ಸೇವೆಯನ್ನು ಕಲಿಯುವ ಉತ್ಸಾಹಿ ಮಕ್ಕಳು
ಕೆನಡಾದಲ್ಲಿ ಹೈ ಸ್ಕೂಲ್ ಓದುವ ಮಕ್ಕಳು 40 ಗಂಟೆಗಳ ಸೇವಾ ಕಾರ್ಯಗಳನ್ನು ಮಾಡಬೇಕು. ಆದನ್ನು ಮುಗಿಸಿದರೆ ಮಾತ್ರ ಅವರಿಗೆ ಹೈ ಸ್ಕೂಲ್ ಮುಗಿಸಿದ ಪ್ರಮಾಣ ಪತ್ರವನ್ನು ಕೊಡುತ್ತಾರೆ. ಯಾವ ಸಂಸ್ಥೆಗೆ ಸೇವೆ ಮಾಡುತ್ತೇವೆ, ಎಷ್ಟು ಗಂಟೆಗಳು ಮಾಡುತ್ತೇವೆ ಎಂದು ನಮೂದಿಸಿ, ಸೇವಾ ಸಂಸ್ಥೆಗಳ ವಿವರ ಮತ್ತು ಅಲ್ಲಿನ ಪರಿಚಾರಕರ ಸಹಿಯ ಜೊತೆಗೆ ಅವರ ವಿವರಗಳನ್ನು ನಮೂದಿಸಬೇಕು. ಎಲ್ಲಾ ಮಕ್ಕಳು ಇದನ್ನು ಬಹಳ ನ್ಯಾಯಯುತವಾಗಿ ಮತ್ತು ನಿಖರ ಮಾಹಿತಿಯೊಂದಿಗೆ ಪೂರ್ಣ ಮಾಡುತ್ತಾರೆ. ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಕೊಡುವುದಿಲ್ಲ.
ಪ್ರಶಾಂತ್ ಬೀಚಿ ಅಂಕಣ
ನ್ಯಾಯದ ವಿವಿಧ ಮುಖಗಳ ಕತೆಗಳು
ಇದ್ಯಾಕೆ ಹೀಗೆ ಎಂದು ಪ್ರಶ್ನಿಸಿಕೊಂಡರೆ ಆಸ್ಟ್ರೇಲಿಯಾದ ಪಾಳೆಗಾರಿಕೆ ಮತ್ತು ವಸಾಹತುಶಾಹಿ ಚರಿತ್ರೆ ಬಿಚ್ಚಿಕೊಳ್ಳುತ್ತದೆ. ನಡೆದು ಹೋದ ಕರಾಳ ಚಾರಿತ್ರಿಕ ಘಟನೆಗಳು, ಅಬೊರಿಜಿನಲ್ ಜನರ ಮಾರಣಹೋಮ, ಅವರನ್ನು ಗುಲಾಮಗಿರಿಗೆ ಒಳಪಡಿಸಿದ್ದು, ಅವರ ಮಕ್ಕಳನ್ನು ಕದ್ದು ಬಲವಂತವಾಗಿ ಅವರಿಗೆ ‘ಸಂಸ್ಕೃತಿ ಪಾಠ’ ಕಲಿಸಿದ್ದು, ಬಿಳಿಯರ ಆಳ್ವಿಕೆ, ಆಡಳಿತ, ‘ವೈಟ್ ಆಸ್ಟ್ರೇಲಿಯಾ’ ಕಾಯಿದೆ/ಕಾನೂನು ಪಾಲನೆ, ಸಮಾಜದಲ್ಲಿ ಆಳವಾಗಿ…
ಬರವಣಿಗೆ ಎಂಬ ಅಫೀಮು
ಎಲ್ಲರಿಗೂ ಸಮನಾಗಿ ಸಿಗುವ ಇಪ್ಪತ್ನಾಲ್ಕೇ ಘಂಟೆಗಳನ್ನು ಇವರೆಲ್ಲ ತಡೆದು ನಿಲ್ಲಿಸಿದರು ಹೇಗೆ? ಜೀವನಕ್ಕೆ ಬೇಕಾದ ಹಣ ಸಂಪಾದಿಸಿದರು ಹೇಗೆ? ಮನೆಯನ್ನು ತೂಗಿಸಿದರು ಹೇಗೆ? ಅರೆ ಹೊಟ್ಟೆ ಉಂಡೇ ಎಷ್ಟು ರಾತ್ರಿ ಕಳೆದರು? ಅಷ್ಟಾಗಿಯೂ ಒಂದೊಳ್ಳೆಯ ಪುಟ ಬರೆದ ಮೇಲೆ ಅವರ ತುಟಿಯ ಮೇಲೆ ಮೂಡಿದ ಮುಗುಳೆಂಥದು? ಅಪಹಾಸ್ಯಕ್ಕೊಳಗಾದರೇ? ಪ್ರೀತಿಸುವವರಿಂದ ದೂರವಾದರೇ? ಅವರು ತಮ್ಮ ಬರವಣಿಗೆಗಾಗಿ ತೆತ್ತ ಬೆಲೆಯೆಂಥದು? ಕಲೆಯಿಂದ ಸಿಗುವ ಸುಖ ಈ ಎಲ್ಲವನ್ನೂ ಮೀರಿದ್ದೇ?
