‘ನೋಡಿ. ಇಂಗ್ಲೆಂಡಿನಲ್ಲೂ ಇದೆ ಪ್ರಾಬ್ಲಮ್ ಆಗಿತ್ತು. ಅದಕ್ಕೆ ಅಲ್ಲಿ ಸೋತರು. ನನಗೆ ಒಂದು ಐಡಿಯಾ ಹೊಳೆದಿದೆ. ರಾಣಿ ಎಲಿಜಬೆತ್ ಕಾಲವಾದಮೇಲೆ ಬಕಿಂಗ್ಹ್ಯಾಮ್ ಪ್ಯಾಲೇಸ್ ಅರ್ದಕ್ಕರ್ಧ ಖಾಲಿ ಇರುತ್ತೆ. ಮುಂದಿನ ಟೂರ್ನಲ್ಲಿ ನಮ್ಮ ಪ್ಲೇಯರ್ಸ್ ಅಲ್ಲಿ ತಂಗಿದರೆ ಸೇಫ್ ಮತ್ತು ಕಿರಿಕಿರಿ- ಫ್ರಿ. ಅಲ್ಲಿ ಕರೀಪ್ಯಾಂಟು ಕೆಂಪು ಕೋಟು ಮತ್ತು ಮೂತಿ ಮುಚ್ಚಿತೋ ಅನ್ನುವ ಹಾಗೆ ಕರಿ ಟೋಪಿ ಹಾಕಿರುವ ‘ರಾಯಲ್ ಗಾರ್ಡ್ಸ್’ ನ ಸೆಕ್ಯುರಿಟಿಗೆ ಹಾಕಬಹುದು.
ಆಂಗ್ಲ ಭಾಷೆಯ ಹಿರಿಯ ಕ್ರಕೆಟ್ ಅಂಕಣಕಾರ ಇ. ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಲಘು ಬರಹಗಳ ಅಂಕಣ ಇಂದಿನಿಂದ ಹದಿನೈದು ದಿನಗಳಿಗೊಮ್ಮೆ…


ಕ್ರಿಕೆಟ್: ಇಂದು ಮತ್ತು ಅಂದು

ಇಂದು:

ಭಾರತದಲ್ಲಿ ಬಹಳ ಜನಕ್ಕೆ ಅದರಲ್ಲೂ ವಿಶೇಷವಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಹುಚ್ಚು ಹಿಡಿಯುವುದು ಒಂದು ಬಾಕಿ ಇತ್ತು. ವರ್ಲ್ಡ್ ಕಪ್ ಮತ್ತು ಏಷ್ಯಾಕಪ್‌ನಲ್ಲಿ ಅದರ ಟೀಮ್ ಹೀನಾಯವಾಗಿ ಸೋತಿರುವುದು ಒಂದು ದೊಡ್ಡ ಆಘಾತವೇ ಸರಿ……

….ಈ ಮದ್ಯೆ ಐಪಿಎಲ್ ಕಮಿಟಿ ತನ್ನ ಮೀಟಿಂಗನ್ನು ಮುಂದುವರಿಸಿತು.

‘ಯಾವ ಆಟವೇ ಆಗಲಿ, ಸೋಲು ಗೆಲುವು ಇದ್ದೆ ಇರುತ್ತೆ.. ನಾನು ಏನು ಹೇಳ್ತಿದ್ದೆ… ನೋಡಿ.. ನಮಗೆ ಮುಂದಿನ ೫ ವರ್ಷಕ್ಕೆ ಐಪಿಎಲ್‌ಗೆ ೫೦ ಸಾವಿರ ಕೋಟಿಗೆ ಮಾರಾಟವಾಗಿದೆ! ಇದನ್ನು ಹೇಗೆ ಖರ್ಚು ಮಾಡಬೇಕೆಂದು ಸಲಹೆ ಕೊಡ್ತೀರಾ ..? ನನಗಂತೂ ತಲೆಗೆ ಏನು ಹೊಳೆಯುತ್ತಿಲ್ಲ’ ಎಂದು ಅಳಲನ್ನು ತೋಡಿಕೊಂಡರು ಟ್ರೆಶರರ್ ಕುಬೇರಪ್ಪ.

