ನಾನು ವಿಜ್ಞಾನಕ್ಕಿಂತ ಹೆಚ್ಚು ಸಾಹಿತ್ಯಿಕ ವ್ಯಕ್ತಿ ಅನ್ನಿಸುತ್ತೆ. ಉದಾಹರಣೆಗೆ ಹೇಳಬೇಕೆಂದರೆ ನಂಗೆ ಸಂಖ್ಯೆಗಳನ್ನು ಸರಿಯಾಗಿ ಬರೆಯೋಕೆ ಬರಲ್ಲ. ನಾನು ಸಂಖ್ಯೆಗಳನ್ನ ಬರೆದರೆ ಅದು ಪುರಾತನ ಸುಂದರ ಅಕ್ಷರಗಳ ತರಹ ಕಾಣುತ್ತೆ. ಕಾರು ಕಲಿಯುವುದಂತೂ ಅಸಾಧ್ಯ. ಸಾಧಾರಣವಾದ ಸ್ಟಿಲ್ ಕ್ಯಾಮೆರ ಬಳಸುವುದು ಕೂಡ ಗೊತ್ತಿಲ್ಲ. ಸಿಗರೇಟ್ ಲೈಟರ್ ಗೆ ಫ್ಲೂಯಿಡ್ ಹಾಕೋದು ಹೇಗೆ ಅಂತ ಗೊತ್ತಿಲ್ಲ. ನಾನು ಫೋನು ಹಿಡಿಯುವ ರೀತಿ ಚಿಂಪಾಜಿ ಫೋನು ಹಿಡಿದ ಹಾಗಿರುತ್ತೆ ಅಂತ ಮಗ ಹೇಳುತ್ತಾನೆ.
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವ ಆತ್ಮಕತೆಯ ಏಳನೆಯ ಅಧ್ಯಾಯ.

ಮಿಂಚು ಹುಳುಗಳ ಬೆಳಕಲ್ಲಿ

ಗ್ರಾಜ್ಯುಯೇಷನ್ ದಿನ ಹತ್ತಿರವಾಗಿತ್ತು. ಪ್ರಾಥಮಿಕ ಶಾಲೆಯ ಗ್ರಾಜ್ಯುಯೇಷನ್ ಸಮಾರಂಭಗಳು ಆಗೆಲ್ಲ ಸಂಪ್ರದಾಯಬದ್ಧವಾಗಿ, ಸುಸಂಬದ್ಧವಾಗಿ, ಭಾವನಾತ್ಮಕವಾಗಿ ಒಂದೇ ರೀತಿಯಲ್ಲಿರುತ್ತಿದ್ದವು. ಮೊದಲಿಗೆ ಪ್ರಾಂಶುಪಾಲರು ಭವಿಷ್ಯದ ಪದವೀಧರರಿಗೆ ಶುಭಕೋರಿ ಪ್ರೋತ್ಸಾಹದ ಮಾತುಗಳನ್ನಾಡುತ್ತಿದ್ದರು. ಅವರ ನಂತರ ಬಂದಿದ್ದ ಅತಿಥಿಗಳ ಭಾಷಣ. ಗ್ರಾಜುಯೇಟ್ ವಿದ್ಯಾರ್ಥಿಗಳ ಪರವಾಗಿ ಒಬ್ಬರು ಆ ಭಾಷಣಕ್ಕೆ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದರು. ಆ ನಂತರ ವಿದ್ಯಾರ್ಥಿಗಳು ವಾದ್ಯಸಹಿತವಾಗಿ ಹಾಡುತ್ತಿದ್ದರು :
“ನಮ್ಮ ಮೇಷ್ಟ್ರುಗಳ ಕರುಣೆಗೆ ನಮ್ಮ ವಂದನೆಗಳು
ಅವರನ್ನು ಪೂಜಿಸಿ ಗೌರವಿಸುವೆವು..”

ಇದನ್ನು ಹೇಳುತ್ತಿದ್ದ ಹಾಗೆ ಐದನೇ ವರ್ಷದ ವಿದ್ಯಾರ್ಥಿಗಳು ಹಾಡುತ್ತಿದ್ದರು :
“ವರುಷಗಳೇ ಉರುಳಿದರೂ ನಾವು ಸೋದರ ಸೋದರಿಯರೇ
ನೀವು ಮುನ್ನಡೆಯಿರಿ”..

ಕೊನೆಯಲ್ಲಿ ಎಲ್ಲರೂ ಒಟ್ಟಾಗಿ ಹಾಡುತ್ತಿದ್ದೆವು :
“ಮಿಂಚುಹುಳಗಳ ಬೆಳಕಲ್ಲಿ…”

ಈ ಸಾಲನ್ನು ಹಾಡುತ್ತಿದ್ದಂತೆ ಹುಡುಗಿಯರು ಬಿಕ್ಕಳಿಸುತ್ತಿದ್ದರು. ಇದರ ನಡುವೆಯೇ ಗ್ರಾಜುಯೇಟ್ ವಿದ್ಯಾರ್ಥಿಗಳ ಪರವಾಗಿ ಮಾತನಾಡಬೇಕಿತ್ತು.

