ಕೈ ಕೆಸರಾಗಿ ಬಾಯಿ ಮೊಸರು: ಗುರುಪ್ರಸಾದ್ ಕುರ್ತಕೋಟಿ ಅಂಕಣ
ಕೃಷಿಯನ್ನು ಕಲಿಯುವುದರ ಜೊತೆ ಜೊತೆಗೆ, ಉತ್ಪನ್ನಗಳನ್ನು ಹೇಗೆ ಮಾರಬೇಕು ಎಂಬುದನ್ನು ಕೂಡ ರೈತನಾಗುವವನು ಕಲಿಯಬೇಕು. ಹಿಂದೊಮ್ಮೆ ಬೆಂಗಳೂರನ್ನು ಬಿಟ್ಟು ಹಳ್ಳಿಗೆ ಖಾಯಂ ಆಗಿ ಬಂದು ಬಿಡಲೇ ಎಂದು ಯೋಚನೆ ಮಾಡುತ್ತಿದ್ದ ಸಮಯದಲ್ಲಿ ಅಲ್ಲಿನ ಸ್ನೇಹಿತರೊಬ್ಬರಿಗೆ ಹಳ್ಳಿಯಲ್ಲಿ ನಾನು ಸಂಪಾದನೆ ಮಾಡಲು ಏನು ಮಾಡಬಹುದು ಅಂತ ಕೇಳಿದಾಗ, ಅವರು ಬಿಳೆ (ಭತ್ತದ) ಹುಲ್ಲಿನ business ಮಾಡಿ ಅಂತ ನಕ್ಕಿದ್ದರು. ಆದರೆ ಅವರು ಹೇಳಿದ್ದು ತುಂಬಾ ಸತ್ಯ ಅಂತ ಈಗ ಅರಿವಾಗಿತ್ತು. ಭತ್ತದ ಹುಲ್ಲಿಗೆ ತುಂಬಾ ಬೆಲೆ ಹಾಗೂ ಬೇಡಿಕೆ ಇದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ
ಸಸ್ಯ ನೆಡುವವರ ಸಂತಸದ ಘಳಿಗೆಗಳು: ವಿನತೆ ಶರ್ಮ ಅಂಕಣ
ಚಕ್ರಮುನಿ ಸೊಪ್ಪಿನ ಗಿಡ ಖರೀದಿಗಿದ್ದದ್ದು ನೋಡಿ ನನ್ನ ಕಣ್ಣರಳಿತು! ಬೆಂಗಳೂರು, ಮೈಸೂರಿನಲ್ಲಿ ಈ ಚಕ್ರಮುನಿ ಎಲೆಗಳನ್ನು ತಿನ್ನುವ ಅಭ್ಯಾಸವಿತ್ತು. ಬ್ರಿಸ್ಬೇನ್ನಿನಲ್ಲಿ ಅಪರೂಪಕ್ಕೆ ವಾರಾಂತ್ಯ ತರಕಾರಿ-ಹಣ್ಣು ಮಾರ್ಕೆಟ್ಟಿನಲ್ಲಿ ವಿಯೆಟ್ನಮೀಸ್ ಮಾರಾಟಗಾರರು ತರುತ್ತಿದ್ದ ಚಕ್ರಮುನಿ ಸೊಪ್ಪನ್ನು ಕಂಡು ಸಂಭ್ರಮಿಸಿದ್ದೆ. ಅದನ್ನು ಕೊಂಡು ಅದರ ಕೊಂಬೆಗಳನ್ನು ನೆಟ್ಟು ಎರಡು ಬಾರಿ ಇದನ್ನು ಬೆಳೆಯಲು ಪ್ರಯತ್ನಿಸಿ ಸೋತಿದ್ದೆ. ಜೆರ್ರಿ ಅವರ ಸ್ವಾವಲಂಬಿ ಕೈತೋಟದಲ್ಲಿ ಚೆನ್ನಾಗಿ ಬೆಳೆದಿದ್ದ ಗಿಡವನ್ನು ನೋಡಿ ಸಂತೋಷವಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಬೆಳೆದ ಅಕ್ಕಿಯ ಉಣ್ಣುವ ತವಕ…: ಗುರುಪ್ರಸಾದ ಕುರ್ತಕೋಟಿ ಅಂಕಣ
