Advertisement

ಪುಸ್ತಕ ಸಂಪಿಗೆ

ಸಿನೆಮಾ ಜಗತ್ತಿನ ಒಳಹೊರಗು…

ಸಿನೆಮಾ ಜಗತ್ತಿನ ಒಳಹೊರಗು…

ಗಾಸಿಪ್ ಗ್ಲಾಮರಗಳ ಹೊರತಾಗಿಯೂ ಆ ಕಲಾವಿದರೂ ಮನುಷ್ಯರು, ನಮ್ಮಂತಹುದೇ ಅಂತಃಕರಣ ಉಳ್ಳವರು ಎಂಬ ಕನಿಷ್ಠ ಪ್ರಜ್ಞೆಯಿಲ್ಲದೇ ಜನರು ಪ್ರತಿಕ್ರಿಯಿಸುತ್ತಾರೆ. ಸಿನೆಮಾದವರೆಂದರೆ ಕೇವಲ ಪರದೆಯ ಮೇಲಿನ ಪಾತ್ರಗಳು ಮಾತ್ರ ಎಂದು ಗ್ರಹಿಸುವ ಮನಸ್ಸುಗಳಿಂದ ಬೇರೆನನ್ನು ನಿರೀಕ್ಷಿಸಲು ಸಾಧ್ಯ? ಎಂಬುದನ್ನು “ಬ್ರೇಕಿಂಗ್ ನ್ಯೂಸ್‍ಗಿಂತ ಬದುಕು ದೊಡ್ಡದು” ಎಂಬ ಪ್ರಬಂಧದಲ್ಲಿ ಹೆಸರಾಂತ ಕಲಾವಿದರೇ ಅನುಭವಿಸಿದ ನೋವಿನ ಪ್ರಸಂಗಗಳನ್ನು ಕಟ್ಟಿಕೊಡುತ್ತಾರೆ ಲೇಖಕರು.
ಎನ್.ಎಸ್. ಶ್ರೀಧರ ಮೂರ್ತಿಯವರ ಪ್ರಬಂಧಗಳ ಸಂಕಲನ “ಅಂದದ ಹೆಣ್ಣಿನ ನಾಚಿಕೆ”ಯ ಕುರಿತು ನಾಗರೇಖಾ ಗಾಂವಕರ ಬರಹ

read more
ಝೇಂಕರಿಸುತ್ತಲೇ ಸಮಾಜದ ವಿಕಾರತೆ ಬಯಲುಗೊಳಿಸುವ ಹನಿಗಳು

ಝೇಂಕರಿಸುತ್ತಲೇ ಸಮಾಜದ ವಿಕಾರತೆ ಬಯಲುಗೊಳಿಸುವ ಹನಿಗಳು

ಲೇಖಕನೊಬ್ಬ ತಾನು ಏನನ್ನೇ ಬರೆಯುವಾಗಲೂ ಅದಕ್ಕೊಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತಾನೆ. ಅದೇ ರೀತಿ ಹನಿಗವನಗಳ ರಚನೆಯಲ್ಲಿ ತೊಡಗಿಸಿಕೊಂಡಿರುವ ಮನ್ನಂಗಿಯವರೂ ತಮ್ಮ ಸುಧೀರ್ಘ ವೃತ್ತಿ ಬದುಕಿನುದ್ದಕ್ಕೂ ತಾವು ಕಂಡುಂಡ ಅನೇಕ ಬಗೆಯ ರಸಾನುಭವಗಳನ್ನು ಚುಟುಕು ಚುಟುಕಾಗಿ ತಿಳಿಸುವ ಪ್ರಯತ್ನದಲ್ಲಿ ಓದುಗರ ಬೌದ್ಧಿಕತೆಯನ್ನು ಚುರುಕಾಗಿಸುವಲ್ಲಿ ಸಫಲವಾಗಿದ್ದಾರೆಂದೇ ಹೇಳಬಹುದು. ಅವರ ನೂರಾ ಒಂದು ಹನಿಗವನಗಳೂ ಓದುಗರನ್ನು ಆಸಕ್ತಿದಾಯಕವಾಗಿ ಓದಿಸಿಕೊಳ್ಳುವಲ್ಲಿ ಸಫಲವಾಗಿದ್ದು, ನವರಸಗಳ ಅನುಭೂತಿಯನ್ನು ಕಟ್ಟಿಕೊಡುತ್ತವೆ.
ಪ್ರಕಾಶ್ ಎಸ್ ಮನ್ನಂಗಿ ಬರೆದ “ನೂರೊಂದು ಝೇಂಕಾರ” ಹನಿಗವನಗಳ ಸಂಕಲನದ ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಲೇಖನ

read more
ನಮ್ಮಲ್ಲೇ ಮೊದಲು… ಅಂತರ್ವೀಕ್ಷಣೆ…!

