ಮಾಗಡಿಯ ಸೋಮೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಒಳಗುಡಿಯಿಂದ ಹೊರಭಾಗದಲ್ಲಿರುವ ತೆರೆದ ಮುಖಮಂಟಪದ ಕಂಬಗಳು ಸಪಾಟಾಗಿದ್ದರೂ ಕಂಬಗಳ ಕೆಳಭಾಗದಲ್ಲಿ ಅಲ್ಲಲ್ಲಿ ಕೆಲವು ಶಿಲ್ಪಗಳನ್ನು ಕಾಣಬಹುದು. ಶಿವದೇಗುಲದ ಬಲಬದಿಯ ಗುಡಿಯಲ್ಲಿ ಪಾರ್ವತೀದೇವಿಯ ಸುಂದರವಾದ ವಿಗ್ರಹವಿದೆ. ಐದು ಅಡಿಗೂ ಮೀರಿದ ಎತ್ತರವಾದ ನಿಲುವು, ಹಸನ್ಮುಖ, ವರದಹಸ್ತಗಳುಳ್ಳ ಚತುರ್ಭುಜಳಾದ ದೇವಿಯ ಶಿಲ್ಪ ಸೊಗಸಾದ ಕೆತ್ತನೆಯ ಮಾದರಿಯಾಗಿದೆ.”
ಜಾವಗಲ್ಲಿನ ಲಕ್ಷ್ಮೀನರಸಿಂಹ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ದೇಗುಲದ ಭಿತ್ತಿಯ ಮೇಲಿನ ಮೂರ್ತಿಗಳಲ್ಲಿ ವಿಷ್ಣುವಿನ ಇಪ್ಪತ್ನಾಲ್ಕು ರೂಪಗಳು, ದಶಾವತಾರಗಳು ಮುಖ್ಯವಾದವು. ಕಾಳಿಂಗಮರ್ದನ, ಗೋವರ್ಧನಧಾರಿ ಮೊದಲಾದ ಶ್ರೀಕೃಷ್ಣನ ರೂಪಗಳೂ ಇಲ್ಲಿ ಕಂಡುಬರುತ್ತವೆ. ದರ್ಪಣಸುಂದರಿ, ಶುಕಭಾಷಿಣಿ ಮೊದಲಾದ ಶಿಲಾಸುಂದರಿಯರೂ ಇದ್ದಾರೆ. ಪರವಾಸುದೇವ, ನಾಟ್ಯಸರಸ್ವತಿ, ಬ್ರಹ್ಮ…”
ಹಿರೇಹಡಗಲಿಯ ಕಲ್ಲೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸುಪರ್ದಿಗೊಳಪಟ್ಟಿರುವ ಕಲ್ಲೇಶ್ವರ ದೇವಾಲಯವು ಇದೀಗ ಸುಸ್ಥಿತಿಯಲ್ಲಿ ಕಂಗೊಳಿಸುವಂತಾಗಿದೆ. ಇದೊಂದು ದ್ವಿಕೂಟಾಚಲ ದೇವಾಲಯ. ಆವರಣದೊಳಗೆ ಕಾಲಿರಿಸುತ್ತಿರುವಂತೆಯೇ ಮಂಟಪವೊಂದು ಕಾಣುತ್ತದೆ. ಇಲ್ಲಿ ದೊಡ್ಡದೊಂದು ನಂದಿಯ ದರ್ಶನವಾಗುತ್ತದೆ. ಘಂಟಾಮಾಲೆ, ಗೆಜ್ಜೆಯ ಸರಗಳು….”
ಹಾರನಹಳ್ಳಿಯ ಸೋಮೇಶ್ವರ ಮತ್ತು ಇತರೆ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಹಾರನಹಳ್ಳಿಯ ಕೇಶವ ದೇಗುಲವು ಮೂರು ಶಿಖರಗಳ ತ್ರಿಕೂಟಾಚಲವಾಗಿದ್ದರೆ, ಸೋಮೇಶ್ವರ ಗುಡಿಯು ಏಕಕೂಟ ದೇವಾಲಯವಾಗಿದೆ, ಒಳಗುಡಿಯ ಮುಂದಿರುವ ಮಂಟಪಕ್ಕೆ ಮೂರು ಕಡೆಗಳಿಂದ ಪ್ರವೇಶದ್ವಾರಗಳಿವೆ. ಬಾಗಿಲ ಅಕ್ಕಪಕ್ಕದಲ್ಲಿ ಕಿರುಗೋಪುರಗಳುಳ್ಳ ಕೋಷ್ಠಗಳಿವೆ. ಒಳಗಿರಬೇಕಿದ್ದ ವಿಗ್ರಹಗಳು ಕಾಣುತ್ತಿಲ್ಲ. ದೇಗುಲವು ಎತ್ತರವಾದ ಜಗತಿಯ ಮೇಲೆ ನಿರ್ಮಾಣವಾಗಿದೆ.”