‘ಸೋತಿದ್ದು ಬಹಳ ಮನಸ್ಸಿಗೆ ಹಚ್ಚಿಕೊಂಡಿದ್ದಾರೆ ಹುಡುಗರು. ಅವರ ಮನಸ್ಸನ್ನು ತಿಳಿ ಮಾಡುವುದು ಮುಖ್ಯ. ನನ್ನ ಹತ್ತಿರ ಪರಿಹಾರ ಇದೆ ಅದಕ್ಕೆ.’ ಎಂದ್ರು ಪ್ರೆಸಿಡೆಂಟ್ ಗಂಗೂಳಪ್ಪ.

‘ಏನು ಪರಿಹಾರ?’

‘ನಮ್ಮ ಪ್ಲೇಯರ್ಸ್‌ಗೆ ಈಗೀಗ ೫- ಸ್ಟಾರ್ ಹೋಟೆಲ್ ವಾಸ ಇಷ್ಟವಾಗಲ್ಲ… ಲಿಫ್ಟಿನಲ್ಲಿ ಹೋಟೆಲ್ ಲಾಬಿಯಲ್ಲಿ ಯಾವಾಗಲು ಕಿರಿಕಿರಿ. ಆಟೋಗ್ರಾಫ್, ಸೆಲ್ಫಿ ಗೆ ಕಾಯುವವರು, ಮೀಡಿಯಾ, ಫಿಲಂ ಸ್ಟಾರ್ಸ್ ವಕ್ಕರಿಸಿರುತ್ತಾರೆ.. ಅವರಿಗೆ ೫ ಸ್ಟಾರ್ ಹೋಟೆಲ್‌ನಲ್ಲೂ ರೆಸ್ಟ್ ಸಿಗುತ್ತಿಲ್ಲ.’

‘ಹೌದಾ?’

‘ನೋಡಿ. ಇಂಗ್ಲೆಂಡಿನಲ್ಲೂ ಇದೆ ಪ್ರಾಬ್ಲಮ್ ಆಗಿತ್ತು. ಅದಕ್ಕೆ ಅಲ್ಲಿ ಸೋತರು. ನನಗೆ ಒಂದು ಐಡಿಯಾ ಹೊಳೆದಿದೆ. ರಾಣಿ ಎಲಿಜಬೆತ್ ಕಾಲವಾದಮೇಲೆ ಬಕಿಂಗ್ಹ್ಯಾಮ್ ಪ್ಯಾಲೇಸ್ ಅರ್ದಕ್ಕರ್ಧ ಖಾಲಿ ಇರುತ್ತೆ. ಮುಂದಿನ ಟೂರ್ನಲ್ಲಿ ನಮ್ಮ ಪ್ಲೇಯರ್ಸ್ ಅಲ್ಲಿ ತಂಗಿದರೆ ಸೇಫ್ ಮತ್ತು ಕಿರಿಕಿರಿ- ಫ್ರಿ. ಅಲ್ಲಿ ಕರೀಪ್ಯಾಂಟು ಕೆಂಪು ಕೋಟು ಮತ್ತು ಮೂತಿ ಮುಚ್ಚಿತೋ ಅನ್ನುವ ಹಾಗೆ ಕರಿ ಟೋಪಿ ಹಾಕಿರುವ ‘ರಾಯಲ್ ಗಾರ್ಡ್ಸ್’ ನ ಸೆಕ್ಯುರಿಟಿಗೆ ಹಾಕಬಹುದು. ನೀವು ಹೂ೦ ಅಂದರೆ ನಾನು ಮೂವ್ ಮಾಡ್ತೀನಿ. ಒಂದೆರೆಡು ಕೋಟಿ ಬೀಳುತ್ತೆ ಅಷ್ಟೇ.’

‘ಬಕಿಂಗ್ ಹ್ಯಾಮ್ ಪ್ಯಾಲೇಸ್ ದೊಡ್ಡದಾಗಲ್ವೆ?’ ಲೈಫ್ ಎಲ್ಲ ೧ ಬಿಎಚ್‌ಕೆ ಲಿ ಇದ್ದವರ ಪ್ರಶ್ನೆ.

