ಕಾವ್ಯಾ ಓದಿದ ಹೊತ್ತಿಗೆ: ಹೆಮಿಂಗ್ವೆ ಮತ್ತವರ ಪ್ಯಾರಿಸ್
“ಹೆಮಿಂಗ್ವೆ ತಮ್ಮ ಪ್ಯಾರಿಸ್ ದಿನಗಳ ಕುರಿತು ಬರೆದ ‘ಅ ಮೂವೆಬಲ್ ಫೀಸ್ಟ್’ ಪ್ರಕಟವಾಗಿದ್ದು ಅವರು ತೀರಿಕೊಂಡ ಬಳಿಕ, 1964ರಲ್ಲಿ. ಆದರೆ ಈ ಪುಸ್ತಕಕ್ಕೆ ಬೇಕಾದ ಸಾಮಗ್ರಿಯನ್ನು ಡೈರಿ ರೂಪದಲ್ಲಿ ಅವರು ಬರೆದಿದ್ದು 1920ರ ಆಸುಪಾಸಿನಲ್ಲಿ. ಅಂದರೆ ತಮ್ಮ ಪ್ರಥಮ ಕಾದಂಬರಿ ‘ದಿ ಸನ್ ಆಲ್ಸೋ ರೈಸಸ್’ಗಿಂಥ ಮೊದಲು. ಅವರು ಸಾವಿಗೆ ಶರಣಾಗಬೇಕೆಂದು ನಿರ್ಧರಿಸಿದ ಸಮಯದಲ್ಲಿ ಈ ಪುಸ್ತಕವನ್ನು ಇನ್ನೊಮ್ಮೆ ತಿದ್ದುತ್ತಿದ್ದರು ಎಂಬುದು…”
ಮೀರಾ ಪಿ.ಆರ್. ಬರೆದ ಈ ಭಾನುವಾರದ ಕಥೆ: ಮೌನ
‘ಅದ್ಯಾಕೋ ಅಜ್ಜಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ತೀರಾ ಅಸಮಾಧಾನವಿತ್ತು. ತಾತನೂ ಒಮ್ಮೊಮ್ಮೆ ಮಾವ ಸೈಕಲ್ ತೆಗೆದುಕೊಂಡು ಶಾಸ್ತ್ರಿಗಳ ಮನೆಗೆ ಹೊರಟ ಕೂಡಲೇ, ‘ಹೊರಟ ಇನ್ನು ಅಲ್ಲಿ ದಾಳ ಉರುಳಿಸೋಕ್ಕೆ‘ ಎಂದು ಗೊಣಗಿ ಈ ಸ್ನೇಹಕ್ಕೆ ಅಸಮ್ಮತಿ ಸೂಚಿಸುತ್ತಿದ್ದದ್ದು ನಮ್ಮ ಗಮನಕ್ಕೆ ಬಂದಿತ್ತು. ಮಕ್ಕಳಾದ ನಮಗೆ ಇದರ ಕುರಿತು ಹೀಗೆ ಅಸಹನೆ ಪಡುವಂಥದ್ದೇನಿದೆ ಎಂಬುದಂತೂ ತಿಳಿಯುತ್ತಿರಲಿಲ್ಲ.”