ನಮ್ಮಲ್ಲೇ ಮೊದಲು… ಅಂತರ್ವೀಕ್ಷಣೆ…!

ನಮ್ಮಂತಹ ಎಳೆಯ ಹುಡುಗರಿಗೆ ಬಸ್ಸಿನಲ್ಲಿ ಹೋಗುವ ಸಂದರ್ಭಗಳು ಬಂತೆಂದರೆ ಎಲ್ಲಿಲ್ಲದ ಆನಂದ. ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೋಗುವ ಬಸ್ಸಿಗಾಗಿ ಬಸ್ ಸ್ಟ್ಯಾಂಡ್ ನಲ್ಲಿ ಒಂದರ್ಧ ಗಂಟೆ ಮುಂಚೆಯೇ ಬಂದು, ಅದಕ್ಕಾಗಿ ಕಾಯುತ್ತ ನಿಲ್ಲುತ್ತಿದ್ದೆವು. ಮಲೆನಾಡಿನ ದಾರಿಯಲ್ಲಿ ಬರುವ ಬಸ್ಸಿನ ಪ್ರತಿಧ್ವನಿಯನ್ನು ಆಲಿಸುತ್ತ ಕಾಯುತ್ತಿದ್ದೆವು. ಮೂರು ನಾಲ್ಕು ಕಿ.ಮಿ ಮೊದಲೇ ಇದು ಇಲ್ಲಿಬರುತ್ತಿದೆ ಎಂದು ರೆಡಾರ್ ನಂತೆ ಹೇಳುವುದಕ್ಕೆ ಸಾಧ್ಯವಾಗುವುದು ನಮಗೆ ಮಾತ್ರ.
ನಾಳೆ ರವಿ ಮಡೋಡಿ ಬರೆದ “ನಮ್ಮಲ್ಲೇ ಮೊದಲು” ಲಘು ಬರಹಗಳ ಸಂಕಲನ ಹಾಗೂ ಪೂರ್ಣಿಮಾ ಹೆಗಡೆ ಬರೆದ “ಅಂತರ್ವೀಕ್ಷಣೆ” ಗೀತಾ ಕಥಾಯಾನ ಕೃತಿಗಳು ಬಿಡುಗಡೆಗೊಳ್ಳಲಿದ್ದು, ಎರಡೂ ಕೃತಿಗಳ ಆಯ್ದ ಭಾಗಗಳನ್ನು ನಿಮ್ಮ ಓದಿಗಾಗಿ ಇಲ್ಲಿ ಹಂಚಿಕೊಳ್ಳಲಾಗಿದೆ.

read more
ಜಗವ ಸುತ್ತುವ ಮಾಯೆ….

ಜಗವ ಸುತ್ತುವ ಮಾಯೆ….

ಜ್ವಾಜ್ವಲ್ಯಮಾನವಾಗಿ ಬೆಳಗುತ್ತಿರುವ ನಗರ ಪ್ಯಾರಿಸ್, ದ್ರಾಕ್ಷಿ ತೋಟದ ಬೋರ್ಡೋ ಎಂದು ಆರು ಅಧ್ಯಾಯಗಳಿವೆ. ಫ್ರೆಂಚ್ ಲಲನೆಯರ ಬೆಡಗು, ಫ್ಯಾಷನ್, ಮನಮೋಹಕ ಸೀಯೆನ್ ನದಿ, ಸುಂದರ ವಾಸ್ತುಶಿಲ್ಪ, ಮ್ಯೂಸಿಯಂಗಳು, ಇತಿಹಾಸ ಎಂದೆಲ್ಲಾ ಈ ಅಧ್ಯಾಯಗಳಲ್ಲಿ ಪ್ಯಾರಿಸ್ ವೈಶಿಷ್ಟ್ಯಗಳು ಅನಾವರಣಗೊಂಡಿವೆ. ಫ್ರೆಂಚರ ಜೀವನ ಪ್ರೀತಿ, ಅವರ ವಿಶಿಷ್ಟ ಆಹಾರ ಸೇವನೆಯ ಅಭ್ಯಾಸದ ಬಣ್ಣನೆಯಿದೆ. ಆರುನೂರು ಕಿ.ಮೀ. ದೂರದ ಬೋರ್ಡೋ ಪಟ್ಟಣದಲ್ಲಿ ಕೈಗೊಂಡ ವೈನ್ ಟೂರ್, ಅಲ್ಲಿನ ವೈನ್‌ನ ದಿವ್ಯಾನುಭವ ನೀಡಿತ್ತು.
ಸುಚಿತ್ರಾ ಹೆಗಡೆ ಪ್ರವಾಸ ಕಥನ “ಜಗವ ಸುತ್ತುವ ಮಾಯೆ” ಕುರಿತು ಕೆ.ಆರ್. ಉಮಾದೇವಿ ಉರಾಳ ಬರಹ

