ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಹನಮಂತ ಹಾಲಿಗೇರಿ ಬರೆದ ಕತೆ
ಅವತ್ತೆ ಹುಚ್ಚರಾಮ ನಿಶ್ಚಯಿಸಿಬಿಟ್ಟ. ಅವ್ವಗೆ ಹೇಳಿ ತಾನು ಹ್ಯಾಂಗಾದರೂ ಮಾಡಿ ಯಾವ ಹೆಂಗ್ಸನ್ನಾದರೂ ಲಗ್ನ ಆಗಿ ಬಿಡಬೇಕು. ನಾಳೆಯೇ ಅವ್ವಳನ್ನು ಕೇಳಿಬಿಡಬೇಕು. ಅವ್ವ ಯಾರನ್ನಾದರೂ ತಂದು ನನಗೆ ಗಂಟು ಹಾಕಿಯೇ ಹಾಕುತ್ತಾಳೆ ಎಂಬ ಭರವಸೆಯೊಂದಿಗೆ ಆತ ಅವತ್ತು ಮಲಗಲು ಪ್ರಯತ್ನಿಸಿದ. ಆದರೆ ಮಲಗಲು ಪ್ರಯತ್ನಿಸಿದ್ದೆ ಬಂತು. ನಿದ್ದೆ ಹತ್ತಿರ ಸುಳಿಯಲಿಲ್ಲ.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಹನಮಂತ ಹಾಲಿಗೇರಿ ಬರೆದ “ಸಕಲರೋಳು ಲಿಂಗಾತ್ಮಾ ಕಾಣಾ” ಕಥೆ ನಿಮ್ಮ ಈ ಭಾನುವಾರದ ಓದಿಗೆ
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ
ವಿಚಾರ, ನಿಲುವುಗಳು, ಆಡಳಿತದ ಅನುಭವ ಇದೆಲ್ಲ ಏನೇ ಇದ್ದರೂ ಶಿವಗಾಮಿ ಹಣದ ವಿಚಾರದಲ್ಲಿ ಶುದ್ಧಹಸ್ತಳಾಗಿಯೇ ಉಳಿದಿದ್ದು, ಹೈ ಕಮಾಂಡ್ ತಂತ್ರಗಾರಿಕೆ, ರಾಜಕೀಯ ಪಕ್ಷಗಳು ಕೆಲಸ ಮಾಡುವ ರೀತಿ ನೀತಿಗಳಿಗೆ ಹೊಸಬರಾಗಿದ್ದರು. ಇವಳು ಸೇರಿದ್ದ ಪಕ್ಷದ ರಾಷ್ಟ್ರೀಯ ನಾಯಕಿಗೆ ಶಿವಗಾಮಿಯಷ್ಟು ವಿದ್ಯಾವಂತೆ, ಪ್ರತಿಭಾವಂತೆ ಚುನಾವಣಾ ರಾಜಕೀಯದಲ್ಲೂ ಗೆದ್ದುಬಿಟ್ಟರೆ ಒಂದಲ್ಲ ಒಂದು ದಿನ ತನಗೆ ಪ್ರತಿಸ್ಪರ್ಧಿಯಾಗಬಹುದೆಂಬ ಆತಂಕದಿಂದ ಬೇಕು ಬೇಕೆಂದೇ ಎರಡು ಕ್ಷೇತ್ರಗಳಿಂದ ಚುನಾವಣೆಗೆ ನಿಲ್ಲಿಸಿದಳು.