ಇದೊಂಥರ ವೈರುಧ್ಯ. ಚೆನ್ನಾಗಿದೆ ಆದರೂ ತಿನ್ನೋಲ್ಲ! ಯಾಕಿರಬಹುದು? ಬಹುಶಃ ಬೆಳ್ಳಗೆ ಪಾಲಿಶ್ ಮಾಡಿದ ರೇಷನ್ ಅಕ್ಕಿಯನ್ನು ತಿಂದು ತಿಂದು ಅವರಿಗೆ ರೂಡಿ ಆಗಿಬಿಟ್ಟಿದೆಯೋ ಏನೋ. ತವಡನ್ನು ತೆಗೆದು ಅದರಲ್ಲಿ ಏನೂ ಇರದಂತೆ ಮಾಡಿ ಪಾಲಿಶ್ ಮಾಡಿ ಕೊಡುವ ಅಕ್ಕಿಯೇ ಎಲ್ಲರಿಗೂ ಪ್ರಿಯ. ಶ್ರೀಮಂತರು ಅಷ್ಟೇ ಯಾಕೆ ತಿನ್ನಬೇಕು ಎಲ್ಲರೂ ತಿನ್ನೋಣ ಅಂತ ಇವರೂ ಪಾಲಿಶ್ ಅಕ್ಕಿಯ ಮೊರೆ ಹೋದರೆ? ಇದೆ ಕಾರಣಕ್ಕೆ ಶ್ರೀಮಂತರಿಗೆ ಬರುವ ಸಕ್ಕರೆ ಕಾಯಿಲೆ, ಹೃದಯ ರೋಗ ಈಗ ಎಲ್ಲರಿಗೂ ಬರುತ್ತಿದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ
ನೋವಿನಲ್ಲೂ ನಗುವುದ ಕಲೀಬೇಕು: ನಾಗಶ್ರೀ ಅಜಯ್ ಅಂಕಣ
“ಕೆಲವೊಮ್ಮೆ ಈ ಗಂಡ, ಮಗು, ಸಂಸಾರ, ದುಡಿಮೆ, ಸಂಪಾದನೆ, ಕೊಂಕು ಮಾತು, ಅನಾರೋಗ್ಯ ಎಲ್ಲದರಿಂದ ಬಹಳ ದೂರ ಹೋಗಿ, ನಾನೊಬ್ಬಳೇ ಪ್ರಶಾಂತವಾಗಿ ಕೆಲಕಾಲ ಕಳೆಯಬೇಕನ್ನಿಸುತ್ತೆ. ಆದರೆ ಎಲ್ಲಿ ಹೋಗುವುದು? ಹೀಗೆ ವಾಸ್ತವ ಹಿಂಸೆಯೆನಿಸಿದಾಗೆಲ್ಲ, ಬೇಸರದಲ್ಲೇ ಕತ್ತಲಕೋಣೆಯಲ್ಲಿ ಉಳಿಯುವುದರ ಬದಲು, ಮನೆತುಂಬ ಬೆಳಕಾಗುವಂತೆ ಝಗಮಗಿಸಿ, ಸ್ನಾನ ಮಾಡಿ, ನಾನು ಹೊಸದಾಗಿ ಕೊಂಡ ಬಟ್ಟೆ ತೊಟ್ಟು, ನನಗೇ ಹೆಮ್ಮೆಯಾಗುವಷ್ಟು ಚೆಂದಕ್ಕೆ ಅಲಂಕರಿಸಿಕೊಂಡು ಅರ್ಧಗಂಟೆ ಕನ್ನಡಿಯ ಮುಂದೆ ನಗುಮುಖದಲ್ಲಿ ಕೂತಿರುತ್ತೇನೆ.”