ಸಚೇತನ ಭಟ್ ಅನುವಾದಿಸಿದ ಜಪಾನಿನ ಹರುಕಿ ಮುರಕಮಿ ಕತೆ
“ಸಿಂಬೆಯಾಗಿ ಆನೆಯ ಲಾಯದ ಬಳಿ ಬಿದ್ದಿದ್ದ ಸರಪಳಿಯನ್ನು ನೋಡಿದಾಗ ನನಗೆ ದಟ್ಟ ಕಾಡಿನಲ್ಲಿರುವ ಪಾಳುಬಿದ್ದಿರುವ ಪುರಾತನ ಅರಮನೆಯ ನಿಧಿಯನ್ನು ಕಾಯುವ ಯಾವುದೋ ಒಂದು ದೈತ್ಯ ಸರ್ಪದ ನೆನಪಾಗಿ ಬೆಚ್ಚಿಬಿದ್ದೆ. ಆನೆಯಿಲ್ಲದ ಕೆಲವೇ ತಿಂಗಳುಗಳಲ್ಲಿ ಆ ಜಾಗ ನಿರ್ಜನವಾಗಿಯೂ, ವಿನಾಶಕಾರಿಯಾಗಿಯೂ ತೋರುತ್ತ, ಒಂದು ಅಸ್ವಸ್ಥ ದೈತ್ಯ ಮೋಡ…”
‘ಕಾವ್ಯಾ ಓದಿದ ಹೊತ್ತಿಗೆʼ: ಟಾಲ್ಸ್ಟಾಯ್ ಸೃಷ್ಟಿಸುವ ಹೆಣ್ಣು…
“ಇಂಥ ಪ್ರಶ್ನೆ ಬಂದಾಗಲೆಲ್ಲ ಆ ಕಾಲದಲ್ಲಿ ಹೆಂಗಸರು ಹಾಗೆಯೇ ಯೋಚಿಸುತ್ತಿದ್ದರು ಎಂಬ ವಾದ ಹೂಡಿ ಪ್ರಶ್ನಿಸಿದವರ ಬಾಯಿ ಮುಚ್ಚಿಸುವುದು ಸುಲಭ. ಆದರೆ ಎಲ್ಲ ಕಾಲದಲ್ಲೂ ಎಲ್ಲ ಬಗೆಯ ಹೆಣ್ಣುಗಳೂ, ಗಂಡುಗಳೂ ಇರುವುದು ಸೃಷ್ಟಿ ನಿಯಮ. ಲೇಖಕರಾಗಿ ಯಾರ ಕಥೆಯನ್ನು ನಾವು ಹೇಳಲು ಆಯ್ದುಕೊಳ್ಳುತ್ತೇವೆ ಮತ್ತದನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದು..”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅನಿತಾ ನರೇಶ್ ಮಂಚಿ ಬರೆದ ಕಥೆ
“ತಮ್ಮದೇ ಪ್ರಾಯದ ತಿಮ್ಮಕ್ಕ ಜೊತೆಯಾದಾಗ ಇಬ್ಬರೂ ಹಳೆಯ ಹೊಸ ಸುದ್ದಿಯನ್ನು ಮಾತನಾಡುತ್ತಾ ದೇವರನ್ನೂ ಮರೆತರು. ಉದ್ದದ ಊಟದ ಹಂತಿಯಲ್ಲಿ ಬಡಿಸುತ್ತಾ ಬರುವಾಗ ಪಾತಕ್ಕನ ಕಣ್ಣು ಮುಂಡಿಗಾಗಿ ಅರಸುತ್ತಿತ್ತು. ಬೀಟ್ರೂಟ್, ಕ್ಯಾಬೇಜು, ದೊಣ್ಣೆ ಮೆಣಸು, ಬದನೆ ಸೌತೆ ಇಂತದ್ದೇ ಕಂಡಿತು ವಿನಃ ಮುಂಡಿಯ ತುಂಡುಗಳು ಕಾಣಿಸಲಿಲ್ಲ…”
ರಟ್ಟೀಹಳ್ಳಿ ರಾಘವಾಂಕುರ ಬರೆದ ಈ ವಾರದ ಕಥೆ: ಹೊರೆ
“ತಾನು ಕುಳಿತ ಬೆಂಚಿನ ಹಿಂದಿನಿಂದ ಸರಕ್ಕನೆ ಗಾಳಿ ಬೀಸಿದಂತಾಗಿ ಶಬ್ದವೂ ಆಯಿತು. ನೋಡಿದರೆ ನಾಯಿಯೊಂದು ಏನನ್ನೊ ಅಟ್ಟಿಸಿ ಹೋದಂತಾಯಿತು. ತನ್ನ ಪಾಲಿನ ಆಹಾರವನ್ನು ಇನ್ಯಾವುದೋ ನಾಯಿ ತಿನ್ನುತ್ತಿರುವುದನ್ನು ಕಂಡು ಕೆರಳಿದಂತಿತ್ತು. ಅದರ ನೆಗೆತದ ಓಟ ಹಾಗೂ ಗುರ್ಗುಟ್ಟುವ ಆಕ್ರಮಣಕಾರಿ ಶಬ್ದ ವಿರೋಧಿ ಬಣದ ನಾಯಿ ಕೇಳಿಸಿಕೊಂಡಿತು. ಪ್ಲಾಟ್ ಫಾರಂ ನಂಬರ್ ನಾಲ್ಕರಲ್ಲಿ ಮಲಗಿದ…”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅನಿತಾ ಪಿ ಪೂಜಾರಿ ತಾಕೊಡೆ ಬರೆದ ಕಥೆ