ಕೆ. ಸತ್ಯನಾರಾಯಣ ಅವರ “ಮನುಷ್ಯರು ಬದಲಾಗುವರೆ” ಕಥಾ ಸಂಕಲನದ “ಶಿವಗಾಮಿ ಬದಲಾದಳೆ?” ಕಥೆ
ಮೋಹನ್ ಮಂಜಪ್ಪ ಬರೆದ ಈ ಭಾನುವಾರದ ಕಥೆ
ದೂರದ ಕಲ್ಲುಬೆಂಚಿನ ಮೇಲೆ ಕೂತಿದ್ದ ಅಪ್ಪನ ದೃಷ್ಠಿ ಶೂನ್ಯದಿಂದ ಮರಳಿರಲಿಲ್ಲ. ಮನಸ್ಸು ಗತಕಾಲದ ಕಡೆಗೆ ಹೊರಳಿತು. ಇವಳನ್ನು ತುಂಬಾ ಇಷ್ಟಪಟ್ಟು ಕಟ್ಟಿಕೊಂಡಿದ್ದೆ. ಹೊಸದರಲ್ಲೆಲ್ಲಾ ಚೆನ್ನಾಗಿಯೇ ಇತ್ತು, ಅಥವಾ ಬಿಸಿಯಲ್ಲಿ ಗೊತ್ತಾಗಲಿಲ್ಲವೆನೋ!? ಮದುವೆ ಆದ ಆರು ತಿಂಗಳಿಗೆ, ಮಲ್ಲಿಗೆ ಹೂವು ತರಲು ಮರೆತೆನೆಂದು ಮಾಡಿದ ಹಗರಣ ಮನಸ್ಸನ್ನು ತುಂಬಾ ಕದಡಿಬಿಟ್ಟಿತು. ಅಂದಿನಿಂದ ಅವಳೇ ಬೇಡ ಸಾಕು ಎನ್ನುವ ವರೆಗೆ ಫ್ರಿಡ್ಜ್‌ನಲ್ಲಿ ತರಕಾರಿ ಇಲ್ಲದಿದ್ದರೂ, ಮಲ್ಲಿಗೆ ಹೂವು ಮಿಸ್ ಆಗದಂತೆ ನೋಡಿಕೊಂಡಿದ್ದು ನನಗಿನ್ನೂ ನೆನಪಿದೆ.
ಮೋಹನ್ ಮಂಜಪ್ಪ ಬರೆದ ಕಥೆ “ಹಣೆಬರಹ”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಇಂದ್ರಕುಮಾರ್ ಎಚ್.ಬಿ. ಬರೆದ ಕತೆ
ತನ್ನ ಮೇಲಿನ ಕೆಟ್ಟ ದೃಷ್ಟಿಗೆ ಹೊಲಸು ಮಾತಿಗೆ ತಕ್ಷಣವೇ ರಣಚಂಡಿಯಾಗಿ ಬಿಡುತ್ತಿದ್ದವಳು ಇತ್ತೀಚೆಗೆ ಮೌನಕ್ಕೆ ಶರಣಾಗತೊಡಗಿದ್ದು ಸರ್ಕಲ್ಲಿನಲ್ಲಿನ ಖಾಲಿ ತಿರುಗುವ ಜೀವಗಳಿಗೆ ಹೊಸ ಟಾಪಿಕ್ಕು ತಂದುಕೊಟ್ಟಿತ್ತು. ಕರಿಯಮ್ಮನ ಜೀವನದ ಅತಿ ಸಂಕಷ್ಟದ ದಿನಗಳು ಪ್ರಾರಂಭವಾಗಿಯೇ ಬಿಟ್ಟಂತೆ ಆಕೆಯ ಮಾತು ನಿಲುವು ಕೈಚಳಕ ಎಲ್ಲದರಲ್ಲೂ ಒಡಕು ಎದ್ದಿತ್ತು. ಹೋರಾಟದಿ ಕಟ್ಟಿಕೊಂಡ ಬಾಳು ವಿಲವಿಲ ಒದ್ದಾಡಿ ಸಾಯುತ್ತಿರುವಂತೆ ಆಕೆಗೆ ಭಾಸವಾಗತೊಡಗಿತು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಇಂದ್ರಕುಮಾರ್ ಎಚ್.