ಆಲೋಚನೆಗಳನ್ನು ರೂಪಿಸಿದ ಪತ್ರಿಕೆಗಳೂ, ಕಾಡುವ ಸೋಂಕುಗಳ ವಿಚಾರವೂ..
‘ತರಂಗ’ವಾಗಲಿ, ‘ಸುಧಾ’ ಆಗಲಿ ಮನೆಗೆ ಬರುವುದು ಒಂದು ದಿನ ತಡವಾದರೂ ಚಡಪಡಿಕೆಯಾಗುತ್ತಿತ್ತು. ಪತ್ರಿಕೆ ಹಾಕುವ ಹುಡುಗ ಬರುವ ವೇಳೆಗೆ ಹದ್ದಿನಂತೆ ಕಾಯುತ್ತ ಕೂತಿರುತ್ತಿದ್ದೆವು. ಪತ್ರಿಕೆಯ ಹುಡುಗ ‘ಸುಧಾ’ ಅಥವಾ ‘ತರಂಗ’ವನ್ನು ಬಾಗಿಲಿನಿಂದ ಎಸೆಯುತ್ತಿದ್ದಂತೆ ಆ ಪತ್ರಿಕೆಯ ಮೇಲೆ ಮುಗಿಬೀಳುತ್ತಿದ್ದೆವು. ಎಷ್ಟೊಂದು ಸಲ ನಮ್ಮ (ನನ್ನ ಸಹೋದರರು) ನಡುವೆ ಮಿನಿಯುದ್ಧಗಳು ಮಹಾಯುದ್ಧಗಳು ಜರುಗಿವೆ. ಒಮ್ಮೆಯಂತೂ ಅದೇ ತಾನೆ ಮನೆಯ ಹೊಸ್ತಿಲ ಒಳಗೆ ಬಂದ ‘ತರಂಗ’ ಇಂಥದ್ದೇ ಯುದ್ಧದಲ್ಲಿ ಹರಿದು ಹೋದದ್ದಿದೆ!
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್ ಪತ್ರ’
ವಸ್ತುನಿಷ್ಠ ವಿಮರ್ಶೆ-ಟೀಕೆಗಳಿಗೆ ಜಾಗವಿಲ್ಲದ ಕಾಲ
ಸರಿಸುಮಾರು ಇಪ್ಪತ್ತು ದಿನಗಳಿಂದ ಈ ಕಥೆಯನ್ನು ರೂಪಕವಾಗಿಸಿಕೊಂಡು ಯೋಚಿಸುತ್ತಿದ್ದೇನೆ. ವಿಭೂತಿಪುರುಷರ ಉತ್ತುಂಗ ಸ್ಥಿತಿಯ ಬಗ್ಗೆ ನನಗೆ ಇಂದಿಗೂ ತಿಳಿದಿಲ್ಲ. ಅವರು ಎಲ್ಲದರಲ್ಲೂ ಸುಂದರತೆ ಕಾಣಲು ಬಯಸುವವರು. ಆದರೆ ನಾನು ಆ ಸುಂದರತೆಯ ಬಗೆಗೆ ನಿತ್ಯ ಅನುಮಾನಗಳನ್ನ ಇಟ್ಟುಕೊಂಡಿರುವವನು. ತಮಾಷೆ ಮಾಡುತ್ತ ಎಲ್ಲವನ್ನೂ ತೇಲಿಸುತ್ತ ಜಗತ್ತನ್ನು ಸುಂದರ ಗೋಳವನ್ನಾಗಿ ಪರಿವರ್ತಿಸಿಕೊಳ್ಳುವವರ ಬಗೆಗೆ ನನ್ನಲ್ಲಿ ಗೌರವವೇನೊ ಇದೆ. ಹಾಗೆಯೇ ದಾರಿಹೋಕನಿಗೆ ಜ್ಞಾನೋದಯದ ಬಗೆಗೂ ಚಕಾರಗಳಿವೆ.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ
