಹಲಗೆಯ ಮೇಲೆ ಸುತ್ತಿಗೆಯಿಂದ ಹೊಡೆದಂತೆ ಕೇಳುವುದು.

ನಾನು ಮೊದಲು ವಾಸಿಸಲು ಬೆಟ್ಟಕ್ಕೆ ಬಂದಾಗ, ಹಿಮಾಲಯದ ವಿಸ್ಟ್ಲಿಂಗ್ ತ್ರಷ್‌ನ ಹಾಡು ಮೊದಲಾಗಿ ನನ್ನ ಮನಸ್ಸನ್ನು ಸೆಳೆಯಿತು. ನಾನು ಕಿಟಕಿಯ ಬದಿ ಕುಳಿತು ಹೊಸದಾಗಿ ಚಿಗುರಿದ ವಾಲ್ನಟ್ ವೃಕ್ಷದ ಎಲೆಗಳನ್ನು ನೋಡುತ್ತಿದ್ದೆ. ಎಲ್ಲವೂ ಸ್ತಬ್ದವಾಗಿತ್ತು; ಗಾಳಿಯು ಅದರಷ್ಟಕೆ ಶಾಂತವಾಗಿತ್ತು. ಪರ್ವತಗಳು ಕತ್ತಲಲ್ಲಿ ದೊಡ್ಡದಾಗಿ ಬೆಳೆಯುತ್ತಿದ್ದವು. ಆಮೇಲೆ ಸಿಹಿಯಾದ ರಹಸ್ಯದಂತೆ ಕಣಿವೆಯ ಆಳದಿಂದ ಊಹಿಸಲು ಅಸಾಧ್ಯವಾದ ಮನೋಹರವಾದ ಕೂಗು ಕೇಳಿಸಿತು.

ಈ ಹಾಡು ನನ್ನನ್ನು ಯಾವಾಗಲೂ ಮರುಳುಗೊಳಿಸುತ್ತದೆ. ಈ ಪಕ್ಷಿಯು ಅನುಮಾನದಿಂದ ಕೂಗಿ, ಸರಿಯಾದ ರಾಗವನ್ನು ಪ್ರಯತ್ನಿಸುವಂತೆ, ಅನಂತರ ಆತ್ಮವಿಶ್ವಾಸದಿಂದ ಇಂಪಾಗಿ ಪೂರಾ ಹಾಡನ್ನು ಲಯ ಬದ್ಧವಾಗಿ ಬೆಟ್ಟದ ಸುತ್ತಲೂ ಕೇಳುವಂತೆ ಹಾಡಿತು. ಇದ್ದಕ್ಕಿದ್ದಹಾಗೇ ಸಂಗೀತವು ನಿಲ್ಲುವುದು, ಸ್ವರ ಆರೋಹಣದ ಮಧ್ಯೆ; ಮತ್ತು ನಾನು ಆಶ್ಚರ್ಯದಿಂದ ಹಕ್ಕಿ ಹಾಡುವುದನ್ನು ನಿಲ್ಲಿಸುವುದಕ್ಕೆ ಏನಾಗಿರಬಹುದು ಎಂಬುದಾಗಿ ಚಿಂತಿಸಿದೆ. ವಾಸ್ತವವಾಗಿ ಏನೂ ಆಗಿರಲಿಲ್ಲ ಯಾಕೆಂದರೆ ಕೆಲವು ನಿಮಿಷಗಳ ನಂತರ ಆ ಪಕ್ಷಿಯು ಹಾಡುವುದನ್ನು ಮುಂದುವರಿಸಿತು.