ಬಿ. ಬರೆದ “ಚಾಕರಿಯಮ್ಮ” ಕಥೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಗುರುರಾಜ್ ಸನಿಲ್ ಬರೆದ ಕತೆ
ಅಷ್ಟು ಕೇಳಿದ್ದೇ ತಡ, ಇಬ್ಬರ ಮುಖಗಳೂ ಕಳೆಗುಂದಿದುವು. ವಿಶ್ವನನ್ನು ತಿರಸ್ಕಾರದಿಂದ ನೋಡಿ ಕೋಪದಿಂದ ಮುಖ ಗಂಟಿಕ್ಕಿದ ಮುಖ್ಯಸ್ಥ ರಪ್ಪನೇ ತಿರುಗಿ ಯಂತ್ರದತ್ತ ನಡೆದರೆ, ಸ್ಥಳಪುರಾಣ ಓದಿದವನೂ ಕೆಂಪಗಾಗಿ ‘ಓ ಅಲ್ಲಿ ಕಾಣಿಸ್ತಿದೆಯಲ್ಲಾ ಹೊಳೆ… ಅದರಾಚೆಗಿಂದು ರಿಜರ್ವ್ ಫಾರೆಸ್ಟ್ ಇವ್ರೇ! ಈ ಜಾಗವೂ ಅದ್ರೊಳಗೆ ಬರುತ್ತೆ ಹೌದಾದ್ರೂ ಆ ಕಾನೂನು ಬರೋ ಎಷ್ಟೋ ಮೊದ್ಲಿಂದ್ಲೂ ಈ ದೇವಸ್ಥಾನ ಇಲ್ಲಿತ್ತೆಂಬುದು ನಿಮ್ಗೆ ಗೊತ್ತಿತ್ತಾ…?
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಗುರುರಾಜ್ ಸನಿಲ್ ಬರೆದ “ಗುಡಿ ಮತ್ತು ಬಂಡೆ” ಕತೆ
ಸಚೇತನ ಭಟ್ ಅನುವಾದಿಸಿದ ಯಿ ಯುನ್ ಲಿ ಕತೆ “ಗಾಯ”
ಅವಳ ತಲೆಯಲ್ಲಿ ಯಾವತ್ತೋ ಓದಿದ್ದ “ವುಮನ್ ಇನ್ ಲವ್” ಪುಸ್ತಕದ ಸಾಲುಗಳು ಅಚ್ಚಳಿಯದಂತೆ ಕೂತಿದ್ದವು. ಪುಸ್ತಕದಲ್ಲಿ ಹುಡುಗಿಯೊಬ್ಬಳು ಯುದ್ಧಕ್ಕೆ ಹೊರಟಿರುವ ತನ್ನ ಪ್ರಿಯಕರನ ಜೊತೆಗೆ ಮಲಗುವದನ್ನು ನಿರಾಕರಿಸುತ್ತಾಳೆ. ಮುಂದೆ ಯುದ್ಧದಲ್ಲಿ ಅವನು ಸಾವನ್ನು ಪ್ರತಿ ದಿನ ಎದುರು ನೋಡುತ್ತಿರವಾಗ ಹಳೆಯ ನೆನಪಿನಿಂದಾಗಿ ದೇಹದ ಹಸಿವೆಯನ್ನು ತೀರಿಸಿಕೊಳ್ಳುವದು ಮಾತ್ರ ಅವನ ಗುರಿಯಾಗಿಬಿಟ್ಟರೆ ಎನ್ನುವ ಭಯ ಅವಳನ್ನು ಕಾಡಿತ್ತು.