ನಮ್ಮ ಮೇಷ್ಟ್ರು ನನ್ನ ಭಾಷಣವನ್ನು ಅವರೇ ಬರೆದುಕೊಟ್ಟು ಅದನ್ನು ನೀಟಾಗಿ ಬರೆದುಕೊಂಡು ಬಂದು ಮಾತಾಡಲು ಹೇಳಿದ್ದರು. ಈ ಭಾಷಣದಲ್ಲಿ ಇರಬೇಕಾದ ಎಲ್ಲ ವಿಷಯಗಳೂ ಇದ್ದವು. ಆದರೆ ಓದಿದರೆ ಯಾವುದೋ ನೀತಿ ಶಾಸ್ತ್ರದ ಅಧ್ಯಾಯದಂತಿತ್ತು. ಆ ಭಾಷಣ ನನ್ನದು ಅನ್ನಿಸುತ್ತಿರಲಿಲ್ಲ. ಮೇಷ್ಟ್ರುಗಳು ತಮ್ಮ ವಿದ್ಯಾರ್ಥಿಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಅಂತ ಹೇಳಲು ಬಳಸಿದ್ದ ಭಾಷೆಯಂತೂ ಬರೀ ಹೊಗಳಿಕೆಯಿಂದ ತುಂಬಿತ್ತು. ಇದನ್ನು ಬರೆದುಕೊಟ್ಟ ಮೇಷ್ಟ್ರ ಎದುರಿಗೆ ಇದನ್ನು ಓದುವಾಗ ಒಮ್ಮೆ ಕೂಡ ಅವರನ್ನು ದಿಟ್ಟಿಸಿ ನೋಡಲಾಗಲಿಲ್ಲ.

ಮೊದಲೇ ಹೇಳಿದಂತೆ ಈ ಮೇಷ್ಟ್ರ ಬಗ್ಗೆ ನನಗೆ ಪ್ರೀತಿಯಿರಲಿಲ್ಲ. ಹಾಗಿದ್ದೂ ಆತ ಅದ್ಹೇಗೆ ತಾನು ಕರುಣಾಮಯಿ, ನಾವು ಹೋಗುತ್ತಿರುವುದರಿಂದ ಅವನಿಗೆ ಬಹಳ ಬೇಸರವಾಗುತ್ತಿದೆ ಅಂತ ಹೇಳಲು ಸಾಧ್ಯ? ತನ್ನ ಬಗ್ಗೆ ತಾನೇ ಈ ತರಹ ಹೊಗಳಿಕೆಯ ಮಾತುಗಳನ್ನು ಬರೆದುಕೊಳ್ಳುವ ಇವನೆಂತಹ ಮನುಷ್ಯ? ಓದುತ್ತಿದ್ದ ಹಾಗೇ ಅಸಹ್ಯವಾಯಿತು. ಆದರೂ ಅವರು ಬರೆದುಕೊಟ್ಟಿದ್ದನ್ನು ಮನೆಗೆ ತೆಗೆದುಕೊಂಡು ಹೋದೆ.

ಇದು ಹೀಗೆ ಮಾಡಬೇಕು ಅನ್ನುವುದು ಸಂಪ್ರದಾಯವಾದ್ದರಿಂದ ನಾನು ಏನೂ ಮಾಡಲಾರೆ ಅಂದುಕೊಂಡು ಅದನ್ನು ಮತ್ತೊಂದು ಹಾಳೆಯಲ್ಲಿ ಬರೆಯಲು ಕೂತೆ. ನಾನು ಬರೆಯುತ್ತಿರುವುದನ್ನು ನನ್ನಣ್ಣ ಹಿಂದೆ ನಿಂತು ಗಮನಿಸಿ “ಅದನ್ನು ತೋರಿಸು” ಅಂದ. ಮೇಷ್ಟ್ರು ಬರೆದುಕೊಟ್ಟಿದ್ದನ್ನು ಅಲ್ಲೇ ಪಕ್ಕದಲ್ಲೇ ನಿಂತು ಓದಿದ. ಓದಿ ಮುಗಿಸುತ್ತಿದ್ದಂತೆ ಆ ಹಾಳೆಯನ್ನು ಮುದುರಿ ಉಂಡೆ ಮಾಡಿ ರೂಮಿನ ಮೂಲೆಯಲ್ಲಿ ಎಸೆದ. “ಅಕಿರ ಇದನ್ನು ಓದಬೇಡ” ಎಂದು ತಾಕೀತು ಮಾಡಿದ. ಬಹಳ ಒಳ್ಳೆ ಐಡಿಯಾ ಅನ್ನಿಸಿತು. ಆದರೆ ಮೇಷ್ಟ್ರು ಅವರು ಬರೆದುಕೊಟ್ಟಿದ್ದ ಭಾಷಣದ ಪ್ರತಿ ಕೇಳೇಕೇಳುವರಲ್ಲ ಏನು ಮಾಡೋದು? ಅದಿಲ್ಲದೆ ಹೋಗೋ ಹಾಗಿಲ್ಲ ಅಂತ ಅಣ್ಣನಿಗೆ ಹೇಳಿದೆ. “ಸರಿ ಆ ಭಾಷಣದ ಪ್ರತಿ ಮಾಡಿ ಅವರಿಗೆ ತೋರಿಸು. ಆಮೇಲೆ ಸಮಾರಂಭಕ್ಕೆ ಹೋಗೋವಾಗ ನಾನು ಬರೆದುಕೊಡುವ ಭಾಷಣವನ್ನ ಆ ಹಾಳೆಯ ಜೊತೆಯಲ್ಲಿಟ್ಟುಕೊಂಡು ಓದು” ಅಂತ ಹೇಳಿದ.

