ಮನೆಯಂಗಳದ ನಾಕವೀ ಹೂವಿನಲೋಕ: ಭವ್ಯ ಟಿ.ಎಸ್. ಸರಣಿ
ಈ ಹೂ ಮುಡಿಯುವ ವಿಷಯದಲ್ಲಿ ಒಂದು ರೀತಿಯ ಸ್ಪರ್ಧೆಯಿದ್ದ ಕಾಲವದು. ತಾವು ಮುಡಿದು, ಗೆಳತಿಯರಿಗೂ ತರುವವರೂ ಇದ್ದರು. ಆದರೆ ನನ್ನ ಜಡೆ ಏರುತ್ತಿದ್ದ ಈ ಸೊಬಗಿನ ಡೇರೆ ಹೂಗಳ ಮೇಲೆ ಗೆಳತಿಯರ ಕಣ್ಣು. ಅವರ ಆಸೆಗೆ ಮಣಿದು ಸಂಜೆಯಾದರೂ ಬಾಡದೇ ನಗುತ್ತಿದ್ದ ಡೇರೆ ಹೂವನ್ನು ಮುಡಿಯಿಂದ ತೆಗೆದು ಕೊಟ್ಟು ಬಂದದ್ದು ಇತ್ತು. ಈ ಡೇರೆಯ ವೈಜ್ಞಾನಿಕ ಹೆಸರು ಡೇಲಿಯಾ. ಇದು ಬೇಸಿಗೆಯಲ್ಲಿ ಬೆಳೆಯಲಾರದು. ಬೇಸಿಗೆಯಲ್ಲಿ ಇದರ ಗೆಡ್ಡೆಗಳನ್ನು ಒಣ ಮಣ್ಣಿನಲ್ಲಿ ಸಂಗ್ರಸಿಟ್ಟು, ಮಳೆ ಬಿದ್ದೊಡನೆ ನೆಲಕ್ಕೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಟ್ಟು ಬೆಳೆಯುತ್ತಾರೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ
ನಾಟಕಗಳ ನಾಟಕ: ಸುಮಾ ಸತೀಶ್ ಸರಣಿ
ನಮ್ಮಪ್ಪುಂಗೆ ನಾಟಕ ಅಂದ್ರೆ ಹುಚ್ಚು. ನಮ್ಮೂರ್ನಾಗೇನೂ ನಾಟಕದ ಕಂಪನಿ ಇರ್ಲಿಲ್ಲವಲ್ಲ. ವರ್ಸುಕ್ಕೆ ಒಂದೋ ಎಲ್ಡೋ ಆಟೇಯಾ. ಮಾಸ್ಟರ್ ಹಿರಣ್ಣಯ್ಯ ಅವುರ್ದು ಎಲ್ಲಾ ನಾಟಕದ ಕ್ಯಾಸೆಟ್ಟೂ ಇದ್ವು. ಟೇಪ್ ರೆಕಾರ್ಡರ್ ನಾಗೆ ಜಿನಾ ಅದ್ನೇ ಕೇಳೋದು. ಒಂದೊಂದು ನಾಟಕವೂ ನೂರಾರು ಸತಿ ಕೇಳಿದ್ವಿ. ಎಚ್ಚಮ ನಾಯಕ, ಕಪಿಮುಷ್ಟಿ, ಭ್ರಷ್ಟಾಚಾರ, ಲಂಚಾವತಾರ, ಫೋನಾವತಾರ, ದೇವದಾಸಿ, ನಡುಬೀದಿ ನಾರಾಯಣ…ಕೇಳೀ ಕೇಳೀ ನಮ್ಗೆ ಬಾಯಿ ಪಾಟ ಆಗೋಗ್ತಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ಊರಿನಲ್ಲಿ ನಡೆಯುತ್ತಿದ್ದ ನಾಟಕಗಳ ಕುರಿತು ಬರೆದಿದ್ದಾರೆ
ಉಪವಾಸ ವ್ರತದ ಅನುಭವಗಳು: ದರ್ಶನ್ ಜಯಣ್ಣ ಸರಣಿ