ಸಚೇತನ ಭಟ್ ಅನುವಾದಿಸಿದ ಚೈನಾ ಮೂಲದ ಕಥೆಗಾರ್ತಿ ಯಿ ಯುನ್ ಲಿ ಕತೆ “ಗಾಯ”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಟಿ.ಎಸ್. ಗೊರವರ ಬರೆದ ಕತೆ
ಪದ್ಮಾಳ ಅತ್ತೆ, ಮಾವನಿಗೂ ಚಿಂತೆ ಮನೆ ಮಾಡಿತು. ತಮ್ಮ ವಂಶ ಬೆಳೆಸುವ ಕುಡಿ ಪಡೆಯಲು ಅದೇನು ಮಾಡಬೇಕೋ ತಿಳಿಯದಾಯಿತು. ದೇವರಾಜನಿಗೆ ಮತ್ತೊಂದು ಮದುವೆ ಮಾಡಿದರೆ ಹ್ಯಾಗೆ ಎನ್ನುವ ಆಲೋಚನೆ ಅವರಲ್ಲಿ ಮೊಳೆಯಿತು. ಕೆಲ ಸಂಬಂಧಿಕರು ಮದುವೆ ಮಾಡುವುದೇ ಸರಿಯೆಂದು ಸಲಹೆ ನೀಡಿದರು. ಇದು ಪದ್ಮಾಳ ಕಿವಿ ತಲುಪಿ ವಿಚಿತ್ರ ಸಂಕಟದಲ್ಲಿ ಮುಳುಗಿದಳು. ದಿನಪೂರ್ತಿ ಮಾತಿಲ್ಲದೆ ಚಿಂತೆಯಲ್ಲೇ ಮುಳುಗಿದಳು. ಲೋಕದ ಪರಿವೆಯನ್ನೇ ಮರೆಯತೊಡಗಿದಳು. ಟಿ.ಎಸ್. ಗೊರವರ ಬರೆದ ಕತೆ “ಕತ್ತಲಿನಾಚೆ”
ವಿಜಯಾ ಮೋಹನ್ ಬರೆದ ಈ ಭಾನುವಾರದ ಕತೆ
ಸ್ವಂತ ಅವಳ ಮನೆದೇವ್ರು ಮಲ್ಲಮ್ಮನ ಪೂಜೆಯೊಳಗೆ, ಕಾರ್ತಿಕ್‌ಮಾಸದಲ್ಲಿ ನಡೀತಿದ್ದ ತಿಂಗಳ ಪೂಜೇಲಿ ಸಂಜೆಯೊಳಗೆ ಹಾಡೇಳಲು ಕುಂತುಕೊಳ್ಳುತ್ತಿದ್ದ ಸಂಕಮ್ಮ ಪೂಜೆ ಮುಗಿಯುವ ತನಕವು ಅವಳ ಗೆಳತಿಯರ ಜೊತೆ, ಶೃತಿ ಸೇರಸ್‌ಕೊಂಡು ಹೇಳ್‌ತಿದ್ದವಳನ್ನ, ಅಮ್ಮ ಸಾಕು ನಡೀರ್ರೆ ನಿದ್ದೆ ಬರ್‍ತೈತೆ ಅಂದ್ರು ನಿಲ್ಲಸ್ದಂಗೆ ಹೇಳಿ ಹೇಳಿ ದಣಿದು ಬಂದು ಮಲಗುತ್ತಿದ್ದವಳ ಹಾಡುಗಳನ್ನ ಈಗೀಗ ಅಷ್ಟಾಗಿ ಯಾರೂ ಕೇಳಿಸಿಕೊಳ್ಳದಾದರು…
ವಿಜಯಾ ಮೋಹನ್ ಬರೆದ ಹೊಸ ಕತೆ “ಹಾಡು” ಈ ಭಾನುವಾರದ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಕತೆ: ನಕ್ಕ ನಗು
ಅವಳು ಹೀಗೆ ನಗಲು ಪ್ರಾರಂಬಿಸಿದಳೆಂದರೆ ಉಳಿದವರಿಗೆ ಗಾಬರಿಯಾಗುತ್ತಿತ್ತು. ನಕ್ಕು ಸುಸ್ತಾಗಿ ಕಣ್ಣ ತುದಿಯಿಂದ ಹರಿವ ನೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ, ಮುಖ ಕೆಂಪಗೆ ಮಾಡಿಕೊಂಡು, ನೂರರ ವೇಗದಲ್ಲಿ ಓಡುತ್ತಿರುವ ಗಾಡಿ ಸಡನ್ ಬ್ರೇಕ್ ಹಾಕಿದಂತೆ ಸುಮ್ಮನಾಗುತ್ತಿದ್ದಳು. ನಲವತ್ತೈದು ವರುಷದ ಅವಳ ದಾಂಪತ್ಯಕ್ಕೆ ವ್ಯಾಖ್ಯೆ ಬರೆದಂತೆ ಬಂಡೆಕಲ್ಲಿನಂತೆ ಕುಳಿತು ಬಿಡುತ್ತಿದ್ದಳು. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಬರೆದ ಕತೆ ‘ನಕ್ಕ ನಗು!