ನಮ್ಮಣ್ಣ ಸಿಕ್ಕಾಪಟ್ಟೆ ಕಟುವಾದ ಭಾಷಣ ಬರೆದುಕೊಟ್ಟ. ಪ್ರಾಥಮಿಕ ಶಾಲೆಯ ಸಂಪ್ರದಾಯವಾದಿ, ಬದಲಾಗಲು ಒಪ್ಪದ ಶಿಕ್ಷಣಕ್ರಮವನ್ನು ಟೀಕಿಸಿದ್ದ. ಈ ವ್ಯವಸ್ಥೆಯನ್ನು ಎತ್ತಿಹಿಡಿದಿರುವ ಶಿಕ್ಷಕರ ಮೇಲೆ ಹರಿಹಾಯ್ದಿದ್ದ. ಪದವೀಧರರಾದ ನಾವುಗಳು ಇಂದಿನವರೆಗೆ ಹಳವಂಡದಲ್ಲಿ ಬದುಕುತ್ತಿದ್ದೆವು. ಇಂದು ಸರಪಳಿಗಳನ್ನು ಕಳಚಿ ಮೊದಲ ಸಲ ಸಂತೋಷದ ಕನಸುಗಳನ್ನು ಕಾಣುತ್ತಿದ್ದೇವೆ. ಆವತ್ತಿಗೂ ಯಾವತ್ತಿಗೂ ಅದು ನಿಜಕ್ಕೂ ಕ್ರಾಂತಿಕಾರಕವಾದ ಭಾಷಣ. ಅದು ನನ್ನಲ್ಲಿ ಚೈತನ್ಯವನ್ನು ತುಂಬಿತು.

ದುರದೃಷ್ಟವಶಾತ್ ನನಗದನ್ನು ಓದಲು ಧೈರ್ಯ ಸಾಲಲಿಲ್ಲ. ಈಗ ಅನ್ನಿಸುತ್ತೆ – ನಾನದನ್ನು ಆವತ್ತು ಓದಿದ್ದರೆ ಗೊಗೊಲನ ದಿ ಪಬ್ಲಿಕ್ ಪ್ರಾಸಿಕ್ಯೂಟರ್ ನ ಕೊನೆಯಲ್ಲಿ ಪರದೆ ಬೀಳುವ ಮುನ್ನಿನ ಸೀನ್ ರೀತಿ ಆಗಿರುತ್ತಿತ್ತು. ಪ್ರೇಕ್ಷಕರ ನಡುವೆ ನಮ್ಮಪ್ಪ ಕೋಟು ಧರಿಸಿ ಠಾಕುಠೀಕಾಗಿ ಕೂತಿದ್ದರು. ಪೋಡಿಯಂ ಎದುರಿಗೆ ಹೋಗಿ ನಿಲ್ಲುವ ಮೊದಲು ಕಡೆಯದಾಗಿ ಮತ್ತೊಮ್ಮೆ ನನಗೆ ಭಾಷಣ ಬರೆದುಕೊಟ್ಟ ಮೇಷ್ಟ್ರು ತನ್ನ ಮುಂದೆ ಒಪ್ಪಿಸಲು ಹೇಳಿದ್ದರು. ನನ್ನಣ್ಣ ಬರೆದುಕೊಟ್ಟಿದ್ದ ಭಾಷಣವನ್ನು ನನ್ನ ಅಂಗಿಯಲ್ಲಿ ಬಚ್ಚಿಟ್ಟುಕೊಂಡಿದ್ದೆ. ಅದನ್ನು ತೆಗೆದು ಓದುವುದೇನೂ ಕಷ್ಟದ ಕೆಲಸವಾಗಿರಲಿಲ್ಲ.

