ಬೆನ್ನ ಮೇಲೆ ಇಮಾರತಿನ ಭಾರ; ಒಡಲೊಳಗೊಂದು ಪುಟ್ಟ ಝರಿ
“ನಿನ್ನ ಹೆಸರೇನು?” ಎಂದು ಸಂತೆಯಲ್ಲಿ ತನ್ನ ಹೆಸರು ಕೇಳಿದ ತರುಣಿ ಬ್ಲಿಮುಂಡಾಳ ಹಿಂದೆ ಬಲ್ತಸಾರ್ ನಡೆದು ಬಂದಿದ್ದಾನೆ. ಆಕೆಯ ಮನೆಯಲ್ಲೇ ಇಬ್ಬರೂ ಒಂದಾಗಿ ಜೀವನ ನಡೆಸುತ್ತಿದ್ದಾರೆ. ಮೊದಲ ದಿನವೇ ಬ್ಲಿಮುಂಡಾಳ ವಿಚಿತ್ರ ಅಭ್ಯಾಸವನ್ನು ಬಲ್ತಸಾರ್ ಕಾಣುತ್ತಾನೆ. ರಾತ್ರಿಯೇ ಹಾಸಿಗೆಯ ಪಕ್ಕದಲ್ಲಿ ಬ್ರೆಡ್ಡಿನ ತುಂಡೊಂದನ್ನು ತೆಗೆದಿಟ್ಟುಕೊಂಡು ಮುಂಜಾನೆ ಕಣ್ತೆರೆಯುವ ಮೊದಲೇ ಬ್ಲಿಮುಂಡಾ ಆ ಬ್ರೆಡ್ಡನ್ನು ತಿಂದು ಮುಗಿಸಿಯೇ ಕಣ್ಬಿಡುತ್ತಾಳೆ.”
1998ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಪೋರ್ಚುಗೀಸ್ ಭಾಷೆಯ ಬರಹಗಾರ…
ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕಥೆ “ಕಲಗಚ್ಚು”
“ಆಗಲೂ ಹೀಗೇ ಇದ್ದಳು. ಸಂಜೆಗತ್ತಲ ಹೊತ್ತಲ್ಲಿ ನೂರು ಆಶೆಗಳನ್ನು ಹುಟ್ಟಿಸುವವಳು ಒಂದು ಸಂಜೆ ಇರುಳು ತಲೆಯ ಮೇಲಿದ್ದ ಕಲಗಚ್ಚಿನ ಬಕೆಟ್ಟನ್ನು ನನ್ನ ಮೇಲೆ ಬಗ್ಗಿಸಿದ್ದಳು. ಆಮೇಲೆ ಎಂದೂ ಬಂದಿರಲಿಲ್ಲ. ಮಾತೂ ಬಿಟ್ಟಿದ್ದಳು. ಗುರುತೇ ಇಲ್ಲದವಳಂತೆ ದೂರವಾದಳು. ನಾನೂ ಊರು ಬಿಟ್ಟು ದೂರ ಎಲ್ಲೆಲ್ಲೋ ಹೋದೆ. ಏನೆಲ್ಲಾ ಆದೆ. ಅವಳ ಮೇಲೇ ಮೊದಲ ಕತೆ ಬರೆದು ಹರಿದು ಹಾಕಿದೆ. ಆಮೇಲೆಯೂ ಕಥೆಗಳನ್ನು ಬರೆದೆ. ಕವಿಯೂ ಆದೆ.”
ಸೀಮಾರೇಖೆಯಿಲ್ಲದ ಮೂಢನಂಬಿಕೆಗಳು……!
