ಈ ದಿನದ ಚಿತ್ರ ತೆಗೆದವರು ಡಾ ವಿಶ್ವನಾಥ ಏ ಎಸ್. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ಶಾರ್ಕೆಯವರಾದ ಡಾ ವಿಶ್ವನಾಥ್ ದಾವಣಗೆರೆಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಪದವಿ (೨೦೦೦). ಮುಂದೆ ಗುಲ್ಬರ್ಗ ವಿಶ್ವವಿದ್ಯಾನಿಲಯದ ಎಮ್ ಎಮ್ ಕೆ ಕಾಲೇಜ್ ಆಫ್ ವಿಶುವಲ್ ಅರ್ಟ್ಸ್ ನಲ್ಲಿ ಹಿರಿಯ ಕಲಾವಿದರಾದ ವಿ. ಜಿ. ಅಂದಾನಿಯವರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ಪದವಿ (೨೦೦೨) ಹಾಗೂ ೨೦೦೭ರಲ್ಲಿ ಸಂಶೋಧನೆಯ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಕಲಾ ಅಧ್ಯಯನದ ಜೊತೆಗೇ ಛಾಯಾಚಿತ್ರಣವನ್ನೂ ಕಲಿತಿದ್ದು, ಈಗ ಪಕ್ಷಿಗಳ ಛಾಯಾಚಿತ್ರಣದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