ನಾನು ಬರೆಯುತ್ತಿರುವುದನ್ನು ನನ್ನಣ್ಣ ಹಿಂದೆ ನಿಂತು ಗಮನಿಸಿ “ಅದನ್ನು ತೋರಿಸು” ಅಂದ. ಮೇಷ್ಟ್ರು ಬರೆದುಕೊಟ್ಟಿದ್ದನ್ನು ಅಲ್ಲೇ ಪಕ್ಕದಲ್ಲೇ ನಿಂತು ಓದಿದ. ಓದಿ ಮುಗಿಸುತ್ತಿದ್ದಂತೆ ಆ ಹಾಳೆಯನ್ನು ಮುದುರಿ ಉಂಡೆ ಮಾಡಿ ರೂಮಿನ ಮೂಲೆಯಲ್ಲಿ ಎಸೆದ. “ಅಕಿರ ಇದನ್ನು ಓದಬೇಡ” ಎಂದು ತಾಕೀತು ಮಾಡಿದ. ಬಹಳ ಒಳ್ಳೆ ಐಡಿಯಾ ಅನ್ನಿಸಿತು.

ಅಪ್ಪ ಮನೆಗೆ ಬಂದಮೇಲೆ “ಅಕಿರ ಇವತ್ತು ನೀನಿವತ್ತು ಮಾಡಿದ ಭಾಷಣ ಚೆನ್ನಾಗಿತ್ತು” ಅಂದರು. ಅಣ್ಣನಿಗೆ ನಡೆದದ್ದೇನು ಎನ್ನುವುದು ತಿಳಿದುಹೋಯಿತು. ಅವನು ನನ್ನನ್ನು ತೀಕ್ಷ್ಣವಾಗಿ, ವ್ಯಂಗ್ಯವಾಗಿ ನೋಡಿದ. ನಾಚಿಕೆಯಾಯಿತು. ನಾನು ಹೆದರುಪುಕ್ಕಲ. ಈ ರೀತಿ ನಾನು ಕುರೊಡ ಪ್ರಾಥಮಿಕ ಶಾಲೆಯಿಂದ ಪದವೀಧರನಾದೆ.

ಸೊಕ್ಕಿನ ಮೂಗು ತುಂಡಾಯ್ತು

ನಮ್ಮ ಗ್ರಾಜುಯೇಶನ್ ಸಮಯ ಹತ್ತಿರ ಬರುತ್ತಿತ್ತು. ನಮ್ಮ ಶಾಲೆಯ ಮುಂದಿದ್ದ ಕಡಿದಾದ ದಾರಿ ಹತ್ತೊರಿಜಾ಼ಕವನ್ನು “ತಾಯ್ ಶೋ ಸ್ಕೇಟ್’ನಲ್ಲಿ ಇಳಿಯುತ್ತಿದ್ದೆ. ಅದೊಂದು ದೊಡ್ಡ ಸ್ಕೇಟ್ ಬೋರ್ಡ್ ಅಥವ ಸ್ಕೂಟರ್ ತರಹ. ಅದಕ್ಕೆ ಮುಂದೆ ಒಂದು ಹಿಂದೆ ಎರಡು ಚಕ್ರಗಳಿತ್ತು. ಬಲಗಾಲನ್ನು ಅದರ ಮೇಲಿಟ್ಟು ಹ್ಯಾಂಡಲ್ ಹಿಡಿದು ಎಡಗಾಲಿನಿಂದ ಮುಂದಕ್ಕೆ ತಳ್ಳಿಕೊಳ್ಳಬೇಕು. ನಾನು ಉಸಿರುಬಿಗಿಹಿಡಿದು ಇಳಿಜಾರಿನಲ್ಲಿ ಜಾರುತ್ತಿದ್ದೆ. ಮುಂದಿನ ಚಕ್ರ ಇದ್ದಕ್ಕಿದ್ದ ಹಾಗೆ ಅಲ್ಲಿದ್ದ ಗ್ಯಾಸ್ ಪೈಪ್ ಲೈನಿಗೆ ಬಡಿಯಿತು. ನಾನು ಗಾಳಿಯಲ್ಲಿ ಹಾರುತ್ತಿದ್ದಂತೆ ಅನ್ನಿಸಿತು.

ಎಚ್ಚರವಾದಾಗ ಹತ್ತೊರಿಜ಼ಕ ಬೆಟ್ಟದ ತಪ್ಪಲಿನಲ್ಲಿದ್ದ ಪೋಲೀಸ್ ಸ್ಟೇಷನ್ನಿನಲ್ಲಿ ಮಲಗಿದ್ದೆ. ಬಲಗಾಲಿನ ಮಂಡಿಗೆ ಸಿಕ್ಕಾಪಟ್ಟೆ ಪೆಟ್ಟಾಗಿತ್ತು. ಸ್ವಲ್ಪದಿನ ಕುಂಟುತ್ತಾ ನಡೆಯುತ್ತಿದ್ದೆ. ಹಾಗಾಗಿ ಶಾಲೆಗೆ ಹೋಗದೆ ಮನೆಯಲ್ಲೇ ಇರಬೇಕಾಯಿತು. (ಇವತ್ತಿಗೂ ನನ್ನ ಬಲಮಂಡಿಯ ನೋವು ಹಾಗೇ ಇದೆ. ಅದಕ್ಕೆ ಏನೂ ತಾಗಿಸಿಕೊಳ್ಳಬಾರದು ಅಂತ ಎಚ್ಚರಿಕೆಯಿಂದ ಇದ್ದಷ್ಟೂ ಅದಕ್ಕೆ ಹೆಚ್ಚು ತಾಗಿಸಿಕೊಳ್ಳುತ್ತಿರುತ್ತೀನಿ. ಈ ಮಂಡಿಯ ಕಾರಣದಿಂದಲೇ ನಂಗೆ ಗಾಲ್ಫ್ ಆಡಲು ಆಗಲ್ಲ. ಹೆಚ್ಚು ಬಗ್ಗುವುದು ಕಷ್ಟ. ಇಲ್ಲದಿದ್ದರೆ ಈ ಆಟದಲ್ಲಿ ನಾನು ಎಕ್ಸ್ಪರ್ಟ್ ಆಗಿರುತ್ತದೆ).