ಉಮ್ಮತ್ತೂರಿನ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ಹೊಸ ಅಂಕಣ
“ಪುರಾತನದ ಬಗೆಗೆ ಅಲಕ್ಷ್ಯ ಅನಾದರಗಳು ಬೆಳೆಯುತ್ತಿರುವ ಈ ಯುಗದಲ್ಲಿ ಯುವಜನತೆಗೆ ಪ್ರಾಚೀನ ದೇಗುಲಗಳ ಮಹತ್ವದ ಪರಿಚಯ ಮಾಡಿಸಬೇಕಾದುದು ಹಿರಿಯರ ಆದ್ಯಕರ್ತವ್ಯವೂ ಹೌದು. ವಿದೇಶಗಳಲ್ಲಿ ಅಲ್ಪಸ್ವಲ್ಪ ಪಳೆಯುಳಿಕೆಯನ್ನೂ ಜತನವಾಗಿಟ್ಟು ಮೆರೆಸುತ್ತಿರುವಾಗ, ಅದ್ಭುತ ನಿಧಿಯನ್ನೇ ಸಮೃದ್ಧವಾಗಿ ತುಂಬಿಕೊಂಡಿರುವ ನಮ್ಮ ನಾಡಿನಲ್ಲಿ ಅವುಗಳ ರಕ್ಷಣೆ, ಪರಿಚಯ ಉಳಿವುಗಳಿಗೆ ಸಂಬಂಧಿಸಿದಂತೆ ನಮ್ಮ ಕಾಳಜಿ ಏನೇನೂ ಸಾಲದು. ಈ ದೃಷ್ಟಿಯಿಂದ ಕನ್ನಡನಾಡಿನ ಪುರಾತನ ದೇಗುಲಗಳ ಬಗೆಗಿನ ಈ ಲೇಖನಸರಣಿ….”
ಮರಸು ಅನ್ನೋ ಊರಿನ ಸ್ಥಳ ಪುರಾಣ: ಸುಜಾತಾ ತಿರುಗಾಟ ಕಥನ
“ಅವರು ಅಂದಿನಿಂದಲೂ ನಮ್ಮವರೇ ಆಗಿ ಹೋಗಿದ್ದಾರೆ. ಹಳೆಮರಸಿನ ಹೊಲಗೇರಿ ಪಕ್ಕದಲ್ಲೊಂದು ಅಂಕು ಡೊಂಕಾಗಿರೊ ಹಣ್ಣುಹಣ್ಣು ಮುದುಕನಂಥ ಕಣಗಲು ಮರ, ಅಷ್ಟೆತ್ತರದ ಗುಡ್ಡೆ ಮೇಲೆ ಇರೊ ಒಂದು ಲಿಂಗ, ಅದಕ್ಕೆಇರೊ ಒಂದು ಕಾಡು ಕಲ್ಲಿನ ಮಂಟಪ, ವಲಸೆ ಹೋದ ಲಿಂಗಾಯಿತರ ಕುರುಹಿನ ಹಾಗೆ ಮಳೆಗಾಳಿಗೆ ನಲುಗದೆ ಉಳಿದುಹೋಗಿದೆ. “ಮರಸು ಊರಿನ ಜನರು ಆ ಕಡೆಗೆ ಊರು ಬದಲಾಯಿಸುವಾಗ…”
ಬಾಹುಬಲಿಯ ಸ್ನಾನವೂ.. ಜೇನ್ನೊಣದ ಸಂಚಾರವೂ..: ಸುಜಾತಾ ತಿರುಗಾಟ ಕಥನ