ಮಹಿಳಾ ಯುದ್ಧಸ್ಮಾರಕಗಳ ಹುಡುಕುತ್ತಾ ಕಂಡ ಸತ್ಯಗಳು
ಯುದ್ಧಗಳೇಕೆ ನಡೆಯುತ್ತವೆ ಎಂದು ಯೋಚಿಸುತ್ತಾ, ಸ್ಕಾಟ್ ಲ್ಯಾಂಡ್ನಲ್ಲಿ ಯಾಂತ್ರಿಕವಾಗಿ ಆ ವಸ್ತು ಸಂಗ್ರಹಾಲಯವನ್ನು ನೋಡುತ್ತಿದ್ದಾಗ ‘ಹಾಲ್ ಆಫ್ ಆನರ್’ ಎನ್ನುವ ಇಪ್ಪತ್ತು ಅಡಿ ಉದ್ದ ಅಗಲವಿದ್ದ ಕೋಣೆಯಲ್ಲಿ ಕೆಂಪು ಬಣ್ನದ ಲೆದರ್ ಬೈಂಡಿಂಗ್ ಹೊಂದಿದ್ದ ವಿಪರೀತ ದಪ್ಪವಾದ ಒಂದು ಪುಸ್ತಕ ಕಂಡಿತು. ಅದರ ಹಿಂದೆಯೇ ಅದಕ್ಕೇ ಆತುಕೊಂಡಿದ್ದಂತೆ ನಿಂತಿದ್ದ ಗಾಜಿನ ಗೋಡೆ ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ನೋಡಿದರೆ ಅದರಲ್ಲಿದ್ದ ಅಕ್ಷರಗಳನ್ನು ಓದಿ ಒಂದು ಕ್ಷಣ ದಂಗುಬಿಡಿದೆ.
ಸಾಸಿವೆ ತಂದವಳ ಅಕ್ಷರಗಳಲ್ಲಿ ಕಂಡ ಜೀವಚೈತನ್ಯ
ನೋವಿನಲ್ಲೂ ನಗುವನ್ನು ಹುಡುಕುವ, ಅಷ್ಟು ಯಾತನಾಮಯವಾದ ಬರಹಗಳನ್ನು ಬರೆಯುವಾಗಲೂ ನಮ್ಮನ್ನು ನಗಿಸಲು ಪ್ರಯತ್ನಿಸುವ ಅವರ ಬರಹಗಳ ಮೆಚ್ಚಲೇಬೇಕು. ಇದು ಅವರ ಯಾತನಾಮಯವಾದ ಒಂದು ವರ್ಷದ ವಿವರಣೆ ಮಾತ್ರವಲ್ಲ. ಹೇಗೆ ಅವರು ಅದನ್ನು ಎದುರಿಸಿ ಎದ್ದುನಿಂತರು, ಹೇಗೆ ಮನೋಬಲ ಬೆಳೆಸಿಕೊಂಡರು, ನಂತರ ಹೆದರಿ ಮನೆಯಲ್ಲಿ ಕೂರದೇ, ತಮ್ಮ ವೃತ್ತಿಗೆ ತೆರೆದುಕೊಂಡರು, ಬರೆಯಲಾರದಷ್ಟು ನಿಶ್ಯಕ್ತಿಯಿದ್ದರೂ ಕತೆ ಕವನಗಳ ಬರೆದರು, ತಮ್ಮ ಹವ್ಯಾಸಗಳನ್ನು ಕೂಡಾ…
ಆತ್ಮಾವಲೋಕನ ಎಂಬುದೊಂದು ಯುದ್ಧ
