ಜಯಂತ ಕಾಯ್ಕಿಣಿ ಹೊಸ ಪುಸ್ತಕದಿಂದ ಒಂದು ಕತೆ
“ಅವ್ವನ ಸಿಡಿಮಿಡಿ, ಪ್ರತಿರೋಧ, ಆಘಾತ ಇವ್ಯಾವುದೂ ಕಾಣಿಸುವ ಸ್ಥಿತಿಯಲ್ಲೇ ಚಿತ್ತಿ ಇರಲಿಲ್ಲ. ಆಕಾಶದಿಂದಲೇ ತೂಗುಬಿದ್ದಿದ್ದ ಜೋಕಾಲಿಯೊಂದರ ಮೇಲೆ ಅವಳಾಗಲೇ ಕೂತುಬಿಟ್ಟಿದ್ದಳು. ಅದು ದಾಂಡೇಲಿಯಿಂದ ಬೆಳಗಾಂವ ತನಕ ಜೀಕುತ್ತಿತ್ತು. ನಡುವೆ, ಧಾರವಾಡದ ಕಿಲ್ಲೆಯ ನೆತ್ತಿಯನ್ನು ಚೂರು ಸವರಿ ಹೋಗುತ್ತಿತ್ತು.”
ಇತ್ತೀಚೆಗಷ್ಟೇ ಬಿಡುಗಡೆಯಾದ…
ಪೂರ್ಣಿಮಾ ಮಾಳಗಿಮನಿ ಕಾದಂಬರಿಗೆ ಕೇಶವ ಮಳಗಿ ಬರೆದ ಮುನ್ನುಡಿ
“ಬಾಲ್ಯದಲಿ ಕಂಡ ಹೊಂಗನಸು, ಕಿವಿ ತುಂಬಿದ ಶುದ್ಧಗಾಳಿ, ಷೋಷಕರ ನಿಸ್ವಾರ್ಥ ಪ್ರೀತಿ, ತಾನು ಏನೆಲ್ಲ ಆಗಿ ಬದುಕಬೇಕೆಂಬ ಅವಳ ಒಳಗಣ್ಣಿನ ಆಶೋತ್ತರಗಳು ಆಕೆಯ ಮನಸೋ-ಎದೆಯೋ ಎಂಥದ್ದೋ ಒಂದರಲಿ ಸಿಲುಕಿ ಉಸಿರುಗಟ್ಟಿದಂತೆ ಬದುಕುತ್ತಿರುವವಳು. ಒಂದು ಮುಕ್ತ, ನಿರಪೇಕ್ಷಿತ ನಿರ್ವಾಜ್ಯ ಪ್ರೇಮ ಬಯಸಿದವಳಿಗೆ ದೊರಕುತ್ತಿರುವುದು ಕಣ್ಗಾವಲಿನ, ನಿರೀಕ್ಷೆಗಳಿಂದ ತುಂಬಿದ ಪ್ರೀತಿ.”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಆನಂದ ಈ. ಕುಂಚನೂರ ಬರೆದ ಕಥೆ
“ನನಗೆ ಯಾಕೋ ಅತೃಪ್ತಿ. ಅಗಸಿ ಬಾಗ್ಲನ್ನು ನೆನಸಿಕೊಂಡಂತೆಲ್ಲಾ ನನ್ನ ಎದೆ ಇನ್ನೂ ಹಿಗ್ಗಿ ನನ್ನ ಕಲ್ಪನೆಗಳು ತಮ್ಮ ಬೇಲಿ ದಾಟಿದಂತೆನಿಸಿ ಪುಟಿದೇಳುತ್ತಿದ್ದೆ. ಮೊದಲ ಬಾರಿ ಕಡಲನ್ನು ಕಂಡಾಗ, ಕುತೂಹಲದಿಂದ ಬಾನಗಲನ್ನು ವೀಕ್ಷಿಸಿದಾಗ ಉಂಟಾಗಿದ್ದ ಅನುಭವ ಇಲ್ಲೂ ಒಡಮೂಡಿತು. ನಮ್ಮೂರು ಪಟ್ಟಣವಾದರೂ ಆಸಂಗಿ ಎಂಬ ಹಳ್ಳಿ ಅದಕ್ಕೆ ಅಂಟಿಕೊಂಡೇ ಇದೆ.”