‘ಈಗ ನಮ್ಮ ಪ್ಲೇಯರ್ಸ್ ಜೊತೆ ವೈಫ್, ಗರ್ಲ್ ಫ್ರೆಂಡ್ಸ್ ಹೋಗ್ತಿದಾರೆ.. ಎರಡು ಕಡೆ ಪೇರೆಂಟ್ಸ್ ನು ಕಳಿಸೋಣ. ಹೇಗಿದ್ರು ನಮ್ಮ ಡಾಕ್ಟರ್ಸ್, ಫಿಸಿಯೋಥೆರಪಿಸ್ಟ್ಸ್ ಇರ್ತಾರೆ.. ಫುಲ್ ಆಕ್ಯುಪೆನ್ಸಿ ಬರುತ್ತೆ.’

‘ಇದನ್ನು ಪೈನಲೈಜ಼್ ಮಾಡಿಬಿಡಿ’.

‘ವನ್ ಮೊರ್ ಥಿಂಗ್’

‘ಏನು?

‘ನಮ್ಮ ಪ್ಲೇಯರ್ಸ್ ಏರ್ಪೋರ್ಟ್ ನಲ್ಲಿ ಬಹಳ ಹೊತ್ತು ಕಾಯಬೇಕು. ಎವೆರಿ ಫ್ಲೈಟ್ ಮುಂಚೆ ರಷ್ಷೋರಷ್ಷು. ನಾನು ಬಾತ್ ರೂಮಿನಲ್ಲಿದ್ದಾಗ ಒಂದು ಐಡಿಯಾ ಹೊಳೀತು…’

‘ಬಾತ್ ರೂಮಿನಲ್ಲಿದ್ದಾಗ ಬ್ರಿಲಿಯಂಟ್ ಐಡಿಯಾಸ್ ಬರುತ್ತೆಂತಾ ಎಲ್ಲೋ ಓದಿದ್ದೆ.. ಹೇಳಿ’.

‘ನಮ್ಮದೇ ಏರೋಪ್ಲೇನಿದ್ದರೆ ಹೇಗೆ? ನಾವು ಯಾರಿಗೂ ಕಾಯಬೇಕಿಲ್ಲ. ನಾವು ಬೇಕಾದಾಗ ಹೋಗಬಹುದು ಬರಬಹುದು.. ಮೀಡಿಯಾನವರನ್ನು ಜೊತೆಗೆ ಕರೆದುಕೊಂಡು ಹೋಗಬಹುದು. ಖರ್ಚು ಜಾಸ್ತಿ ಏನು ಆಗಲ್ಲ.’

‘ಖರ್ಚಿನ ವಿಷಯ ನನಗೆ ಬಿಡಿ. ನಾನು ಮುಂಚೆ ಬಿಡಿಎ ನಲ್ಲಿ ಕೆಲಸ ಮಾಡ್ತಿದ್ದೆ ಅಂತ ಎಲ್ಲರಿಗು ಗೊತ್ತೇ ಇದೆ. ಬೊಇಂಗೋ, ಏರಬಸ್‌ಗೋ ಫೋನ್ ಮಾಡಿ ಬುಕ್ ಮಾಡ್ಬಿಡಿ… ನನ್ನದೊಂದು ಐಡಿಯಾ ‘

‘ಏನು?’

‘ನಾನು ಚಿಕ್ಕವನಾಗಿದ್ದಾಗ ಸೈಕಲ್ ಬಿಡುವಾಗ ಜೋಬಿನಲ್ಲಿ ಎರಡು ವಾಲ್‌ಟ್ಯೂಬ್‌ ಇಡ್ತಿದ್ದೆ. ಒಂದು ಕೈ ಕೊಟ್ರೆ ಇನೊಂದು ಜೋಬ್ ನಲ್ಲಿರೋದು. ಎರಡು ಪ್ಲೇನ್‌ಗೆ ನೆಗೋಷಿಯೇಟ್ ಮಾಡಿ. ಒಂದು ಹ್ಯಾಂಗರ್ ನಲ್ಲಿ ಇರ್ಲಿ. ಎಮರ್ಜೆನ್ಸಿಗೆ ಬೇಕಾಗುತ್ತೆ.’

