ಶಿವಕುಮಾರ ಚನ್ನಪ್ಪನವರ ಬರೆದ ಈ ಭಾನುವಾರದ ಕಥೆ
ಪೀರ್ಯಾಗ ಮತ್ತ ಹುರುಪೆದ್ದು ಯೋಳ್ನೆ ಪತ್ರ ಬರದಾಕಿದ್ದ. ಮ್ಯಾಲ ಒಂದ್ಲೈನು ಸರ್ಕಾರಿ ಕೇಲ್ಸ ದೇವ್ರ ಕೇಲ್ಸ ಅಂತಾ ಬರ್ದು ಕೆಳ್ಗ ತಮ್ಮ ಕಂಪ್ನಿ ಮಂಚಪ್ಪ ಮತ್ತ ಸರ್ಕಾರಿ ಲಂಚಪ್ಪನ ಇತಿಹಾಸನ ಬರ್ದಿದ್ದ. ಜೊತಿಗಿ ಅದ್ಕ ಸಂಭಂದಪಟ್ಟಂಗ ಎಕ್ಸೇಲ್ ಸಿಟ್ ಅಟ್ಯಾಚ್ ಮಾಡಿದ್ದ. ನಿನ್ನೆ ಅದು ಕಮೀಷನರ್ರ ಕೈಗಿ ಸಿಕ್ಕು ಲಂಚ್ಮಂಚ್ಚಪ್ಪರ್ನ ಸಿಕ್ಕ ಸಿಕ್ಕಾಂಗ ಉಗದಿದ್ರನ್ನಾದು ಸಹ ಗೊಣೇಶ ತುಂಬು ಹೃದಯದಿಂದ್ಲೇ ವಿವರ್ಸಿ, ಕುಷಿ ಪಟ್ಟಿದ್ದ. ಅಂವ್ಗ ಲೆರ್ಟ ಬರಿತಾರಂತ ಗೊತ್ತು ಆದ್ರ ಇವ್ನ ಬರಿತಾನಂತ ಮಾತ್ರ ಗೊತ್ತಿರ್ಲಿಲ್ಲ. ಪೀರ್ಯಾನೂ ಹೇಳಿದ್ದಿಲ್ಲ.
ಶಿವಕುಮಾರ ಚನ್ನಪ್ಪನವರ ಬರೆದ ಕಥೆ “ಲಂಚಪ್ಗೀರಿ ಲಂಚ್ಮಂಚ್ಚಪ್ಪೋರ ಕತಿ..”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾತ್ಯಾಯಿನಿ ಕುಂಜಿಬೆಟ್ಟು ಬರೆದ ಕತೆ
ಮುಕಾಂಬಿಕಮ್ಮ ಇದ್ದುದರಲ್ಲೇ ಅಚ್ಚುಕಟ್ಟಾಗಿ ಸಂಸಾರ ನಡೆಸಿಕೊಂಡು ಬಂದ ನಿತ್ಯಸಂತೋಷಿ ಜೀವ. ಬೆಳಗ್ಗೆ ಐದುಗಂಟೆಗೆ ಅವರ ಮನೆಗೆಲಸದಚಕ್ರ ಸುತ್ತಲಾರಂಭಿಸಿದರೆ ನಿಂತು ಅಡ್ಡವಾಗುವುದು ಮಧ್ಯಾಹ್ನ ಎರಡುಗಂಟೆಗೆ. ಮತ್ತೆ ಐದುಗಂಟೆಗೆ ಎದ್ದು ಸುತ್ತತೊಡಗಿದರೆ ನಿಲ್ಲುವುದು ರಾತ್ರಿ ಒಂಭತ್ತು ಗಂಟೆಗೆ. ‘ಮುಕಾಂಬಮ್ಮನಂತೆ ಮನೆಯನ್ನು ಒಪ್ಪ ಓರಣವಾಗಿ ಇಟ್ಕೊಳ್ಳುವವರು ಹೊಸನಗರದಲ್ಲೇಕೆ?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾತ್ಯಾಯಿನಿ ಕುಂಜಿಬೆಟ್ಟು ಬರೆದ ಕತೆ “ಮೇಷ್ಟ್ರಮನೆ”
ಸುಭಾಷ್ ಪಟ್ಟಾಜೆ ಬರೆದ ಈ ಭಾನುವಾರದ ಕಥೆ