ಕಡೆಪಾನ್ ಬಸ್ಯಾನ ಲೀಲಾವಳಿ
ಅವನು ಹೇಳುತ್ತಿರುವುದು ಬರಿ ಕಥೆಯೇ. ಸುಳ್ಳು ಕಥೆ. ಅವನ ಕಲ್ಪನೆಯಲ್ಲಿ ಅರಳುವ ಕಥೆ ಎನ್ನುವುದಕ್ಕೆ ಪುರಾವೆ ಎಂಬಂತೆ ನನ್ನ ಬಳಿ ಹಲವಾರು ನಿದರ್ಶನಗಳಿವೆ. ಅವನು ತನ್ನೆಲ್ಲಾ ದಿನಚರಿಯಲ್ಲಿ ನಟ ಯಶ್ ಅನ್ನು ಅನುಕರಿಸುತ್ತಿದ್ದ. ಕೆ. ಜಿ. ಎಫ್. ಸಿನಿಮಾದ ಅವನ ಗೆಟಪನ್ನು ಅನುಕರಿಸುವುದು. ಪುರುಷ ಪ್ರಾಧಾನ್ಯದ ಮುಖ್ಯವಾಹಿನಿಯ ಮಾಸ್ ಸಿನಿಮಾಗಳಲ್ಲಿ ಹೀರೋಗಳು ಹೊಡೆಯುವ ಅಸೂಕ್ಷ್ಮ ಡೈಲಾಗುಗಳನ್ನು ಅವನು ವಾಟ್ಸಪ್ಪ್ ರೀಲಾಗಿ ಇಡುತ್ತಿದ್ದ. ಅವನು ಕನಸುತ್ತಿದ್ದ ಭವಿಷ್ಯದ ಬಸವರಾಜನ ಪೂರ್ವ ಬಿಂಬದ ಪರಿಕರಗಳನ್ನು ಪುಷ್ಟೀಕರಿಸುವಂತೆ ಅವು ಇರುತ್ತಿದ್ದವು.
ದಾದಾಪೀರ್ ಜೈಮನ್ ಬರೆಯುವ ‘ಜಂಕ್ಷನ್ ಪಾಯಿಂಟ್’ ಅಂಕಣ
ಓಮಿಕ್ರೋನ್ ಜೊತೆ ಹೊಸವರ್ಷ ಆರಂಭದ ಪಲುಕು
ವಿಷಯದಲ್ಲೀಗ ಬಗೆಬಗೆಯ ವಾಗ್ವಾದಗಳು. ಲಸಿಕೆ-ಪರ ಮತ್ತು ವಿರೋಧಗಳ ಜನರು ನೇರಾನೇರ ಎರಡು ಗುಂಪುಗಳಲ್ಲಿದ್ದಾರೆ. ಅವರನ್ನು ಬಿಟ್ಟು ರಾಜಕೀಯದಲ್ಲಿ, ವ್ಯಾಪಾರಸ್ಥರಲ್ಲಿ, ಪರಿಸರ ಸಂರಕ್ಷಣೆ ಹಿತಾಸಕ್ತಿ ಗುಂಪು, ಮಾನವ ಹಕ್ಕುಗಳ ಪ್ರತಿಪಾದಕರು, ಶಾಲಾಶಿಕ್ಷಕರು ಮತ್ತು ಅವರ ಯೂನಿಯನ್, ಆರೋಗ್ಯಸೇವಾ ಸಿಬ್ಬಂದಿ ವರ್ಗ, ತಂದೆತಾಯಂದಿರು, ಶಾಲಾ ಮಕ್ಕಳು, ಎಲ್ಲರೂ ಈ ವಾದ-ಪ್ರತಿವಾದಗಳಲ್ಲಿ ಸೇರಿಕೊಂಡುಬಿಟ್ಟಿದ್ದಾರೆ. ವರದಿಗಾರರು, ಸುದ್ದಿವಾಹಿನಿಗಳಿಗಂತೂ ಪರಮ ಸಂತೋಷ. ಯಾಕೆಂದರೆ ನಾಡಿನಲ್ಲಿ…
ಮಾನವೀಯತೆಯ ಹಾದಿಯನ್ನು ಆರಿಸಿಕೊಂಡವರು..