‘ಪ್ಲೇಯರ್ಸ್‌ಗೆ ಊಟದ ವಿಷಯ ಪ್ರಾಬ್ಲಮ್ ಅಂತ ಓದಿದ್ದ ನೆನೆಪು.. ಕೋವಿಡ್ ಲಾಕ್‌ಡೌನ್‌ ಮಧ್ಯೆ ಡಿನ್ನರ್‌ಗೆ ಹೋದಾಗ ರಿಷಬ್ ಪಂಥ್ ಗೆ ಪ್ರಾಬ್ಲಮ್ ಆಯಿತು ಅಂತ ಯಾರೋ ಮೆಂಬರ್ಸ್ ಹೇಳಿದ್ರು. ಟೂರ್ ನೇ ಕ್ಯಾನ್ಸಲ್ ಮಾಡುವ ಸ್ಟೇಜ್‌ಗೆ ಬಂದಿತ್ತಂತೆ. ನನ್ನದೊಂದು ಪ್ಲಾನ್ ಇದೆ’. ಕೇಕ್ರಿಂಗೆ ಕಿಂಗ್ ಎಂದು ಹೆಸರುವಾಸಿಯಾದ ಮೆ೦ಬರ್ ಎಂಟ್ರಿ.

‘ಹೇಳಿ ‘.

‘ನಮ್ಮದೇ ಏರೋಪ್ಲೇನಿದ್ದರೆ ಹೇಗೆ? ನಾವು ಯಾರಿಗೂ ಕಾಯಬೇಕಿಲ್ಲ. ನಾವು ಬೇಕಾದಾಗ ಹೋಗಬಹುದು ಬರಬಹುದು.. ಮೀಡಿಯಾನವರನ್ನು ಜೊತೆಗೆ ಕರೆದುಕೊಂಡು ಹೋಗಬಹುದು. ಖರ್ಚು ಜಾಸ್ತಿ ಏನು ಆಗಲ್ಲ.’

‘ಪ್ಲಾನ್ ಅಂತ ಮಾತಿಗೆ ಹೇಳ್ತಿಲ್ಲ. ನಾನು ಕ್ರಿಕೆಟ್ ಡಯಟ್ ಕಿಂಗ್ ಅಂತ ಸುಮ್ಮನೆ ಯಾರು ನನ್ನ ಕರೆಯಲ್ಲ… ದಿನೇಶ್ ಕಾರ್ತಿಕ್ ಒಳ್ಳೆ ಫಿನಿಶರ್ ಯಾಕೆ ಅಂದ್ರೆ ಅವ್ರು ಊಟ ಯಾವಾಗಲು ಮೊಸರನ್ನದ ಜೊತೆಗೆ ಫಿನಿಷ್ ಮಾಡ್ತಾರೆ. ಅವರಿಗೆ ಮೊಸರನ್ನ ಮಾಡಿಸಿ ಕೆಳಿಸಿದರೆ ೧೦ ಬಾಲ್ಗೆ ಮೂವತ್ತು ಹೊಡೆದು ಬರ್ತಾರೆ.. ಹಾಗೆನೇ ನಮ್ಮ ಕೇ ಎಲ್ ರಾಹುಲ್ ಒಳ್ಳೆ ಸ್ಟಾರ್ಟರ್ಸ್ ತಿಂದಾಗ ಒಳ್ಳೆ ಓಪನಿಂಗ್ ಕೊಡ್ತಾರೆ ಅಂತ ವೆಸ್ಟೆಂಡ್ ಹೋಟೆಲ್ ಓನರ್ ನ್ಯೂಯಿಯರ್ ಪಾರ್ಟಿಲಿ ಈ ಇನ್ಫಾರ್ಮೇಷನ್ ನನ್ನ ಹತ್ತಿರ ಶೇರ್ ಮಾಡಿದ್ರು…’

‘ಗ್ರೇಟ್ ಐಸೆ’.