“ಕಾವ್ಯಳಿಗೆ ಅಪ್ಪನ ನೆನಪುಗಳು ಅತಿಯಾಗಿ ಕಾಡಿ ನೋಡಬೇಕೆಂದೆನಿಸಿದಾಗಲೆಲ್ಲಾ ಅವಳಾಸೆಯನ್ನು ಪೂರೈಸಲು ಸಹಕರಿಸುವುದು ಸೀತಾಫಲದ ಮರವೇ… ಇಂದವಳಿಗೆ ಅಪ್ಪ ಹೇಗೆ ಕೆಲಸ ಮಾಡುತ್ತಿದ್ದಾರೆಂದು ನೋಡುವ ಆಸೆಯಿತ್ತು. ಮರವನ್ನೇರಿದ ಐದು ನಿಮಿಷದಲ್ಲಿಯೇ ಕಾವ್ಯ ಅಪ್ಪ ಕೆಲಸ ಮಾಡುವ ‘ವುಡ್ಲ್ಯಾಂಡ್ಸ್’ ಹೊಟೇಲ್ ಎದುರುಗಡೆ ನಿಂತಿದ್ದಳು. ಅಪ್ಪ ಮಾತ್ರ ಕಾವ್ಯಳನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ.”
ಸುವರ್ಣ ಚೆಳ್ಳೂರು ಬರೆದ ಈ ಭಾನುವಾರದ ಕಥೆ ʼಗುರುತುʼ
“ಬಣವಿ ಹಾಕಿ ಕೈ ಸೋತಂಗಾದವು, ಬಿಸಲು ನೆತ್ತಿಗೆ ಬಂದು ನೆರಳೆಲ್ಲ ನೆಟ್ಟಗಾಗಿದ್ವು. ಹೊಲದ ಬದಿಗಿದ್ದ ಒಂದೆರಡು ಸೂರೆಪಾನ ಹೂವ್ವುಗಳಿಗೆ ದಿಕ್ಕು ತಪ್ಪಿದಂಗಾಗಿ ಮ್ಯಾಗ ಮೊಕ ಮಾಡಿಕ್ಯಂದು ನಿಂತಿದ್ವು. ಹುಲ್ಲು ಬಣವಿ ಹಾಕಿ ಸುರುಳಿ ಸುತ್ತಿ ಅವುಗಳ ನಡುವಿಗೆ ಉರಿಕೆನ್ನಿ ಬಿಗುತ್ತನಂಗ ಬಿಗುದು, ಒಂದರ ಮ್ಯಾಗೊಂದು ಹುಲ್ಲಿನ ದಂಡು ಸೇರಿಸಿ ದೊಡ್ಡ ಬಣವಿಗೆ ಕಮಾನಿನ ಆಕಾರ ಕೊಟ್ಟು, ನೆತ್ತಿ ಮ್ಯಾಗಳ ಬೆವರನ್ನ ಬೆರಳಿಂದ ಸವರಿ ಒರೆಸಿಗ್ಯಂದು…”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಆನಂದ ಋಗ್ವೇದಿ ಬರೆದ ಕಥೆ
“ಅದೆಷ್ಟು ಕಣ್ಣೀರು ಹೀಗೇ ಇಂಗಿಹೋಗಿವೆ, ಕಣ್ಣಾಲಿಯ ಒಳಗೇ ಒಣಗಿಹೋಗಿವೆ? ದೇವಸಾಗರದ ಜನ ಕರೆಯುವಂತೆ ಗೋಪಜ್ಜ ಆಗ ಗೋಪಜ್ಜನಾಗಿರಲಿಲ್ಲ. ದೇವರಕೆರೆಯ ಬಿಷ್ಟಪ್ಪನ ಮಗ ಗೋಪಾಲ ಆಗ ಹದಿಹರೆಯದ ಹುಡುಗ. ದೇವರಕೆರೆಯ ತೋಡಿನಿಂದ ಹರಿದ ನೀರನ್ನ ಕಟ್ಟಿಹಾಕಿ, ಒಂದೇ ರಾತ್ರಿಯಲ್ಲಿ ಹೊಲದ ಬದುವಿಗುಂಟ ಹರಿಸಿ, ಇಡೀ ಹೊಲ ನಳನಳಿಸುವಂತೆ ಮಾಡುವ ಕಸುವಿನವ!”