ಸುಬ್ರಾಯ ಚೊಕ್ಕಾಡಿಯವರ ಆತ್ಮಕಥನದ ಆಯ್ದ ಭಾಗ
“ಆಗ ಪ್ರಗತಿಪರರು ಎನ್ನಿಸಿಕೊಂಡಿದ್ದ ಲೇಖಕರೊಬ್ಬರು ನಮ್ಮ ಹೆಸರುಗಳನ್ನೆಲ್ಲ ಸರಕಾರಕ್ಕೆ ಕೊಟ್ಟಿದ್ದರು. ಆದರೆ ಅಷ್ಟರಲ್ಲಾಗಲೇ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಂಡ ಕಾರಣ ನಮಗೇನೂ ತೊಂದರೆಯಾಗಲಿಲ್ಲ. ನಮ್ಮ ಗುಂಪಿನ ಉಳಿದವರೆಲ್ಲ ಸ್ವತಂತ್ರವಾಗಿ ಇದ್ದವರು. ನಾನು ಮಾತ್ರ ಸರಕಾರಿ ಕೆಲಸದಲ್ಲಿದ್ದ ಕಾರಣ ನಾನು ನನ್ನನ್ನು ರಕ್ಷಿಸಿಕೊಳ್ಳುವ ಅಗತ್ಯವಿತ್ತು. ಮನೆಯ ಪರಿಸ್ಥಿತಿಯೂ…”
ಮೊಗಳ್ಳಿ ಗಣೇಶ್ ಬರೆದ ಈ ಭಾನುವಾರದ ಕಥೆ
“ಹೌದಲ್ಲವೇ; ಇಷ್ಟೆಲ್ಲ ಆಯುಧಗಳಿಂದ ದಂಡಿಸುತ್ತಿರುವ ನಾವು ಅಪರಾಧಿ ಎಂದೆನಿಸಿದವರ ತಪ್ಪೇನು ಎಂದು ಅರಿಯದೇ ಇಷ್ಟು ಕಾಲ ದಂಡಿಸುತ್ತಲೇ ಬಂದಿದ್ದೇವಲ್ಲಾ… ತಿಳಿಯದೆ ಮಾಡಿದ ಹಿಂಸೆಯೂ ಹಿಂಸೆಯೇ ಅಲ್ಲವೇ… ಎಷ್ಟೊಂದು ತಲೆ ಕಡಿದೆವು… ಅರೆ ಜೀವ ಮಾಡಿ ಜೀವಂತ ಶವ ಮಾಡಿದೆವು… ಈಗಲೂ ಬಲಿಗಂಬದಲ್ಲಿ ಬಲಿಹಾಕುವ ನಮ್ಮ..”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅಮರೇಂದ್ರ ಹೊಲ್ಲಂಬಳ್ಳಿ ಬರೆದ ಕಥೆ
“ಸರ್ಕಾರಿ ಕೆಲಸ ಬಿಟ್ಟು ಮಗ ತನಗೆ ನಿರಾಸೆ ಮಾಡಿದಾಂತ ಕೊರಗಿ ನನ್ನಪ್ಪ ಸತ್ತನೋ ಅಥವಾ ಎಂದೋ ತೀರಿಕೊಂಡ ಹೆಂಡತಿಯ ನೆನಪು ಕಾಡಿದ್ದು ಹೆಚ್ಚಾಗಿ ಸತ್ತನೋ ಅಥವಾ ಕುಡಿತದ ದಾಸನಾಗಿ ಸತ್ತನೋ ನನಗರ್ಥ ಆಗಲಿಲ್ಲ. ಆದರೂ ಲೋಕಜ್ಞಾನ ಇರೋ ಮಗನ ನಿರ್ಧಾರ ಇಳಿವಯಸ್ಸಿನ ತಂದೇನ ಇಷ್ಟೆಲ್ಲ ಕಂಗೆಡಿಸಲಿಕ್ಕೆ ಸಾಧ್ಯಾನಾ? ಇದಂತೂ ನನಗೆ ಬಗೆಹರೀಲೇ ಇಲ್ಲ….”