ಸ್ವಲ್ಪ ದಿನಗಳ ನಂತರ ಮಂಡಿಯ ಗಾಯ ವಾಸಿಯಾಯಿತು. ಅಪ್ಪನ ಜೊತೆ ಸಾರ್ವಜನಿಕ ಸ್ನಾನದಮನೆಗೆ ಹೋದೆ. ಅಲ್ಲಿ ಬಿಳಿಕೂದಲು, ಬಿಳಿಗಡ್ಡವಿದ್ದ ಹಿರಿಯರೊಬ್ಬರು ಸಿಕ್ಕರು. ಅಪ್ಪನಿಗೆ ಅವರ ಪರಿಚಯವಿತ್ತು ಅಂತ ಕಾಣುತ್ತೆ. ನಮಸ್ಕಾರ ಅಂದರು. ಅರೆಬೆತ್ತಲೆಯಾಗಿದ್ದ ನನ್ನನ್ನು ನೋಡುತ್ತಾ “ನಿನ್ನ ಮಗನಾ?” ಅಂತ ಕೇಳಿದರು. ಅಪ್ಪ ತಲೆಯಾಡಿಸಿದರು. “ಇವನು ಬಹಳ ವೀಕಾಗಿದಾನೆ ಅನ್ನಿಸುತ್ತೆ. ಇಲ್ಲೇ ಹತ್ತಿರದಲ್ಲಿ ನನ್ನ ಕತ್ತಿವರಸೆ ಶಾಲೆಯಿದೆ. ಇವನನ್ನು ಅಲ್ಲಿಗೆ ಕಳಿಸು”. ಅವರು ಯಾರು ಅಂತ ಆಮೇಲೆ ಅಪ್ಪನನ್ನ ಕೇಳಿದಾಗ ಆತ ಚಿಬಾ ಶುಸುಕುನ ಮೊಮ್ಮಗ ಅಂತ ಹೇಳಿದರು.

ಚಿಬ ಶುಸಾಕು ಜಮೀನ್ದಾರಿ ಯುಗದ ಪ್ರಸಿದ್ಧ ಕಠಾರಿವೀರ. ಅವನ ಬಗ್ಗೆ ಹಲವು ದಂತಕತೆಗಳಿದ್ದವು. ಅವನ ಶಾಲೆ ಒಟಾಮ –ಗ – ಇಕಿಯಲ್ಲಿತ್ತು. ಅವನ ಮೊಮ್ಮಗನ ಶಾಲೆ ನಮ್ಮ ಮನೆಗೆ ಹತ್ತಿರದಲ್ಲಿದಿರುವುದು ತಿಳಿದು ಕತ್ತಿವರಸೆ ಕಲಿಯಲೇಬೇಕೆಂದು ಆಸೆಯಿಂದ ಅಲ್ಲಿಗೆ ಹೋದೆ. ಆದರೆ ಆ ಬಿಳಿಕೂದಲ, ಬಿಳಿಗಡ್ಡದ ಚಿಬಾ ಶುಸಾಕುನ ಮೊಮ್ಮಗನ ಶಾಲೆಯಲ್ಲಿ ಉನ್ನತ ಪದವಿಯಲ್ಲಿದ್ದ ಅನ್ನೋದನ್ನ ಬಿಟ್ಟರೆ ಬೇರೇನೂ ಮಾಡ್ತಿರಲಿಲ್ಲ. ಒಂದೇ ಒಂದು ಸಾರಿ ಕೂಡ ಆತ ನಂಗೆ ಪಾಠ ಹೇಳಿಕೊಡಲಿಲ್ಲ.

