ಪರಿಸರ ರಕ್ಷಣೆಯ ಕಠಿಣ ವಜ್ರ ನಮೀಬಿಯಾ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ
ನಿಸರ್ಗವನ್ನು ಆಧಾರವಾಗಿಟ್ಟುಕೊಂಡ ಜೀವನಶೈಲಿಯನ್ನು ಈಗಲೂ ಉಳಿಸಿಕೊಂಡಿರುವ ಅಲ್ಲಿನ ಹಲವು ಸಮುದಾಯಗಳು ಬದುಕನ್ನು ನಡೆಸುವುದರ ಜೊತೆಗೆ ಪ್ರಕೃತಿಯನ್ನೂ ಉಳಿಸಿ, ಬೆಳೆಸುತ್ತಿವೆ. ಇದರಿಂದಾಗಿ ನಮೀಬಿಯಾದ ಪ್ರವಾಸೋದ್ಯಮವೂ ಸಹ ಅಭಿವೃದ್ಧಿ ಕಂಡಿದೆ. ಪ್ರವಾಸೋದ್ಯಮಕ್ಕೆ ದೊರಕಿರುವ ಉತ್ತೇಜನದಿಂದಾಗಿ ಈ ಬುಡಕಟ್ಟು ಸಮುದಾಯಗಳು ಸಶಕ್ತಗೊಳ್ಳುತ್ತಿವೆ. ನಮೀಬಿಯಾದ ಬುಡಕಟ್ಟು ಸಮುದಾಯಗಳು ಅಲ್ಲಿನ ನಿಸರ್ಗವನ್ನು ಸಂರಕ್ಷಿಸಲು ನೀಡಿರುವ ಕೊಡುಗೆಯನ್ನು ವಿಶ್ವ ವನ್ಯಜೀವಿ ನಿಧಿ ಎಂಬ ಅಂತಾರಾಷ್ಟ್ರೀಯ ಸಂಘಟನೆಯು ಗುರುತಿಸಿದೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ
ಅಂಕಿಗಳ ಲೋಕದಲ್ಲಿ: ಸುಮಾವೀಣಾ ಸರಣಿ
‘420’ ಕೂಡ ಒಳ್ಳೆಯ ಸಂಖ್ಯೆ. ನಮ್ಮ ಇಂಡಿಯನ್ ಪಿನೆಲ್ ಕೋಡ್ನಲ್ಲಿ ಚೀಟಿಂಗ್ ಫೋರ್ಜರಿ ಕೇಸುಗಳು ದಾಖಲಾಗುವುದು ‘420’ ಸೆಕ್ಷನ್ನಿನ ಅಡಿಯಲ್ಲಿ. 1860 ಅಕ್ಟೋಬರ್ 6 ಇಂಡಿಯನ್ ಪಿನಲ್ ಕೋಡ್ ಬ್ರಿಟಿಷರಿಂದ ರಚಿಸಲ್ಪಟ್ಟದ್ದು. ಇದರಲ್ಲಿ ಎಲ್ಲಾ ರೀತಿಯ ಪ್ರಕರಣಗಳು ಬರುತ್ತವೆ. ಮೋಸ ಮಾಡಿದಾಗ ಹಣದ ವಿಚಾರದಲ್ಲಿ, ಆಸ್ತಿಗೆ ಸಂಬಂಧಿಸಿದಂತೆ ಮೋಸ ಮಾಡಲು ಪ್ರಚೋದನೆ ನೀಡಿದ ಪ್ರಕರಣಗಳಲ್ಲಿ ಸಿಲುಕಿದಾಗ ಆ ವ್ಯಕ್ತಿಗೆ ‘420’ ಕೇಸು ದಾಖಲಾಗುತ್ತದೆ. ಇದರಲ್ಲಿ 7 ವರ್ಷಗಳವರೆಗೂ ಶಿಕ್ಷೆ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ‘420’ ನಂಬರನ್ನು ಬಯ್ಯುತ್ತಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಐದನೆಯ ಬರಹ
