Advertisement

ಅಂಕಣ

ಉಳಿದು ಬದುಕುವುದನ್ನೇ ಆಯ್ಕೆ ಮಾಡಿಕೊಂಡವನ ಕಥೆ

ಉಳಿದು ಬದುಕುವುದನ್ನೇ ಆಯ್ಕೆ ಮಾಡಿಕೊಂಡವನ ಕಥೆ

ಒಮ್ಮೊಮ್ಮೆ ಯೋಚಿಸಿದರೆ ನಮ್ಮ ಅಳತೆಗಳನ್ನು ಯೋಜನೆಗಳನ್ನು ಮೀರಿ ಜೀವನದಲ್ಲಿ ಏನೋ ಘಟಿಸುತ್ತಿರುತ್ತದೆ. ಒಮ್ಮೊಮ್ಮೆ ಅದಕ್ಕೊಂದು ಅರ್ಥವೇ ಇರುವುದಿಲ್ಲ. ತರಗೆಲೆಯಂತೆ ತೂರಿ ಎತ್ತೆತ್ತಲೋ ಹಾರಿ ಮತ್ತೆಲ್ಲೋ ಮತ್ಯಾವುದೋ ಮಣ್ಣಿನಲ್ಲಿ ಸೇರಿ ಕೊಳೆತು ಹೋಗಿಬಿಡುವ ಹಾಗೆ ಅನಿಸುತ್ತದೆ. ಬದುಕೇ ಹಾಗೆ! ಹುಡುಕುವಾಗ ನಾವು ಹುಡುಕುತ್ತಿರುವುದು ಸಿಗುವುದಿಲ್ಲ. ಹುಡುಕುವುದನ್ನು ನಿಲ್ಲಿಸಿದಾಗ ಧುತ್ತೆಂದು ತಂದು ಎಸೆಯುತ್ತದೆ. ಈ ಬದುಕಿಗೆ ಅರ್ಥ ಎನ್ನುವುದು ಇದೆಯೇ? ಈ ಬದುಕು ಅರ್ಥಗಳ ಹಂಗನ್ನು ಮೀರಿಕೊಳ್ಳಲು ಪ್ರಯತ್ನಿಸುತ್ತಿರುವ ಕವಿತೆಯೇ?

read more
ನನಗೆ ಜಗತ್ತನ್ನು ಪರಿಚಯಿಸಿದ ಮಿಲೇನಿಯಂ ಸರಣಿ

ನನಗೆ ಜಗತ್ತನ್ನು ಪರಿಚಯಿಸಿದ ಮಿಲೇನಿಯಂ ಸರಣಿ

ಆ ಸಮಯದಲ್ಲಿ ನನ್ನ ತರ್ಕ ಬಹಳ ಸರಳವಾಗಿತ್ತು. ಯಾರ್ಯಾರು ಮಕ್ಕಳ ಕಥೆ ಬರೆಯುತ್ತಾರೋ, ನನಗೆ ಅರ್ಥವಾಗುವಂತಹ ಪರಿಸರ, ವಿಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಸರಳವಾಗಿ ಬರೆಯುತ್ತಾರೋ ಅವರೆಲ್ಲಾ ಚಿಕ್ಕ ಲೇಖಕರು. ಯಾರ ಬರಹಗಳು ಅರ್ಥವಾಗುವುದಿಲ್ಲವೋ, ಒಂದು ಪ್ಯಾರಾಕ್ಕಿಂತಲೂ ಜಾಸ್ತಿ ಓದಿಸಿಕೊಂಡು ಹೋಗುವುದಿಲ್ಲವೋ ಅವರೆಲ್ಲಾ ದೊಡ್ಡ ಲೇಖಕರು ಅನ್ನೋ ನಂಬಿಕೆಯಲ್ಲಿದ್ದೆ. ಆದರೆ ತೇಜಸ್ವಿಯವರ ಬರಹಗಳು ಈ ನಂಬಿಕೆಯನ್ನು ಸಡಿಲಗೊಳಿಸಿದವು.

read more
ಅಪರಾಧಕ್ಕೆ ತಕ್ಕ ಶಿಕ್ಷೆ ಅಂದರೇನರ್ಥ?

