ನಾನು ನನ್ನಂತಿಲ್ಲ!

ಎಷ್ಟು ಕಾಲವಾಯಿತಲ್ಲವೇ
ನಿರ್ಮಲ ಗಾಳಿ ಎದೆಗೆತಾಗಿ
ನೀರು ಸಿಂಪಡಿಸಿದ ಬೀಸಣಿಗೆ…
ಪಟಪಟವೆಂದು ಹಾರಾಡುತ್ತದೆ!
ಆದರೆ ಆ ತಂಪುದೇಹಕ್ಕೆ ಹೊರತು ಮನಸ್ಸಿಗಲ್ಲ
ನಿಜಕ್ಕೂ ಎಷ್ಟು ಕಾಲವಾಯಿತಲ್ಲವೇ ಸ್ವೇಚ್ಛತೆ ನೀಗಿಕೊಂಡು
ಸ್ವಚ್ಛವಾದ ಮನಸನ್ನು ಕಳೆದುಕೊಂಡಂತೆ!
ಅಲಂಕಾರವಾಗಿ ಉಳಿದ ನಗೆ
ಕಡೆಗೆ ನಕ್ಕ ನಗೆಯನ್ನುತೋರುತ್ತ ಅಣಕಿಸುತ್ತಿದೆ
ತನ್ನದೇ ಮೇಲುಗೈ ಎಂದು

ತುಟಿಯಂಚಿನಲ್ಲಿ ನವಿರಾಗಿ ಅರಳಿದರೆ
ನಾವು ಅಷ್ಟು ಬೆಳದಿಂಗಳು ಸುರಿಸುತ್ತೇವೆ!
ಮನದ ಪೊರೆಯಲ್ಲಿ ಆ ನಗು ಎಲ್ಲಿ ಅಡಗಿದೆಯೋ
ಆ ಮೇಲಿನ ಕಪ್ಪು ಬುರ್ಖಾ ಪರದಗಳಲ್ಲಿ
ನಿನಗಾಗಿ ಪರಿತಪಿಸುತ್ತ ನಿನ್ನ ಊಹೆಗಳಲ್ಲಿ ಅಲೆಯುತ್ತ
ನಮ್ಮ ನಡುವಿನ ಅಂತರವನ್ನು ನೆನೆಯುತ್ತ
ನಿನಗಾಗಿ ಕೊನೆಯ ಸಲ ಹರಿಸಿದ ಕಣ್ಣೀರ ಹನಿ!
ಎಲ್ಲಿ? ಕಾಣಿಸದು? ಏನಾಗಿ ಹೋಯಿತು?
ಬಹುಶಃ ಬರಿದೇ ಮಾತುಗಳ ಹೊಗಳಿಕೆಯಲ್ಲಿ ಬಂಧಿಯಾಯಿತೇ?
ಸೆಲ್ಪೋನ್ ಸಂದೇಶಗಳಲ್ಲಿ ಸಿಕ್ಕಿಬಿದ್ದಿತೇ?
ಕಪಟ ಮಾತುಗಳಿಂದ ಮರುಳು ಮಾಡಿ ಮುದಗೊಳಿಸಿ
ಕಡೆಗೆ ಕಠಿಣವಾಗಿ ನಡೆದುಕೊಳ್ಳುತ್ತೆವೆಯೆಂದು ಪಾಪ ಅದಕೇನು ಗೊತ್ತು
ಬೇಸಿಗೆಯಲ್ಲಿ ವಿರಳವಾಗಿ ಬರುವ ಸಂಜೆಯತಂಪು ಮರಳಿ ಬಂದಂತೆ
ನಾನು ನನ್ನಂತಲ್ಲದೆ
ನಾನು ನಾನಾಗಿ ಮತ್ತೆಎಂದು ಬದಲಾಗುವೆನೋ…

 

ಕಾ.ಹು. ಚಾನ್‍ ಪಾಷ ಕೋಲಾರ ಜಿಲ್ಲೆಯ ಬಂಗಾರಪೇಟೆಯವರು.
ಅಲ್-ಅಮೀನ್‍ ಅಂಜುಮನ್ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರು.
ಮನದ ಮಲ್ಲಿಗೆ (ಚುಟುಕು ಸಂಕಲನ), ಜನ ಮರುಳೋ! (ಕಥಾ ಸಂಕಲನ)
ಭಲೇ! ಗಿಣಿರಾಮ (ಮಕ್ಕಳ ನಾಟಕ) ಮತ್ತು ಅನುವಾದಿತ ಕಥಾ ಸಂಕಲನಗಳು ಪ್ರಕಟಗೊಂಡಿವೆ.