ನಮಗೆ ಪಾಠ ಹೇಳಿಕೊಡುತ್ತಿದ್ದದ್ದು ಮಾಸ್ಟರ್ ನ ಸಹಾಯಕ. “ಚೊ, ಚೊ, ಯಟ್ಟ! ಚೊ, ಯಟ್ಟ!” ಅಂತ ಒಳ್ಳೆ ಯಾವುದೋ ಜನಪದ ಹಾಡಿನ ಮಟ್ಟನ್ನು ಹೇಳೋನ ರೀತಿ ಅರಚುತ್ತಿದ್ದ. ಅವನು ಹೀಗೆ ಕಿರುಚುತ್ತಿದ್ದರಿಂದಲೇ ನನಗವನ ಬಗ್ಗೆ ಗೌರವವೇ ಬರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲಿಗೆ ಬರುತ್ತಿದ್ದ ಮಕ್ಕಳೆಲ್ಲ ನಮ್ಮ ಅಕ್ಕಪಕ್ಕದವರು. ಅವರೆಲ್ಲ ಕತ್ತಿವರಸೆ ಅಂದರೆ ಯಾವುದೋ ಆಟ ಅಂದುಕೊಂಡಿದ್ದರು. ಅದೆಲ್ಲ ಶುದ್ಧ ದಡ್ಡತನದ ಹಾಗೆ ಕಾಣುತ್ತಿತ್ತು. ನಂಗೆ ಈ ಶಾಲೆಯ ಬಗ್ಗೆ ರೇಜಿಗೆ ಅನ್ನಿಸುತ್ತಿರುವಾಗಲೇ ಕತ್ತಿವರಸೆ ಶಾಲೆಯ ಮುಖ್ಯಸ್ಥನಿಗೆ ಮೋಟಾರು ವಾಹನವೊಂದು ಗುದ್ದಿ ಅಪಘಾತವಾಯಿತು. ಆಗಿನ್ನೂ ಮೋಟಾರು ವಾಹನಗಳು ಬಹಳ ಅಪರೂಪವಾಗಿತ್ತು. ಆ ಸುದ್ದಿ ಕೇಳಿದಾಗ ಜಮೀನ್ದಾರಿ ಕಾಲದ ಬಹುದೊಡ್ಡ ಕಠಾರಿವೀರ ಮಿಯಮೊಟೊ ಮೌಶಿಯನ್ ನ ಅವನ ಕುದುರೆಯೇ ಒದ್ದ ಹಾಗೇ ಅನ್ನಿಸಿತ್ತು. ಚಿಚ ಶುಸಾಕು ಮೊಮ್ಮಗನ ಬಗ್ಗೆ ಇದ್ದ ಗೌರವವು ಹೊರಟುಹೋಯಿತು.

ಈ ಶಾಲೆಯಲ್ಲಿ ನನಗಾದ ಅನುಭವಗಳಿಂದ ಕತ್ತಿವರಸೆಯನ್ನು ಕಲಿಯಲೇಬೇಕು ಅನ್ನಿಸಿ ಟಕನೊ ಸಜಬುರೊ ನಡೆಸುತ್ತಿದ್ದ ಶಾಲೆಗೆ ಸೇರಿಕೊಂಡೆ. ಆತ ಒಂದು ಇಡೀ ತಲೆಮಾರನ್ನೇ ತನ್ನ ಕಲೆಯಿಂದ ಪ್ರಭಾವಿಸಿದ್ದ. ಆದರೆ ನನ್ನ ಉತ್ಸಾಹ “ಮೂರು ದಿನದ ಸಂನ್ಯಾಸಿ”(ಆರಂಭಶೂರತ್ವ) ತರಹದ್ದು. ಅವನ ಪ್ರಸಿದ್ಧಿಯ ಬಗ್ಗೆ ಗೊತ್ತಿತ್ತು. ಆದರೆ ಆತನ ಪಾಠ ಮಾಡುತ್ತಿದ್ದ ರೀತಿಯಲ್ಲಿನ ಹಿಂಸೆ ನನ್ನ ಕಲ್ಪನೆಯನ್ನು ಮೀರಿದ್ದಾಗಿತ್ತು.

ಅವನ ಮೊಮ್ಮಗನ ಶಾಲೆ ನಮ್ಮ ಮನೆಗೆ ಹತ್ತಿರದಲ್ಲಿದಿರುವುದು ತಿಳಿದು ಕತ್ತಿವರಸೆ ಕಲಿಯಲೇಬೇಕೆಂದು ಆಸೆಯಿಂದ ಅಲ್ಲಿಗೆ ಹೋದೆ. ಆದರೆ ಆ ಬಿಳಿಕೂದಲ, ಬಿಳಿಗಡ್ಡದ ಚಿಬಾ ಶುಸಾಕುನ ಮೊಮ್ಮಗನ ಶಾಲೆಯಲ್ಲಿ ಉನ್ನತ ಪದವಿಯಲ್ಲಿದ್ದ ಅನ್ನೋದನ್ನ ಬಿಟ್ಟರೆ ಬೇರೇನೂ ಮಾಡ್ತಿರಲಿಲ್ಲ. ಒಂದೇ ಒಂದು ಸಾರಿ ಕೂಡ ಆತ ನಂಗೆ ಪಾಠ ಹೇಳಿಕೊಡಲಿಲ್ಲ.

