Advertisement
ವರ್ತಮಾನದ ಬೆಂಕಿಯಲ್ಲಿ ಅರಳಿದ ಹೂವು ಮೈ ಫ್ಯಾಮಿಲಿ: ಎಚ್. ಆರ್. ರಮೇಶ ಬರಹ

ವರ್ತಮಾನದ ಬೆಂಕಿಯಲ್ಲಿ ಅರಳಿದ ಹೂವು ಮೈ ಫ್ಯಾಮಿಲಿ: ಎಚ್. ಆರ್. ರಮೇಶ ಬರಹ

ಈ ನಾಟಕದ ಮತ್ತೊಂದು ವೈಶಿಷ್ಟ್ಯತೆಯೆಂದರೆ, ಇಂದಿನ ತಂತ್ರಜ್ಞಾನ ಮತ್ತು ಅದರ ಪರಿಣಾಮದ ಸೋ ಕಾಲ್ಡ್ ಆನ್ ಲೈನ್ ಸಾಮಾಜಿಕ ಜಾಲ ತಾಣಗಳು ಮನುಷ್ಯ ಸಂಬಂಧಗಳನ್ನು ಸಡಿಲಗೊಳಿಸುತ್ತ, ಒಂಟಿತನಗಳನ್ನು ಹುಟ್ಟುಹಾಕುತ್ತ ಮನುಷ್ಯರನ್ನು ಭಾವನಾರಹಿತರನ್ನಾಗಿಸುತ್ತಿರುವುದನ್ನು, ಇಡೀ ಮನುಕುಲವೇ ಅನುಭವಿಸುತ್ತಿರುವುದನ್ನು, ಭಾರತೀಯ ಸಂದರ್ಭದಲ್ಲಿ ಇಟ್ಟು ನೋಡಿರುವುದು. ಇದಕ್ಕೆ ಪುರಾಣ, ಇತಿಹಾಸ, ಮತ್ತು ಜ್ವಲಂತ ಸಂಗತಿಗಳು ರೂಪಕವಾಗಿ ಮೈದಾಳಿ ಬಂದಿವೆ.
ಕುಮಾರಿ ಗೌತಮಿ ಕತೆಯಾಧಾರಿತ ಮೈಸೂರಿನ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸಿದ “ಮೈ ಫ್ಯಾಮಿಲಿ” ನಾಟಕದ ಕುರಿತು ಎಚ್.ಆರ್.‌ ರಮೇಶ್‌ ಬರಹ

ವರ್ತಮಾನವನ್ನು ಹಿಡಿಯುವುದು ಒಂದು ಭ್ರಮೆ. ಅದು ಅಷ್ಟು ಸುಲಭದಲ್ಲಿ ಆಗದ ಕೆಲಸ. ಅದನ್ನು ಅರಿಯಲು ಹತ್ತಿರ ಹೋದಷ್ಟೂ ಅದು ನಮ್ಮನ್ನು ದಿಕ್ಕುತಪ್ಪಿಸಿ, ತಪ್ಪಿಸಿಕೊಳ್ಳುತ್ತಿರುತ್ತದೆ. ಆದರೆ ಕಲೆ ಎಂದಿಗೂ ನಿರಾಸೆಗೊಳ್ಳದೆ ಅದರ ಎಲ್ಲ ಒಳದಾರಿ, ಒಳಸುಳಿಗಳನ್ನು ಕಂಡು ಹಿಡಿದುಕೊಂಡು, ಅದನ್ನು ಕಾಣಿಸಲು ಒಂದು ಕಮಿಟ್ ಮೆಂಟ್ ರೀತಿ ಪ್ರಯತ್ನಪಡುತ್ತಿರುತ್ತದೆ. ಇದನ್ನು ಕುಮಾರಿ ಗೌತಮಿ ಅವರ ಕತೆಯ ಎಳೆಯನ್ನು ಸತೀಶ್ ತಿಪಟೂರು ಅವರು ವಿಸ್ತೃತಗೊಳಿಸಿ, ರಂಗರೂಪಕ್ಕೆ ತಂದಿರುವ, ರಂಗಾಯಣ ಮೈಸೂರು ರೆಪರ್ಟರಿ ಕಲಾವಿದರು ಅಭಿನಯಿಸಿ, ಗಣೇಶ್ ಮಂದರ್ತಿ ನಿರ್ದೇಶಿಸಿರುವ ‘ಮೈ ಫ್ಯಾಮಿಲಿ’ ನಾಟಕವು ಪ್ರಸ್ತುತ ಪಡಿಸಿರುವುದರಲ್ಲಿ ಕಾಣಬಹುದಾಗಿದೆ.

ಕಾಲದ ಸ್ತರಗಳನ್ನು ಅದರ ಹಿಂದಕ್ಕೂ ಜಿಗಿದು, ಆಗುವುದನ್ನು ಮುಂಗಾಣಿಸಿಕೊಂಡು, ಪ್ರಸ್ತುತತೆಯನ್ನು ಅದರ ತೀವ್ರತೆಗೆ ಶೇಕ್ ಆಗದೆ ರಂಗದ ಮೇಲೆ ಯಾವ ಗೊಂದಲ, ಗೋಜಲು, ಮತ್ತು ಅಮೂರ್ತತೆಗಳಿಲ್ಲದೆ ತುಂಬ ಸ್ಪಷ್ಟವಾಗಿ ಅಭಿವ್ಯಕ್ತಿಸಲು ಉತ್ಸುಕತೆಯನ್ನು ತೋರಿರುವುದನ್ನು ನೋಡಬಹುದಾಗಿದೆ. ಈ ನಾಟಕದ ಮತ್ತೊಂದು ವೈಶಿಷ್ಟ್ಯತೆಯೆಂದರೆ, ಇಂದಿನ ತಂತ್ರಜ್ಞಾನ ಮತ್ತು ಅದರ ಪರಿಣಾಮದ ಸೋ ಕಾಲ್ಡ್ ಆನ್ ಲೈನ್ ಸಾಮಾಜಿಕ ಜಾಲ ತಾಣಗಳು ಮನುಷ್ಯ ಸಂಬಂಧಗಳನ್ನು ಸಡಿಲಗೊಳಿಸುತ್ತ, ಒಂಟಿತನಗಳನ್ನು ಹುಟ್ಟುಹಾಕುತ್ತ ಮನುಷ್ಯರನ್ನು ಭಾವನಾರಹಿತರನ್ನಾಗಿಸುತ್ತಿರುವುದನ್ನು, ಇಡೀ ಮನುಕುಲವೇ ಅನುಭವಿಸುತ್ತಿರುವುದನ್ನು, ಭಾರತೀಯ ಸಂದರ್ಭದಲ್ಲಿ ಇಟ್ಟು ನೋಡಿರುವುದು. ಇದಕ್ಕೆ ಪುರಾಣ, ಇತಿಹಾಸ, ಮತ್ತು ಜ್ವಲಂತ ಸಂಗತಿಗಳು ರೂಪಕವಾಗಿ ಮೈದಾಳಿ ಬಂದಿವೆ. ಮೇಲ್ನೋಟಕ್ಕೆ ಇದು ಪುಟ್ಟ ಮಕ್ಕಳ ಮನೋ ಜಗತ್ತು ಮತ್ತು ಅವರ ಮುಗ್ಧ ಮನಸ್ಸುಗಳ ಹಾಗೂ ಸುಂದರ ಕನಸುಗಳ ಧ್ವಂಸವನ್ನು ಹೇಳುತ್ತಿರುವಂತೆ ಕಂಡರೂ ಆಳದಲ್ಲಿ ಈ ನಾಟಕ ಮನುಕುಲದ ಅವನತಿಯನ್ನು ಹೇಳುತ್ತಿದೆ. ಮತ್ತೂ ಪ್ರಗತಿ ಕೇವಲ ತಂತ್ರಜ್ಞಾನಗಳ ಮುಖೇನ, ಮತ್ತು ಭೌತಿಕವಾಗಿ ಆಗುವುದಲ್ಲ, ಬದಲಿಗೆ ಮಾನಸಿಕವಾಗಿ ಆಗುವಂತಹದ್ದು. ಬುದ್ಧ ಹೇಳುವಂತೆ ‘ಮನಸೇ ಎಲ್ಲ’.

ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಆಗಬೇಕು ಎಂಬುದನ್ನು ಹೆಣ್ಣಿನ ಸ್ವಾತಂತ್ರ್ಯ ಹಾಗೂ ಶೋಷಿತ ಸಮುದಾಯಗಳ ಎಲ್ಲ ನೆಲೆಗಳ ವಿಮೋಚನೆ ಸಾಧ್ಯವಾಗಬೇಕು ಎಂಬುದನ್ನು ಈ ನಾಟಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುತ್ತದೆ. ನಾಟಕವೊಂದು ಕೇವಲ ಕತೆಯನ್ನಷ್ಟೇ ಹೇಳಿದರೆ ಸಾಲದು ಅದು ರಂಗದಲ್ಲಿ ತಾಂತ್ರಕವಾಗಿಯೂ ಗೆಲ್ಲಬೇಕಾಗಿದೆ. ಇದನ್ನು ಈ ನಾಟಕ ಆಗಿಸಿಕೊಂಡಿದೆ. ಇದಕ್ಕೆ ಶ್ರವಣ್ ಹೆಗ್ಗೋಡು ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಪೊಪೆಟ್ರಿಗಳಲ್ಲಿ ಕಾಣಬಹುದಾಗಿದೆ.

About The Author

ಎಚ್ ಆರ್ ರಮೇಶ್

ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