ನನ್ನ ಹೆಂಡತಿಯನ್ನು ತೋರಿಸಿ “ಆಕೆ ಕ್ಯಾರಿಯಿಂಗ್” ಅಂದೆ. ಆಕೆಯ ಮುಖ ಪೆಚ್ಚಾಯಿತು! ಅವಳ ಸೂಪರ್ವೈಸರ್ಗೆ ಫೋನಾಯಿಸಿ ಕೇಳಿದಳು. ಒಂದಷ್ಟು ಮಾತೂ ಕಥೆಯಾದಮೇಲೆ ಕೊಟ್ಟಳು. ನಾನು ಧನ್ಯವಾದ ಹೇಳಿ ಅದನ್ನು ಪಡೆದು ಕ್ಯಾಪ್ ತೆಗೆಯುವಾಗ “ಸರ್ ಮ್ಯಾಡಂ ಪ್ಲೀಸ್ ಅದನ್ನು ಇಲ್ಲಿ ಕುಡಿಯಬೇಡಿ” ಅಂದಳು. ನಾನು “ಇದು ಕ್ಯಾಂಟೀನ್, ಇಲ್ಲಿ ಬೇಡ ಎಂದರೆ ಹೊರಗೆ ಸಾಧ್ಯವೇ ಇಲ್ಲ” ಎಂದು ನನ್ನ ಅಸಹಾಯಕತೆ ತೋರಿದೆ. ಅದಕ್ಕವಳು ನನ್ನ ಹೆಂಡತಿಯನ್ನು ಕುರಿತು “ಮ್ಯಾಡಂ ನೀವು ಅದನ್ನು ನಿಮ್ಮ ವ್ಯಾನಿಟಿ ಬಾಗ್ನಲ್ಲಿ ಇಟ್ಟುಕೊಂಡು, ಟಾಯ್ಲೆಟ್ನ ಒಳಗೆ ಹೋಗಿ ಕುಡಿದು ಬನ್ನಿ ಪ್ಲೀಸ್!” ಅಂದಳು.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿಯ ಆರನೆಯ ಕಂತು
ಮೌನ ಮಾತಾಡಿದಾಗ ಹೊತ್ತಾಗಿತ್ತು: “ದಡ ಸೇರದ ದೋಣಿ” ಸರಣಿಯಲ್ಲಿ ನಾರಾಯಣ ಯಾಜಿ ಬರಹ
ಇದ್ದಕ್ಕಿದ್ದಂತೆ ರಾಮಕೃಷ್ಣ ನನ್ನನ್ನು ಹುಡುಕಿಕೊಂಡು ಬಂದ, ಅಳುತ್ತಿದ್ದ, ಏನಾಯ್ತು ಎಂದರೆ “ಸುಮಾಳ ಮದುವೆ ಫಿಕ್ಸ್ ಆಯಿತು.. ಹುಡುಗ ದೆಹಲಿಯಲ್ಲಿದ್ದಾನೆ. ಸಿಕ್ಕಾಪಟ್ಟೆ ದೊಡ್ಡ ಉದ್ಯೋಗವಂತೆ” ಎಂದವನೇ “ನನ್ನನ್ನು ಕ್ಷಮಿಸು, ನಿನಗೂ ಅನ್ಯಾಯ ಮಾಡಿದೆ. ನಿನಗೆ ಅಶ್ವಿನಿಯ ಮೇಲೆ ಮನಸ್ಸಾದರೆ ಸುಮಾ ನನ್ನನ್ನು ಒಲಿಯಬಹುದು ಅಂದುಕೊಂಡೆ” ಎಂದವನೇ ಅಪ್ಪಿ ಅಳತೊಡಗಿದ. ನಾನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಮದುವೆಗೆ ಆಮಂತ್ರಣವೂ ಬರಲಿಲ್ಲ. ಮುಕೇಶ್ ನೆನಪಾದ. ಹಾಡಬೇಕೆಂದರೆ ಕೇಳುವವರು ಯಾರು ಎಂದೆನಿಸಿತು.
“ದಡ ಸೇರದ ದೋಣಿ” ಸರಣಿಯಲ್ಲಿ ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ
ಮಲೆನಾಡ ಸಂಪತ್ತು, ಗೋ ಸಂಪತ್ತು: ರೂಪಾ ರವೀಂದ್ರ ಜೋಶಿ ಸರಣಿ
ನಮಗೆಲ್ಲ ಮನುಷ್ಯರಿಗಿಂತ ಕೊಟ್ಟಿಗೆಯಲ್ಲಿರುತ್ತಿದ್ದ ದನ ಕರುಗಳ ಜೊತೆಗೇ ಹೆಚ್ಚು ಸ್ನೇಹ. ನಮ್ಮ ಕೊಟ್ಟಿಗೆಯಲ್ಲಿ ಸುಮಾರು ಹತ್ತು ಹದಿನೈದು ದನಗಳಿದ್ದವು. ಅವೆಲ್ಲವಕ್ಕೂ ಒಂದೊಂದು ಹೆಸರು. ಆಯಿ ಕೊಟ್ಟಿಗೆಯ ಹೊರಗೆ ನಿಂತು, ಅವುಗಳಲ್ಲಿ ಯಾವುದಾದರೂ ಒಂದರ ಹೆಸರು ಹಿಡಿದು ಕರೆದರೆ ಸಾಕು. ಅವು ತಕ್ಷಣ “ಅಂಬಾ” ಎಂದು