ಶ್ ಸದ್ದು
ಅನಾದಿ ಕಾಲದಿಂದ ಸ್ಥಾವರ
ಬೇಸರ ಕೆಳಗೆ ಇಣುಕಿದೆ
ಅಗಲವಾದ ವಿಶಾಲ ರಸ್ತೆ
ಹೋಗುತ್ತಲೇ ಇದ್ದಾರೆ ಮಂದಿ
ಸ್ಪರ್ಧೆಗೆ ಬಿದ್ದಂತೆ ವಾಹನ ಸಂಚಾರ
ಹೊರಟೇ ಬಿಟ್ಟೆ ಫೇರಿ
ಸಾಥ್ ಕೊಟ್ಟವು ನನ್ನ ಮೈಯ್ಯ
ರೋಮಗಂಟು ಎಲ್ಲವೂ
ಯಾಕೋ ಅಲ್ಲೇ ನಿಂತೆ ಬಾ ನನ್ನೆಡೆಗೆ
ಕರೆದಳು ನೀರ ಗೆಳತಿ
ಅಡಿ ಇಟ್ಟೆ ಮುಖ ತಿರುವಿದಳು
ಕಿರುಚಾಟ ಅಳು ಕಲಸುಮೇಲೋಗರ
ಮೌನ ಹೊದ್ದು ಮಲಗಿದ
ಗುಡ್ಡಬೆಟ್ಟ ನದಿ ಕಣಿವೆಗಳು
ಸುರಿಯುತ್ತಿದೆ ಮಳೆ
ಆಗಸಕ್ಕೆ ತೂತು ಬಿದ್ದಂತೆ
ಎಲ್ಲೆಲ್ಲೂ ಕೋಡಿ ಬಿದ್ದಿದೆ
ನೀರೋ ಕಣ್ಣೀರೋ ತಿಳಿಯದು
ದೇವರ ಪಾದದಡಿಯಲ್ಲಿ
ದೇವರ ನಾಡು ಮಲಗಿದೆ
ಶ್ ಸದ್ದು ದೇವರು ಮಲಗಿದ್ದಾನೆ
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.