ಅಪರಾಧಕ್ಕೆ ತಕ್ಕ ಶಿಕ್ಷೆ ಅಂದರೇನರ್ಥ?

ಬಿಸಿಲು, ಉಪವಾಸ, ಸುತ್ತಲಿನ ಕೊಳಕು, ದೊಡ್ಡವರ ಸಣ್ಣತನ… ಮುಂತಾದವುಗಳಿಂದ ಅವನು ಬೇಸತ್ತಿದ್ದಾನೆ. ಇವನ ಒಳಿತು ಮತ್ತು ಭವಿಷ್ಯಕ್ಕಾಗಿ ತಂಗಿ ದುನ್ಯಾ ಸಿರಿವಂತನಾದ ಲೂಷನ್‍ನನ್ನು ಇಷ್ಟವಿಲ್ಲದಿದ್ದರೂ ವರಿಸಲು ಸಿದ್ಧವಾಗಿರುವ ವಿಷಯ ಈಗಷ್ಟೇ ಅವನಿಗೆ ತಾಯಿಯ ಪತ್ರದಿಂದ ತಿಳಿದಿದೆ. ಏನನ್ನಾದರೂ ಗಂಭೀರವಾಗಿ ಯೋಚಿಸುವಾಗ ಕೈಕಟ್ಟಿ ಅತ್ತಿಂದಿತ್ತ ಸರಸರನೆ ಓಡಾಡುವ ತಂಗಿಯ ಚಿತ್ರ ಅವನ ಕಣ್ಣ ಮುಂದಿದೆ.
ಕಾವ್ಯಾ ಓದಿದ ಹೊತ್ತಿಗೆ ಅಂಕಣದಲ್ಲಿ ಫ್ಯದೊರ್ ದಾಸ್ತಯೇವ್ಸ್ಕಿಯ ಪ್ರಸಿದ್ಧ ಕಾದಂಬರಿ “ಕ್ರೈಂ ಅಂಡ್‌ ಪನಿಷ್ಮೆಂಟ್‌” ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ

read more
ಕನ್ನಡವ ಪೊರೆದ ಚೇತನಗಳ ನೆನಪಿನಲ್ಲಿ…

ಕನ್ನಡವ ಪೊರೆದ ಚೇತನಗಳ ನೆನಪಿನಲ್ಲಿ…

‘ಸಿರಿಸಂಪಿಗೆ’ ನಾಟಕದಲ್ಲಿ ಬಹಳ ಹಾಡುಗಳಿವೆ. ಅಲ್ಲಿಯೇ ಹಾರ್ಮೋನಿಯಂ ಹಿಡಿದುಕೊಂಡು ರಾಗ ಹಾಕುತ್ತಿದ್ದರು ಬಸವಲಿಂಗಯ್ಯನವರು. ಅವರದು ಅದ್ಭುತ ಶಾರೀರ. ನಾಟಕದಲ್ಲಿ ಎಲ್ಲ ಹಾಡುಗಳನ್ನು ರಿಹರ್ಸಲ್ ಸಮಯದಲ್ಲೇ ನಮ್ಮ ಕಣ್ಣೆದುರೇ ರಾಗ ಹಾಕಿದರು, ಹಾಡಿಸಿದರು. ನಾವೆಲ್ಲ ಎಲ್ಲ ಹಾಡುಗಳನ್ನೂ ತಾಲೀಮು ಕೂಡ ಮಾಡಿದ್ದೆವು. ಒಂದು ಸಂಜೆ ಅದೇನೆನಿಸಿತೋ, ‘ಇದು ಯಾಕೋ ಸರಿ ಇಲ್ಲ. ನಾಟಕದ ಕಡೀ ಹಾಡು, ಭೈರವಿ ರಾಗದಾಗs ಇರಬೇಕು,’ ಎಂದು ಮತ್ತೆ ಪೇಟಿ ಹಿಡಕೊಂಡು ಭೈರವಿ ರಾಗದಲ್ಲಿ ನಾಟಕದ ಕೊನೆಯ ಹಾಡಿಗೆ ಇನ್ನೊಂದು ಧಾಟಿ ಹಚ್ಚಿದರು.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

