ತಿಳುವಳ್ಳಿಯ ಹಾದಿಯಲ್ಲಿ ಗಾಂಧಿಯ ಅರಿವು:ಸುಜಾತಾ ತಿರುಗಾಟ ಕಥನ
“ಗಾಂಧಿ…. ಮನುಷ್ಯ ಹುಟ್ಟು ಹಾಕಿದ ದಬ್ಬಾಳಿಕೆಯ ಹಮ್ಮಿಗೆ ನಮ್ರತೆಯ ಉತ್ತರ! ಬೆಟ್ಟದ ಶಿಖರಗಳಲ್ಲಿ ದೇವರನ್ನು ಇಟ್ಟು ಪೂಜಿಸುವ ನಮ್ಮ ಹಳಬರ ಉದ್ದೇಶ ಸ್ಪಷ್ಟ. ಎತ್ತರೆತ್ತರಕ್ಕೆ ಹೋದಂತೆಲ್ಲ ನಾವು, ನಮ್ಮ ಊರು ಕೇರಿಗಳು, ಜೀವಜಾಲದಲ್ಲಿ ಸಿಲುಕಿರುವ ಒಂದು ಧೂಳಿನ ಕಣದಂತೆ ನಮಗೆ ಕಾಣಿಸುತ್ತದೆ.”
ಕಾನ್ ನ ಮತ್ತಷ್ಟು ನೆನಪುಗಳು: ಸುಜಾತಾ ತಿರುಗಾಟ ಕಥನ
“ಅಲ್ಲಿ ರಿಹರ್ಸಲ್ ಮಾಡುತ್ತಿದ್ದ ಹುಡುಗನ ಕೈಕಾಲಿನ ಓಘಕ್ಕೆ ಹೆಜ್ಜೆ ಹಾಕುತ್ತಿದ್ದ ಮಗುವೊಂದು ಸಮುದ್ರದಂಚಲ್ಲಿ ನೀರ ತೆರೆಯ ಜೊತೆಗೆ ಕುಣಿಯುತ್ತಿತ್ತು. ನಾವು ಅದನ್ನು ಮುದ್ದು ಮಾಡಿದಾಗ ಅದು ಬಂದು ನನ್ನನ್ನು ತಬ್ಬಿಕೊಂಡಿತು. ಅದರ ತಾಯಿ ನಕ್ಕು ನನ್ನೊಡನೆ ಮಾತನಾಡಿದಾಗ ಅವಳಿಗೆ ಮೂರು ಮಕ್ಕಳೆಂದಳು. ಅವಳಿಗೆ ಫ್ರೆಂಚ್ ಬಿಟ್ಟು ಬೇರೆ ಭಾಷೆ ಗೊತ್ತಿರಲಿಲ್ಲ.”
ಪರದೇಶದಲ್ಲಿ ಸಿನಿಮಾ ಪರದಾಟ:ಸುಜಾತಾ ತಿರುಗಾಟ ಕಥನ
“ಸಿನಿಮಾ ಚರ್ಚೆಯನ್ನು ಕೇಳಿಸಿಕೊಳ್ಳುತ್ತಿದ್ದ ಕಿವಿಯ ಆಲೆ ಹಾಗೂ ಮನಸ್ಸು ಹಿಂದಕ್ಕೆ ತಿರುಗಿ ನೋಡಿತು. ನಲವತ್ತು ವರುಶದ ಹಿಂದೆ ಇದೇ ಒಂದು ಹಿಡಿ ಅನ್ನಕ್ಕಾಗಿ ಅಡಿಗೆ ಮನೆ ಕಿಟಕಿಯಲ್ಲಿ ತೂಗಿ ಬಿದ್ದ ಮಕ್ಕಳ ತಾಯಿಯರ ಸ್ವರಗಳು….. ಕೈಗಳು, ಅನ್ನ ಬಸಿಯುವ ತಪ್ಪಲೆಯನ್ನೇ ಕಾಯುತ್ತಾ ಗೋಡೆ ದಿಂಡಿಗೆ ಒದೆಕೊಟ್ಟು ನಿಲ್ಲುತ್ತಿದ್ದ ಕಾಲುಗಳು.”
