ಉಸಿರಿಗೆ ಉಸಿರ ನೀಡು ….
ಎನ್ನನು ನಿನ್ನಯ
ಕೊಳಲನು ಮಾಡು…
ಎಂದೆಲ್ಲ ಹಲುಬಲಾರೆ ….
ಉಸಿರ ಅಲ್ಲದಿದ್ದರೂ
ನಿಟ್ಟುಸಿರ ಬಿಡು
ಉನ್ಮಾದಕೆ ……
ಪರಿಮಳ ಇಲ್ಲ.
ಮೈ ತುಂಬಾ ಬರೀ
ಒಡಲ ತುಂಬಾ ಅಂತರ್ ಗಂಗೆ !
ಕಾಣುವ ಕುಸುಮವಲ್ಲ
ಬರೀ ಕಪ್ಪು-ಬಿಳುಪು …..
ಒಳಗಿನ ಶೃಂಗಾರ
ಪೊರೆ ಕಳಚಿ, ಹಂಗ ತೊರೆದು
ಸಾಗಬೇಕು “ಅಕ್ಕ” ನಂತೆ …
ಸಂಕೋಲೆಯ ಎಲ್ಲೆ ಮೀರಿ
ಚಿಗುರು ಒಡೆದಂತೆ …
ನಿನ್ನೊಲುಮೆಯೇ
ಬೆಳಕಾಗಿ ಹರಡುವಂತೆ…..
ಜ್ಯೋತಿ ಭಟ್ ಮೂಲತಃ ಉತ್ತರಕನ್ನಡದ ಮಂಚೀಕೇರಿ ಸಮೀಪದ ಬೊಮ್ಮನಹಳ್ಳಿಯವರು. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ. ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತೆಯಾಗಿ ಕೆಲಕಾಲ ಕಾರ್ಯನಿರ್ವಹಿಸಿದ್ದಾರೆ. “ಸಖಿ ಗೀತೆ” ಅಂಕಣ ಬರಹಗಳ ಕೃತಿ. ಪ್ರಸ್ತುತ ಮಹಿಳಾ ಉದ್ಯಮಿ.