read more
ಕಂಡೂ ಕಾಣದಂತೆ ಸರಿದು ಹೋಗುವ ಅನಿವಾರ್ಯತೆಗಳು

ಕಂಡೂ ಕಾಣದಂತೆ ಸರಿದು ಹೋಗುವ ಅನಿವಾರ್ಯತೆಗಳು

ರಂಗಭೂಮಿ ಮೇಲ್ನೋಟಕ್ಕೆ ಕಾಣುವ ಹಾಗೆ ಕೇವಲ ಬಣ್ಣದ ಲೋಕದ ಹೊರಮೈ ಅಲ್ಲ. ಇದು ತಿಳಿಯುವುದು ಆ ರಂಗ ಒಳಹೊಕ್ಕಾಗ ಮಾತ್ರ. ಕಲೆ ಮತ್ತು ಕಲಾವಿದರನ್ನು ತುಂಬು ಆದರ ಭಾವದಿಂದ ಕಾಣುವವರಿಗೆ ಆ ಎಲ್ಲವನ್ನು ಒಟ್ಟು ಮಾಡಿ ಚಿತ್ರ ಕಟ್ಟಿಕೊಡುವವನಿಗೆ ಅಸಲಿ ಚಿತ್ರ ತಿಳಿದಿರುತ್ತದೆ. ಅವನು ಪ್ರೇಕ್ಷಕರ ಚಪ್ಪಾಳೆಯ ಜೊತೆಗೆ ಕುಹಕವನ್ನೂ ಸೈರಿಸಿಕೊಳ್ಳಬೇಕಿರುತ್ತದೆ. ಮತ್ತೆ ಎಲ್ಲವನ್ನೂ ಕೇವಲ ಶೋಕಿಗೆ ಮಾಡುತ್ತ ಮಾರ್ಕೆಟಿಂಗ್ ಸರಕಾಗಲು ಹವಣಿಸುವವರನ್ನೂ ಅನಿವಾರ್ಯವಾಗಿ ಸೈರಿಸಿಕೊಂಡು ಮುಂದೆ ಸಾಗಬೇಕಿರುತ್ತದೆ.
‘ರಂಗ ವಠಾರ’ ಅಂಕಣದಲ್ಲಿ ಕೋವಿಡ್‌ ಸಮಯದಲ್ಲಿ ರಂಗ…

read more
ರಾಜರಥದಲ್ಲಿ ವಿರಾಜಮಾನರಾದ ಭುವನಮ್ಮನ ಕತೆ

ರಾಜರಥದಲ್ಲಿ ವಿರಾಜಮಾನರಾದ ಭುವನಮ್ಮನ ಕತೆ

‘ನಮ್ಮನೆಯವನಿಗೆ ಊಟಾನು ನಾನೇ ತಿನಿಸಬೇಕು. ತಿಂಡಿನೂ ನಾನೆ ತಿನಿಸಬೇಕು. ಅವ್ನ ಪ್ರತಿ ಕೆಲ್ಸನೂ ನಾನೇ ಮಾಡಿಕೊಡಬೇಕು. ಸದಾ ನನ್ ಹಿಂದೇನೆ ಸುತ್ತುತ್ತಾ ಇರುತ್ತೆ ಅಸಾಮಿ. ಪ್ರೀತಿ ವಿಷಯಕ್ಕೆ ಬಂದಾಗ ಒಂದು ಎಳ್ಳಷ್ಟೂ ಕೂಡ ಕಡಿಮೆ ಮಾಡಿಲ್ಲ. ನನ್ನನ್ನು ಜೀವಕ್ಕೆ ಜೀವಕ್ಕಿಂತ ಪ್ರೀತಿಸ್ತಾರೆ. ಆ ವಿಷ್ಯದಲ್ಲಿ ನಾನು ತುಂಬಾ ತುಂಬಾ ಪುಣ್ಯವಂತೆ.’ಎಂದು ಮಿಂಚುಗಣ್ಣಾಗಿ ಆಕೆ ಹೇಳಿದ್ದು ಇಂದಿಗೂ ನೆನಪಿದೆ.  ‘ಆದ್ರೆ ದುಡ್ಡಿನ ಜವಾಬ್ದಾರಿ ಅಂದ್ರೆ ಉಹೂ ಎಂದುಬಿಡುತ್ತಾರೆ’  ಎಂದು ಆಕೆ ಸೇರಿಸಿದರು.
ದಾದಾಪೀರ್ ಜೈಮನ್ ಬರೆಯುವ ‘ಜಂಕ್ಷನ್ ಪಾಯಿಂಟ್’ ಅಂಕಣ ಬರಹ 