‘ಗಣಿತೀಯ ಗೀತರಚನೆಕಾರ’: ಎಸ್. ಜಯಶ್ರೀನಿವಾಸ ರಾವ್ ಸರಣಿ
“ನಾನು ಆಲಿಸುವೆ. ನಾನು ಆಲಿಸುವೆ, ನಾನು ವೀಕ್ಷಿಸುವೆ. ಸೃಜನಶೀಲತೆಗೆ ಯಾವುದೇ ನಿಯಮಗಳು ತಿಳಿದಿಲ್ಲ. ಯಾರೋ ಹೇಳಿದ ಯಾವುದೋ ಒಂದು ಮಾತಿನಿಂದ ಅಥವಾ ನೀವು ನೋಡಿದ ಯಾವುದೋ ಒಂದು ಮುಖದಿಂದ ಕಾದಂಬರಿಯ ಕಲ್ಪನೆಯನ್ನು ನೀವು ಪಡೆಯಬಹುದು. ಯಹೂದಿ ಧಾರ್ಮಿಕ ಪಂಡಿತನೊಬ್ಬ ನನಗೆ ಹೇಳಿದ ಒಮ್ಮೆ, ದೇವರು ಮೋಶೆಯ ಜತೆ ಆ ಪೊದೆಯಲ್ಲಿ ಮಾತನಾಡಿದಾಗ ಗುಡುಗಿನ ಧ್ವನಿಯಲ್ಲಿ ಮಾತನಾಡಿರಲಿಲ್ಲ, ಬಲು ಕ್ಷೀಣವಾದ ಧ್ವನಿಯಲ್ಲಿ ಮಾತನಾಡಿದ್ದ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ
ಟೋಬಿ ಎಂಬ ಶಿಕ್ಷಕ: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ಟೋಬಿ ಸ್ಪಷ್ಟ ವಿಚಾರಗಳಿಗೆ ಬಂದಿದ್ದರು. ನೀವು ಉದ್ಯೋಗರಂಗವನ್ನು ಪ್ರವೇಶಿಸಿದ ಮೇಲೂ ಕೆಲಸ ಕಾರ್ಯ ಚೆನ್ನಾಗಿ ನಿರ್ವಹಿಸಲು, ಪದೋನ್ನತಿ ಪಡೆಯಲು, ಸಹೋದ್ಯೋಗಿಗಳೊಡನೆ ಬೆರೆಯಲು, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು, ನಿಮಗೆ ನಿಜಕ್ಕೂ ನೆರವಾಗುವುದು ಜೀವನಾನುಭವವೇ. ನಂತರ ಈ ಜೀವವಾನುಭವದಿಂದ ಮೂಡುವ ಜ್ಞಾನಾನುಭವ ಮತ್ತು ಜೀವನ ಕೌಶಲ್ಯ. ವ್ಯಕ್ತಿತ್ವ ನಿರ್ಮಾಣಗಳ ದಾರಿ ಚಿಕ್ಕ ವಯಸ್ಸಿನಲ್ಲೇ ದೊರಕಬೇಕು. ಮಕ್ಕಳ ಬಾಲ್ಯದಲ್ಲೇ ಇದಕ್ಕೆ ಭದ್ರ ಬುನಾದಿ ಹಾಕಬೇಕು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್ಲ್ಯಾಂಡ್ಸ್ ಬಾಣಂತನ” ಸರಣಿಯ ಆರನೆಯ ಬರಹ
ಭಾಷೆಯೆಂಬ ಬದುಕು ಮತ್ತು ಬಾಲ್ಯದ ಬಣ್ಣದ ಕನಸುಗಳು: ರಾಮ್ ಪ್ರಕಾಶ್ ರೈ ಕೆ ಸರಣಿ
