ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ
ತಮ್ಮ ಮನಸ್ಸಿನಲ್ಲಿ ಇದ್ದುದನ್ನು ಮೊದಲು ಮುಕುಂದರಾವ್ ಹೆಂಡತಿ ಬಳಿ ಹೇಳಿದರು. ಆಗ ಶ್ರೀ ವೇದ “ಅಲ್ಲರೀ, ಆಟೋದವರಿಗೆ ಹೆಣ್ಣು ಕೊಡುವುದಂದರೆ ನೆಂಟರಿಷ್ಟರು ಆಡಿಕೊಳ್ಳುವುದಿಲ್ಲವೇ, ಸಾಮಾನ್ಯವಾಗಿ ಆಟೋ ಡ್ರೈವರ್ಗಳ ಬಗ್ಗೆ ಕೆಲವರಿಗೆ ಏನೋ ಒಂದು ರೀತಿಯ ತಾತ್ಸಾರ ಭಾವ ಇರುತ್ತಲ್ಲವೇ, ಅಲ್ಲದೆ ಶ್ರಾವಣಿಗೂ ತುಂಬಾ ವಯಸ್ಸು ಆಗಿ ಹೋಗಿಲ್ಲ, ಇನ್ನೂ ಸ್ವಲ್ಪ ಕಾಯೋಣ, ಬನಶಂಕರಿ ಹುಡುಗ ಇನ್ನೂ ಏನು ಫೈನಲ್ ಮಾಡಿಲ್ಲ ಅಲ್ಲವೇ? ಅದು ಆದರೂ ಆಗಬಹುದಲ್ಲವೇ” ಎಂದಳು.
ವಸಂತಕುಮಾರ್ ಕಲ್ಯಾಣಿ ಬರೆದ ಕತೆ “ಸಮನ್ವಿತ”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಪದ್ಮನಾಭ ಭಟ್, ಶೇವ್ಕಾರ ಕತೆ
ಮಳೆಗಾಲವಾದ್ದರಿಂದ ಅಂಗಳದಲ್ಲಿ ಜಾರಿಕೆಯಾಗಿತ್ತು. ಎಚ್ಚರಿಕೆಯಿಂದ ನಡೆದು, ಬಾಗಿಲ ಮುಂದೆ ನಿಂತು, ಅತ್ತಿದ್ದ ಕಣ್ಣುಗಳನ್ನೆಲ್ಲ ಚೊಕ್ಕವಾಗಿ ಒರೆಸಿಕೊಂಡು “ಅತ್ತೆ..” ಎಂದು ಕರೆದೆ. ಎಷ್ಟೇ ತಡೆ ಹಿಡಿದಿದ್ದರೂ ಧ್ವನಿ ನಡುಗಿತು. ಬಾಗಿಲ ತೆಗೆದ ಅತ್ತೆ ಒಳಗೆ ಕರೆದು ಒಂದುಸಲ ನನ್ನ ಮೆಲಿಂದ ಕೆಳಗಿನವರೆಗೆ ನೋಡಿದವಳೇ “ಅಪ್ಪ ಹೊಡೆದ್ನಾ..?” ಕೇಳಿದಳು. ಮಾತಾಡಿದರೆ ಎಲ್ಲಿ ಅಳು ಬಂದು ಬಿಡುತ್ತದೇನೋ ಎಂದು `ಹೌದು’ ಎಂಬಂತೆ ತಲೆ ಅಲ್ಲಾಡಿಸಿ ಕೇಪಿನಡಬ್ಬ ಕೊಟ್ಟೆ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಪದ್ಮನಾಭ ಭಟ್, ಶೇವ್ಕಾರ ಕತೆ “ಕೇಪಿನ ಡಬ್ಬಿ”
