ಪುಟ್ಟ ಪಾಪಿ ನಾನು
ನಾ ಅತ್ತಾಗ ಎದೆಗಪ್ಪಿ
ಹಾಲುಣಿಸಿದ ಯಾವ ಸ್ಪರ್ಶವೂ
ನನಗೆ ನೆನಪಿಲ್ಲ
ಅವಳು ಮಾಡಿಸಿದ
ಜಳಕದ ಬಿಸಿಯು
ನನಗೆ ನೆನಪಿಲ್ಲ
ತೆವಳುವಾಗ ನೋಡಿ
ಋಷಿಪಟ್ಟಳೆಂದರೆ
ಅದೂ ನೆನಪಿಲ್ಲ
ಮುದ್ದು ಮುದ್ದಾದ ಅಂಗಿಯ
ತೊಡಿಸಿದ್ದಳೆನೋ
ಅದಾವುದೂ ನನಗೆ ನೆನಪಿಲ್ಲ
ನನಗಿರುವುದೊಂದೆ ನೆನಪು
ಅವಳ ಚಿತೆಗೇರಿಸಿದ್ದು
ಬೆಂಕಿ ಅವಳ ಮೇಲೆ ಕುಣಿದಾಡುತ್ತಿತ್ತು
ಅದೊಂದೇ ನನಗುಳಿದ ನೆನಪು
ತನ್ನವರು ಮುಗಿಲೆತ್ತರಕ್ಕೆ ಕಿರುಚುತ್ತಿದ್ದರು
ಅವಳು ಮಾತು ಮೌನದಿಂದಲೆ ಉತ್ತರಿಸುತ್ತಿದ್ದಳು
ಪುಟ್ಟ ಪಾಪಿ ನಾನು
ಸೌಮ್ಯ ಕೆ.ಆರ್. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನವರು
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಡಿಗ್ರಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
sweet memories of everyone life
ತುಂಬಾ ಅದ್ಭುತವಾದ ಕವಿತೆ…ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವ ಹಾಗೆ ಮುಂದಿನ ದಿನಗಳಲ್ಲಿ ಈ ಹುಡುಗಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾಳೆ..ಹಾಗಾಗಲಿ ಎನ್ನುವ ಹಾರೈಕೆ ನನ್ನದು
ಧನ್ಯವಾದಗಳು ನಿಮಗೆ
ಉದಯೋನ್ಮುಖ ಕವಿಯತ್ರಿ…ಮೊದಲ ಪ್ರಯತ್ನದಲ್ಲೇ ಕಣ್ಣೀರು ತರಿಸಿದಳು..
Superb sister