ವೇಷ ತೆಗೆಯದೆ ಯುದ್ಧಕ್ಕೆ ಹೊರಡುವ ಉಪಾಧ್ಯಾಯರು, ರಾಮಣ್ಣನ ಮಾತುಕತೆ, ಮಹೇಂದ್ರನ ಚೇಷ್ಟೆ, ಅನಂತ ಪದ್ಮನಾಭರ ನಡುವಿನ ಜಗಳ, ಪಿ ಟಿ ಮಾಸ್ತರ್ರ ಗುಪ್ತ ಪ್ರೇಮ, ಮಕ್ಕಳ ಹೋರಾಟದ ಕೆಲವು ಭಾಗಗಳು ಎಲ್ಲವೂ ಇಲ್ಲಿ ಹೈಲೈಟು. ಹಾಗೆಂದು ಚಿತ್ರ ಹಾಸ್ಯಕ್ಕೆ ಸೀಮಿತಗೊಳ್ಳದೆ, ತಾನು ಹೇಳಬೇಕಾದ ಗಂಭೀರ ವಿಚಾರವನ್ನು ಭಾವಪೂರ್ಣವಾಗಿ ಹೇಳುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ
ಬದುಕು ಮತ್ತು ಸುಂಟರಗಾಳಿ: ಗುರುಪ್ರಸಾದ ಕುರ್ತಕೋಟಿ ಸರಣಿ
ಅವತ್ತು ಅರುಣ್ ಯಾಕೋ ಯೋಚನೆಯಲ್ಲಿ ಇದ್ದಂತೆ ಕಂಡರು. ಯಾಕೆ ಏನಾಯ್ತು ಅಂತ ಕೇಳಬೇಕು ಅನಿಸಿದರೂ ಸುಮ್ಮನಿದ್ದೆ. ಅಲ್ಲಿಗೆ ಹೋಗಿ ಹಲವು ವರ್ಷಗಳು ಅಲ್ಲಿಯೇ ನೆಲೆಸಿದ ಮೇಲೆ ನಮ್ಮ ಎಷ್ಟೋ ದೇಸಿಗಳೂ ಕೂಡ ಅಮೆರಿಕದವರಂತೆಯೇ ಆಗಿಬಿಟ್ಟಿರುತ್ತಾರೆ. ಹಾಗೆಲ್ಲಾ ಯಾರಿಗೂ ವೈಯುಕ್ತಿಕ ವಿಷಯಗಳನ್ನು ಏನೂ ಕೇಳೋ ಹಾಗಿಲ್ಲ. ಆದರೆ ಅವರು ಹಾಗಿರಲಿಲ್ಲ. ತಾವೇ ತಮ್ಮ ಬೇಜಾರಿನ ಕಾರಣವನ್ನು ಅರುಹಿದರು. ಅವರಿಗೂ ತಮ್ಮ ದುಗುಡಗಳನ್ನು ಹಂಚಿಕೊಳ್ಳಲು ಯಾರಾದರೂ ಬೇಕಿತ್ತು ಅನಿಸಿತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೇಳನೆಯ ಬರಹ
ರಾಜಕೀಯದಾಗೆ ಅಪ್ಪನ ಕಸರತ್ತು: ಸುಮಾ ಸತೀಶ್ ಸರಣಿ
ಊರಿನ ಜನರಿಗೆಲ್ಲ ಸರಕಾರ ಉಚಿತವಾಗಿ ಕೊಡೋ ಎಲ್ಲಾ ಸವಲತ್ತುಗಳು ತಲುಪೋ ತರ ಮಾಡಿದ್ರು. ಯಾವ್ಯಾವ್ದು ಫ್ರೀಯಾಗಿ ಸಿಕ್ತೈತೆ ಅಂತ ಅಧಿಕಾರಿಗಳ ತಾವ್ಕೆ ಹೋಗಿ ತಿಳ್ಕಂಬರಾರು. ಅದ್ರ ಬಗ್ಗೆ ಓದ್ಕಣಾರು. ಕಾನೂನು ತಿಳ್ಕಂಬಾದ್ರಾಗೆ ಸೈ ಅನ್ನುಸ್ಕೊಂಡಿದ್ರು. ಎಲ್ಲಾ ಓದ್ಕಂಡು ಮುಂದ್ಕೆ ಹೋಗೋರು. ಅಧಿಕಾರಿಗುಳ ಪ್ರೀತಿ, ವಿಶ್ವಾಸ ಗಳಿಸಾಕೆ ಅವುರ್ಗೆ ಊಟ, ತಿಂಡಿ ಕೊಡ್ಸೋದು, ಹೊಲದಾಗೆ ಬೆಳೆದ ಫಸಲು, ತರಕಾರಿ, ಕಾಯಿ, ಎಳನೀರು ಉಡುಗೊರೆ ಕೊಡೋರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ
ಪಿಯುಸಿಯ ಕಡುಕಷ್ಟದ ಆ ದಿನಗಳು….: ಬಸವನಗೌಡ ಹೆಬ್ಬಳಗೆರೆ ಸರಣಿ
ನನ್ನ ರೂಮಿನಲ್ಲಿ ಬೇರೆ ಬೇರೆ ಕಾಲೇಜಿನ ಹುಡುಗರು ಇದ್ದರು. ನಾವು ಮಧ್ಯಾಹ್ನ ಹಸಿವನ್ನು ನೀಗಿಸಿಕೊಳ್ಳಲು ಸಾಮಾನ್ಯವಾಗಿ ಕ್ರೀಂ ಬನ್ ತಿನ್ನುತ್ತಿದ್ದೆವಾದರೂ ಕೆಲವೊಮ್ಮೆ ಸುಖ ಸಾಗರ ಹೋಟೆಲ್ಲಿಗೆ ಇಡ್ಲಿ ತಿನ್ನೋಕೆ ಹೋಗ್ತಿದ್ವಿ. ಇಲ್ಲಿನ ಸಾಂಬಾರ್ ತುಂಬಾ ಚೆನ್ನಾಗಿರೋದು. ನಮಗೆ ಜಾಸ್ತಿ ಇಡ್ಲಿ ತಿನ್ನೋಕೆ ದುಡ್ಡು ಇಲ್ಲದೇ ಇರುತ್ತಿದ್ದರಿಂದ ಎರಡೇ ಇಡ್ಲಿ ತಿನ್ತಾ ಇದ್ದೆವು. ಆದರೆ ಸಾಂಬಾರನ್ನು ನಾವೇ ಹಾಕಿಕೊಳ್ಳುವ ವ್ಯವಸ್ಥೆ ಅಲ್ಲಿದ್ದುದ್ದರಿಂದ ಇಡ್ಲಿಗಿಂತ ಸಾಂಬಾರನ್ನೇ ನಾವು ಹೆಚ್ಚು ಬಡಿಸಿಕೊಂಡು ತಿನ್ನುತ್ತಿದ್ದೆವು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ಕಿಶೋರಿ ತರಬೇತಿಯ ಸುತ್ತಮುತ್ತ: ಅನುಸೂಯ ಯತೀಶ್ ಸರಣಿ
ಕಿಶೋರಿ ತರಬೇತಿಯ ಪ್ರಮುಖ ಆಶಯ ಹದಿಹರೆಯದ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳದ ವಿವಿಧ ರೂಪಗಳನ್ನು ಪರಿಚಯಿಸುವುದು ಮತ್ತು ಮಕ್ಕಳ ಸಾಗಾಟದ ಬಗ್ಗೆ ಎಚ್ಚರಿಕೆ ಮೂಡಿಸುವುದು. ಆ ವಯೋಮಾನದ ಮಕ್ಕಳಿಗೆ ಏನು ತಿಳಿದಿರುವುದಿಲ್ಲ ಎಂದು ಭಾವಿಸಿದ್ದೆವು. ಆದರೆ ನಮ್ಮೆಲ್ಲರ ನಿರೀಕ್ಷೆಗಳು ಸುಳ್ಳಾದವು. ಮಕ್ಕಳ ಸಾಗಾಟ ಏಕೆ ಮಾಡುತ್ತಾರೆ ಎಂದಾಗ ಬಂದು ಉತ್ತರಗಳು ಇಂದಿನ ಮಕ್ಕಳು ತುಂಬಾ ಪ್ರಬುದ್ಧರಾಗಿದ್ದಾರೆ ಎಂಬ ಸಂದೇಶ ನೀಡುತ್ತಿದ್ದವು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