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಡಾ. ಪಾರ್ವತಿ ಜಿ.ಐತಾಳ್ ಕತೆ
ನೀನು ಪುಟ್ಟ ಮಗುವಿದ್ದಾಗ ಎಂಥ ರಚ್ಚೆ ಹಿಡಿದು ಅಳುತ್ತಿದ್ದರೂ ಮನೆಯ ಮುಂದಿನ ಕೈತೋಟದಲ್ಲಿ ಪರ್ರೆಂದು ಹಾರುತ್ತ ಚೀಂವ್ ಚೀಂವ್ ಎನ್ನುತ್ತಿದ್ದ ಪುಟ್ಟ ಗುಬ್ಬಚ್ಚಿಗಳನ್ನು ನೋಡುತ್ತಲೇ ಅಳು ನಿಲ್ಲಿಸಿ ಜೋರಾಗಿ ನಗುತ್ತಿದ್ದೆ. ಈಗಲೂ ಕಿಟಕಿಯ ಹೊರಗೆ ಅವೇ ಸುಂದರ ಗುಬ್ಬಚ್ಚಿಗಳು ಚಿಲಿಪಿಲಿಗುಟ್ಟುತ್ತ ನಿನ್ನ ನೆನಪನ್ನು ಉಕ್ಕೇರಿಸುತ್ತಿವೆ. ನೀನು ನನ್ನ ತೋಳಲ್ಲೆ ಇದ್ದೀಯೇನೋ ಎಂಬ ಭ್ರಮೆಯನ್ನು ಹುಟ್ಟಿಸುತ್ತಿವೆ. ತೋಟದಲ್ಲಿ ಅರಳಿರುವ ಬಣ್ಣ ಬಣ್ಣದ ಹೂಗಳು ಕಣ್ಣುಗಳು ಹೋದಲ್ಲೆಲ್ಲ ನನ್ನನ್ನೇ ನಿಟ್ಟಿಸುತ್ತಿವೆ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಡಾ. ಪಾರ್ವತಿ ಜಿ.ಐತಾಳ್ ಕತೆ “ಬಲಿಪಶುಗಳು”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ನರೇಂದ್ರ ಪೈ ಕತೆ
ಈಗಲೂ ರಾತ್ರಿ ಎರಡೂವರೆ, ನಾಲ್ಕುಗಂಟೆಗೆಲ್ಲ ಒಮ್ಮೊಮ್ಮೆ ಎಚ್ಚರವಾದಾಗ ನಾನು ಆವತ್ತು ಎದೆ ಕಲ್ಲು ಮಾಡಿಕೊಂಡು ನಡೆದು ಬಂದುಬಿಟ್ಟ ಕ್ಷಣ ನೆನಪಾಗಿ ಇನ್ನು ಮಲಗುವುದು ಸಾಧ್ಯವೇ ಇಲ್ಲ ಎಂದು ಎದ್ದು ಕೂರುತ್ತೇನೆ. ಆವತ್ತು ನಾನು ಆ ಭಟ್ಟನ ಮಾತು ಕೇಳಿ ತಿರುಗಿ ನೋಡದೇ ಬಂದು ಬಿಡಬಾರದಾಗಿತ್ತು. ಅಷ್ಟು ಹತ್ತಿರದಿಂದ ಅಮ್ಮ, ಸುಚೀ, ಅಮ್ಮಿ ಮೂವರೂ ಸ್ಪಷ್ಟವಾಗಿ ನನ್ನನ್ನು ಕರೆದಿದ್ದು ಖಂಡಿತಾ ಸುಳ್ಳಲ್ಲ, ಭ್ರಮೆಯಲ್ಲ. ಅವರು ನನಗೆ ಮರಳಿ ಸಿಗುತ್ತಿದ್ದರೋ ಇಲ್ಲವೋ ಆ ಪ್ರಶ್ನೆ ಬೇರೆ.