ಗುರುಗಣೇಶ ಭಟ್ ಪುಸ್ತಕದ ಕುರಿತು ಆರ್. ವಿಜಯರಾಘವನ್ ಬರಹ
“ಈ ಕವಿಯ ನೋಟ ನೆಟ್ಟಿರುವುದು ಯಾವುದರ ಮೇಲೆ? ಮೊದಲ ಓದಿಗೇ ನಮಗೆ ತೋರುವುದು ಈತ ಬಿಟ್ಟ ಕಣ್ಣ ಮುಚ್ಚದ ಹುಡುಗನೆಂದು. ತನ್ನ ಸುತ್ತಲಿನ ಎಲ್ಲ ವಿದ್ಯಮಾನಗಳನ್ನೂ ಗಮನಿಸುತ್ತಲೇ, ತನಗೇನೂ ಆಗಬೇಕಿಲ್ಲವೆಂಬಂತೆ ನಟಿಸುತ್ತಲೇ ಈ ಬಗೆಯ ನಿರ್ಲಿಪ್ತತೆಯು ಆತ್ಮಘಾತುಕವೆಂಬ ಎಚ್ಚರವನ್ನು ಪ್ರಕಟಿಸುತ್ತಲೇ ಇರುವ ಕವಿ ಈತ.”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅಲಕಾ ಕಟ್ಟೆಮನೆ ಬರೆದ ಕಥೆ
“ಇದೇ ವಿಷಯವಾಗಿ ಆವತ್ತು ಅಜ್ಜಿ ಮತ್ತು ಶಣ್ಕೂಸಿನ ನಡುವೆ ಘನಘೋರ ಚರ್ಚೆ ನಡೆಯುತ್ತಿತ್ತು. ಹಾಗೆ ನೋಡಿದರೆ ಅಜ್ಜಿಯಷ್ಟು ಬಿಡುವು ಶಣ್ಕೂಸಿಗೆ ಇರುವುದಿಲ್ಲ. ಅವಳ ದೊಡ್ಡ ಮಗ, ಅಲ್ಲೇ ಸನಿಹದಲ್ಲಿ ಮಡದಿ-ಮಕ್ಕಳೊಂದಿಗೆ ಬೇರೆ ಸಂಸಾರ ಹೂಡಿದ್ದ. ಮಗಳನ್ನು ಘಟ್ಟದ ಕೆಳಗಿನ ಅಣ್ಣನ ಮಗನಿಗೆ ಮದುವೆ ಮಾಡಿಕೊಟ್ಟಿದ್ದಳು. ಈಗ ಅವಳೊಂದಿಗಿರುವ ಕಡೆಯ ಮಗ ಸಂಕನಿಗೆ ತಲೆಗೂದಲು..”
‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಭಾಗದ ಎರಡನೆಯ ಅಧ್ಯಾಯ
“ರಝುಮಿಖಿನ್ ಸರಿಯಾಗಿ ಒಂಬತ್ತು ಗಂಟೆಗೆ ಬಕಲೇವ್ ವಸತಿಗೃಹಕ್ಕೆ ಬಂದ. ಇಬ್ಬರು ಹೆಂಗಸರೂ ಬಹಳ ಹೊತ್ತಿನಿಂದ ಅವನು ಬರುವುದನ್ನೇ ಕಾಯುತ್ತಾ ತಾಳ್ಮೆ ತಪ್ಪಿ ಹಿಸ್ಟೀರಿಯ ಬಂದವರ ಥರ ಆಗಿದ್ದರು. ಏಳು ಗಂಟೆಗೋ, ಅದಕ್ಕೂ ಮೊದಲೋ ಎದ್ದಿದ್ದರು. ಗುಡುಗು ಹೊತ್ತ ಮೋಡ ಕವಿದಂಥ ಮುಖ ಹೊತ್ತು ಬಂದಿದ್ದವನು ಅಡ್ಡಾದಿಡ್ಡಿಯಾಗಿ ತಲೆ ಬಾಗಿಸಿ ವಂದನೆ ಸಲ್ಲಿಸಿದ.”