‘ಅಷ್ಟೇ ಅಲ್ಲ. ರವಿಚಂದ್ರನ್ ಅಶ್ವಿನ್ ಹೇಗೆ ಒಳ್ಳೆ ಆಫ್ ಸ್ಪಿನ್ನರ್ ಆದರೂ ಅಂತ ಮೈಲಾಪುರ್ ಕಪಾಲೀಶ್ವರರ್ ದೇವಸ್ಥಾನದ ಟ್ರಸ್ಟಿ ನನಗೆ ತಿರುಪತಿ ಬ್ರಹ್ಮೋತ್ಸವ ದಲ್ಲಿ ತಿಳಿಸಿದರು. ಪ್ರತಿ ವರ್ಷ ಮಾಘ ಮಾಸದ ತೇರಿನಲ್ಲಿ ಅಶ್ವಿನ್ ಗ್ರಾಮ್ಡ್ ಸ್ವೀಟಿನಿಂದ ತರಿಸಿದ ಪ್ರಸಾದವಾಗಿ ಕೊಡುವ ನಾಲ್ಕಾರು ಬೂಂದಿ ಲಾಡು ತಿಂದು ಚೇಪಾಕ್ಗೆ ಹೋಗಿ ಆಫ್ ಸ್ಪಿನ್ ಪ್ರಾಕ್ಟೀಸ್ ಮಾಡ್ತಾನೆಅಂತ ಅವನೇ ಅವ್ರಿಗೆ ಹೇಳಿಕೊಂಡನಂತೆ. ಬೂಂಧಿ ಲಾಡುವಿಗೆ ಅಶ್ವಿನ್ಗೆ ಇಷ್ಟವಾದ ಡಯಮಂಡ್ ಕಲ್ಸಕ್ಕರೆ, ದ್ರಾಕ್ಷಿ, ಯಾಲಕ್ಕಿ, ಗೋಡಂಬಿ, ದಾಲ್ಚಿನ್ನಿ, ಬಾದಾಮಿ, ಲವಂಗ, ಹಾಕಿದ್ ಕ್ರಿಕೆಟ್ ಬಾಲಿನ ಗಾತ್ರದ ಲಾಡು ಪ್ರಸಾದ ತಿಂದು ಹೋದರೆ ಮಾರ್ನೆ ದಿನ ಐದು ವಿಕೆಟ್ ಗ್ಯಾರಂಟಿ ಅಂತಾರೆ ಟ್ರಸ್ಟಿ. ಬೇರೆ ಕಡೆ ಚಿನ್ನಸ್ವಾಮಿಯಲ್ಲೋ, ಈಡನ್ ಗಾರ್ಡನ್ನಲ್ಲೋ ಮ್ಯಾಚ್ ನಡೀತಿದ್ರೆ ರಾಹುಲ್ ದ್ರಾವಿಡ್ ಖುದ್ದಾಗಿ ಎರೆಡೆರಡು ಮಕ್ರಿ ಆರ್ಡರ್ ಮಾಡಿ ತರಿಸ್ತಾರಂತೆ! ಹೋದ ವರ್ಷ ಲೇಟಾಗಬಹುದೆಂದು ಹೆದರಿದ ಗ್ರಾಮ್ಡ್ ಸ್ವೀಟ್ಸ್ ನವರು ಹ್ಯಾಂಡ್ ಡೆಲಿವರಿ ಮಾಡಲು ಮಕ್ರಿಯ ಜೊತೆ ಅವರ ಮಗನನ್ನೇ ಕಳಿಸಿದ್ರಂತೆ. ಅವತ್ತೇ ಅಶ್ವಿನ್ ಕಪಿಲ್ ದೇವ್ ಅವ್ರ್ ೪೩೪ ವಿಕೆಟ್ ರೆಕಾರ್ಡನ್ನು ಮುರಿದರಂತೆ!