ಸುಸ್ತಾಗಿ ಬಾಯಾರಿ ಅಭ್ಯಾಸದ ವೇಳೆ “ಓ – ಮೆನ್!” ಅಂದೆ ಅಷ್ಟೇ. ಜೋರು ಹೊಡೆತ ಬಿತ್ತು. ಗಾಳಿಯಲ್ಲೆತ್ತಿ ಗೋಡೆಯತ್ತ ಬೀಸಿದರು, ಕಣ್ಣು ಕತ್ತಲಿಟ್ಟಿತು. ಚೂರಾದ ನಕ್ಷತ್ರಗಳು ಸುರುಸುರು ಬತ್ತಿಗಳಂತೆ ಕಣ್ಣಮುಂದೆ ಉರಿದು ಬೀಳುತ್ತಿರುವಂತೆ ಕಂಡಿತು. ಈ ನಕ್ಷತ್ರಗಳು ಕೆಂಡೋದಲ್ಲಿನ ನನ್ನ ಶಕ್ತಿ ಅಥವಾ ಆತ್ಮವಿಶ್ವಾಸ ಹೀಗೆ ಖಾಲಿ ಆಕಾಶದಿಂದ ಉದುರಿಹೋಯಿತು.

ನೂರಾರು ಗಾದೆಮಾತುಗಳು, ನುಡಿಗಟ್ಟುಗಳು ಮನಸ್ಸಿಗೆ ಬರುತ್ತಿವೆ. “ಈ ಪ್ರಪಂಚ ಕೇವಲ ಸಂತೋಷ ತುಂಬಿರುವ ತಾಣವಲ್ಲ”, “ಯಾವಾಗಲೂ ನಮಗಿಂತ ದೊಡ್ಡದು ಇದ್ದೇಇರುತ್ತೆ”, “ಬಾವಿಯೊಳಗಿನ ಕಪ್ಪೆ”, “ಸಣ್ಣ ತೂತಿನಿಂದ ಆಕಾಶ ನೋಡಿದ ಹಾಗೆ”. ಗೋಡೆಗೆ ಎತ್ತಿ ಒಗೆದ ನಂತರವೇ ಮೋಟಾರು ಢಿಕ್ಕಿ ಹೊಡೆದ ನನ್ನ ಹಿಂದಿನ ಮೇಷ್ಟ್ರ ಬಗ್ಗೆ ನಾನೆಷ್ಟು ಪೂರ್ವಾಗ್ರಹಪೀಡಿತನಾಗಿ ಯೋಚಿಸಿದ್ದೆ ಅಂತ ಅರ್ಥವಾಯಿತು. ಅಹಂಕಾರದಲ್ಲಿ ಬೆಳೆದಿದ್ದ ನನ್ನ ಮೂಗು ತುಂಡಾಯಿತು. ಮತ್ತೆಂದೂ ಬೆಳೆಯಲಿಲ್ಲ. ಪ್ರಾಥಮಿಕ ಶಾಲೆಯನ್ನು ಮುಗಿಸುವುದಕ್ಕೆ ಮುಂಚೆ ನನ್ನ ಈ ಮೂಗು ತುಂಡಾಗಲು ಕೇವಲ ಕೆಂಡೋ ಮಾತ್ರ ಕಾರಣವಾಗಿರಲಿಲ್ಲ.

ನಾನಾಗ ಮಾಧ್ಯಯಮಿಕ ಶಾಲೆಗೆ ಸೇರಬೇಕೆಂದಿದ್ದೆ. ಪ್ರವೇಶ ಪರೀಕ್ಷೆಯಲ್ಲೇ ಅನುತ್ತೀರ್ಣನಾಗಿದ್ದೆ. ಆದರೆ ನನ್ನಣ್ಣನಿಗಿಂತ ನನ್ನ ಕೇಸು ಭಿನ್ನವಾಗಿತ್ತು. ನನಗಿದು ನಾಲ್ಕನೇ ಮಾಧ್ಯಣಮಿಕ ಶಾಲೆ ಅವನು ಮೊದಲನೇ ಮಾಧ್ಯಮಿಕ ಶಾಲೆಯಲ್ಲೇ ಅನುತ್ತೀರ್ಣನಾಗಿದ್ದ. ಆದರೆ ಈ ಘಟನೆ ಅನಿರೀಕ್ಷಿತವಲ್ಲ. ಕುರೊದ ಪ್ರಾಥಮಿಕ ಶಾಲೆಯಲ್ಲಿನ ನನ್ನ ರೆಕಾರ್ಡ್ ಬಾವಿಯೊಳಗಿನ ಕಪ್ಪೆಯ ರೀತಿಯದ್ದಾಗಿತ್ತು. ವ್ಯಾಕರಣ, ಇತಿಹಾಸ, ಕಲೆ ಮತ್ತು ಬರವಣಿಗೆಯ ಕೌಶಲ ಇಂತಹ ನಂಗಿಷ್ಟವಾದ ವಿಷಯಗಳಿಗೆ ಮಾತ್ರ ಅರ್ಜಿ ಹಾಕಿದ್ದೆ. ಇದರಲ್ಲಿ ನನ್ನನ್ನ ಯಾರೂ ಸೋಲಿಸುವವರಿರಲಿಲ್ಲ. ಆದರೆ ಗಣಿತ, ವಿಜ್ಞಾನ ಇವು ನಂಗೆ ಎಂದೂ ಅರ್ಥವಾಗುತ್ತಿರಲಿಲ್ಲ. ಈ ವಿಷಯಗಳಲ್ಲಿ ಫೇಲಾಗೋದರಿಂದ ತಪ್ಪಿಸಿಕೊಳ್ಳಲು ಎಷ್ಟು ಬೇಕೋ ಅಷ್ಟು ಓದುತ್ತಿದ್ದೆ. ಹಾಗಾಗಿ ಫಲಿತಾಂಶ ನಿರೀಕ್ಷಿತವೇ ಆಗಿತ್ತು. ಮಾಧ್ಯಮಿಕ ಶಾಲೆಯ ಪರೀಕ್ಷೆಯಲ್ಲಿ ವಿಜ್ಞಾನ ಮತ್ತು ಗಣಿತದ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಿರಲೇ ಇಲ್ಲ.