ಇಲ್ಲ! ಅಪ್ಪ ಪೇಟೆಗೆ ಹೋದ ಸಮಯ ನೋಡಿ ಇಲ್ಲಿಗೆ ಓಡಿ ಬಂದು ಪುಟ್ಟ ಮಗುವಾಗಿದ್ದ ನನ್ನನ್ನು ಎತ್ತಿ ಮುದ್ದಾಡಿದ ವ್ಯಕ್ತಿ ಇವನಲ್ಲ. ಬಿಡುವಿಲ್ಲದ ಮನೆಗೆಲಸದ ವೇಳೆಯಲ್ಲೂ ‘ಎತ್ತಿಕೋ’ ಎಂದು ಅಮ್ಮನನ್ನು ಪೀಡಿಸುತ್ತಿದ್ದಾಗ “ಇತ್ತ ಕೊಡಿ. ನಾನು ನೋಡಿಕೊಳ್ತೇನೆ” ಎಂದು ನನ್ನನ್ನು ಎತ್ತಿಕೊಂಡು, ತೋಟದಲ್ಲೆಲ್ಲ ತಿರುಗಾಡಿ ಬಾಳೆಹೂವಿನ ಜೇನು ನೆಕ್ಕಿಸಿದವನೂ ಇವನಲ್ಲ ಎಂದುಕೊಳ್ಳುತ್ತಿದ್ದಂತೆ ಕತ್ತಲಲ್ಲಿ ಭೂಮಿಯನ್ನು ಥರಗುಟ್ಟಿಸುವ ಸದ್ದು ನಮ್ಮೆಲ್ಲರನ್ನೂ ಇಡಿಯಾಗಿ ಅಲುಗಾಡಿಸಿತು.
ಸುಭಾಷ್ ಪಟ್ಟಾಜೆ ಬರೆದ ಈ ಕಥೆ “ಗೋಡೆ”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೃಷ್ಣ ದೇವಾಂಗಮಠ ಬರೆದ ಕತೆ
ಹೋಗುತ್ತಾ ನನಗೆನೋ ಕೊಟ್ಟು ಒಂದಷ್ಟು ಕಸಿದುಕೊಂಡು ಟಾಟಾ ಬೈಬೈ ಹೇಳುತ್ತಾ ಕಣ್ಮರೆಯಾಯಿತು. ಮತ್ತೆ ಮನಸ್ಸಿಗೆ ಹೊಸ ತಳಮಳ. ಯಾವ್ಯಾವುದೋ ಮನುಷ್ಯ ಸಹಜ ಆಸೆಗಳು ಮೈತಳೆಯುತ್ತಿದ್ದವು. ಆದರೆ ಎಲ್ಲವೂ ಅಸ್ಪಷ್ಟ ಆಕೃತಿಗಳು. ಬಸಿರಿನಲ್ಲಿ ಕೈ ಕಾಲು ಮೂಡದ ಭ್ರೂಣಾವಸ್ತೆಯ ಹಂತದವು. ಕನಸಿನ ಮಂಜು ಮಂಜಾದ ಚಿತ್ರಪಟಗಳಂತಹವು. ಮನಸ್ಸು ಮತ್ತಷ್ಟು ಗೊಂದಲದ ಗೂಡಾಯಿತು. ಅಲ್ಲಿ ನನ್ನ ಜನರ ಮಧ್ಯದಿಂದ ಸುಂಯ್ಯ ಎಂದು ಹಾರಿದ ವಿಮಾನ ಇಲ್ಲಿ ನನ್ನವರಲ್ಲದ ಮತ್ತು ನನ್ನವರಾಗಲಿರುವವರ ಮಧ್ಯೆ ಸದ್ದಿಲ್ಲದೆ ಇಳಿಸಿತು.
ಕೃಷ್ಣ ದೇವಾಂಗಮಠ ಬರೆದ ಕತೆ “ಪೇಯಿಂಟಿಂಗ್ “
ವೆಂಕಟೇಶ ಬಿ.ಎಂ. ಬರೆದ ಈ ಭಾನುವಾರದ ಕತೆ
ಈಗ ಗೋಡೆಯ ಮೇಲಿನ ಚಿತ್ರಗಳು ಬದಲಾಗಿ ವಿಶಾಲವಾದ ಸಮುದ್ರ ಗೋಚರಿಸತೊಡಗಿದೆ. ಸಮುದ್ರದ ನಟ್ಟನಡುವೆ ಹಡಗಿನಲ್ಲಿ ರಮೇಶ, ಶೇಖರ ಹಾಗೂ ಹೆಂಗಸೊಬ್ಬಳು ನಿಂತಿದ್ದಾರೆ! ಹೆಂಗಸಿನ ಅಣತಿಯನ್ನು ಶಿರಸಾವಹಿಸಿ ಪಾಲಿಸುವಂತೆ ರಮೇಶ, ಶೇಖರನನ್ನು ಹಡಗಿನಿಂದ ಸಮುದ್ರಕ್ಕೆ ದೂಡಿದ! ಉರವಣಿಸಿ ಬಂದ ಅಲೆಗಳು ಶೇಖರನನ್ನು ತಮ್ಮೊಳಗೆ ಕರಗಿಸಿಕೊಂಡವು. ಶೇಖರ ಇನ್ನಿಲ್ಲವಾದ! ‘ಇಲ್ಲಾ, ಇಲ್ಲಾ! ನಾನು ಮದುವೇನೇ ಆಗಲ್ಲ!’ ಎಂದು ಚೀರಿ ಕನಸಿನ ಭ್ರಮಾಲೋಕದಿಂದ ವಾಸ್ತವ ಪ್ರಪಂಚಕ್ಕೆ ಮರಳಿದ ರಮೇಶ!