ಪ್ರಸಿದ್ಧ ರಂಗಶಾಲೆಗಳಲ್ಲಿ ಕಲಿತು ಹೊರಬರುವವರು ಮಿಕ್ಕವರಿಗಿಂತ ಒಂದು ಸ್ತರದ ಮೇಲೆ ಇರುತ್ತಾರೆ. ಯಾಕೆಂದರೆ ಅವರನ್ನು ಹಾಗೆ ತರಬೇತುಗೊಳಿಸಿರಲಾಗುತ್ತದೆ. ಅವರಿಗೆ ರಂಗಪಠ್ಯವನ್ನು ಅಭ್ಯಾಸ ಮಾಡಿಸುವ ಕ್ರಮವೇ ಬೇರೆ. ನಟನೆ ಮತ್ತು ನಟರ ಆಯ್ಕೆ ನಂತರದ ಕೆಲಸ. ಮೊದಲು ರಂಗಪಠ್ಯದ ಸಾರಸರ್ವದ ಬಗ್ಗೆ ಚರ್ಚೆಗಳು ಆರಂಭವಾಗುತ್ತವೆ. ಆ ರಂಗನಾಟಕ ರೂಪಕವಾಗಿ ಅರಳಿಕೊಂಡಿರುವ ಬಗೆಯನ್ನು ಬೆರಗಿನಲ್ಲಿ ಅರ್ಥೈಸಲಾಗುತ್ತದೆ. ನಂತರ ಪ್ರತಿಯೊಂದು ಪಾತ್ರ, ಅದರ ಅನನ್ಯತೆಯನ್ನು ವಿವರಿಸಲಾಗುತ್ತದೆ. ಚಿಕ್ಕ ಪಾತ್ರ ದೊಡ್ಡ ಪಾತ್ರದ ವರ್ಗೀಕರಣವನ್ನು ಮೊದಲು ಇಲ್ಲವಾಗಿಸುತ್ತಾರೆ.
ಎನ್.ಸಿ. ಮಹೇಶ್ ಬರೆಯುವ ರಂಗ ವಠಾರ ಅಂಕಣ
ಕ್ಷಮೆ ಎಂಬ ಕನ್ನಡಿ…
‘ಡು ಐ ಹೇಟ್ ಮೈಸೆಲ್ಫ್?’ ಎಂದೆಲ್ಲಾ ಅನ್ನಿಸಲು ಶುರುವಾದರೂ ಬಲವಂತವಾಗಿ ಇಂತಹ ಯೋಚನೆಗಳನ್ನು ಅದುಮಿಟ್ಟೆ. ಇದೆಲ್ಲದರಿಂದ ಹೊರಬರಲು ಸಿನಿಮಾ ನೋಡುವುದೇ ಸೂಕ್ತ ಎಂದುಕೊಂಡು ಅವಳಲ್ಲಿ ಪ್ರಸ್ತಾಪಿಸಿದರೆ ಅವಳು ಒಲ್ಲದ ಮನಸ್ಸಿನಿಂದಲೇ ಸಮ್ಮತಿಸಿದಳು. ಸಿನಿಮಾದಲ್ಲಿ ಪ್ರತಿ ಪಾತ್ರಕ್ಕೆ ಅವಳು ತನ್ನನ್ನು, ರಘು ಮತ್ತು ಪೀಟರನಿಗೆ ಹೋಲಿಸಿಕೊಂಡು ಅದು ತನ್ನದೇ ಕಥೆಯಂತೆ ಭಾವಿಸಿ ಒಂದು ಭ್ರಮಾತ್ಮಕ ಸ್ಥಿತಿಗೆ ತಲುಪಿದಂತೆ ಕಾಣುತ್ತಿದ್ದಳು. ಯಾಕೋ ನನಗೆ ಹಿಂಸೆಯಾಗತೊಡಗಿತು. ನನ್ನ ಮಾನಸಿಕ ಸ್ಥಿಮಿತವನ್ನೇ ತಾನು ಕಳೆದುಕೊಳ್ಳುತ್ತಿದ್ದೇನೆ ಎನ್ನಿಸಲು ಶುರುವಾಯಿತು.