read more
ನಗರ ಜೀವನದ ಬಿಕ್ಕಟ್ಟಿನ ಕತೆಗಳು…

ನಗರ ಜೀವನದ ಬಿಕ್ಕಟ್ಟಿನ ಕತೆಗಳು…

ಮಧ್ಯಮ ವರ್ಗದ ಜನ ಚೀಟಿ ವ್ಯವಹಾರದಲ್ಲಿ ಮೋಸ ಹೋಗುವುದನ್ನು ಚಿತ್ರಿಸುವ ಕತೆ ‘ಹರಿಚಿತ್ತ’ ಆಂಧ್ರದಿಂದ ವಲಸೆ ಬಂದ ದಲಿತ ಪೆದ್ದ ಪೆಂಚಾಲಯ್ಯ, ಎಂತೆಂಥವೋ ಕೆಲಸ ಮಾಡುತ್ತಾ, ಹೋರಾಡುತ್ತಾ, ಮಗ ಪೆಂಚಾಲಯ್ಯ ನನ್ನು ಪೊಲೀಸ್ ಕೆಲಸಕ್ಕೆ ಸೇರಿಸುತ್ತಾನೆ. ರಾಜಕೀಯ ಗಲಾಟೆಯಲ್ಲಿ ಸಿಕ್ಕಿ ಹೊಡೆತ ತಿಂದು ಬಿದ್ದಾಗ, ಗಲಾಟೆ ನಿಯಂತ್ರಿಸಲು ಮಗ ಪೊಲೀಸ್ ಪೆಂಚಾಲಯ್ಯ ಬರ್ತಾನೆ. ಗಲಾಟೆಗೆ ಬಲಿಯಾಗುವವರು ಇಂತಹ ಅಮಾಯಕರೇ.. ಕೆಳ ಮಧ್ಯಮವರ್ಗದವರಿಗೆ ‘ಯಾರೂ ಕಾಯುವವರಿಲ್ಲ..’ ಎಂಬ ಸ್ಥಿತಿ.
ವಸಂತಕುಮಾರ್ ಕಲ್ಯಾಣಿ ಅವರ ಕಥಾಸಂಕಲನ “ಪರ್ಯಾಪ್ತ”ಕ್ಕೆ ಜಿಎಸ್ ಸುಶೀಲಾದೇವಿ ಆರ್ ರಾವ್ ಬರೆದ ಮುನ್ನುಡಿ

