Advertisement

Month: May 2024

ಸಲಕರಣೆಗಳನ್ನು ಅನ್ವೇಷಿಸುವ ಮನುಷ್ಯರ ಮನೋಲೋಕದ ಕತೆಯಿದು

ನ್ಯೂಯಾರ್ಕ್ ಸರ್ಕಾರ ಎ.ಸಿ. ವಿದ್ಯುತ್ ನ ಅಪಾಯದ ಕುರಿತು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿ, ಎಂಜಿನಿಯರುಗಳು ಮತ್ತು ತಜ್ಞರಿಂದ ಮಾಹಿತಿ ಕಲೆ ಹಾಕಿತು. ವೆಸ್ಟಿಂಗ್‌ಹೌಸ್‌ನ ಪರವಿದ್ದ ಎಂಜಿನಿಯರುಗಳು ಅಪಾಯವನ್ನು ಅಲ್ಲಗೆಳೆದರೆ, ಎಡಿಸನ್ ಪರವಿದ್ದ ತಜ್ಞರು ಎ.ಸಿ. ವಿದ್ಯುತ್ ವ್ಯವಸ್ಥೆಯನ್ನು ಮಾನವರನ್ನು ಅರೆಗಳಿಗೆಯಲ್ಲೇ ಕೊಲ್ಲಬಲ್ಲ ರಕ್ಕಸ ಶಕ್ತಿಯೆಂಬಂತೆ ಬಿಂಬಿಸಿದರು. ವೆಸ್ಟಿಂಗ್‌ಹೌಸ್ ಮತ್ತು ಎಡಿಸನ್ ನಡುವಿನ ಈ ವ್ಯಾವಹಾರಿಕ ಕದನದಲ್ಲಿ, ತಾನು ನಿರ್ಲಿಪ್ತನೆಂದು ಘೋಷಿಸಿಕೊಂಡ ಹೆರಾಲ್ಡ್ ಬ್ರೌನ್, ಎ.ಸಿ. ವಿದ್ಯುತ್ತಿನ ವಿರುದ್ಧ..”

Read More

ಸಂಧ್ಯಾರಾಣಿ ಸಿನಿ ಪುಸ್ತಕಕ್ಕೆ ಅಬ್ದುಲ್‌ ರಶೀದ್‌ ಬರೆದ ಮುನ್ನುಡಿ

ಕಣ್ಣು ಮುಚ್ಚಿಕೊಂಡು ಓದುವ ಹಾಗಿದ್ದರೆ ಸಿನೆಮಾ ನೋಡಬೇಕಾಗಿಲ್ಲ ಅನ್ನುವಷ್ಟು ಕಣ್ಣಿಗೆ ಕಟ್ಟುವ ಬರವಣಿಗೆಗಳು ಅವು. ಬರೀ ಕಣ್ಣಿಗೆ ಮಾತ್ರವಲ್ಲ. ಸಿನೆಮಾದ ಸದ್ದುಗಳನ್ನು ಕಿವಿಗೆ, ಭಾವಗಳನ್ನು ಮನಸ್ಸಿಗೆ, ಕ್ಯಾಮರಾದ ಕೋನಗಳನ್ನು ಮಿದುಳಿಗೆ ಮತ್ತು ಸಿನೆಮಾ ಕೊನೆಗೆ ಉಂಟುಮಾಡುವ ತರ್ಕಗಳನ್ನು ವೈಚಾರಿಕತೆಗೆ ಅಕ್ಷರಗಳಲ್ಲೇ ದಾಟಿಸಿಬಿಡುತ್ತಿದ್ದರು. ಎಲ್ಲೂ ತರ್ಕಗಳಿಲ್ಲ, ತಪ್ಪುವ ಎಳೆಗಳಿಲ್ಲ. ಸಿನೆಮಾ ಹೇಳುವುದನ್ನು ಪರದೆ ಎಳೆದ ಹಾಗೆ ಕ್ವಚಿತ್ತಾಗಿ ಹೇಳಿ ಮುಗಿಸಿ ಮುಂದಿನ ಹದಿನೈದು ದಿನಗಳಿಗಾಗಿ ಕಾಯುವಂತೆ ಮಾಡುತ್ತಿದ್ದರು. ಸಂಪಾದಕನೂ, ಓದುಗರೂ ಏಕಪ್ರಕಾರವಾಗಿ ಕಾಯುತ್ತಿದ್ದ ಕೆಲವೇ ಬರವಣಿಗೆಗಳಲ್ಲಿ ಸಂಧ್ಯಾರಾಣಿ ಅವರದ್ದೂ ಒಂದಾಗಿತ್ತು.
ಎನ್. ಸಂಧ್ಯಾರಾಣಿ ಬರೆದ ‘ಸಿನಿ ಮಾಯಾಲೋಕ’ ಪುಸ್ತಕಕ್ಕೆ ಅಬ್ದುಲ್‌ ರಶೀದ್‌ ಬರೆದ ಮುನ್ನುಡಿ

Read More

ಲಾಂಡೇಯ್: ಅಫ್ಘನ್ ಹೆಣ್ಣುಮಕ್ಕಳ ಅಕ್ಷರಸಮರ

ಲಾಂಡೇಯ್ ಸುತ್ತಲಿನ ಲೋಕದ ಕುರಿತಾದ ಗಹನ ವಿಚಾರಗಳನ್ನು, ಕಟುವಾಸ್ತವಗಳನ್ನು ಹಿಡಿದಿಡುವ ಮತ್ತು ಇತರರೊಂದಿಗೆ ಹಂಚಿಕೊಳ್ಳುವ ಮಾಧ್ಯಮ. ಹಾಗಾಗಿ, ಲಾಂಡೇಯ್ ರಚನೆಗಳು ನೋವಿನಿಂದ ಕೂಡಿರಬಹುದು ಅಥವಾ ಕಠೋರ ಟೀಕೆಯಿಂದ; ಹಾಸ್ಯದಿಂದ ತುಂಬಿರಬಹುದು ಅಥವಾ ವ್ಯಂಗ್ಯದಿಂದ. ಹಾಗೆಂದು, ಲಾಂಡೇಯ್ ಕೇವಲ ಬಂಡಾಯ ಕಾವ್ಯವೆಂದೇನೂ ಅಲ್ಲ; ಶೋಕ, ಪ್ರೇಮ, ದುರಂತಗಳೂ ಅದಕ್ಕೆ ಗ್ರಾಸವಾಗುವ ವಿಷಯವಾಗಬಹುದು. ಎಲ್ಲ ಕಾವ್ಯವೂ ಮೂಲದಲ್ಲಿ ಲಾಂಡೇಯ್ ತರವೇ ಅಲ್ಲವೇ – ಕರೆಯುವುದು…”

Read More

ಆಶಾ ಜಗದೀಶ್ ಬರೆದ ಈ ದಿನದ ಕವಿತೆ

“ಹಗಲಿಗೆ ಬಾಯಿ ತೆರೆದು ಕೂತಿರುವ
ಕರಿಗತ್ತಲ ಕಾಳ ರಾತ್ರಿಯೊಂದರ ಜಪಕ್ಕೆ
ಸೋಲುವ ಮನಸಾಗುವುದೇ ಸಾಕ್ಷಾತ್ಕಾರ
ಜಪಮಣಿಗಳು ಸ್ಪಟಿಕಶುದ್ಧವಾಗಿ ಹೊಳೆಯುತ್ತಿವೆ”- ಆಶಾ ಜಗದೀಶ್ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