“ಆ ಹಿಮಗಿರಿಯ ಬೆಳ್ನೊರೆಯ ಹಾಲು ಕರೆದು ಇಲ್ಲಿ ಹೂ ಅರಳಿದ ಭಾಗ್ಯ. ಜೀವ ತಡಿಯದೆ ಅಣ್ಣ ಮನೆಯಿಂದ ತಿರುಗಿಬಂದಿದ್ದ. ತನ್ನ ಬೆವರು ಹನಿಯ ಕಷ್ಟಕ್ಕೆ ಇಳಿದುಬಂದ ಕೈಲಾಸದ ಸಿರಿಯನ್ನು ಅವನು ನನಗೆ ತೋರುತ್ತಿದ್ದರೆ ಅಣ್ಣನ ಮಗಳ ಕಣ್ಣು ಪ್ರೀತಿಯಿಂದ ಅತ್ತಿತ್ತ ತಿರುಗುತ್ತಿದ್ದವು. ನೋಡಿ ನೋಡಿ ದಣಿದು ದಣಿದು ಹೂಜೇನಿನ ಸಜ್ಜೆ ಮನೆಯನ್ನು ಅದರ ಪಾಡಿಗೆ ಅಲ್ಲೇ ಬಿಟ್ಟು…”
ನಮ್ಮೂರಿನಲ್ಲಿ ತೆರೆದುಕೊಂಡ ತಾಯಂದಿರ ಪುಟ….: ಸುಜಾತಾ ತಿರುಗಾಟ ಕಥನ
“ಹಳೆ ಬೇರಲ್ಲಿ ಹೊಸ ಚಿಗುರನ್ನ ಅರಳಿಸುವ ಕಲೆಯನ್ನ ಕಲಿಬೇಕಾಗಿದೆ. ಬದುಕು ಯಾರೊಬ್ಬರ ಸೊತ್ತೂ ಅಲ್ಲ. ಅದು ನಮ್ಮ ಪರಿಪೂರ್ಣವಾದ ಹಕ್ಕು ಎಂಬ ಗಟ್ಟಿ ನಿಲುವು ಪ್ರತಿ ಹೆಣ್ಣಿನಲ್ಲೂ ನೆಲೆಗೊಂಡಾಗ ಪರಿಹಾರದ ದಾರಿಗಳು ತೆರೆದುಕೊಳ್ಳುತ್ತದೆ. ನಮ್ಮ ಮನೆಯ ತಾಯಿ ಅಜ್ಜಿಯರು ಅಕ್ಕಪಕ್ಕದ ಹೆಣ್ಣುಗಳು ಇದಕ್ಕೆ ಸಾಕ್ಷಿಯಾಗಿ ಈ ಬದುಕನ್ನು ನೀಸಿ ನಮ್ಮನ್ನು ಈಗ ಇಲ್ಲಿ ನಿಲ್ಲಿಸಿ ಹೋಗಿದ್ದಾರೆ. ಹೆಣ್ಣಿದ್ದೆಡೆ ಬದುಕು ತಂತಾನೇ ನಿಲ್ಲುತ್ತೆ ಅನ್ನುವ ಮನಃಸ್ಥಿತಿ ಪ್ರತಿಯೊಬ್ಬರ ತಿಳುವಳಿಕೆಯಲ್ಲೂ ಇದೆ.”
ಮದುಮಗಳ ಮಹಾಯಾನದ ಸುಂದರ ನೆನಪು: ಸುಜಾತಾ ತಿರುಗಾಟ ಕಥನ
“ಮುದುಕರ ಅನುಭಾವದ ಕನವರಿಕೆಯಂತೆ ಮಾತುಗಳು ಅನುಭವದ ಸತ್ಯವನ್ನು ತೋರುತ್ತವೆ. ತಾಯಿ ಹುಲಿಯ ಬೇಟೆಯನ್ನಾಡಿದ ಮಗ ದೊಡ್ಡಣ್ಣ ಹೆಗ್ಗಡೆಯ ಹೆಗ್ಗಳಿಕೆಯನ್ನು ನೆನೆಯುತ್ತಲೇ ಹುಲಿಯಾದರೇನು ತಾಯಲ್ಲವೇ? ಎಂದು ಹುಲಿ ಮರಿಗಳ ಅಗಲಿಕೆಯನ್ನು ತನ್ನ ಮಗನ ಅಗಲಿಕೆಯಲ್ಲಿ ನೆನೆದು ಪರಿತಪಿಸುವ ಸುಬ್ಬಣ್ಣ ಹೆಗ್ಗಡೆ ತನ್ನ ಮಗನಂತೆ ಇವನು ಎಂದು….’








