ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ಪುಸ್ತಕ ಬಹುಮಾನಗಳಿಗೆ ನಾಡಿನ ವಿವಿಧ ಲೇಖಕಿಯರ ಕೃತಿಗಳು ಆಯ್ಕೆಯಾಗಿದ್ದು ಅವುಗಳ ವಿವರ ಈ ಕೆಳಗಿನಂತಿವೆ.

1. ಕಾಕೋಳು ಸರೋಜಮ್ಮ ಕಾದಂಬರಿ ಪ್ರಶಸ್ತಿ – ಡಾ. ಚಂದ್ರಮತಿ ಸೋಂದಾ – ದುಪಡಿ,

2. ಭಾಗ್ಯ ನಂಜಪ್ಪ ವಿಜ್ಞಾನ ಸಾಹಿತ್ಯ ಪ್ರಶಸ್ತಿ – ಡಾ. ಬಿ. ರೇವತಿ ನಂದನ್ – ತೋಟದ ಲೋಕದ ಪಾಠಗಳು,

3. ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ) – ಸರಸ್ವತಿ ಭೋಸಲೆ – ಕಾಡತಾವ ನೆನಪ

4. ಜಿ.ವಿ. ನಿರ್ಮಲ (ಭಾರತದ ಯಾವುದೇ ಭಾಷೆಯ ಅನುವಾದಿತ ಕಾದಂಬರಿ, ಕಥಾ ಸಂಕಲನ, ಜೀವನ ಚರಿತ್ರೆ) – ವಿಜಯಾ ಶಂಕರ – ತಲ್ಲಣಗಳ ನಡುವೆ

5. ತ್ರಿವೇಣಿ ಸಾಹಿತ್ಯ ಪುರಸ್ಕಾರ

– ಮಾಧವಿ ಭಂಡಾರಿ ಕೆರೆಕೋಣ – ಗುಲಾಬಿ ಕಂಪಿನ ರಸ್ತೆ

6. ಕಮಲಾ ರಾಮಸ್ವಾಮಿ (ಪ್ರವಾಸ ಸಾಹಿತ್ಯ) – ನೂತನ ದೋಶೆಟ್ಟಿ – ಸ್ವರ್ಗದೊಂದಿಗೆ ಅನುಸಂಧಾನ

7. ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ) – ಸುಮಾ ರಮೇಶ್ – ಹಚ್ಚೆ ದಿನ್

8. ಗುಣಸಾಗರಿ ನಾಗರಾಜ್ (ಮಕ್ಕಳ ಸಾಹಿತ್ಯ) – ಡಾ. ರಾಧಾ ಕುಲಕರ್ಣಿ – ಏರಿ ರಂಗಮಂಚ, ತೋರಿ ಈ ಪ್ರಪಂಚ

9. ಇಂದಿರಾ ವಾಣಿರಾವ್ (ನಾಟಕ) – ಕಾವ್ಯಾ ಕಡಮೆ – ಸಂಜೀವಿನಿ ಸ್ಟೋರ್ಸ್

10. ಜಯಮ್ಮ ಕರಿಯಣ್ಣ (ಸಂಶೋಧನೆ) – ಲೀಲ ವಾಸುದೇವ್ – ಮೊರಸು ಒಕ್ಕಲಿಗರ ಪ್ರಧಾನ ಸಂಪ್ರದಾಯಗಳು

11. ತ್ರಿವೇಣಿ ದತ್ತಿನಿಧಿ ( ಕಥೆ/ ಕಾದಂಬರಿ- ಪ್ರಥಮ, ದ್ವಿತೀಯ, ತೃತೀಯ) –

ಪ್ರಥಮ – ಸುಧಾ ಆಡುಕಳ – ನೀಲಿ ಮತ್ತು ಸೇಬು

ದ್ವಿತೀಯ- ಫೌಝಿಯಾ ಸಲೀಂ – ನೀ ದೂರ ಹೋದಾಗ

ತೃತೀಯ – ಸಿಂಧುಚಂದ್ರ – ಚೂರು ಚಂದ್ರ ಮೂರು ಕಿರಣ

12. ಉಷಾ. ಪಿ. ರೈ ( ಕವನ ಸಂಕಲನ )- ಡಾ. ಶೋಭಾ ನಾಯಕ – ಶಯ್ಯಾಗೃಹದ ಸುದ್ದಿಗಳು

13. ನಿರುಪಮಾ ಕಥಾ ಪ್ರಶಸ್ತಿ

ಡಿಜಿಟಲ್ ಮಾಧ್ಯಮ- ಮಾಲತಿ ಹೆಗಡೆ – ಪಲ್ಲಟ

ಮುದ್ರಣ ಮಾಧ್ಯಮ- ಡಾ. ಮಂಜುಳಾ ಗೋನಾಳ – ಬಿದಿರು ಮಳೆ ಸೇವೆ

14. ಶೈಲಾ ನಾಗರಾಜ್ ಕಾವ್ಯ ಪ್ರಶಸ್ತಿ – ಡಾ. ಕಾತ್ಯಾಯಿನಿ ಕುಂಜಿಬೆಟ್ಟು – ನಕ್ಷತ್ರ ನಕ್ಕ ರಾತ್ರಿ

15. ಶ್ರೀಲೇಖಾ (ಕಾವ್ಯ ಪ್ರಶಸ್ತಿ) – ದೇವಿಕಾ ನಾಗೇಶ್ – ಮೌನ ಹೊದ್ದವಳು

ಸಮಗ್ರ ಸಾಧನೆಗಾಗಿ

* ಕೆ.ಟಿ. ಬನಶಂಕರಮ್ಮ ಪ್ರಶಸ್ತಿ ( ಶಿಕ್ಷಕಿ/ಲೇಖಕಿ) – ಮಂಜುಳಾ ಹಿರೇಮಠ

* ಪ್ರೇಮಾಭಟ್ಟ ಮತ್ತು ಎ.ಎಸ್.ಭಟ್ಟ. (ಪ್ರಕಾಶಕಿ/ ಲೇಖಕಿ ಪ್ರಶಸ್ತಿ) – ಅಕ್ಷತಾ ಹುಂಚದಕಟ್ಟೆಯವರ ಅಹರ್ನಿಶಿ ಪ್ರಕಾಶನ.

ಪ್ರಶಸ್ತಿಗಳು ನಗದು ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, 2024ರ ಜೂನ್ 23 ರಂದು ಬೆಳಿಗ್ಗೆ 10.30ಕ್ಕೆ ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಖ್ಯಾತ ಕವಿಗಳಾದ ಎಚ್. ಎಸ್. ಶಿವಪ್ರಕಾಶ್ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ ತಿಳಿಸಿದ್ದಾರೆ.

ಆಯ್ಕೆ ಸಮಿತಿಯಲ್ಲಿ ಹಿರಿಯ ಜಾನಪದ ಸಂಶೋಧಕರಾದ ಕೆ.ಆರ್.ಸಂಧ್ಯಾರೆಡ್ಡಿ, ಲೇಖಕಿ ಎಲ್.ಜಿ.ಮೀರಾ ಹಾಗೂ ಹಿರಿಯ ಪತ್ರಕರ್ತರಾದ ರಘುನಾಥ ಚ.ಹ.ಇದ್ದರು.