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ನರೇಂದ್ರ ಪೈ ಕತೆ “ಭೇಟಿ” ನಿಮ್ಮ ಓದಿಗೆ
ಗುರುರಾಜ್ ಕೆ. ಕುಲಕರ್ಣಿ ಬರೆದ ಈ ಭಾನುವಾರದ ಕತೆ “ಕಬ್ಬಿಗ.ai”
ಗುರುಗಳಿಗೆ ಈ ಕಬ್ಬಿಗ ತಂತ್ರಾಂಶ ಮಗುವಿನ ಕೈಯಲ್ಲಿ ಆಟಿಗೆ ಸಿಕ್ಕಂತಾಯಿತು. ಅವರು ಹೂವು, ಹಣ್ಣು, ಚಂದ್ರ, ಬೆಳದಿಂಗಳು, ದೀಪಾವಳಿ, ಯುಗಾದಿ ಕೊನೆಗೆ ಹೋಳಿ ಹುಣ್ಣಿಮೆಯ ಬಗ್ಗೆ ಕೂಡ ಪದ್ಯ ಬರೆಸಿದರು. ಪದ್ಯಗಳನ್ನು ಒಂದು ಷಟ್ಪದಿಯಲ್ಲಿ ಬರೆಸಿ, ಮತ್ತೊಂದು ಷಟ್ಪದಿಗೆ ಬದಲಾಯಿಸಿಸಿದರು.. ಎಲ್ಲಾ ಪದ್ಯಗಳೂ ಚನ್ನಾಗಿರುತ್ತಿರಲಿಲ್ಲವಾದರೂ, ಅದರ ಬದಲು ಮತ್ತೊಂದು ಪದ್ಯ ಕೆಲವೇ ಕ್ಷಣಗಳಲ್ಲಿ ತಯಾರಾಗುತ್ತಿದ್ದರಿಂದ ಗುರುಗಳಿಗೆ ತಂತ್ರಾಂಶದ ಬಗ್ಗೆ ಬಹಳ ಸಂತೋಷವಾಗಿತ್ತು.
ಗುರುರಾಜ್ ಕೆ. ಕುಲಕರ್ಣಿ ಬರೆದ ಕತೆ “ಕಬ್ಬಿಗ.ai”
ಎಸ್. ನಾಗಶ್ರೀ ಅಜಯ್ ಬರೆದ ಈ ಭಾನುವಾರದ ಕತೆ
ಆಹಹಹಾ, ಯಾಕಮ್ಮಣ್ಣಿ ಬಂದ್ಬಿಡು, ಅಯ್ಯೋ ಅಯ್ಯೋ ಅಯ್ಯೋ…., ಕೇಳಿಸ್ಕೊಂಡ್ಯೇನೋ ಕೆಪ್ರ, ಮನೆಹಾಳಿ, ಗೆಣಸು ಕೀಳು ಹೋಗು, ಚಿನಾಲಿ, ಚಂಗ್ಲು… ಹೀಗೆ ಅವಳ ಶಬ್ದಕೋಶದ ತುಂಬ ಆ ಪಾತ್ರದ ಮಾತುಗಳದ್ದೇ ಪಾರಮ್ಯ. ಕತ್ತೆ, ಕೋತಿ, ಗೂಬೆ ಎನ್ನುವ ಮೂರು ಪದದಿಂದಾಚೆ ಬೈಗುಳವೇ ಆಡಿ, ಕೇಳಿ ಗೊತ್ತಿಲ್ಲದ ಮನೆಯಲ್ಲಿ, ಇವಳ ಈ ಹೊಸ ವ್ಯಾಕರಣ, ಶಬ್ದಕೋಶ ಅಸಮಾಧಾನದ ಹೊಗೆ ಹಬ್ಬಿಸಿತ್ತು.
