ಯೂಲಿಸಿಸ್ ಕಾದಂಬರಿಗೆ ಶತಮಾನದ ಮೆರುಗು
ಇಂಗ್ಲೀಷ್ ಭಾಷೆಯ ಅತಿ ಕ್ಲಿಷ್ಟ ಕಾದಂಬರಿ ಎಂದೇ ಹೆಸರುವಾಸಿಯಾಗಿರುವ ಜೇಮ್ಸ್ ಜಾಯ್ಸ್ರ ಯೂಲಿಸಿಸ್ ಬಗ್ಗೆ ಎಷ್ಟು ಬರೆದರೂ ಸಾಕಾಗದೇನೋ. ಹದಿನೆಂಟು ಖಂಡಗಳಲ್ಲಿ ಒಂದೊಂದು ಅಧ್ಯಾಯವನ್ನೂ ಒಂದೊಂದು ಶೈಲಿಯಲ್ಲಿ ಬರೆಯಲಾಗಿದೆ. ಒಂದು ಚಾಪ್ಟರ್ ಸ್ವಗತದ ಶೈಲಿಯಲ್ಲಿದ್ದರೆ ಇನ್ನೊಂದು ಪ್ರಶ್ನೋತ್ತರದ ಮಾದರಿಯಲ್ಲಿದೆ. ಮತ್ತೊಂದು ನಾಟಕದ ಶೈಲಿಯಲ್ಲಿದೆ ಎನ್ನುವ ಕಾವ್ಯಾ ಕಡಮೆ , ಈ ಓದು ಸುಲಭಕ್ಕೆ ದಕ್ಕುವಂತಹುದಲ್ಲ ಎನ್ನುತ್ತಾರೆ. 1922ನೇ ಇಸವಿಯಲ್ಲಿ ಪ್ಯಾರಿಸ್ಸಿನ ಶೇಕ್ಸ್ಪಿಯರ್…
ಹಬ್ಬಗಳಿರಬೇಕು… ಬದುಕನ್ನು ಸವಿಯಲು
ಹಬ್ಬಗಳ ಮಹತ್ವವನ್ನು ಇತ್ತೀಚಿನ ದಿನಗಳಲ್ಲಿ ನಾವು ಕಳೆದುಕೊಳ್ಳುತ್ತಿದ್ದೇವೆ. ಮಕ್ಕಳಿಗೆ ಹಬ್ಬಗಳ ಹೆಸರೆ ಸರಿಯಾಗಿ ಗೊತ್ತಾಗದಾಗಿರುವುದು ವಿಪರ್ಯಾಸ. ಹಬ್ಬಗಳ ಪರಿಚಯವೇ ತಿಳಿಯದಿದ್ದಾಗ, ಅದರ ಪರಂಪರೆ
ಅರಿಯುವುದು ದೂರದ ಮಾತು. ಯಾವುದೇ ಹಬ್ಬವಿರಲಿ, ಯಾವುದೇ ಜನಾಂಗಕ್ಕೆ ಸೇರಿದ್ದಾಗಿರಲಿ, ಅದರ ಬಗ್ಗೆ ತಿಳಿದಾಗ ಆಚರಣೆ ಬಗ್ಗೆ ಗೌರವ ಹೆಚ್ಚುತ್ತದೆ. ಹಿಂದುಗಳಾದವರು ಕ್ರೈಸ್ತರ ಹಬ್ಬಕ್ಕೆ ನಿರ್ಲಕ್ಷ್ಯ ಮಾಡುವುದು, ಕ್ರೈಸ್ತರು ಮುಸಲ್ಮಾನರ ಹಬ್ಬಕ್ಕೆ ಅಗೌರವ ತೋರುವುದು, ಮುಸಲ್ಮಾನರು ಹಿಂದುಗಳ ಹಬ್ಬಕ್ಕೆ…
ಇರುಳಿನ ಹೊಸ ಬಣ್ಣ
ಆಗಾಗ ಊರಿನ ಬಂಧುಗಳು ತಂದು ಕೊಡುವ ಕುರ್ಲಿ ಸರಿಯಾಗಿ ಸ್ವಚ್ಛಗೊಳಿಸಿ ಹದವಾದ ಮಸಾಲೆಯೊಂದಿಗೆ ಬೇಯಿಸುವ ಕೆಲಸವು ರಾತ್ರಿಯಾದೊಡನೆ ಶುರುವಾಗುತ್ತದೆ. ಜೋರು ಮಳೆ ಬೀಳುವಾಗ, ಚಳಿ ತನ್ನ ಚಹರೆಯ ತೋರಿಸುತ್ತಿರುವಾಗ ಕಾಜುವಾಡಾದ ಯಾವುದೋ ಓಣಿಯ ಮನೆಯ ಬೆಂಕಿ ಒಲೆಯಲ್ಲಿ ತನ್ನ ತಾ ಹಸಿಯಾಗಿಯೆ ಕೆಂಡದಲ್ಲಿ ಸುಟ್ಟುಕೊಳ್ಳುವ ಏಡಿ ತನ್ನ ಅಮೋಘ ಪರಿಮಳವನ್ನು ಸುತ್ತಲಿನ ಲೋಕಕ್ಕೂ ಹರಡುತ್ತದೆ.