ವೆಂಕಟೇಶ ಬಿ.ಎಂ. ಬರೆದ ಈ ಭಾನುವಾರದ ಕತೆ “ಸಹೋದರರ ಕನಸು” ಹೊಸ ವರ್ಷದ ಮೊದಲ ಓದಿಗೆ
ಫಾತಿಮಾ ರಲಿಯಾ ಬರೆದ ಈ ಭಾನುವಾರದ ಕತೆ
ರೂಡಿ ಯಾರು, ಏನು, ಎತ್ತ ಎಂಬುವುದು ಗೊತ್ತೇ ಇರದಿದ್ದರೂ ಯಾವುದೋ ಅಸಹಾಯಕತೆಯೊಂದು ಅವನನ್ನು ಇನ್ನಿಲ್ಲದಂತೆ ಕಾಡುತ್ತಿದೆ ಎಂದು ಅವಳಿಗೆ ಆಗಾಗ ಅನ್ನಿಸುತ್ತಿತ್ತು. ಪ್ರತಿ ಬೆಳಗೂ ‘ಈವತ್ತು ಹೇಗಾದರೂ ಸರಿ, ಅವನನ್ನು ಕೇಳಲೇಬೇಕು’ ಎಂಬ ಪ್ರತಿಜ್ಞೆಯೊಂದಿಗೆ ಹಾಸಿಗೆಯಿಂದ ಏಳುತ್ತಿದ್ದಳು. ಆದರೆ ಹಾಗೆ ಕೇಳಬೇಕೆಂದು ಹೊರಟಾಗೆಲ್ಲಾ ಗಂಟಲಲ್ಲಿ ಒಂದು ಮುಳ್ಳು ಸಿಕ್ಕಿಹಾಕಿಕೊಂಡಂತಾಗಿ ಕೇಳಲಾಗದೆ ಇದ್ದುಬಿಡುತ್ತಿದ್ದಳು. ಹೋಗಲಿ, ತಾನು ನಲವತ್ತರ ಹೊಸ್ತಿಲು ದಾಟಿದವಳು…
ಫಾತಿಮಾ ರಲಿಯಾ ಬರೆದ ಕತೆ “ರೂಡಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಹೊಸ ಜೀವಸೆಲೆ ಮತ್ತು ಹೊಸ ಹೊಳಹುಗಳು….
ರಾತ್ರಿ ನಿದ್ದೆಗೆಟ್ಟಿದ್ದಕ್ಕೆ ಬಂದಿದ್ದ ತಲೆಸುತ್ತೋ, ಹೊಟ್ಟೆಗಿಲ್ಲದೇ ಆದ ಆಯಾಸವೋ ಅಥವಾ ಹ್ಯಾಂಗೋವರೋ ಒಟ್ಟು ತಲೆ ಗಿಂ ಎಂದು ಬಹಳ ಜೋರಾಗಿ ಚಕ್ಕರ್ ಬಂದು ವಾಂತಿ ಬರುವ ಹಾಗಾಯಿತು. ಇನ್ನು ಒಂದೇ ಒಂದು ಕ್ಷಣ ನಿಂತಿದ್ದರೂ ಬಿದ್ದೇಬಿಡುತ್ತೇನೆ ಎಂದನಿಸಿತು. ಕೈಯಲ್ಲಿ ಹಸುಗೂಸಿದೆ ಎನ್ನುವುದನ್ನೂ ಮರೆತು ಮಗುವಿನ ತಲೆಯನ್ನು ಎದೆಗೆ ಅವುಚಿಸಿಕೊಂಡಿದ್ದ ಎಡಗೈಯಿಂದ ಅರವಿಂದನ ತೋಳನ್ನು ಹಿಡಿದುಕೊಳ್ಳಲು ಹೋದಳು. ಮಗುವಿನ ತಲೆಗೆ ಯಾವ ಆಧಾರವೂ ಇಲ್ಲದಂತಾಗಿ ಹಿಮ್ಮೀಟಿದಂತಾಗಿ ಜೋರಾಗಿ ಅಳತೊಡಗಿತು.
