Advertisement
ಎಂ.ಎಸ್. ಪ್ರಕಾಶ್ ಬಾಬು ಬರೆದ ಈ ದಿನದ ಕವಿತೆ

ಎಂ.ಎಸ್. ಪ್ರಕಾಶ್ ಬಾಬು ಬರೆದ ಈ ದಿನದ ಕವಿತೆ

ವಿವಿಧ ಖಾದ್ಯಗಳು

ಸಾಲುಗಟ್ಟಿದ ಜನ
ತಮ್ಮ ತಮ್ಮ ತಟ್ಟೆಗಳನ್ನಿಡಿದು
ಸರದಿಯಲ್ಲಿ ನಿಂತಿದ್ದರು

ಒಪ್ಪ ಓರಣಮಾಡಿ ಜೋಡಿಸಿಟ್ಟ
ಪಾತ್ರೆಗಳಲ್ಲಿ ವಿವಿಧ ಖಾದ್ಯಗಳು
ಮಾರ್ಕ್ಸನ ಅರ್ಥ ಗಾಂಧಿಯ ಹೃದಯ
ಬುದ್ಧನ ಕರುಳು ಅಂಬೇಡ್ಕರ್ ಮೆದುಳು
ಬಸವನ ದಾಸೋಹ ದೊಳಗೆ
ವಿವಿಧ ತತ್ವಗಳ ಭಕ್ಷ್ಯಗಳೊಳಗೆ
ಯಾರಿಗೆ ಯಾವುದು ಬೇಕೋ ಅದನು
ಆಯ್ದು ಕೊಳ್ಳಬಹುದಿತ್ತು

ಅವರಿಗೆ ಅವರದೇ ಆಯ್ಕೆಗಳಿದ್ದವು
ಕೆಲವರಿಗೆ ಸೊಪ್ಪು ಸದೆ
ಬೆವರ ವಾಸನೆ
ನೆಂಚಿಕೊಳ್ಳಲು ನಾಲಿಗೆ ಚಪಲ
ಮಿಕ್ಕಂತೆ
ತಿಳಿಸಾರು ಮಜ್ಜಿಗೆ
ನೈವೇದ್ಯಕ್ಕಿಟ್ಟ ಎಡೆ

ಎಡೆಬಿಡದ ನೂಕುನುಗ್ಗಲು
ಮುಗಿಬಿದ್ದ ಜನ
ಸಿಕ್ಕಿದ್ದನ್ನು ಬಾಚಿಕೊಳ್ಳುತ್ತಿದ್ದರು
ಕಾಲಿಗೆ ಸಿಕ್ಕ ಅನ್ನ
ಕೈಗೆ ಮೆತ್ತಿದ ದೂಳು
ಉದರಕ್ಕಿಳಿಸುವ ಆತುರ
ಗಂಟಲಲಿ ಸಿಕ್ಕ ಕಬಾಬು
ಬಿಕ್ಕಿದರೆ ನೀರೂ ದಕ್ಕಲಿಲ್ಲ.

About The Author

ಎಂ.ಎಸ್. ಪ್ರಕಾಶ್ ಬಾಬು

ಚಿತ್ರ ನಿರ್ದೇಶಕ,ಕಥಾಲೇಖಕ ಮತ್ತು ಕಲಾವಿದ. ‘ಅತ್ತಿಹಣ್ಣು ಮತ್ತು ಕಣಜ’ ಇವರ ಪ್ರಶಸ್ತಿ ವಿಜೇತ ಚಿತ್ರ. ಚಿತ್ರದುರ್ಗ ಹುಟ್ಟೂರು.ಈಗ ಇರುವುದು ಬೆಂಗಳೂರು.

1 Comment

  1. ಲೋಕೇಶ್ ಮೊಸಳೆ

    ಆಪ್ತವಾದ ಕವಿತೆ. ಕಾವ್ಯದ ರಸಾನುಭವ ಚಿತ್ರಣಗಳ ಮೂಲಕ ದೊರಕಿದೆ. ಇದೊಂದು ದೃಶ್ಯ ಕಾವ್ಯವಾಗಿ ನಮ್ಮೊಂದಿಗೆ ಇದೆ.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