ಕಾನ್ ಎಂಬ ಕಣ್ ಸೆಳೆವ ಸಿನಿ ಜಾತ್ರೆ: ಸುಜಾತಾ ತಿರುಗಾಟ ಕಥನ
“ಗಡಿಬಿಡಿಯಿಲ್ಲದ ರೆಡ್ ಕಾರ್ಪೆಟ್ ಹಾಸಿದ ಎತ್ತರದ ಪಾವಟಿಗೆಗಳ ಕಾನ್ ಫೆಸ್ಟಿವಲ್ ನಡೆಯುವ ಕಟ್ಟಡದ ಮುಂದೆ ಒಂದೆರಡು ಫೋಟೊ ಕ್ಲಿಕ್ಕಿಸಿ ಮುಂದೆ ಹೋದಾಗ ಅಲ್ಲಿ ಹಾರ್ಮೋನಿಯಂ ವಾದ್ಯ ನುಡಿಸುತ್ತಾ ನಿಂತ ವಯಸ್ಸಾದ ಕೆಂಚು ಮನುಷ್ಯನೊಬ್ಬ ಎಲ್ಲರ ಬಳಿ ಬಂದು ನೀಡಿದ ಹಣ ತೆಗೆದುಕೊಳ್ಳುತ್ತಿದ್ದ. ನೈಜೀರಿಯಾದ ಒಂದು ತಂಡ ನಮ್ಮ ಕಡೆಯಂತೆ ದೊಂಬರಾಟವನ್ನು ನಡೆಸುತ್ತಾ ಅವರ ದುಡಿಯನ್ನು ನುಡಿಸುತ್ತಿದ್ದರು.”
ಕಾನ್ಸಿನ ಕಲ್ಲು ದಾರಿಗುಂಟ ತೆರೆದುಕೊಂಡ ನಮ್ಮ ತವರು ಪ್ರೀತಿ: ಸುಜಾತಾ ತಿರುಗಾಟ ಕಥನ.
“ಯೋಚಿಸಿದಾಗ ಹೊಳೆಯುವುದು…. ಯೂರೋಪಿನ ಜನರು ಹಳೆಯದನ್ನು ಹಾಗೂ ಅವರ ಇತಿಹಾಸವನ್ನು ಪ್ರೀತಿಸುತ್ತಾರೆ. ಹಾಗೂ ಇತಿಹಾಸದ ಪ್ರವಾಸವೇ ಇಂದಿಗೂ ಅವರ ಬಂಡವಾಳವಾಗಿದೆ. “ಹೆರಿಟೇಜ್” ಎನ್ನುವ ಹೆಗ್ಗಳಿಕೆಯ ಕೋಡನ್ನು, ಹಾಗೂ ಹಳೆಯ ಕಾಲದ ತುಂಬು ಸಂಸಾರಗಳ ಅಗಾಧವಾದ ಪರಿಸರವನ್ನು ಕಾಪಿಟ್ಟುಕೊಳ್ಳುವ ಅವರ ಜಾಣ್ಮೆ”
‘ಬ್ರೈಡಲ್ ಫಾಲ್’ ನಯಾಗರಾ ಜಲಪಾತ: ಸುಜಾತಾ ತಿರುಗಾಟ ಕಥನ
“ಕೇವಲ ನಲವತ್ತು ವರುಶದ ಹಿಂದೆ ಬೇಸಿಗೆಯಲ್ಲೂ ನೀರ ಸುರುವಿನಲ್ಲಿ ಕಣ್ ತಣಿಸುತ್ತಿದ್ದ ಜಲಪಾತವನ್ನು ನಾವು ನೋಡಿ ಬಂದಿದ್ದೆವು. ಈಗೊಮ್ಮೆ ಜನವರಿ ತಿಂಗಳಿನಲ್ಲಿ ಹೋದಾಗ ಗಬ್ಬೆದ್ದ ಹಳ್ಳಕೊಳ್ಳದಂತೆ ಭಾಸವಾಗಿತ್ತು. ಭೂಮ್ತಾಯಿಯೇ ಎದ್ದು ಬಾಯಿಬಡಿದುಕೊಳ್ಳುವಂತೆ ಒಡಲು ಬರಿದಾಗಿತ್ತು. ಮನುಷ್ಯ ನಡೆದಾಡಿದ ದಾರಿಯಲ್ಲಿ ಹುಲ್ಲೂ ಹುಟ್ಟಲಾರದು ಎಂಬುದು ಜಾನಪದರ ನಂಬಿಕೆ. ಎತ್ತರದ ಜಾಗದಲ್ಲಿ ನಾವು ನಿಂತು ಭೂಮಿಯನ್ನು ನೋಡಿದಾಗ ಮನುಷ್ಯನ ಈ ಆಟಗಳ ಸಣ್ಣತನ ತೋರುತ್ತದೆ.”