ಎಸ್ ನಾಗಶ್ರೀ ಅಜಯ್ ಬರೆದ ಈ ಭಾನುವಾರದ ಕತೆ “ಹೆಜ್ಜೆ ಮೂಡದ ಹಾದಿ” ನಿಮ್ಮ ಓದಿಗೆ
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ನಾಗರೇಖಾ ಗಾಂವಕರ ಕತೆ
ಕಪಿಲೆ… ಈಗಲೂ ಅದೇ ನೋವಿನ ದನಿ ಕೇಳಿದಂತಾಗುತ್ತಿದೆ. ಈ ನೋವಿನ ಮೂಲದಲ್ಲೂ ಆಕೆಯ ನೆನಪು. ಹೌದು ಆಕೆಯೂ ನನ್ನಂತೆ ಹೆಣ್ಣು. ಹೆಣ್ಣಿನ ನೋವು ಆ ಸೂಕ್ಷ್ಮ ಅವಳಿಗೆ ತಾನೆ ಅರ್ಥವಾಗೋದು. ಏನು ಮಾಡಲಿ.. ಏನು ಆಡಲಿ.. ಚಿಟಿಚಿಟಿ ಎನ್ನುತ್ತಿರುವ ತಲೆ, ಸುತ್ತಿದ ಬಟ್ಟೆ. ಆ ಡಾಕ್ಟರಮ್ಮ ಬರುವವರೆಗೂ ನಿಲ್ಲಬೇಕು. ಕಪಿಲೆ ಏನು ಮಾಡುತ್ತಿದ್ದಾಳೋ? ಬಾಣಂತಿ ಬೇರೆ..
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ನಾಗರೇಖಾ ಗಾಂವಕರ ಕತೆ “ಸ್ಟಾಕ್ಹೋಮ್ ಸಿಂಡ್ರೋಮ್”
ಡಾ. ಕೆ. ಎಸ್. ಗಂಗಾಧರ ಬರೆದ ಈ ಭಾನುವಾರದ ಕತೆ
ಹುಡುಗ ಹೋದ ಮೇಲೆ ಜಗನ್ನಾಥನಿಗೆ ಜೋಂಪು ಹತ್ತಿದಂತೆ ಆಯಿತು. ಎದ್ದು ಮಲಗುವ ಕೋಣೆಗೆ ಹೋದ. ಹಾಸಿಗೆಯ ಮೇಲೆ ಬಿದ್ದುಕೊಂಡ ಕೂಡಲೇ ಗಾಢವಾದ ನಿದ್ರೆ. ಅವನು ಸರಿಯಾಗಿ ನಿದ್ರೆ ಮಾಡಿದರೆ ಸಾಕೆಂಬ ಭಾವದಲ್ಲಿದ್ದ ರಾಧಾ ಸುಮ್ಮನೆ ನೋಡುತ್ತಾ ಗಂಡನಿಗೆ ತೊಂದರೆಯಾಗದಿರಲೆಂಬ ಕಾರಣದಿಂದ ಶ್ಯಾಮನನ್ನು ಪಕ್ಕದ ಕೋಣೆಯಲ್ಲಿ ಮಲಗಿಸಿದಳು.
ಡಾ. ಕೆ. ಎಸ್. ಗಂಗಾಧರ ಬರೆದ ಕತೆ “ಕನಸುಗಳು ಬೇಕೇ ಕನಸುಗಳು!”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮುಸ್ತಾಫ ಕೆ.ಎಚ್. ಬರೆದ ಕತೆ “ಕಂಚಿನಪುತ್ಥಳಿ”
ಶಹೀದ್ನ ಹುಟ್ಟುಹಬ್ಬಕ್ಕೆ ಮೂರು ದಿನ ಮುಂಚಿತವಾಗಿ ಕಂಚಿನ ಪುತ್ಥಳಿಯನ್ನು ಪಟ್ಟಣದಿಂದ ಇಡೀ ಸಂಪಿಗೆಪುರಕ್ಕೆ ಸಂಪಿಗೆಪುರವೆ ಕಾಣುವಂತೆ ಮೆರವಣಿಗೆಯ ಮೂಲಕ ಟೆಂಪೋದ ಮೇಲಿರಿಸಿ, ಮುಂದೆ ಪುಟ್ಟ ಪುಟ್ಟ ಮಕ್ಕಳು ದಫ್ ಬಡಿಯುತ್ತಾ, ಬೈತ್ ಹಾಡುತ್ತಾ ವಿಜೃಂಭಣೆಯಿಂದ ಗುಡಿಯ ಸಮೀಪ ತರಲಾಯಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮುಸ್ತಾಫ ಕೆ.ಎಚ್. ಬರೆದ ಕತೆ “ಕಂಚಿನಪುತ್ಥಳಿ”