read more
ಮತ್ತೊಂದು ಜನಪದವನ್ನು ಗೌರವಿಸುವ ವಿನಯಶೀಲತೆಗೆ ಕಾಯುತ್ತಾ..

ಮತ್ತೊಂದು ಜನಪದವನ್ನು ಗೌರವಿಸುವ ವಿನಯಶೀಲತೆಗೆ ಕಾಯುತ್ತಾ..

ಒಂದು ಕರಕುಶಲ ಮಳಿಗೆಯಲ್ಲಿ ಇರಿಸಿದ್ದ ಗಣೇಶನ ವಿಗ್ರಹಕ್ಕೆ ‘ಬುದ್ಧ’ ಎಂದು ಲೇಬಲ್ ಇತ್ತು. ನಾನು ಮಾಲೀಕಳ ಬಳಿ ಹೋಗಿ ‘ನೋಡಿ, ಅದು ಗಣೇಶನ ಪ್ರತಿಮೆ, ದಯವಿಟ್ಟು ಆ ‘ಬುದ್ಧ’ ಲೇಬಲ್ ತೆಗೆದುಹಾಕಿ’ ಎಂದರೆ ಆಕೆ ಉಡಾಫೆಯಿಂದ ‘ನನ್ನ ಸ್ಟಾಫ್ ಒಬ್ಬಳು ಆ ಲೇಬಲ್ ಹಚ್ಚಿದ್ದು. ನಾಳೆ ಬಂದಾಗ ಅವಳಿಗೆ ಹೇಳುತ್ತೀನಿ’ ಎನ್ನುವುದೇ! ಅಂದರೆ ಬೇರೆ ಸಂಸ್ಕೃತಿ, ಧರ್ಮ, ನಂಬಿಕೆಗಳಿಗೆ ಅಲ್ಲಿ ಕಿಂಚಿತ್ತೂ ಬೆಲೆಯಿರಲಿಲ್ಲ. ಹತ್ತು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಧಾರಾಳವಾಗಿ ಕಾಣಿಸುತ್ತಿದ್ದ ಅಬೊರಿಜಿನಲ್ ಜನ ಈಗ ಯಾಕಿಲ್ಲ ಎನ್ನುವ ನನ್ನ ಪ್ರಶ್ನೆಗೆ ಸ್ವಲ್ಪಮಟ್ಟಿಗೆ ಉತ್ತರ ದೊರಕಿತ್ತು.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