“ಏವ್ಬರಿ ಸುತ್ತಮುತ್ತ ಕ್ರೈಸ್ತ ಜನಾಂಗದವರೆ ಬದುಕುತ್ತಿದ್ದರು, ಯಾರಾದರು ಸತ್ತಾಗ ಅವರ ಮನೆಯವರು ಅಂತ್ಯಸಂಸ್ಕಾರವನ್ನು ಮುಗಿಸಿ ಏವ್ಬರಿಯ ಚರ್ಚಿಗೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಕೆಲವರ ಮನೆಯಲ್ಲಿ ಸತ್ತವರ ಹೆಸರಿನ ಪೂಜೆ ಸಲ್ಲಿಸಿದ ಮೇಲೆಯೂ ಕೂಡ ಆತ್ಮ ಕಾಣಿಸಿದ ಅನುಭವವಾಗಿದೆ. ಅಂಥಹ ಸಮಯದಲ್ಲಿ ಚರ್ಚಿನ ಪಾದ್ರಿಯ ಸಲಹೆಯ ಮೇರೆಗೆ ಒಂದು ಪೂಜಿಸಿದ ಯಂತ್ರವನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಅದಾಗಿಯೂ ಸುತ್ತ ಮುತ್ತಲಿನ ಕೆಲವು ಊರುಗಳಲ್ಲಿ ಆತ್ಮಗಳು…”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಎಚ್. ಎಸ್. ಅನುಪಮಾ ಬರೆದ ಕಥೆ
“ಈಗ ನನಗೆ ಊಟಮಾಡುವ ಆಸೆ ಹುಟ್ಟಿದೆ ಯುವರ್ ಆನರ್. ನಾನು ಗೆದ್ದು ಉಪವಾಸ ನಿಲಿಸಬೇಕು. ಆಯಿ ಮಾಡುವ ಮೀನ್ಫ್ರೈ, ಪತ್ರೊಡೆ, ತಂಬ್ಳಿ, ದೊಡ್ನ ಎಲ್ಲ ನೆನಪಾಗುತ್ತಿದೆ. ಅವುಗಳ ರುಚಿ ಮರೆಯುವ ಮೊದಲು ಎಲ್ಲರ ಜೊತೆ ಕೂತು ಉಣ್ಣಬೇಕು ಅನಿಸುತ್ತಿದೆ. ಅಷ್ಟೇ ಅಲ್ಲ, ನಾನು ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವೆ. ಅವನ ಮದುವೆಯಾಗಬೇಕು. ಮಕ್ಕಳ ಹೆರಬೇಕು. ಸಂಸಾರ ಕಟ್ಟಿಕೊಳ್ಳಬೇಕು.”
ಕಾವ್ಯಾ ಓದಿದ ಹೊತ್ತಿಗೆ: ಹೆಮಿಂಗ್ವೆ ಮತ್ತವರ ಪ್ಯಾರಿಸ್
“ಹೆಮಿಂಗ್ವೆ ತಮ್ಮ ಪ್ಯಾರಿಸ್ ದಿನಗಳ ಕುರಿತು ಬರೆದ ‘ಅ ಮೂವೆಬಲ್ ಫೀಸ್ಟ್’ ಪ್ರಕಟವಾಗಿದ್ದು ಅವರು ತೀರಿಕೊಂಡ ಬಳಿಕ, 1964ರಲ್ಲಿ. ಆದರೆ ಈ ಪುಸ್ತಕಕ್ಕೆ ಬೇಕಾದ ಸಾಮಗ್ರಿಯನ್ನು ಡೈರಿ ರೂಪದಲ್ಲಿ ಅವರು ಬರೆದಿದ್ದು 1920ರ ಆಸುಪಾಸಿನಲ್ಲಿ. ಅಂದರೆ ತಮ್ಮ ಪ್ರಥಮ ಕಾದಂಬರಿ ‘ದಿ ಸನ್ ಆಲ್ಸೋ ರೈಸಸ್’ಗಿಂಥ ಮೊದಲು. ಅವರು ಸಾವಿಗೆ ಶರಣಾಗಬೇಕೆಂದು ನಿರ್ಧರಿಸಿದ ಸಮಯದಲ್ಲಿ ಈ ಪುಸ್ತಕವನ್ನು ಇನ್ನೊಮ್ಮೆ ತಿದ್ದುತ್ತಿದ್ದರು ಎಂಬುದು…”
ಮೀರಾ ಪಿ.ಆರ್. ಬರೆದ ಈ ಭಾನುವಾರದ ಕಥೆ: ಮೌನ
‘ಅದ್ಯಾಕೋ ಅಜ್ಜಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ತೀರಾ ಅಸಮಾಧಾನವಿತ್ತು. ತಾತನೂ ಒಮ್ಮೊಮ್ಮೆ ಮಾವ ಸೈಕಲ್ ತೆಗೆದುಕೊಂಡು ಶಾಸ್ತ್ರಿಗಳ ಮನೆಗೆ ಹೊರಟ ಕೂಡಲೇ, ‘ಹೊರಟ ಇನ್ನು ಅಲ್ಲಿ ದಾಳ ಉರುಳಿಸೋಕ್ಕೆ‘ ಎಂದು ಗೊಣಗಿ ಈ ಸ್ನೇಹಕ್ಕೆ ಅಸಮ್ಮತಿ ಸೂಚಿಸುತ್ತಿದ್ದದ್ದು ನಮ್ಮ ಗಮನಕ್ಕೆ ಬಂದಿತ್ತು. ಮಕ್ಕಳಾದ ನಮಗೆ ಇದರ ಕುರಿತು ಹೀಗೆ ಅಸಹನೆ ಪಡುವಂಥದ್ದೇನಿದೆ ಎಂಬುದಂತೂ ತಿಳಿಯುತ್ತಿರಲಿಲ್ಲ.”