ಕಾಫಿ ಗಿಡದ ಹೂಗೊಂಚಲ ಕಥೆ : ಸುಜಾತಾ ತಿರುಗಾಟ ಕಥನ
“ತೋಟ ಹಾದು ಬರಲು ಹೋದರೆ ಮಳೆಹದ ಸಾಲದೆ ಅಲ್ಲಲ್ಲೇ ಬರಕಲಾಗಿರುವ ತೋಟ ಕಾಣಿಸಿತು. ಈ ವರ್ಷದ ಮಳೆಗಾಲದ ಅಧಿಕ ವೃಷ್ಟಿಯಲ್ಲಿ ಕೊಳೆತ ಕೆಲವು ಎತ್ತರದ ಒಣಗಿದ ಮೆಣಸಿನ ಬಳ್ಳಿಯೂ ಕಂಡವು. ಅಷ್ಟರಲ್ಲಿ ಕಟು ವಾಸನೆ ಬಡಿಯಿತು. ಜೇನ್ನೊಣದ ಝೇಂಕಾರ. ಗಂಧ ಹುಡುಕಿ ಹೋದರೆ ಓಡುತ್ತಿದ್ದ ಸ್ಪ್ರಿಂಕ್ಲರ್. ತಣ್ಣಗೆ ಚಿಮ್ಮುತ್ತಿದ್ದ ಸ್ಪ್ರಿಂಕ್ಲರ್ ನೀರಿನ ಪಟ್ಟೆಯ ಅಂಚುಕಟ್ಟಿ ದಪ್ಪ ಮೊಗ್ಗಿನ ಜಡೆಯಂಥ ಮೊಗ್ಗೆದ್ದು ನಿಂತಿದ್ದವು.”
ನಯಾಗರ ಎಂಬ ಜೈವಿಕ ವೈವಿಧ್ಯ ತಾಣ: ಸುಜಾತಾ ತಿರುಗಾಟ ಕಥನ
“ಹತ್ತಾರು ತಳಿಗಳನ್ನು, ಸಸ್ಯ ಸಂಕುಲವನ್ನು ಕಾಪಾಡಿಕೊಳ್ಳುವ ಶಿಸ್ತು, ಶ್ರದ್ಧೆ, ಅಮೇರಿಕಾ ದೇಶದ ಹೆಚ್ಚುಗಾರಿಕೆಯೇ ಅನ್ನಬಹುದು. ಮುಂದಿನ ಮೂವತ್ತು ವರ್ಷದ ಯೋಜನೆಯನ್ನಿಟ್ಟುಕೊಂಡೆ ಈ ದೇಶ ರಸ್ತೆಗಳನ್ನು ರೂಪಿಸುತ್ತದೆ. ಎಲ್ಲಿ ಮರಗಳನ್ನು ಕಡಿಯಲಾಗುತ್ತದೋ ಅಲ್ಲಿ ಎಚ್ಚರದಿಂದ ಮರ ನೆಡುತ್ತದೆ.”
ಚಿತ್ರೋತ್ಸವವೆಂಬ ಮಾಯಾಬಜಾರು:ಸುಜಾತಾ ತಿರುಗಾಟ ಕಥನ
“ಇಂಥ ತಣ್ಣಗಿನ ಕ್ರೌರ್ಯದ ಗೆರೆ ದಾಟಿ ಬಂದ ಸಂಗೀತ ನಿರ್ದೇಶಕನ ಕೈಗೆಣ್ಣುಗಳು ತನ್ನ ಪಿಯಾನೋ ಮಣೆಗಳನ್ನು ಒತ್ತಲಾರದಂತೆ ವಿರೂಪಗೊಂಡಿರುತ್ತವೆ. ಗೆರೆ ಎಳೆದುಕೊಂಡ ತಮ್ಮ ತಮ್ಮ ದೇಶಗಳಂತೆ ತಮ್ಮ ಭಿನ್ನ ಅಭಿರುಚಿಯನ್ನು ಹೊಂದಿದ ಜೀವಗಳು ತಮ್ಮ ಗೆರೆಗಳನ್ನು ಮೀರಿದ ಆಕಾಶದ್ದಕ್ಕೂ ಹರಡಿದ ಕಣ್ಣೋಟದ ಪ್ರೇಮವನ್ನು ಉಳಿಸಿಕೊಳ್ಳುತ್ತವೆ.”