ಒಂದು ದಿನ ನಾನು ಒಂದು ವಿಸ್ಲಿಂಗ್ ತ್ರಷ್ ಉದ್ಯಾನದ ಮುರಿದ ಬೇಲಿಯ ಮೇಲೆ ಕುಳಿತಿರುವುದನ್ನು ನೋಡಿದೆನು. ಆ ಪಕ್ಷಿಯ ಮೈಯ್ಯು ಕಡು ನೀಲಿ ಬಣ್ಣವಾಗಿದ್ದು, ಕುತ್ತಿಗೆಯ ಬಳಿಯಲ್ಲಿ ಬಿಳಿ ಚುಕ್ಕೆಗಳಿದ್ದವು. ಅವನ ಕಾಲುಗಳು ಬಲವಾಗಿ ಇದ್ದು ಕಪ್ಪು ಬಣ್ಣದ್ದಾಗಿತ್ತು ಮತ್ತು ಗಟ್ಟಿಯಾದ ಹಳದಿಬಣ್ಣದ ಕೊಕ್ಕು; ಚುರುಕಾಗಿ ಇದ್ದನು ಹಾಗು ‘ಟಾಪ್ ಹ್ಯಾಟ್’ ಹಾಕಿದ್ದಲ್ಲಿ ಸಂಪೂರ್ಣ ಅಚ್ಚುಕಟ್ಟಾಗಿ ತೋರುತ್ತಿದ್ದನು. ಸಮಯ ಕಳೆದಂತೆ ಅವನು ನನ್ನ ಮುಖಕ್ಕೆ ಹೊಂದಿಕೊಂಡನು ಹಾಗು ನಮ್ಮ ತೋಟಕ್ಕೆ ಸದಾ ಬರುತ್ತಿದ್ದನು. ಬೇಸಿಗೆಯ ಸೆಖೆ ದಿನಗಳಲ್ಲಿ ಟ್ಯಾಂಕಿನ ನೀರಿನಲ್ಲಿ ರೆಕ್ಕೆ ಬಡಿಯುತ್ತಿರುವನು. ಅನಂತರ, ದಣಿವು ಆರಿಸಿ, ಛಾವಣಿ ಮೇಲೆ ಬಿಸಿಲಲ್ಲಿ ಕುಳಿತನು; ಅವನು ನನಗೆ ಸತ್ಕಾರ ಮಾಡಲು ಚುಟುಕಾದ ಸಂಗೀತವನ್ನು ಹಾಡಿ ನೆರಳಿನ ಕಣಿವೆಗೆ ಹಾರಿದನು.

ಪಕ್ಕದ ಹಳ್ಳಿಯ ಒಬ್ಬ ಹುಡುಗನು ನನಗೆ ‘ವಿಸ್ಲಿಂಗ್ ತೃಷ್’ನ ದಂತಕಥೆಯೊಂದನ್ನು ಹೇಳಿದನು. ಕಥೆಯ ಪ್ರಕಾರ ಎಳೆಯ ದೇವರು, ಕೃಷ್ಣ ಒಂದು ಸಣ್ಣ ತೊರೆಯ ಬದಿಯಲ್ಲಿ ನಿದ್ದೆ ಮಾಡಿದನು, ಮತ್ತು ಅವನು ನಿದ್ರಿಸಿದ ಸಮಯದಲ್ಲಿ ಒಬ್ಬ ಕಿರಿಯ ಹುಡುಗನು ಕೃಷ್ಣನ ಪ್ರಖ್ಯಾತ ಕೊಳಲನ್ನು ಅವನಿಗೆ ತಿಳಿಯದಂತೆ ತೆಗೆದುಕೊಂಡು ಹೋದನು. ನಿದ್ದೆಯಿಂದ ಎಚ್ಚರವಾದ ಕೂಡಲೇ ತನ್ನ ಕೊಳಲನ್ನು ಕಾಣದೆ ಕೃಷ್ಣ ತುಂಬಾ ಸಿಟ್ಟುಗೊಂಡು, ತಪ್ಪು ಮಾಡಿದ ಆ ಹುಡುಗನನ್ನು ಒಂದು ಹಕ್ಕಿಯನ್ನಾಗಿ ಪರಿವರ್ತಿಸಿದನು. ಆದರೆ ಆ ಕೊಳಲನ್ನು ಒಮ್ಮೆ ಬಾರಿಸಿದ ಮೇಲೆ ಆ ಹುಡುಗನು ಅಲ್ಪ-ಸ್ವಲ್ಪ, ಆನಂದ ಉಂಟುಮಾಡುವ ಸಂಗೀತವನ್ನು ಕಲಿತಿದ್ದನು. ಮತ್ತು ಅವಮಾನ ಮಾಡುವ ರೀತಿಯಲ್ಲಿ ದೇವರ ಸಂಗೀತವನ್ನು ಬಾರಿಸುತ್ತಿದ್ದನು, (ವಿಸ್ಲಿಂಗ್-ತೃಷ್)ನಂತೆ ಒಮ್ಮೊಮ್ಮೆ ನಿಲ್ಲಿಸುತ್ತಿದ್ದನು, ತನಗೆ ಸ್ವರ, ರಾಗ, ಧಾಟಿ, ತಾಳ ನೆನಪಿಲ್ಲದಾಗ.