ಭಾರತವೂ ಸೇರಿದಂತೆ ನಾಲ್ಕು ಖಂಡಗಳಲ್ಲಿ ಅಲ್ಪ ಸ್ವಲ್ಪ ದಿನ ಜೀವಿಸಿ, ಮನುಷ್ಯರಲ್ಲಿ ಎಷ್ಟೊಂದು ಸಹಾಯ ಜೀವಿಗಳು ಇದ್ದಾರೆ ಎಂದು ಸಂತಸವಾಗುತ್ತದೆ. ಕೆನಡಾಗೆ ಬಂದು ಮೂರು ವರ್ಷಗಳಲ್ಲಿ ಮೂರು ಊರುಗಳನ್ನು ಸುತ್ತಾಡಿ ಈಗ ಬಂದಿರುವುದು ಬ್ರಾಂಪ್ಟನ್ ಎನ್ನುವ ಸುಂದರ ನಗರಕ್ಕೆ. ಈ ಊರನ್ನು ಹೂವುಗಳ ಊರು ಎಂದು ಕರೆಯುತ್ತಾರೆ, ಭಾರತೀಯರೇ ಹೆಚ್ಚಾಗಿರುವ ಈ ಊರಿನಲ್ಲಿ, ಕನ್ನಡಿಗರೂ ಹೆಚ್ಚಾಗಿದ್ದಾರೆ. ಕನ್ನಡದ ಜನ ಕೆನಡಾಗೆ ಬಂದಾಗ ಮೊದಲು ಹುಡುಕುವುದೆ ‘ಕನ್ನಡ ಸಂಘ’.
ಭೋಳೇತನದ ನಡುವೆಯೂ ಅರಳುವ ರಿಫ್ರೆಶಿಂಗ್ ಚಿಂತನೆಗಳು
ಈ ಜಗದ ಆಟವನ್ನು ನಿಚ್ಚಳವಾಗಿ ಮತ್ತು ಕಲಾತ್ಮಕವಾಗಿ ಕಾಣಿಸುವ ಹೊಣೆಹೊತ್ತ ರಂಗಭೂಮಿಯವರು ಕೊರೋನ ಕೊಟ್ಟ ವಿರಾಮದಲ್ಲಿ ಕೊಂಚ ನಿರಾಳವಾಗಿದ್ದರು. ನಿಧಾನಕ್ಕೆ ರಂಗಚಟುವಟಿಕೆಗಳು ಗರಿಗೆದರಿಕೊಳ್ಳುತ್ತಿವೆ ಅನಿಸುವ ಹೊತ್ತಿಗೇ ಒಮೈಕ್ರಾನ್ ನಮ್ಮನ್ನು ಬೆರಳೆಣಿಸುತ್ತ ಕೂರುವಂತೆ ಮಾಡುತ್ತಿದೆ. ಇದು ಏರಿಕೆ ಕಂಡು ರಂಗಮಂದಿರಗಳು ಮತ್ತೆ ಮುಚ್ಚಲ್ಪಟ್ಟರೆ ಅಥವಾ ಕೇವಲ ಅರ್ಧದಷ್ಟು ಭರ್ತಿಗೆ ಅವಕಾಶ ಅಂತಾದರೆ ಮುಂದಿನ ಕಥೆ ಏನು ಎಂದು ಕೇಳಿಕೊಳ್ಳುವಂತಾಗಿದೆ. ಆದರೆ ಈ ಎರಡೂ ಎರಡೂವರೆ ವರ್ಷಗಳ ಪರ್ವ ಸಮಯದಲ್ಲಿ…
ದಾದಾಪೀರ್ ಜೈಮನ್ ಹೊಸ ಅಂಕಣ “ಜಂಕ್ಷನ್ ಪಾಯಿಂಟ್” ಇಂದು ಆರಂಭ
‘ನಾವು ಯಾವಾಗಲೂ ಹಾಗೆಯೇ ಅಲ್ಲವಾ? ನಮಗೆ ಗೊತ್ತಿರುವ ಯಾವುದೋ ಎಳೆ, ಬೇರೆಯವರ ಮಾತುಗಳಲ್ಲಿ ಬಂದಾಗ ಮಾತ್ರ ಅವರ ಮೇಲಿನ ವಿಶ್ವಾಸಾರ್ಹತೆ ಮತ್ತು ನಂಬಿಕೆ ಹೆಚ್ಚುತ್ತದೆ. ಅಲ್ಲೂ ಹೀಗೆ ಆಯಿತು’ ಎನ್ನುತ್ತ ಪೀಜಿ ಹಾಸ್ಟೆಲ್ ರೂಮ್ ನಲ್ಲಿ ನಡೆದ ಭೇಟಿಯೊಂದರ ಕುರಿತು ಬರೆದಿದ್ದಾರೆ ಹೊಸ ತಲೆಮಾರಿನ ಕಥೆಗಾರ ದಾದಾಪೀರ್ ಜೈಮನ್. ತಮ್ಮ ಶಿಕ್ಷಣ ಮತ್ತು ವೃತ್ತಿ ನಿರ್ವಹಣೆಯ ಸಂದರ್ಭದಲ್ಲಿ ಹೀಗೆ ಭೇಟಿಯಾದ ವ್ಯಕ್ತಿಗಳ ಕುರಿತು, ಸನ್ನಿವೇಶಗಳ ಕುರಿತು ಅವರು ತಮ್ಮ ಹೊಸ ಅಂಕಣ…
ತಮಿಳಿನ ಮೂರು ಆ್ಯಂಥಾಲಾಜಿ ಸಿನೆಮಾಗಳು
ಈ ಸಿನೆಮಾದ ಎಲ್ಲ ಕತೆಗಳೂ ನಗರದ ಕತೆಗಳು. ಇತ್ತೀಚೆಗೆ ಬರುತ್ತಿರುವ ಭಾರತದ ವಿವಿಧ ಭಾಷೆಗಳ ಹೊಸ ಅಲೆಯ ಸಿನೆಮಾಗಳು ಹಳ್ಳಿಗಳಲ್ಲಿ ನಡೆಯದೇ ನಗರಗಳಲ್ಲಿ ನಡೆಯುತ್ತಿರುವುದನ್ನು ಗಮನಿಸಿ. ಇದು ನಿರ್ದೇಶಕರು ನಗರಗಳಲ್ಲಿ ಹುಟ್ಟಿ ಬೆಳೆದುದರ ಪರಿಣಾಮವೂ ಹೌದು ಮತ್ತು ಭಾರತ ನಗರೀಕರಣವಾಗುತ್ತಿರುವ ಪರಿಣಾಮವೂ ಎಂದು ಅನಿಸುತ್ತದೆ. ಕತೆಗಳು ಮೇಲ್ಮಧ್ಯಮ ಅಥವಾ ಶ್ರೀಮಂತ ವರ್ಗಗಳ ಮನೆಗಳಲ್ಲಿ ನಡೆಯುತ್ತವೆ, ಓಟಿಟಿಯಲ್ಲಿ ನೋಡಿದ ತಮಿಳಿನ ಮೂರು ಆ್ಯಂಥಾಲಾಜಿ ಸಿನೆಮಾಗಳ ಬಗ್ಗೆ ‘ಇಂಗ್ಲೆಂಡ್ ಪತ್ರ’ ಬರೆದಿದ್ದಾರೆ ಕೇಶವ ಕುಲಕರ್ಣಿ
‘ಆಲ್ ಈಸ್ ಕಾಮ್’ ಎನ್ನುವ ಕ್ರಿಸ್ಮಸ್ ಹಬ್ಬ
ಅದು ಚಳಿಗಾಲದಲ್ಲಿ ಬರುವ ಒಂದು ಸಂಕ್ರಮಣದ ದಿನ. ಆ ದಿನದಿಂದ ಸೂರ್ಯನ ಬೆಳಕು ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ‘ಆಲ್ ಈಸ್ ಬ್ರೈಟ್’ ಎನ್ನುವ ಪದಗಳಿಗೆ ಹೊಸ ಅರ್ಥ ಹೊಳೆಯುತ್ತದೆ. ಹೊಸ ಬೆಳಕನ್ನ, ಸೂರ್ಯ ರಶ್ಮಿಯನ್ನ ತರುವ ಚೇತನವೊಂದು ಪ್ರಕೃತಿಯಲ್ಲಿ ಮೂಡಿತೇನೊ ಎನ್ನುವ ನಂಬಿಕೆ ಹುಟ್ಟುತ್ತದೆ. ರೋಮನ್ನರು ಆ ದಿನವನ್ನೇ ಪ್ರಶಸ್ತವೆಂದು ಆರಿಸಿಕೊಂಡರು. ಅವರು ‘ಧರ್ಮಬಾಹಿರ’ವೆಂದು ತಿಳಿದಿದ್ದ ಪೇಗನ್ ಸಂಸ್ಕೃತಿಯ ಹಬ್ಬಗಳ ಹುಟ್ಟಡಗಿಸಲು ಕೂಡ ಡಿಸೆಂಬರ್ ತಿಂಗಳನ್ನ….