ದನಿಯೆತ್ತಿ ಓಗುಡುತ್ತಿದ್ದವು. ನಮ್ಮಲ್ಲಿ ಆಕಳು ಕರು ಹಾಕಿತೆಂದರೆ, ನಮಗೆ ಎಲ್ಲಿಲ್ಲದ ಸಂಭ್ರಮ. ಮೊದಲು ಅದಕ್ಕೊಂದು ಚಂದವಾದ ಹೆಸರಿಡುವುದು. ಅದು ಬೆಳಗ್ಗೆ ಹೊಟ್ಟೆ ತುಂಬ ಹಾಲು ಕುಡಿದು ಇಡೀ ಕೊಟ್ಟಿಗೆ ತುಂಬ ಮರಿ ಜಿಂಕೆಯಂತೇ ಜಿಗಿಯುತ್ತ ಓಡುವುದನ್ನು ನೋಡುವುದೇ ಒಂದು ಸಂಭ್ರಮ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ನಾಲ್ಕನೆಯ ಕಂತು
ಅಮ್ಮನ ದ್ಯಾವ್ರು: ಸುಮಾ ಸತೀಶ್ ಸರಣಿ
ಅವು ಈಗಿನ್ ಕಾಲುದ್ ಗುಲಾಬಿ ಅಲ್ಲ್ ಕಣೇಳಿ. ರೋಜಾ ಬಣ್ದವು. ತೆಳ್ಳುಗಿರಾ ರೆಕ್ಕೆಗ್ಳು. ಬಲ್ ನಾಜೂಕು. ಗಟ್ಟಿಯಾಗಿ ಒತ್ತಿದ್ರೆ ಬಾಡೋಗೋಂತವು. ಚಿಕ್ಕದಾದ್ರೆ ಐದು ಪೈಸಾ. ದೊಡ್ಡವು ಹತ್ತು ಪೈಸಾ. ಸ್ಯಾನೇ ದೊಡ್ಡವು ನಾಕಾಣೆ. ಮನ್ಯಾಗೆ ಇರಾ ಚಿಲ್ರೆ ಹುಡುಕೀ ಹುಡುಕೀ ಅಮ್ಮ ರಾತ್ರೀನೇ ರೆಡಿ ಇಕ್ಕಿರ್ತಿತ್ತು. ಮದ್ಲೇ ಗೊತ್ತಿರ್ತಿತ್ತಲ್ಲ. ಆದ್ರೂ ಸತ ಗುಲಾಬಿ ಸ್ಯಾನೆ ಇದ್ರೆ ಆಸೆ. ಅವುನ್ ತಾವ ಕೊಸರಾಡೋದು. ಇನ್ನೊಂದು ಹಾಕು, ಇದು ಚಿಕ್ದು, ಇದು ರೆಕ್ಕೆ ಕಿತ್ತೋಗದೆ, ಬಾಡೋಗದೆ, ಸಿಕ್ಕಾಪಟ್ಟೆ ಕಾಸು ಯೋಳ್ತೀಯಾ. ನಾಳಿಂದ ಬ್ಯಾಡಾಕ್ಕೆ ಬ್ಯಾಡ ಇಂಗೆ ನಮ್ಮಮ್ಮುನ್ ಕೂಗಾಟ. ಅವ್ನೂ ಕಮ್ಮಿ ಇರ್ತಿರ್ಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ ನಿಮ್ಮ ಓದಿಗೆ
ಅತಿ ವಿನಯಂ ಧೂರ್ತ ಲಕ್ಷಣಂ!!: ಬಸವನಗೌಡ ಹೆಬ್ಬಳಗೆರೆ ಸರಣಿ
ನೇರವಾದಿಯಾಗಿದ್ದರಿಂದ ನನಗೆ ಟಿಸಿಹೆಚ್ ನಲ್ಲಿ ನಮ್ಮಂತಹ ಕೆಲವರನ್ನು ಹತ್ತಿಕ್ಕುವ ಪ್ರಯತ್ನವು ನಡೆಯುತ್ತಿತ್ತೇ ವಿನಃ ಯಾರೂ ನಮಗೆ ಸಪೋರ್ಟ್ ಮಾಡಲಿಲ್ಲ. ಈ ರೀತಿಯ ಸ್ಥಿತಿ ಇದ್ದುದರಿಂದ ನಾವು ಯಾವುದೇ ಅಸೈನ್ ಮೆಂಟ್ ಅನ್ನು ಕಾಲಕಾಲಕ್ಕೆ ಬರೆದು ಕೊಡುತ್ತಿದ್ದೆವು. ಇನ್ನು ಪ್ರಾಕ್ಟೀಸ್ ಟೀಚಿಂಗ್ನಲ್ಲಿ ಒಂದು ಸಣ್ಣ ತಪ್ಪಿಗೂ ಅವಕಾಶ ಮಾಡಿಕೊಡ್ತಾ ಇರಲಿಲ್ಲ. ಆಗ ನಾವು ಪ್ರಾಕ್ಟಿಕಲ್ ಕ್ಲಾಸ್ ಕೊಡಬೇಕಾಗಿತ್ತು. ಅದಕ್ಕೆ ಒಂದು ಅವಧಿಯ ಪಾಠಕ್ಕೆ 50 ಅಂಕಗಳು ಇದ್ದವು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತೆರಡನೆಯ ಕಂತು ನಿಮ್ಮ ಓದಿಗೆ