read more
ನೊಂದವರ ಬಾಳಿಗೆ ಮುಲಾಮಾಗುವ ಟೀಚರ್

ನೊಂದವರ ಬಾಳಿಗೆ ಮುಲಾಮಾಗುವ ಟೀಚರ್

ಶಾಲಿನಿಗೆ ರುಸ್ತುಂ ಪಪ್ಪಾ ಏಕೆ ನನ್ನ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತಾನೆ? ನನ್ನ ಬಗ್ಗೆ ಯಾಕೆ ಕಾಳಜಿ ತಗೊಳ್ತಾನೆ ಅನ್ನೋದು ಅವಳಿಗೆ ಯಕ್ಷ ಪ್ರಶ್ನೆಯಾಗಿತ್ತು. ತನ್ನ ಸಾಕು ತಾಯಿ ಮತ್ತು ಅವಳ ಚಿಕ್ಕಮ್ಮ ಒಂದು ದಿನ ಮಾತಾಡಿದ ಮಾತುಗಳನ್ನು ಕೇಳಿ ಕರಳು ಕತ್ತರಿಸಿದಂತಾಗಿ ರುಸ್ತುಂ ಪಪ್ಪಾನ ಕುರಿತು ಸತ್ಯದ ಅರಿವಾಗುತ್ತದೆ. ಬನದ ಹುಣ್ಣಿಮೆಗೆ ಸವದತ್ತಿ ಎಲ್ಲಮ್ಮನ ಗುಡ್ಡಕ್ಕೆ ಹೋದಾಗ ದೇವಿಯ ಪ್ರಸಾದವೆಂಬಂತೆ ರುಸ್ತುಂ ಅವರ ಕೈಗೆ ಬಂದ ಈ ಹಸುಗೂಸೆ ಈ ಶಾಲಿನಿ.
ವೈ.ಜಿ. ಭಗವತಿ ಬರೆದ ಮಕ್ಕಳ ಕಾದಂಬರಿ “ಮಕ್ಕಳು ಓದಿದ ಟೀಚರ್ ಡೈರಿ”ಕೃತಿಯ ಕುರಿತು ನಾಗರಾಜ್‌ ಎಂ. ಹುಡೇದ್‌ ಬರಹ

read more
ಕಥಾ ಬೇಸಾಯವನ್ನು ಬದುವಿನಲ್ಲಿ ನಿಂತು ನೋಡಿ

ಕಥಾ ಬೇಸಾಯವನ್ನು ಬದುವಿನಲ್ಲಿ ನಿಂತು ನೋಡಿ

ಉಳುಮೆ ಅನುಭವದ್ದು. ಒಂದು ಸಾಲಿನ ಉಳುಮೆ ಸಾಕೋ, ಎರಡುಸಾಲು ಹೊಡೆಯಬೇಕೋ, ಮೂರುಸಾಲು ಆಗಬೇಕೋ ಎಂಬುದು ಉಳುಮೆಗಾರನ ವಿವೇಚನೆಯದು. ಹಾಗೆಯೇ ಬಲಸುತ್ತು, ಎಡಸುತ್ತು ಉಳುಮೆಯ ವಿಚಾರವೂ ಸಹ. ಬದುವಿನ ಉಬ್ಬಂಚು ತಗ್ಗಬೇಕಾದರೆ ಎಡಸುತ್ತಿನ ಉಳುಮೆಗೆ ನೇಗಿಲು ಹಿಡಿಯಬೇಕು. ಎದೆಯ ಹೊಲದಲ್ಲಿ ಹುಟ್ಟುವ ಕಥೆ ಬೆಳೆದು ಬೆಳೆಯಾಗವುದು ಇಂತಹ ಹದಗಳಲ್ಲಿಯೇ. ಹೊಲದ ವಿಸ್ತಾರವಿದ್ದಂತೆ ಕಥೆಯ ವಿಸ್ತಾರವೂ ಇರುತ್ತದೆ. ವಿಸ್ತಾರ ದೊಡ್ಡದಿದ್ದರೂ ಉಳುಮೆಯಾದಷ್ಟು ನೆಲದಲ್ಲಷ್ಟೇ ಬೆಳೆ. ಸದಾಶಿವ ಸೊರಟೂರು ಕಥಾಸಂಕಲನ “ಅರ್ಧ ಬಿಸಿಲು ಅರ್ಧ ಮಳೆ”ಗೆ ಸ. ರಘುನಾಥ ಬರೆದ ಮುನ್ನುಡಿ

read more
ತುಂಟ ಪೊಕ್ಕಣ್ಣ & ಕಡುಮಡಿಯ ಅಜ್ಜಿ

ತುಂಟ ಪೊಕ್ಕಣ್ಣ & ಕಡುಮಡಿಯ ಅಜ್ಜಿ

ಈ ಪೊಕ್ಕಣ್ಣ ಶತ ತುಂಟ, ಕಣ್ಣಲ್ಲೇ ಅವನ ತುಂಟತನ ಇಣಕುತ್ತಿತ್ತು. ಒಂದು ಕಿವಿ ನೆಟ್ಟಗೆ ಮಾಡಿ, ಮತ್ತೊಂದನ್ನು ಮಡಿಸಿದ ಅಂದರೆ ಅವನೇನೋ ತರಲೆ ಮಾಡುತ್ತಾನೆಂದು ನಮಗೆ ಖಾತ್ರಿಯಾಗಿತ್ತು. ಮಟ ಮಟ ಮಧ್ಯಾಹ್ನ ಎಣ್ಣೆ ಪಳಚಿಕೊಂಡು ಹಂಡೆತುಂಬಾ ಬೀಸಿನೀರನ್ನು ಸ್ನಾನ ಮಾಡಿ, ಒದ್ದೆ ಸೀರೆಯನ್ನುಟ್ಟು ಬರುವ ಅಜ್ಜಿಗೆ ಅಡ್ಡಲಾಗಿಯೇ ಮಲಗುತ್ತಿದ್ದ ಪೊಕ್ಕಣ್ಣ. ಅವನು ಮಲಗಬಾರದೆಂದು ಕೊಡಪಾನಗಟ್ಟಲೆ ನೀರು ಹೊಯ್ದಿಟ್ಟು ಸ್ನಾನಕ್ಕೆ ಹೋಗುತ್ತಿದ್ದರು. ಆದರೂ ಕಾಲು ಒರೆಸುವ ಗೋಣಿಚೀಲವನ್ನೆಳೆದುಕೊಂಡು ಬೇಕಂತಲೇ ಬಚ್ಚಲಮನೆ ಬುಡದಿ ಮಲಗಿ ಸತಾಯಿಸುತ್ತಿದ್ದ ಅಂವ.
ಶುಭಶ್ರೀ ಭಟ್ಟ ಲಲಿತ ಪ್ರಬಂಧಗಳ ಸಂಕಲನ “ಹಿಂದಿನ ನಿಲ್ದಾಣ” ದಿಂದ ಒಂದು ಪ್ರಬಂಧ ನಿಮ್ಮ ಓದಿಗೆ

read more
ತಿಪಟೂರು ಸೀಮೆಯ ಘಮಲು

ತಿಪಟೂರು ಸೀಮೆಯ ಘಮಲು

ಕೇವಲ ನಿರೂಪಕಿ ಆಗದೆ ಕತೆಗಳ ಒಳಗಿನಿಂದ ಬಂದು ಮಾತನಾಡುವ ಕತೆಗಾರ್ತಿಗೆ ಆ ಕಾರಣಕ್ಕೆ ಒಂದು ರೀತಿಯ ಸಹಜ ಯಜಮಾನಿಕೆ ಪ್ರಾಪ್ತವಾಗಿದೆ. ಭಾರತದ ಮಹಾವ್ಯಾಖ್ಯಾನಗಳನ್ನು ನೀಡಿದ ವಾಲ್ಮೀಕಿ ವ್ಯಾಸರು ಕತೆಯ ಒಳಗಿನವರು. ತಾವೂ ತಮ್ಮ ಕತೆಯಲ್ಲಿ ಪಾತ್ರಧಾರಿಗಳು ಅಥವಾ ತಮ್ಮಿಂದಲೇ ಕತೆಗಳನ್ನು ಆರಂಭಿಸಿದವರು. ಕತೆಗಾರಿಕೆಗೆ ಇದೊಂದು ಅತ್ಯುತ್ತಮ ಮಾದರಿ. ತಾನೇ ಊರಾಡಿ ಎತ್ತಿಕೊಂಡು ಬಂದ ಕತೆಗಳಂತಿರುವ ಸಮೂಹ ಪ್ರಜ್ಞೆ ಈ ಕತೆಗಳ ಸತ್ವ. ಕತೆಗಳು ಸಮೂಹದ ಸ್ವತ್ತು. ಸಮೂಹ ಕೊಡುತ್ತಿರುವ ಸಮಸ್ತ ಬೈಗುಳಗಳಾದಿಯಾಗಿ ಯಾವುದನ್ನೂ ಸೋಸದೆ ಇಡಿಯಾಗಿ ನಮಗೆ ತಲುಪಿಸಲಾಗಿದೆ.
ದಯಾ ಗಂಗನಘಟ್ಟ ಕಥಾ ಸಂಕಲನ “ಉಪ್ಪುಚ್ಚಿ ಮುಳ್ಳು”ಗೆ ನಟರಾಜ್‌ ಬೂದಾಳು ಬರೆದ ಮುನ್ನುಡಿ

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