ಎಸ್. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣದಲ್ಲಿ ಹೊಸ ಬರಹ
150 ವರ್ಷಗಳ ಕ್ರಿಕೆಟ್ ಟೆಸ್ಟ್ಗಳಲ್ಲಿ ಎರಡೇ ‘ಟೈ’ ಮ್ಯಾಚುಗಳು!: ಇ.ಆರ್. ರಾಮಚಂದ್ರನ್ ಅಂಕಣ
ಕೊನೆಯ ರನ್ – ಗೆಲುವಿನ ರನ್ ಇಯನ್ ಮೆಕಿಫ್ ಓಡುತ್ತಿದ್ದಾಗ ಜೊ ಸೊಲೊಮನ್ ಬಾಲನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ಅದನ್ನು ವಿಕೆಟ್ಗೆ ಎಸೆದು ಮೆಕಿಫ್ಅನ್ನು ರನ್ ಔಟ್ ಮಾಡಿದರು. ಸೋಲೊಮನ್ ಬಾಲ್ ಎಸೆದಾಗ ಮೂರು ವಿಕೆಟ್ಗಳಿದ್ದರೂ ಅವರು ಸ್ಕೊಯರ್ ಲೆಗ್ನಲ್ಲಿ ಇದ್ದುದ್ದರಿಂದ ಆ ಜಾಗದಿಂದ ಅವರಿಗೆ ಕಾಣಿಸುತ್ತಿದ್ದ ವಿಕೆಟ್ ಒಂದೇ! ಅವರು ಗುರಿ ಇಟ್ಟು ಹೊಡೆದು ವಿಕೆಟ್ಗೆ ಬಿದ್ದು ಮೆಕಿಫ್ ರನ್ ಔಟಾದರು. ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಟೆಸ್ಟ್ಮ್ಯಾಚ್ಗಳಲ್ಲಿ ಇದುವರೆಗೂ ಆದ ಎರಡು ಟೈ ಮ್ಯಾಚುಗಳ ಕುರಿತ ಬರಹ ನಿಮ್ಮ ಓದಿಗೆ
ಕೇಂದ್ರೀಯ ಬಜೆಟ್ನ ಉಪಕಥೆಗಳು: ಡಾ. ವಿನತೆ ಶರ್ಮ ಅಂಕಣ
ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳು ಹೇಳಿದಂತೆ ಯೂನಿವರ್ಸಿಟಿಯ ಸಹಪಾಠಿಯೊಬ್ಬರು ತಮ್ಮ ಕಾರಿನಲ್ಲಿ ಬದುಕುತ್ತಿದ್ದರಂತೆ. ರಾತ್ರಿ ಸಮಯ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿಕೊಂಡಿರುವುದು, ಒಳಗೆ ಮುದುರಿಕೊಂಡು ಮಲಗುವುದು. ಬೆಳಿಗ್ಗೆ ಎದ್ದು ಯೂನಿವರ್ಸಿಟಿಗೆ ಬಂದು ಅಲ್ಲಿದ್ದ ಟಾಯ್ಲೆಟ್, ಶವರ್ ಸೌಲಭ್ಯಗಳನ್ನು ಬಳಸಿಕೊಂಡು, ಕೆಫೆಯಲ್ಲಿ ವಿದ್ಯಾರ್ಥಿಗಳಿಗೆ ಸಿಕ್ಕುವ ರಿಯಾಯ್ತಿ ದರದಲ್ಲಿ ಕಾಫಿ, ಸ್ಯಾಂಡ್ವಿಚ್ ಮತ್ತು ಉಚಿತ ಹಣ್ಣು ಪಡೆಯುವುದು. ದಿನಪೂರ್ತಿ ಯೂನಿವರ್ಸಿಟಿ ಕಟ್ಟಡದೊಳಗೇ ಇದ್ದುಕೊಂಡು ಒಂದಷ್ಟು ವ್ಯಾಸಂಗ, ನಿದ್ದೆ ಮಾಡುವುದು. ರಾತ್ರಿ ಪುನಃ ಕಾರಿಗೆ ವಾಪಸ್.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ
ಕೊನೆಗೂ ಕೈಗೆ ಬಂದ ಭತ್ತ!: ಗುರುಪ್ರಸಾದ ಕುರ್ತಕೋಟಿ ಅಂಕಣ