ಹೆಚ್ಚು ಸಮಯದ ಮುಂಚಿತವಾಗಿ ನನ್ನ ವಿಸ್ಲಿಂಗ್ ತ್ರಷ್‌ನ ಜೊತೆಗೆ ಒಂದು ಹೆಣ್ಣು ಸೇರಿತು. ಅವುಗಳು ಜೀನೆಟ್ ಮ್ಯಾಕ್ಡೊನಾಲ್ಡ್ ಮತ್ತು ನೆಲ್ಸನ್ ಎಡ್ಡಿ ಪುನರ್ಜವಾಗಿರುವುದೋ? ಕೆಲವೊಮ್ಮೆ ಅವುಗಳು ಒಬ್ಬರಾಗಿ ಹಾಡುವರು ಇನ್ನು ಕೆಲವೊಮ್ಮೆ ಇಬ್ಬರು ಜೊತೆಯಾಗಿ ಹಾಡುವರು; ವಾಸ್ತವವಾಗಿ ಈ ಎರಡನೆಯ ಹಾಡು ಪ್ರೇಮ-ಗೀತೆಯಾಗಿತ್ತು ಯಾಕೆಂದರೆ ಹೆಚ್ಚು ಸಮಯ ಮಾಡದೇ ಅವುಗಳು ಕಣಿವೆಯ ಕಲ್ಲುಗಳ ಸಂದಿಗೆ ಸರಿಯಾದ ಗೂಡನ್ನು ಅರಸಿಕೊಂಡು ಹೋದವು.

ಪಕ್ಷಿಗಳು ಬೇಸಿಗೆಯ ಮಧ್ಯದಲ್ಲಿ ಬಹಳ ಅಂದವಾಗಿ ಇರುತ್ತವೆ; ಆದರೆ ಚಳಿಗಾಲದ ತೀವ್ರತೆಯಲ್ಲಿ ಹಿಮಾಚ್ಛಾದಿತ ನೆಲ ಇರುವಾಗ ಪಕ್ಷಿಗಳು ಇದ್ದಕ್ಕಿದ್ದಹಾಗೆ ಹಾಡಲು ಸುರು ಮಾಡುತ್ತವೆ, ಓಕ್ ಮರದಿಂದ ಪೈನ್ ಅಲ್ಲಿಂದ ಬೋಳಾದ ಚೆಸ್ಟ್ ನಟ್ ಮರಕ್ಕೆ ಹಾರಾಡುತ್ತವೆ.

ನನ್ನ ಮಲಗುವ ಕೋಣೆಯ ಹೊರಗೆ ಕಿಟಕಿಯ ಬಳಿ ಬೆಳೆದಿರುವ ಕಾಡು ಚೆರಿ ಮರವು ತುಂಬಾ ಸಣ್ಣ ಪಕ್ಷಿಗಳನ್ನು ಆಕರ್ಷಿಸುವುದು; ಹೂವು ಇರುವ ಹಾಗು ಹಣ್ಣು ಇರುವ ಸಮಯಗಳಲ್ಲಿ.