‘ಓ ಒಳ್ಳೆ ಹಿಸ್ಟರಿ ಇದು. ಚೆನ್ನಾಗಿದೆ. ಬೇರೆ ಪ್ಲೇಯರ್ಸ್‌ಗೆ ಏನು ಮಾಡ್ತೀರಿ?ʼ

‘ರೋಹಿತ್ ಶರ್ಮನಿಗೆ ಚೆನ್ನಾಗಿ ತುಪ್ಪ ಸವರಿದ ವಡ ಪಾವ್ ಫೆವರೇಟ್. ಮುಂಬಯಿಯ ಮಾಮಕಣೆಯಿಂದ ಬುಟ್ಟಿಗಳಲ್ಲಿ ತಿಂದು ಅವರಿಗೆ ಅಭ್ಯಾಸ. ವಿರಾಟ್ ಕೊಹ್ಲಿಗೆ ಪಿಚ್ ಹತ್ತಿರೆ ಹೋಗ್ತಾನೆ ಇತ್ತೀಚಿಗೆ, ಅವಸರ ಅವಸರವಾಗಿ ಪೆವಿಲಿಯನ್‌ಗೆ ವಾಪಸ್ಸು ಓಡಿಹೋಗುವ ರೋಗ ತಗುಲಿಕೊಂಡಿದೆಯೆಂದು, ಅದಕ್ಕೆ ಆಯುರ್ವೇದದ ರಾಮ್ದೇವ್ ಅವ್ರ್ ಹತ್ತಿರ ಔಷದಿ ಮಾಡಿ ಕೊಡ್ತಾಯಿದೀವಿ. ಅದು ವರ್ಕ್ ಔಟ್ ಆಗುತ್ತೆ ಅಂತ ಭರವಸೆ, ರಾಮ್ದೇವ್ ಆಶ್ವಾಸನೆ ನೀಡಿದ್ದಾರೆ. ಈಗೀಗ ಪಿಚ್ನಲ್ಲಿ ನಿಲ್ಲುವ ಅಭ್ಯಾಸ ಬರುತ್ತಿದೆಯಂತೆ ಕೊಹ್ಲಿಗೆ.

‘ಬಹಳ ಚೆನ್ನಾಗಿ ಅಭಿಯಾನ ಮಾಡಿದ್ದೀರಿ ನೀವು. ಮುಂದಿನ ಪ್ಲಾನ್ ಏನು?’

‘೧೫ ಜನರ ಅಡುಗೆ ಭಟ್ಟರ ಟೀಮ್ ಕಳಿಸಿದರೆ ಒಳ್ಳೆದು. ಪಂಜಾಬಿ, ಮರಾಠಿ, ತಮಿಳ್ ನಾಡು, ಕರ್ನಾಟಕದಿಂದ ಒಳ್ಳೆ ಅಡುಗೆ ಭಟ್ಟರನ್ನು ಇನ್ನು ಕೆಲವು ದಿನದಲ್ಲಿ ಸೆಲೆಕ್ಟ್ ಮಾಡ್ತೀವಿ. ಪ್ಲೇಯರ್ಸ್‌ ಒಳ್ಳೆ ಊಟ ಹೊಡೆದ್ರೆ ರನ್ನು ಹೊಡಿತಾರೆಂತ ನನ್ನ ಬಿಲೀಫ್.’

‘ಒಳ್ಳೆ ಪ್ಲಾನ್. ಅಮೆರಿಕದವರು ಅಲ್ಲಿಗೆ ಟೂರ್ ಮಾಡಿ ಅಂತ ಕೇಳಿದರಲ್ಲ… ಏನು ಮಾಡ್ತೀರಿ?’

‘ಅಲ್ಲಿ ಇರುವುದಕ್ಕೆ ಅಲ್ಲಿನ ಕ್ರಿಕೆಟ್ ಬೋರ್ಡ್ ವೈಟ್ ಹೌಸಿನಲ್ಲಿ ಇರುವುದಕ್ಕೆ ಅರ್ಧ ಜಾಗವನ್ನು ಬಿಟ್ಟು ಕೊಡಿಸಲು ಒಪ್ಪಿಸ್ಸಿದ್ದಾರೆ. ಮುಂದಿನ ವರ್ಷ ಹೋಗ್ತಿವಿ.’