ಎಮರ್ಜೆನ್ಸಿನಾ… ಎಲ್ಲಿ…?
ಕೆನಡಾದಿಂದ ಅಮೇರಿಕಾಗೆ ಓಡಾಡುವ ಟ್ರಕ್ ಗಳ ಸಂಖ್ಯೆ ದೊಡ್ಡದಿದೆ. ಆರ್ಥಿಕವಾಗಿ ಕೆನಡ ಮತ್ತು ಅಮೇರಿಕಾ ಮಧ್ಯೆ ಬಹಳ ದೊಡ್ಡ ಒಡನಾಟವಿದೆ. ಪ್ರಪಂಚಕ್ಕೆ ಗೊತ್ತಿರುವಂತೆ ಅತೀ ಹೆಚ್ಚು ಕೊರೋನ ಸೊಂಕಿತರನ್ನು ಕಂಡ ದೇಶ ಅಮೇರಿಕಾ. ಹಾಗಾಗಿ ಸುಮಾರು ಒಂದು ವರ್ಷಕ್ಕಿಂತ ಜಾಸ್ತಿ ಸಮಯ ಆಮೇರಿಕಾ ಮತ್ತು ಕೆನಡಾದ ರಸ್ತೆ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಕೇವಲ ಸರಕು ಸಾಗಾಣಿಕೆಗೆ ಸಣ್ಣ ಪ್ರಮಾಣದ ಓಡಾಟ ಇತ್ತು. ಇತ್ತೀಚಿಗೆ ಎರಡೂ ದೇಶಗಳ ಮಧ್ಯೆ ಓಡಾಟ ತೆರೆಯಲಾಗಿದ್ದ ಕಾರಣ, ಟ್ರಕ್ ಚಾಲಕರಿಗೆ ಒಂದು ನಿಯಮವನ್ನು ಮಾಡಿದರು.
ಪ್ರಶಾಂತ್ ಬೀಚಿ ಬರೆಯುವ ಅಂಕಣ
ಜಿಂಕೆಗಳು ಕೊಲೆ ಮಾಡಬಲ್ಲವೇ?
ಪೊಲೀಸರು ಊರಿನ ಎಲ್ಲರ ಜೊತೆಗೆ ಯನೀನಾಳನ್ನೂ ವಿಚಾರಣೆಗೆ ಒಳಪಡಿಸುತ್ತಾರೆ. ಯಾರ ಬಳಿಯೂ ಇರದ ಉತ್ತರಗಳು ಯನೀನಾಳ ಬಳಿ ದೊರೆಯುತ್ತವೆ. ಬಿಗ್ ಫೂಟ್ ಅಲ್ಲದೇ ಇತರರ ಕೊಲೆಯಾದ ಸ್ಥಳಗಳಲ್ಲಿಯೂ ಬೇರೆ ಬೇರೆ ತರಹದ ಪ್ರಾಣಿಗಳ ಹೆಜ್ಜೆ ಗುರುತುಗಳು ಕಂಡಿರುತ್ತವೆ. ನಾವೇ ಸಾಧು ಪ್ರಾಣಿಗಳ ಒಳಗಿನ ಕ್ರೌರ್ಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲವೇನೋ, ಈ ಎಲ್ಲ ಸಾಧು ಪ್ರಾಣಿಗಳೇ ಒಂದಾಗಿ ಊರಿನ ಜನರನ್ನು ಸಾಯಿಸುತ್ತಿರಬಹುದು ಎಂಬ ವಾದವನ್ನು ಒಪ್ಪಿಸುವ ಯನೀನಾ ಪೊಲೀಸರ ಕುಹಕಕ್ಕೆ ಗುರಿಯಾಗುತ್ತಾಳೆ.
‘ಕಾವ್ಯಾ ಓದಿದ ಹೊತ್ತಿಗೆ’ ಅಂಕಣದಲ್ಲಿ…