read more
ಓದುವ ಸುಖ: ಗಿರಿಧರ್‌ ಗುಂಜಗೋಡ್‌ ಹೊಸ ಅಂಕಣ ಆರಂಭ

ಓದುವ ಸುಖ: ಗಿರಿಧರ್‌ ಗುಂಜಗೋಡ್‌ ಹೊಸ ಅಂಕಣ ಆರಂಭ

‘ದೇಶ ಸುತ್ತು ಕೋಶ ಓದು’ ಎಂಬುದು ಹಿರಿಯರ ನಾಣ್ಣುಡಿ. ನಾಣ್ಣುಡಿ ಎಂದಮೇಲೆ ಅದೆಂದೂ ಸುಳ್ಳಾಗುವ ಮಾತಿಲ್ಲವಲ್ಲ. ಓದಿನ ಬಲವು ಸುತ್ತಾಟವನ್ನು ಇನ್ನಷ್ಟು ಆಪ್ತವಾಗಿಸುತ್ತದೆ. ಸುತ್ತಾಟದ ಅನುಭವವು ಓದಿಗೆ  ಮತ್ತಷ್ಟು ಪ್ರೇರಣೆ ನೀಡುತ್ತದೆ. ಹೀಗೆ ಪರಸ್ಪರ ಪೂರಕವಾಗಿರುವ ಇವು ಒಟ್ಟಾಗಿ ಮನುಷ್ಯನ ವ್ಯಕ್ತಿತ್ವವನ್ನು ವಿಕಾಸಗೊಳಿಸುತ್ತವೆ. ಓದು ಮತ್ತು ಪ್ರವಾಸವನ್ನು ಏಕಕಾಲಕ್ಕೇ ಇಷ್ಟಪಡುವ ಗಿರಿಧರ್ ಗುಂಜಗೋಡು, ತಮ್ಮ ಓದಿನ ಹಿನ್ನೆಲೆಯನ್ನಿಟ್ಟುಕೊಂಡು ಬರಹಗಳನ್ನು ಬರೆಯಲಿದ್ದಾರೆ.  ಪುಸ್ತಕಗಳ ಓದಿನ  ಹೂರಣಕ್ಕಷ್ಟೇ ಸೀಮಿತವಾಗದೇ ವಿಸ್ತಾರವಾದ ಹರವಿನೊಂದಿಗೆ ಅವರು ಬರೆಯುವ…

read more
ಹೆಸರು ಧರಿಸಲೊಲ್ಲದ ಅನಾಮಧೇಯರು

ಹೆಸರು ಧರಿಸಲೊಲ್ಲದ ಅನಾಮಧೇಯರು

ಈ ಮಿಡಲ್ ಸಿಸ್ಟರ್, ಹದಿನೆಂಟು ವರ್ಷದ ಯುವತಿ. ಅವಳಿಗೆ ಪಕ್ಕದೂರಿನಲ್ಲಿ ತನ್ನ ಮತಕ್ಕೆ ಸೇರದ ಒಬ್ಬ ‘ಮೇ ಬಿ’ ಬಾಯ್‍ಫ್ರೆಂಡ್ ಕೂಡ ಇದ್ದಾನೆ. “ನಾನು ಯಾವತ್ತೂ ಹತ್ತೊಂಬತ್ತನೆಯ ಶತಮಾನದ ಕಾದಂಬರಿಗಳನ್ನೇ ಓದುತ್ತೇನೆ, ಇಪ್ಪತ್ತನೆಯ ಶತಮಾನದ ರಾಜಕೀಯದಿಂದ ತಪ್ಪಿಸಿಕೊಳ್ಳಲು ನಾನೇ ಕಂಡುಕೊಂಡ ಶಾಂತಿಮಾರ್ಗವಿದು” ಎನ್ನುವ ಮಿಡಲ್ ಸಿಸ್ಟರ್ ಮನೆಯಿಂದ ಕೆಲಸಕ್ಕೆ, ಕೆಲಸದಿಂದ ಮನೆಗೆ ಸಾಗುವ ರಸ್ತೆಯಲ್ಲಿ ಪುಸ್ತಕ ಓದುತ್ತ ನಡೆಯುತ್ತಾಳೆ. ಓದುವ ಸಂಸ್ಕೃತಿ ಇರದ, ಅಷ್ಟೇನೂ ವಿದ್ಯಾವಂತರಿಲ್ಲದ ಈ ಪ್ರಾಂತ್ಯದಲ್ಲಿ ಅವಳ ಈ ವಿಚಿತ್ರ ಹವ್ಯಾಸಕ್ಕೆ ಮೂಗು ಮುರಿಯುವವರೇ ಎಲ್ಲ.
ಕಾವ್ಯಾ ಓದಿದ ಹೊತ್ತಿಗೆ ಅಂಕಣ.

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