‘ವೆರಿ ಗುಡ್ ಐಡಿಯಾ’.

‘ಮುಂದೆ ಅಜೇಂಡ ಏನು ಇಲ್ಲ. ಮೀಟಿಂಗ್ ಇಲ್ಗೆ ಮುಗಿಸಬಹುದು.’

ಅಂದು:

ಅಷ್ಟರಲ್ಲಿ ಒಬ್ಬ ವೃದ್ದರು ಎದ್ದು ನಿಂತರು.

‘ಎಕ್ಸ್ಯುಸ್ ಮೀ. ನಾನೆರೆಡು ಮಾತು ಹೇಳ್ಬಹುದೇ?’

‘ಹೇಳಿ ಸರ್! ಯು ಅರ ಅವರ್ ಆನರಬಲ್ ಗೆಸ್ಟ್… ಪ್ಲೀಸ್..’

ವಿಜಯ್ ಹಜಾರೆ, ಸೈಯೆಡ್ ಮುಸ್ತಾಕ್ ಅಲಿ, ವಿನು ಮಂಕಡ್, ಪಾಲಿ ಉಮ್ರಿಗಾರ್, ದತ್ತು ಫ್ಡ್ಕರ್, ವಿಜಯ್ ಮಂಜೆರೆಕಾರ್, ಮುಂತಾದವರು ಆಡುತ್ತಿದ್ದಾಗ ಒಂದು ಟೆಸ್ಟ್ ಮ್ಯಾಚಿಗೆ ಒಟ್ಟು ೫ ದಿನಕ್ಕೆ ಸಿಗುತ್ತಿದ್ದ ಸಂಭಾವನೆ ಕೇವಲ ೨೫೦ ರೂಪಾಯಿಗಳು. ಒಂದು ಸರ್ತಿ ಮ್ಯಾಚ್ ನಾಲ್ಕೇ ದಿನಕ್ಕೆ ಗೆದ್ದಿದ್ದಕ್ಕೆ ಟ್ರೆಶರರ್ ೫೦ ರೂಪಾಯಿ ಹಿಡಿದುಕೊಂಡು ನಾಲ್ಕ ರಿಂದ ಮೊತ್ತ ಇನ್ನೂರು ರೂಪಾಯಿ ಕೊಟ್ಟರು… ಆಗ ಪ್ಲೇಯರ್ಸ್ ಓಡಾಡುತ್ತಿದ್ದದ್ದು ರಾತ್ರಿ ಮೇಲ್ ಟ್ರೈನ್ ನಲ್ಲಿ. ಟೆಸ್ಟ್ ಮ್ಯಾಚಿಗೆ ಮದ್ಯೆ ಒಂದು ದಿನ ರಜೆಯಿತ್ತು. ಅವತ್ತು ಊಟಕ್ಕೆ ಅವರ ಹತ್ತಿರ ದುಡ್ಡು ಇರ್ತಿರ್ಲಿಲ್ಲ.. ಅವತ್ತು ಯಾರಾದರೂ ಇಂಡಸ್ಟ್ರಿಯಲಿಸ್ಟ್ ಅವರನ್ನು ಮಧ್ಯಾಹ್ನ ಊಟಕ್ಕೆ ಕರೆಯುತ್ತಿದ್ದರು. ಇದನ್ನು ನಾನು ನೋಡಿದೀನಿ.’ ಎಂದು ಹೇಳಿ ಕೂತರು.

ಐಪಿಎಲ್ ಮೀಟಿಂಗ್‌ಗೆ ದಂಗು ಬಡಿಯಿತು. ಗೋಡೆಯಲ್ಲಿ ತಗಲು ಹಾಕಿದ್ದ ಚಿತ್ರದಿಂದ ಹಳೆಯ ಪ್ಲೇಯರ್ಸ್ ಕಮಿಟಿಯವರನ್ನೇ ನೋಡುತ್ತಿದ್ಧ ಹಾಗೆ ಭಾಸವಾಯಿತು.