ಅದು ಚಿಕ್ಕ ಗುಲಾಬಿ ಬಣ್ಣದ ಹೂವುಗಳಿಂದ ತುಂಬಿದಾಗ, ಸಾಮಾನ್ಯವಾಗಿ ಹಳದಿ ಬಣ್ಣದ ಮೈಯ ಸನ್‌ ಬರ್ಡ್‌, ಕೀಚು ಧ್ವನಿಯ ಚುಟುಕು ಪದ್ಯವನ್ನು ಒಂದು ರೆಂಬೆಯಿಂದ ಇನ್ನೊಂದು ರೆಂಬೆಗೆ ಹಾರುವಾಗ ಹೊರಡಿಸುತ್ತದೆ. ಪಕ್ಷಿಯು ಅದರ ಉದ್ದವಾದ ನಾಲಿಗೆಯಿಂದ ಹೂವುಗಳಿಂದ ಮಕರಂದವನ್ನು ಸಂಗ್ರಹಿಸುತ್ತದೆ.

ಬಾಕಿ ಉಳಿದ ಸಂದರ್ಶಕ ಪಕ್ಷಿಗಳು ಫ್ಲೈ ಕ್ಯಾಚರ್‌ಗಳಾಗಿವೆ, ಮನೋಹರವಾದ ಹಕ್ಕಿಗಳು, ಪ್ರಧಾನವಾಗಿ ಪ್ಯಾರಡೈಸ್ ಫ್ಲೈ ಕ್ಯಾಚರ್, ಅದರ ಉದ್ದವಾದ ಬಿಳಿ ಬಾಲದೊಂದಿಗೆ ಮತ್ತು ಭೂತ ದಂತಹ ಸದ್ದಿಲ್ಲದ ಹಾರಾಟ. ಮುಖ್ಯವಾಗಿ ಆ ಪಕ್ಷಿಗಳಿಗೆ ಹುಳಗಳು ಆಹಾರ; ಮರಗಳಿಂದ ಹಣ್ಣುಗಳ ಫಲಾಹಾರ ಇಷ್ಟ; ಚೆರಿ ಹಣ್ಣುಗಳು ಪಕ್ವವಾದಾಗ ಮರದಿಂದ ತಿನ್ನಲು ಬರುತ್ತವೆ. ಮರದ ರೆಂಬೆಗಳಲ್ಲಿ ತಿರುಗಾಡುವಾಗ ಅವುಗಳು ಚಿಲಿ-ಪಿಲಿ ಶಬ್ದ ಮಾಡುತ್ತಾ ಕೆಲವೊಮ್ಮೆ ದೊಡ್ಡದಾಗಿ ಶಬ್ದಮಾಡುತ್ತವೆ. ಮತ್ತು ಆಗಾಗ ಗಂಡು ಪಕ್ಷಿಯು ಇಂಪಾದ ಸಣ್ಣ ಹಾಡನ್ನು ಗುನುಗುವುದು, ಹೀಗೆ ತನ್ನ ಶಹಾ ಬುಲ್ ಬುಲ್(ಕಿಂಗ್ ಓಫ್ ದಿ ನೈಟಿಂಗೇಲ್ಸ್) ಎಂಬ ಹೆಸರನ್ನು ಸಮರ್ಥಿಸಿತು.

Birdsong heard in the Mountains by Ruskin Bond
From, Rain in the Mountains. Notes from the Himalayas.
Published in Penguin Books India 1996

About The Author

ಡಾ. ಖಂಡಿಗೆ ಮಹಾಲಿಂಗ ಭಟ್

ಡಾ. ಖಂಡಿಗೆ ಮಹಾಲಿಂಗಭಟ್‌ ಮೂಲತಃ ಕಾಸರಗೋಡಿನ ನೀರ್ಚಲ್‌ ನವರು. "ದಂತಾರೋಗ್ಯದ ರಹಸ್ಯ" ಇವರ ಪ್ರಕಟಿತ ಕೃತಿ. ಸಧ್ಯ ಮಣಿಪಾಲದಲ್ಲಿ ನೆಲೆಸಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