ಎರಡು ಟ್ರಾಕ್ಟರ್ ಮೇಲೆ ಸ್ವಲ್ಪ ಹೆಚ್ಚು ಭತ್ತ ಸಿಕ್ಕಿತ್ತು. ಅದು ಹೆಚ್ಚು ಕಡಿಮೆ 25 ಚೀಲ ಆಗುತ್ತೆ ಎಂಬ ಅಂದಾಜು ಸಿಕ್ಕಿತು. ಒಂದು ಚೀಲ ಅರವತ್ತು ಕೆಜಿ ತೂಕ. ಹೀಗಾಗಿ ನಮಗೆ ಸಿಕ್ಕಿದ್ದು 1500 ಕೆಜಿ ಭತ್ತ. ಅದನ್ನು ಅಕ್ಕಿ ಮಾಡಿಸಿದರೆ ಹೆಚ್ಚು ಕಡಿಮೆ 1೦೦೦ ಕೆಜಿ ಅಕ್ಕಿ ಸಿಕ್ಕೀತು. ಅದು ಪ್ರಥಮ ಬಾರಿ ಬೆಳೆದ ನಮ್ಮ ಮಟ್ಟಿಗೆ ತುಂಬಾ ಹೆಮ್ಮೆಯ ಸಂಗತಿಯೇ ಆಗಿತ್ತು. ಆದರೆ ಅಲ್ಲಿಯವರೆಗೆ ಬರಲಿಕ್ಕೆ ಇನ್ನೂ ತುಂಬಾ ಸಮಯ ಇತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ
ಸಂತೃಪ್ತಿಯೆನ್ನುವುದು ಅಂತರಂಗದ ಸಮಾಚಾರ: ನಾಗಶ್ರೀ ಅಜಯ್ ಅಂಕಣ
ಪ್ರತಿ ಸಣ್ಣ ವಿಷಯವನ್ನು ದೊಡ್ಡದಾಗಿ ಚಿಂತಿಸುತ್ತಾ, ಹಳಹಳಿಕೆಯನ್ನೇ ವ್ಯಸನವಾಗಿಸಿಕೊಂಡವರು, ಇರುವಷ್ಟು ಕಾಲ ತೃಪ್ತಿಯಿಂದ ಬದುಕುವವರು,ಸಾಧಕರು, ಸಾಮಾನ್ಯರು, ಪೀಡಕರು, ಪುಣ್ಯಕೋಟಿಯಂತಹವರು ಹೀಗೆ ತರಹೇವಾರಿ ಜನರು. ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ರೀತಿಯ ಸಮಸ್ಯೆಗಳಿದ್ದೇ ಇರುತ್ತವೆ. ಆದರೆ ಹಳ್ಳಿಯವರೆಲ್ಲ ಮುಗ್ಧರು, ಸಿಟಿಯವರೆಲ್ಲ ಸ್ಥಿತಿವಂತರು, ಓದಿದವರು ಪೆದ್ದರು, ಕಡಿಮೆ ಓದಿದವರು ವ್ಯವಹಾರ ಚತುರರು, ಮಕ್ಕಳೆಲ್ಲಾ ದೇವರಂತಹವರು…. ಈ ರೀತಿಯ ಜನಪ್ರಿಯ ಕುರುಡು ನಂಬಿಕೆಗಳ ಪಟ್ಟಿಯಲ್ಲಿ ಹಿರಿಯರೆಲ್ಲ ಒಂದೇ ಎಂಬುದು ಕೂಡ ಸೇರಿದೆ ಅಲ್ಲವೆ. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣದಲ್ಲಿ ಹೊಸ ಬರಹ ಇಂದಿನ ಓದಿಗೆ.
ಗುಡುಗು, ಮಿಂಚು ಸುರಿಸುವ ಮಾಂತ್ರಿಕರು: ಇ.ಆರ್. ರಾಮಚಂದ್ರನ್ ಅಂಕಣ
ಆ ಪಂದ್ಯದಲ್ಲಿ ವಿವಿಎಸ್ 167 ರನ್ ಹೊಡೆದರು… ಚಚ್ಚಿದರು ಅನ್ನುವ ಪದ ಇನ್ನೂ ಸರಿಹೋಗಬಹುದು. ಮಿಕ್ಕವರ ಸ್ಕೋರ್? ಗಂಗೂಲಿ 25, ಬೋಲರ್ಗಳಾದ ಕುಂಬ್ಳೆ, ಶ್ರಿನಾಥ್ ತಲಾ 15! ಮಿಕ್ಕವರೆಲ್ಲರೂ ಒಂದು ಅಂಕಕ್ಕೆ ಔಟಾದರು! ಎಕ್ಸ್ಟ್ರಾಸ್ 21! ವಿಶೇಷವೆಂದರೆ ಆಸ್ಟ್ರೇಲಿಯಾದ ಹೆಸರಾಂತ ಬೋಲರ್ಗಳಾದ ಶೇನ್ ವಾರ್ನ್ 13 ಓವರ್ಗಳಿಗೆ 60 ರನ್ ಮತ್ತು ಫಾಸ್ಟ್ ಬೋಲರ್ ಬ್ರೆಟ್ ಲೀ 11 ಓವರ್ಗೆ 67 ರನ್ ಕೊಟ್ಟಿದ್ದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ವಿವಿಎಸ್ ಲಕ್ಷ್ಮಣ್ ಮತ್ತು ವೀರೇಂದ್ರ ಸೆಹ್ವಾಗ್ ಕುರಿತ ಬರಹ ನಿಮ್ಮ ಓದಿಗೆ