ಧರ್ಮ ಮತ್ತು ಮೃತ್ಯು: ಸುಮಾವೀಣಾ ಸರಣಿ
‘ವಾಲ್ಪರೈ ಅಭಿವೃದ್ಧಿ ತಂದ ದುರಂತ’ ಈ ಬರಹವನ್ನು ಓದಿದಾಗ ದಿಗ್ಭ್ರಾಂತವಾಯಿತು. ಸಿಂಹಬಾಲದ ಕೋತಿಗಳನ್ನು ಮೊದಲುಗೊಂಡಂತೆ ಅನೇಕ ಪಕ್ಷಿ ಪ್ರಭೇದಗಳು ಅಳಿವಿನಂಚಿಗೆ ಸರಿದದ್ದು. ತಮ್ಮದಲ್ಲದ ಜೀವನ ಶೈಲಿಗೆ ಹೊಂದಿಕೊಳ್ಳಹೋಗಿ ಸಿಂಹ ಬಾಲದ ಕೋತಿಗಳು ಶಾಶ್ವತ ಅಂಗವಿಕಲತೆಯನ್ನು ಪಡೆದಿದ್ದವು ಎಂದು ಅವುಗಳ ನರಳಾಟ ನೋಡದೆ ದಯಾಮರಣ ನೀಡುವ ಬಗ್ಗೆ ಮಾತನಾಡಿದರೂ ಸರಕಾರ ಅಳಿವಿನಂಚಿನಲ್ಲಿರುವ ಪ್ರಭೇದ ಎನ್ನುವ ಕಾರಣಕ್ಕೆ. ದಯಾಮೃತ್ಯು ಕೋಟಿ ಗಳಿಸಿದರು ಅಳಿದ ಸಿಂಹಬಾಲದ ಕೋತಿ ಸಂತತಿಯನ್ನು ಗಳಿಸಲಾಗುವುದಿಲ್ಲ ಅಲ್ವೆ! ಈ ದಯಾಮರಣಕ್ಕೂ ಕರ್ನಾಟಕಕ್ಕೂ ಬಿಡದ ನಂಟು ಅನ್ನಿಸುತ್ತದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ಮೂರನೆಯ ಬರಹ ನಿಮ್ಮ ಓದಿಗೆ
ತವರೆಂಬ ಬೆಚ್ಚಗಿನ ಗೂಡಿನಲ್ಲಿ ಹಿತ ತಂದ ಬಾಣಂತನ: ಭವ್ಯ ಟಿ.ಎಸ್. ಸರಣಿ
ನಾಲಗೆ ಖಾರದಿಂದ ಚುರುಕ್ ಎಂದ ಕೂಡಲೇ ಜೋರಾಗಿ ಅಳುವ ಮಗುವನ್ನು ಸಮಾಧಾನಿಸಿ, ತೊಟ್ಟಿಲಿಗೆ ಹಾಕಿ ತೂಗಿ ಜೋಗುಳ ಹಾಡಿದ ಕೂಡಲೇ ನಿದ್ರೆ. ಖಾರ ಹಾಕಿದ ದಿನ ತುಸು ಹೆಚ್ಚೇ ನಿದ್ರೆ. ನನ್ನಿಬ್ಬರೂ ಮಕ್ಕಳು ರಾತ್ರಿ ಹಗಲು ಎರಡೂ ಹೊತ್ತು ಗಾಢವಾಗಿ ನಿದ್ರಿಸುತ್ತಿದ್ದರು. ಇದರಿಂದಾಗಿ ನಾನು ಬಾಣಂತನದ ಏಕತಾನತೆಯ ನಡುವೆ ಲವಲವಿಕೆಯಿಂದ ಇರಲು ಸಾಧ್ಯವಾಗುತಿತ್ತು. ಮಳೆರಾಯನ ಆರ್ಭಟದ ನಡುವೆ ದೊಡ್ಡ ದೊಡ್ಡ ಹಗಲುಗಳು, ದೀರ್ಘ ಇರುಳುಗಳು ಕಳೆದು ಹೋದದ್ದೇ ತಿಳಿಯುತ್ತಿರಲಿಲ್ಲ. ಎಷ್ಟೋ ರಾತ್ರಿಗಳು ಕರೆಂಟ್ ಸಹ ಇರುತ್ತಿರಲಿಲ್ಲ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ










