ಡಂಬಳದ ದೊಡ್ಡಬಸವೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ತಳದಿಂದ ತುದಿಯವರೆಗೆ ನಕ್ಷತ್ರಾಕಾರದಲ್ಲಿರುವುದೇ ಈ ಕಟ್ಟಡದ ವಿಶೇಷ. ಇಡೀ ಕಟ್ಟಡವೇ ನಕ್ಷತ್ರಾಕಾರದಲ್ಲಿರುವುದರಿಂದ ಇತರ ದೇಗುಲಗಳಲ್ಲಿ ಕಾಣುವಂತಹ ವಿಶಾಲವಾದ ಭಿತ್ತಿಯುಳ್ಳ ರಚನೆಯನ್ನು ಇಲ್ಲಿ ಕಾಣಲಾಗದು. ಅದಕ್ಕೆ ಬದಲಾಗಿ ಉನ್ನತವಾದ ಕಂಬಗಳನ್ನೂ ಕಿರುಗೋಪುರಗಳನ್ನೂ ಅಳವಡಿಸಲಾಗಿದೆ…”
ಲಕ್ಷ್ಮೇಶ್ವರದ ಸೋಮನಾಥ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಕಲ್ಯಾಣ ಚಾಲುಕ್ಯರ ಪ್ರಮುಖ ದೊರೆ ಆರನೆಯ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಿತವಾಗಿರಬಹುದಾದ (ಕ್ರಿ.ಶ. 1006) ಸೋಮನಾಥ ಗುಡಿಗೆ ಸಂಬಂಧಿಸಿದಂತೆ ಅನೇಕ ಶಾಸನಗಳು ಲಭ್ಯವಿವೆ. ಮುಂದಿನ ಶತಮಾನಗಳಲ್ಲಿ ಈ ಪ್ರದೇಶವು ಅನೇಕ ರಾಜವಂಶಗಳ ಆಳ್ವಿಕೆಗೆ ಒಳಪಟ್ಟ ಸಂದರ್ಭದಲ್ಲಿ ಸೋಮೇಶ್ವರ ದೇಗುಲವನ್ನು ಜೀರ್ಣೋದ್ಧಾರ ಮಾಡಿದ ಹಾಗೂ ದಾನದತ್ತಿಗಳನ್ನೂ ಒದಗಿಸಿದ ವಿವರಗಳಿವೆ…”
ಹುಂಚದ ಪಂಚಬಸದಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಬಸದಿಯ ಎದುರಿಗೆ ಇರುವ ಭವ್ಯವಾದ ಮಾನಸ್ತಂಭ ಈ ಬಸದಿಯ ವಿಶೇಷ ಆಕರ್ಷಣೆ. ನಲವತ್ತು ಅಡಿಗಳಷ್ಟು ಎತ್ತರವಾದ ಈ ಸ್ತಂಭವನ್ನು ವಿಶಾಲವಾದ ವೇದಿಕೆಯ ಮೇಲೆ ನಿರ್ಮಿಸಲಾಗಿದೆ. ಈ ಮಾದರಿಯ ಮಾನಸ್ತಂಭ ಇಡಿಯ ದೇಶದಲ್ಲೇ ಅಪೂರ್ವವೆಂದು ಅಭಿಪ್ರಾಯಪಡಲಾಗಿದೆ. ವೇದಿಕೆಯ ಸುತ್ತಲಿನ ಕೆತ್ತನೆ ಆಕರ್ಷಕವಾಗಿದೆ..”
ನರಸಮಂಗಲದ ರಾಮೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಗುಡಿ ಚಿಕ್ಕದಾಗಿದ್ದರೂ ಆಕರ್ಷಕವಾಗಿದೆ. ಹೊರಬಾಗಿಲ ಚೌಕಟ್ಟು ಹೂಬಳ್ಳಿಗಳ ಕೆತ್ತನೆಯಿಂದ ಮನಸೆಳೆಯುತ್ತದೆ. ಗರ್ಭಗುಡಿ, ಅರ್ಧಮಂಟಪ ಹಾಗೂ ನವರಂಗಗಳನ್ನುಳ್ಳ ಕಟ್ಟಡ. ಗರ್ಭಗೃಹದಲ್ಲಿ ಬೃಹದಾಕಾರದ ರಾಮೇಶ್ವರನೆಂಬ ಹೆಸರಿನ ಶಿವಲಿಂಗವಿದೆ. ಬನವಾಸಿಯ ಕದಂಬೇಶ್ವರನನ್ನು ನೆನಪಿಸುವ ಲಿಂಗ..”
ಅಮೃತಾಪುರದ ಅಮೃತೇಶ್ವರ: ಟಿ.ಎಸ್.ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಶ್ರೀಕೃಷ್ಣಜನನ, ನಿದ್ರಿಸುವ ಕಂಸನನ್ನು ತನ್ನ ಕೂಗಿನಿಂದ ಎಚ್ಚರಗೊಳಿಸಬಾರದೆಂದು ವಸುದೇವನು ಕತ್ತೆಯನ್ನು ಬೇಡಿಕೊಳ್ಳುವುದು, ಕಾಳಿಂಗಮರ್ದನ, ವೇಣುಗೋಪಾಲ, ಗೋವರ್ಧನಗಿರಿಧಾರಿ, ಕೃಷ್ಣನಿಂದ ಧೇನುಕ ಮತ್ತಿತರ ರಕ್ಕಸರ ಸಂಹಾರ ಮೊದಲಾದ ಕೃಷ್ಣನ ಜೀವನಕ್ಕೆ ಸಂಬಂಧಿಸಿದ ಕಥಾನಕಗಳೂ…”
ಅಣ್ಣಿಗೇರಿಯ ಅಮೃತೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಉತ್ತರ ಕರ್ನಾಟಕದ ಅನೇಕ ದೇವಾಲಯಗಳ ಮುಖ್ಯ ಆಕರ್ಷಣೆ ಅವುಗಳ ಬಾಗಿಲವಾಡದ ಸೂಕ್ಷ್ಮಕೆತ್ತನೆಯೇ ಎಂದರೆ ಅತಿಶಯೋಕ್ತಿಯಲ್ಲ. ಅಣ್ಣಿಗೇರಿ ದೇವಾಲಯವೂ ಅದಕ್ಕೆ ಹೊರತಲ್ಲ. ಒಂಬತ್ತು ಪಟ್ಟಿಕೆಗಳಿರುವ ದ್ವಾರಪಟ್ಟಕದ ಸೊಬಗನ್ನು ಎಷ್ಟು ವರ್ಣಿಸಿದರೂ ಸಾಲದು. ಒಂದೊಂದು ಸಾಲಿನಲ್ಲಿ ಅನುಕ್ರಮವಾಗಿ ಸಿಂಹಮುಖಗಳು…”
ಪಂಕಜನಹಳ್ಳಿಯ ಮಲ್ಲಿಕಾರ್ಜುನ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮುಂಭಾಗದ ಕಂಬದ ಒಳಬದಿಗೆ ಕುಂಭಗಳಿಂದ ಹೊರಟ ಶಿಲಾಲತೆಗಳೂ, ಬಾಗಿಲ ಎದುರಾಗಿ ಶೈವ ದ್ವಾರಪಾಲಕರ ದೊಡ್ಡಶಿಲ್ಪಗಳೂ ಕಂಡುಬರುತ್ತವೆ. ಮಂಟಪದ ಒಳಗಿನ ಕಂಬಗಳ ಮೇಲಿನ ಉಬ್ಬುಶಿಲ್ಪಗಳಲ್ಲಿ ಗಣಪತಿ, ಮಹಿಷಮರ್ದಿನಿ, ಕೈಮುಗಿದು ನಿಂತ ನಂದೀಶ್ವರ ಹಾಗೂ ಭೈರವರ ಶಿಲ್ಪಗಳು ಆಕರ್ಷಕವಾಗಿವೆ. ಯಕ್ಷನು ಹೊತ್ತಂತೆ ವಿನ್ಯಾಸಗೊಂಡಿರುವ ಕಂಬವೊಂದರ ಮೇಲೆ..”
ಬಳ್ಳಿಗಾವೆಯ ತ್ರಿಪುರಾಂತಕೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಒಳಗುಡಿಯ ಮಂಟಪದಲ್ಲಿ ಗರ್ಭಗುಡಿಯ ಶಿವಲಿಂಗದತ್ತ ಮುಖಮಾಡಿ ಕುಳಿತ ನಂದಿ ಆಕರ್ಷಕ. ಬಾಲ, ಗೊರಸು, ಗಂಗೆದೊಗಲು ಮೊದಲಾಗಿ ಸುಸ್ಥಿತಿಯಲ್ಲಿರುವ ಈ ನಂದಿಯ ಶಿಲ್ಪ ನಮ್ಮ ನಾಡಿನಲ್ಲಿರುವ ಈ ಮಾದರಿಯ ಅತ್ಯಾಕರ್ಷಕ ವಿಗ್ರಹಗಳಲ್ಲೊಂದೆಂದು ಹೇಳಿದರೆ ಅತಿಶಯೋಕ್ತಿಯಲ್ಲ. ನಡುಮಂಟಪದ ಕಂಬಗಳ ಬುಡದ ಚೌಕದಲ್ಲಿ ಕೀರ್ತಿಮುಖಗಳೊಳಗೆ ದೇವತೆಯರ…”
ಮುತುಕೂರಿನ ಕೇಶವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ವಿಜಯನಗರದ ಕಾಲದಲ್ಲೇ ನಿರ್ಮಾಣವಾದುದೆಂದಿಟ್ಟುಕೊಂಡರೂ ಐದುನೂರು ವರುಷಗಳಿಗೂ ಹಳೆಯದು. ತಿರುಪತಿಯ ವೆಂಕಟೇಶನಂತೆ ಕೊಳಗದ ಕಿರೀಟ ಧರಿಸಿದ ಕೇಶವ ಬಲಗೈಯಲ್ಲಿ ಪದ್ಮ, ಬಲಮೇಲುಗೈಯಲ್ಲಿ ಶಂಖ, ಎಡಮೇಲುಗೈಯಲ್ಲಿ ಚಕ್ರ ಹಾಗೂ ಎಡಗೈಯಲ್ಲಿ ಗದೆಗಳನ್ನು ಧರಿಸಿದ್ದಾನೆ. ಬಲಗೈಯಲ್ಲಿ ಪದ್ಮದ ದೇಟನ್ನು ಹಿಡಿದಿರುವಂತೆಯೇ ವರದಹಸ್ತನೂ ಆಗಿರುವ ಕೇಶವನ ಶಿಲ್ಪವು ವಸ್ತ್ರದ ನಿರಿಗೆಗಳಿಂದ ಮೊದಲುಗೊಂಡು ಕೈಯ ಉಗುರುಗಳವರೆಗೆ ಎಲ್ಲ ಸೂಕ್ಷ್ಮಾಂಶಗಳನ್ನೂ ಸ್ಪಷ್ಟವಾಗಿ ತೋರ್ಪಡಿಸುತ್ತದೆ. ಸೊಂಟಕ್ಕೆ ಕಟ್ಟಿದ ಪಟ್ಟಿಯ ನಡುವೆ… “