ಈಗಲೂ ಇದೇ ನನ್ನ ಶಕ್ತಿ (ಸ್ಟ್ರೆಂತ್) ಹಾಗೂ ದೌರ್ಬಲ್ಯ (ವೀಕೆನೆಸ್). ನಾನು ವಿಜ್ಞಾನಕ್ಕಿಂತ ಹೆಚ್ಚು ಸಾಹಿತ್ಯಿಕ ವ್ಯಕ್ತಿ ಅನ್ನಿಸುತ್ತೆ. ಉದಾಹರಣೆಗೆ ಹೇಳಬೇಕೆಂದರೆ ನಂಗೆ ಸಂಖ್ಯೆಗಳನ್ನು ಸರಿಯಾಗಿ ಬರೆಯೋಕೆ ಬರಲ್ಲ. ನಾನು ಸಂಖ್ಯೆಗಳನ್ನ ಬರೆದರೆ ಅದು ಪುರಾತನ ಸುಂದರ ಅಕ್ಷರಗಳ ತರಹ ಕಾಣುತ್ತೆ. ಕಾರು ಕಲಿಯುವುದಂತೂ ಅಸಾಧ್ಯ. ಸಾಧಾರಣವಾದ ಸ್ಟಿಲ್ ಕ್ಯಾಮೆರ ಬಳಸುವುದು ಕೂಡ ಗೊತ್ತಿಲ್ಲ. ಸಿಗರೇಟ್ ಲೈಟರ್ ಗೆ ಫ್ಲೂಯಿಡ್ ಹಾಕೋದು ಹೇಗೆ ಅಂತ ಗೊತ್ತಿಲ್ಲ. ನಾನು ಫೋನು ಹಿಡಿಯುವ ರೀತಿ ಚಿಂಪಾಜಿ ಫೋನು ಹಿಡಿದ ಹಾಗಿರುತ್ತೆ ಅಂತ ಮಗ ಹೇಳುತ್ತಾನೆ.

ಯಾರಿಗಾದರೂ ಮೇಲಿಂದ ಮೇಲೆ ನೀನು ದಡ್ಡ ಅಂತ ಹೇಳುತ್ತಲೇ ಇದ್ದರೆ ಕ್ರಮೇಣ ಅವನ ಆತ್ಮವಿಶ್ವಾಸ ಕುಗ್ಗಿ ಅವನು ದಡ್ಡನೇ ಆಗಿಬಿಡ್ತಾನೆ. ಬದಲಿಗೆ ನೀನು ಈ ವಿಷಯದಲ್ಲಿ ಜಾಣ ಅಂತ ಹೇಳಿದರೆ ಅವನ ಆತ್ಮವಿಶ್ವಾಸ ಹೆಚ್ಚಿ ಅದರಲ್ಲಿ ಇನ್ನಷ್ಟು ನಿಪುಣನಾಗ್ತಾನೆ. ಮನುಷ್ಯರು ಅನುವಂಶಿಕತೆಯ ಕಾರಣದಿಂದ ಶಕ್ತಿ, ದೌರ್ಬಲ್ಯಗಳೊಂದಿಗೆ ಹುಟ್ಟಿರುತ್ತಾರೆ. ಅದನ್ನು ನಂತರದ ಪ್ರಭಾವಗಳಿಂದ ಬಹಳ ಮಟ್ಟಿಗೆ ಬದಲಿಸಿಕೊಳ್ಳಬಹುದು.

ಈಗ ಈ ತರಹದ ಸಮರ್ಥನೆಗಳಿಗೆ ಯಾವುದೇ ಉದ್ದೇಶವಿಲ್ಲ. ಇದನ್ನು ಈಗ ಹೇಳಿದ್ದು ಏಕೆಂದರೆ ಈ ಘಟನೆಯ ನಂತರವೇ ನನ್ನ ಬದುಕಿನ ಹಾದಿ ನನಗೆ ಸ್ಪಷ್ಟವಾಯಿತು. ಅದು ಸಾಹಿತ್ಯದ, ಕಲೆಯ ಹಾದಿ. ಅವೆರಡೂ ಬೇರೆಯಾಗುವ ದಿನಗಳು ಇನ್ನೂ ದೂರವಿತ್ತು.