ಪ್ರತಿಭಟನೆಯ ದೃಷ್ಟಿಕೋನ ಮೀರಿ ಯೋಚಿಸುವ ಕೊಡಗಿನ ಗೌರಮ್ಮ
ಮೊದಲ ತಲೆಮಾರಿನ ಲೇಖಕಿಯರು ವಿಧವಾವಿವಾಹ, ಶೋಷಣೆ, ಸ್ತ್ರೀ ಸ್ವಾತಂತ್ರ್ಯ ಮೊದಲಾದ ವಿಷಯಗಳನ್ನು ಕುರಿತು ಬಹಳ ದಿಟ್ಟವಾಗಿ ಬರೆದಿದ್ದರೂ ಸ್ತ್ರೀ ವ್ಯಕ್ತಿತ್ವವನ್ನು ಕೇವಲ ಶೋಷಣೆ ಹಾಗೂ ಅದರ ವಿರುದ್ಧ ಪ್ರತಿಭಟಿಸುವ ಹೆಣ್ಣಿನ ಮಾದರಿಯನ್ನು ಹೊರತುಪಡಿಸಿ ನೋಡಲು ಸಾಧ್ಯವಾದರೆ ಅವಳನ್ನು ಹೊಸದಾದ ದೃಷ್ಟಿಕೋನದಲ್ಲಿ ಅರಿಯಲು ಸಾಧ್ಯವಾಗುತ್ತದೆ ಎಂಬುದು ಕೊಡಗಿನ ಗೌರಮ್ಮ ಅವರ ನಿಲುವಾಗಿತ್ತು. ಈ ಕಾರಣಕ್ಕಾಗಿ ಹೆಣ್ಣೊಬ್ಬಳು ಬದುಕಿದ, ಭಾವಿಸಿದ ಅನುಭವಗಳನ್ನು ಕುರಿತು ಬರೆದು…
ಚೆಕೊವ್ರ ಏಳು ಅಪರೂಪದ ಕತೆಗಳು
ಮಗಳೊಂದಿಗೆ ಒಂದು ದಿನ ಕಳೆಯುವ ಸುಖ ಈ ಎಲ್ಲ ವೈಭವಕ್ಕಿಂತ ಮಿಗಿಲಾದುದು ಎಂದು ಕನಸು ಕಾಣುತ್ತ ದಿನ ಮುಗಿಸುತ್ತಿರುತ್ತಾಳೆ ನತಾಲ್ಯಾ. ಅಷ್ಟರಲ್ಲಿ ಅವಳ ಮರಿ ದೆಲ್, ಅಂದರೆ ಪತಿ ದೇವರ ಆಗಮನವಾಗುತ್ತದೆ. ಸಣ್ಣದೊಂದು ಕೆಲಸದಲ್ಲಿದ್ದ ಆಕೆಯ ಗಂಡ ನಿಕಿಟಿನ್ ಹೆಂಡತಿ ಪ್ರಸಿದ್ಧಳಾಗುತ್ತಲೇ ಕೆಲಸ ಬಿಟ್ಟು ಅವಳ ಹಣದಲ್ಲೇ ಐಶಾರಾಮಿ ಜೀವನ ನಡೆಸುತ್ತಿದ್ದಾನೆ. ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದಾನೆ. ನತಾಲ್ಯಾ ಎಷ್ಟು ಬಿಡಿಸಿಕೊಳ್ಳಲು ಯತ್ನಿಸಿದರೂ…
ದೇಶ ಯಾವುದಾದರೇನು, ಒಳಿತನ್ನು ಪರಾಂಬರಿಸೋಣ
ಪಾಶ್ಚಿಮಾತ್ಯ ದೇಶಗಳಲ್ಲಿ ನಾಲ್ಕು ಋತುಗಳು ಕಂಡು ಬರುತ್ತದೆ, ಅದರಲ್ಲೂ ಕೆನಡಾ ದೇಶದಲ್ಲಿ ವರ್ಷದ ಆರು ತಿಂಗಳು ಮಂಜು ಬೀಳುತ್ತಿದ್ದು, ಹಿಮದಿಂದ ಕೂಡಿದ್ದರೂ ನಾಲ್ಕು ಋತುಗಳು ಬಂದು ಹೋಗುತ್ತವೆ. ಇಂತಹ ದೇಶಗಳಲ್ಲಿ ಸ್ಪ್ರಿಂಗ್ ಎನ್ನುವ ಒಂದು ಋತು ಇದೆ, ಅದನ್ನು ವಸಂತ ಕಾಲ ಎನ್ನುವುದು ಸೂಕ್ತ. ಈ ಋತುವಿನ ಸಮಯದಲ್ಲಿ ಬೋಳಾಗಿದ್ದ ಮರಗಳು ಇದ್ದಕ್ಕಿದ್ದಂತೆ ಚಿಗುರೊಡೆಯುತ್ತವೆ, ನೋಡು ನೋಡುತ್ತಿದ್ದಂತೆ ಎಲೆಗಳಿಂದ ಪೂರ್ತಿ ಆವರಿಸಿಕೊಳ್ಳುತ್ತದೆ. ಮಣ್ಣಿನ ಶಕ್ತಿಯೋ, ಜಾಗದ ಮಹಿಮೆಯೋ ಕೇವಲ ತಿಂಗಳಲ್ಲಿ…
ನಾಟಕದ ನ್ಯೂನತೆಗಳೂ, ಬಂಡೇಳುವ ಜೀವಿಗಳೂ..
