ಯಾರು ಹುಚ್ಚ?

ಬೃಹತ್ ಹುಚ್ಚನಂತೆ ಕಂಡ
ಖ್ಯಾತ ಡಬ್ಲುಬಿ ಯೇಟ್ಸ್
ಬೈಜಾಂಟಿಯಂ ಕವನದಲ್ಲಿ

ದುರಾಸೆ ಹಿಮ ಪರ್ವತದ ಸಾಲು
ಈ ಹಣ್ಣು ಹಣ್ಣು ಮುದುಕನದು
ಬಾಡುವ, ಸವೆಯುವ ಯೌವನದ ಬಗ್ಗೆ

ಸಂಪೂರ್ಣವಾಗಿ ಅರೆದು, ಕುಡಿದು,
ತುಳಿದು ಜೀವನ ದಾರಿ ನೀರಂತೆ, ಸಾಕಾಗಿಲ್ಲ
ಮತ್ತೆ ಮತ್ತೆ ಬಯಕೆ ಉತ್ಕರ್ಷ

ಬೇಡುವ ಚಿರಯೌವನ
ಮುಗಿಯದಂತೆ ಹಚ್ಚ ಹಸಿರು
ಹುಲ್ಲುಗಾವಲು ಮುದಿವಯಸ್ಸಿನಲ್ಲೂ

ಎಲೆ ಮರುಳೇ, ಹುಂಬ ಗಾಳಿ
ಸಾಕಿಲ್ಲವೇ ಜೀವನ ಅನಿವಾರ್ಯ
ಮುಗಿಸು ನಿನ್ನೆ ಸಂತೆ ಬೇರೂರಿಗೆ

ವಿರಾಮವಿಡು ನಿನ್ನೀ ಜಗದಗಲ
ಆಸೆ, ನಡೆ ಮುಂದೆ ಮುಂದೆ
ದೇವರ ಅನಂತ ಅನುಭಾವ ಸಾನ್ನಿಧ್ಯಕ್ಕೆ

ಸ್ಥಿತಿ ನೋಡಿ ಸಾಮಾನ್ಯರದು
ಹರೆಯ ಇದ್ದರೂ ಚಿಂತೆ
ಕಳೆದು ಹೋದ ತಿದ್ದಲಾರದ ದಿನಗಳು

ತಪ್ಪಿಲ್ಲ… ಡಬ್ಲ್ಯು ಬಿ ಯೇಟ್ಸ್ ಮುಪ್ಪಿನಲ್ಲಿ ಯೌವನನದ ಬಯಕೆ ಯೌವನನದಲ್ಲಿ ಕಳೆದುಹೋದ ಸತ್ತ ದಿನಗಳ ಒಟಗುಡುಗುವಿಕೆ
ಹೊಸ ಸಂತತಿ


ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.

ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ.
ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