ಗುರುಪ್ರಸಾದ್ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್ಗಿವಿಂಗ್”ನ ಕೊನೆಯ ಕಂತು ನಿಮ್ಮ ಓದಿಗಾಗಿ
ಮೊಗಳ್ಳಿ ಗಣೇಶ್ ಬರೆದ ಈ ಭಾನುವಾರದ ಕತೆ
ಏನೊ ಆತಂಕ. ಒಂಟಿತನ. ಈ ಓದು ಕೂಡ ಉಪಯೋಗ ಇಲ್ಲ. ಬುದ್ದಿಗೆ ಬೆಲೆ ಇಲ್ಲ. ದಡ್ಡರಿಗೇ ಎಲ್ಲೆಡೆ ದೊಡ್ಡ ದೊಡ್ಡ ಪದವಿ. ಮೂರ್ಖರು ಮೂರ್ಖರನ್ನೆ ಬೆಳೆಸುತ್ತಾರೆ. ಈ ಜಾತಿ ಕೂಪದಲ್ಲಿ ನಾನು ಏನೇ ಆಗಿದ್ದರೂ ಅದೇ ಆಗಿರುತ್ತೇನೆ. ಅದಕ್ಕಾಗಿ ಯಾಕೆ ಇಷ್ಟೆಲ್ಲ ಹೋರಾಟ? ವಿದ್ವತ್ತು? ಮನುಷ್ಯತ್ವ… ಕೊನೆಗೂ ನನಗೇನು ಉನ್ನತ ಕೆಲಸ ಸಿಗುವುದಿಲ್ಲವಲ್ಲಾ ಎಂದು ಮಂಕಾಗಿದ್ದೆ. ವಿಶ್ವಾಸ ಕುಗ್ಗುತ್ತಿತ್ತು. ಅವನು ನನ್ನ ಅಪ್ಪ ನಾಲ್ಕನೆ ಬಾರಿಗೆ ಯಾವುದೊ ಒಂದು ಹೆಂಗಸ ಒಪ್ಪಿಸಿ ಕರೆತಂದು ಮನೆಯಲ್ಲಿ ಇಟ್ಟುಕೊಂಡಿದ್ದನಂತೆ.
ಮೊಗಳ್ಳಿ ಗಣೇಶ್ ಬರೆದ ಕಥೆ “ಅವಳು ಚಿಲುಮೆ”
ಒಂದೇ ಮನೆಯ ಹಲವು ಮನಗಳು….
ಫೋನಿನಲ್ಲಿ ವಿನಯನ ಜತೆ ಮಾತಾಡುತ್ತಿದ್ದವನು ಅಲಿಶಾ ಉಸಿರಾಡುತ್ತಿದ್ದಾಳಾ? ಆಕೆ ಮಾತಾಡುತ್ತಿದ್ದಾಳಾ? ಮೂವತ್ತು ಸೆಕಂಡುಗಳ ಕಾಲ ಆಕೆಯ ಉಸಿರಾಟ ಮತ್ತು ನಾಡಿಬಡಿತ ನೋಡಿ ಹೇಳು ಎಂದು ಅವನ ಪ್ರೋಟೊಕಾಲಿನಲ್ಲಿದ್ದಂತೆ ವಿನಯನಿಗೆ ಹೇಳುತ್ತಿದ್ದ. ವಿನಯ ‘ನಾನೂ ಒಬ್ಬ ಡಾಕ್ಟರು. ನನ್ನ ಹೆಂಡತಿಯೂ ಡಾಕ್ಟರು. ಅವಳಿಗೇನೂ ಆಗಿಲ್ಲ. ಅವಳಿಗೆ ತಕ್ಷಣ ಹೆರಿಗೆಯಾಗಬೇಕು. ನೀನು ತಕ್ಷಣ ಆ್ಯಂಬುಲೆನ್ಸ್ ಕಳಿಸಲಿಲ್ಲ ಎಂದರೆ ನಾನೇ ಡ್ರೈವ್ ಮಾಡಿಕೊಂಡು ಆಸ್ಪತ್ರೆಗೆ ಹೋಗುತ್ತೇನೆ’…
ಗುರುಪ್ರಸಾದ್ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್ಗಿವಿಂಗ್”ನ ಏಳನೆಯ ಕಂತು ನಿಮ್ಮ ಓದಿಗಾಗಿ