ಬೀಚಿ ಅವರ ವಿಡಂಬನೆಗಳಲ್ಲಿ ಬದುಕಿನ ಅಪಸವ್ಯಗಳ ಬಗೆಗೆ ಗಾಢ ವಿಷಾದ ಇರುತ್ತದೆ. ಅದನ್ನ ನಗೆಯಲ್ಲಿ ದಾಟಿಸಬೇಕಾದ ಅನಿವಾರ್ಯವನ್ನ ಅವರು ಸೃಷ್ಟಿಸಿಕೊಂಡಿದ್ದಾರೆ. ವಿಷಾದವನ್ನು ಅದರ ರೂಟ್ ಲೆವೆಲ್ನಲ್ಲಿ ಅರ್ಥೈಸಿಕೊಂಡವ ಮಾತ್ರ ಅವರ ವಿಡಂಬನೆಗೆ ನಗಬಲ್ಲ. ಬೀಚಿ ಅವರು ಬರೆದ ವಿಡಂಬನೆಗಳು ಅರ್ಥವಾಗಬೇಕು ಅಂದರೆ ಅವರ ಸಾಹಿತ್ಯವನ್ನು ಓದ್ತಾ ಇರುವವರ ಸುತ್ತ ಇರುವ…
ಮರೆಯಲಾಗದ ಆ ನಾಲ್ಕು ರಾತ್ರಿಗಳು
ಹಗಲಿನಲ್ಲಿ ಎಲ್ಲೆಲ್ಲೋ ಹಂಚಿಹೋಗಿದ್ದ ಇವರನ್ನೆಲ್ಲ ಹೀಗೆ ಒಂದೇ ಸೂರಿನಡಿ ಸೇರಿಸಿದ್ದ ಇರುಳು ಎಷ್ಟೊಂದು ಬಲಶಾಲಿ ಅಂದುಕೊಳ್ಳುತ್ತಲೇ ಸಣ್ಣಗೆ ತೂಕಡಿಕೆ. ಅಲ್ಯಾರೋ ಕೆಮ್ಮಿದ ಸದ್ದು. ಮತ್ಯಾರೋ ಮಗುವನ್ನು ತಟ್ಟಿದ ಸಪ್ಪಳ. ಇನ್ಯಾರೋ ಯಾರಿಗೋ ಗದರಿದ ದನಿ. ಮಧ್ಯೆ-ಮಧ್ಯೆ ಹೆಗ್ಗಣಗಳ ಓಡಾಟ. ಅಪರೂಪಕ್ಕೆ ರೈಲಿನ ಕೂಗು. ಮೈಕಿನ ಅನೌನ್ಸ್ಮೆಂಟು… ಎಲ್ಲವೂ ಬೇರಾವುದೋ ಲೋಕದ್ದು ಎನ್ನುವಂಥ ಮಂಪರು. ಮುಂಜಾನೆ ಎಚ್ಚರಾದಾಗ ಪಕ್ಕದಲ್ಲೇ ಹಮಾಲಿ ಮಂದಿಯ ಗುಂಪೊಂದು ಸೇರಿತ್ತು.
ಮಳೆ, ಬೇಸಗೆ, ಕ್ರಿಕೆಟ್ ಇತ್ಯಾದಿ ಬಿಸಿ-ತಂಪು ಕಥೆಗಳು
ಬೇಸಗೆಯ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ದೇಶದ ಪೂರ್ವ ಮತ್ತು ಉತ್ತರ ದಿಕ್ಕುಗಳ ಪೂರ್ತಿ ‘ಲ ನಿನಾ’ ಎಂಬ ಮಳೆ-ಮಾರುತ ಹವಾಮಾನ ವಿಜೃಂಭಿಸಲಿದೆ. ಬಿಸಿಲಿನ ಜೊತೆ ಒಂದಷ್ಟು ತಂಪು, ಅಗಾಧ ಮಳೆ ಮತ್ತು ಚಂಡಮಾರುತವು ಜನಜೀವನದಲ್ಲಿ ಆಟವಾಡಲಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ. ಅದರ ಮುನ್ಸೂಚನೆಯೆಂಬಂತೆ ಈಗಾಗಲೇ ನ್ಯೂ ಸೌತ್ ವೇಲ್ಸ್ ಮತ್ತು ನಮ್ಮ ರಾಣಿರಾಜ್ಯದ ಕೆಲ ಭಾಗಗಳಲ್ಲಿ ಬೇಕಾದಷ್ಟು ಮಳೆಯಾಗಿದೆ.- ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’