ಸಚೇತನ ಭಟ್ ಅನುವಾದಿಸಿದ ಜಪಾನಿನ ಹರುಕಿ ಮುರಕಮಿ ಕತೆ
“ಸಿಂಬೆಯಾಗಿ ಆನೆಯ ಲಾಯದ ಬಳಿ ಬಿದ್ದಿದ್ದ ಸರಪಳಿಯನ್ನು ನೋಡಿದಾಗ ನನಗೆ ದಟ್ಟ ಕಾಡಿನಲ್ಲಿರುವ ಪಾಳುಬಿದ್ದಿರುವ ಪುರಾತನ ಅರಮನೆಯ ನಿಧಿಯನ್ನು ಕಾಯುವ ಯಾವುದೋ ಒಂದು ದೈತ್ಯ ಸರ್ಪದ ನೆನಪಾಗಿ ಬೆಚ್ಚಿಬಿದ್ದೆ. ಆನೆಯಿಲ್ಲದ ಕೆಲವೇ ತಿಂಗಳುಗಳಲ್ಲಿ ಆ ಜಾಗ ನಿರ್ಜನವಾಗಿಯೂ, ವಿನಾಶಕಾರಿಯಾಗಿಯೂ ತೋರುತ್ತ, ಒಂದು ಅಸ್ವಸ್ಥ ದೈತ್ಯ ಮೋಡ…”
‘ಕಾವ್ಯಾ ಓದಿದ ಹೊತ್ತಿಗೆʼ: ಟಾಲ್ಸ್ಟಾಯ್ ಸೃಷ್ಟಿಸುವ ಹೆಣ್ಣು…
“ಇಂಥ ಪ್ರಶ್ನೆ ಬಂದಾಗಲೆಲ್ಲ ಆ ಕಾಲದಲ್ಲಿ ಹೆಂಗಸರು ಹಾಗೆಯೇ ಯೋಚಿಸುತ್ತಿದ್ದರು ಎಂಬ ವಾದ ಹೂಡಿ ಪ್ರಶ್ನಿಸಿದವರ ಬಾಯಿ ಮುಚ್ಚಿಸುವುದು ಸುಲಭ. ಆದರೆ ಎಲ್ಲ ಕಾಲದಲ್ಲೂ ಎಲ್ಲ ಬಗೆಯ ಹೆಣ್ಣುಗಳೂ, ಗಂಡುಗಳೂ ಇರುವುದು ಸೃಷ್ಟಿ ನಿಯಮ. ಲೇಖಕರಾಗಿ ಯಾರ ಕಥೆಯನ್ನು ನಾವು ಹೇಳಲು ಆಯ್ದುಕೊಳ್ಳುತ್ತೇವೆ ಮತ್ತದನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದು..”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅನಿತಾ ನರೇಶ್ ಮಂಚಿ ಬರೆದ ಕಥೆ
“ತಮ್ಮದೇ ಪ್ರಾಯದ ತಿಮ್ಮಕ್ಕ ಜೊತೆಯಾದಾಗ ಇಬ್ಬರೂ ಹಳೆಯ ಹೊಸ ಸುದ್ದಿಯನ್ನು ಮಾತನಾಡುತ್ತಾ ದೇವರನ್ನೂ ಮರೆತರು. ಉದ್ದದ ಊಟದ ಹಂತಿಯಲ್ಲಿ ಬಡಿಸುತ್ತಾ ಬರುವಾಗ ಪಾತಕ್ಕನ ಕಣ್ಣು ಮುಂಡಿಗಾಗಿ ಅರಸುತ್ತಿತ್ತು. ಬೀಟ್ರೂಟ್, ಕ್ಯಾಬೇಜು, ದೊಣ್ಣೆ ಮೆಣಸು, ಬದನೆ ಸೌತೆ ಇಂತದ್ದೇ ಕಂಡಿತು ವಿನಃ ಮುಂಡಿಯ ತುಂಡುಗಳು ಕಾಣಿಸಲಿಲ್ಲ…”









