Advertisement

Month: May 2024

ಆಂಗ್ರೀ ಯೆಂಗ್ ಮ್ಯಾನ್ ಜಿಕೆಜಿ

ಜಿ.ಕೆ. ಗೋವಿಂದ ರಾವ್ ಅವರು ಅಪ್ಪಟ ನಾಗರಿಕ ಬದುಕಿಗೆ ಶ್ರೇಷ್ಠ ಮಾದರಿಯಾಗಿದ್ದರು. ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆಗಳ ಪ್ರಖರ ಪ್ರತಿಪಾದಕರಾಗಿದ್ದರು. ಆಡಂಬರದ ಸಾಮಾಜಿಕ ಸುಧಾರಣೆಗಳನ್ನು ಕೈಗೊಂಡು ಪ್ರಚಾರ ಗಳಿಸುವ ಮಠಮಾನ್ಯಗಳನ್ನು ನಿರ್ಭಿಡೆಯಿಂದ ಖಂಡಿಸುವಾಗ ಕೋಪಾವಿಷ್ಟ ವಿಶ್ವಾಮಿತ್ರನಂತಾಗುತ್ತಿದ್ದರು. ಅವರಿಗೆ ದೈವಗಳಲ್ಲಿ, ಅವತಾರಗಳಲ್ಲಿ ಯಾವ ನಂಬಿಕೆಯೂ ಇರಲಿಲ್ಲ; ಮತ್ಸ್ಯಾವತಾರ ಒಂದನ್ನು ಬಿಟ್ಟು!  -ಜಿ.ಕೆ. ಗೋವಿಂದ ರಾವ್  ನೆನಪುಗಳನ್ನು ಹಂಚಿಕೊಂಡಿದ್ದಾರೆ ಅಗ್ರಹಾರ ಕೃಷ್ಣ ಮೂರ್ತಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿ.ಆರ್.ಕಾರ್ಪೆಂಟರ್ ಬರೆದ ಕತೆ

ಅಲ್ಲೇ ನಿಂತು ಇವರ ಗೋಳಾಟಗಳನ್ನು ನೋಡುತ್ತ ಲೊಚಗುಟ್ಟುತ್ತಿದ್ದ ಮಾಸಲು ಬಣ್ಣದ ಖಾಕಿ ನಿಕ್ಕರಿನ ವ್ಯಕ್ತಿಯು ‘ಗೌಡರು ಸೇಟ್‌ಕೇಕ್ ಆಟ ಆಡಕ್ಕೆ ಮೈದಾನುಕ್ಕೆ ಹೋಗೌರೆ’ ಎಂದ. ಇಷ್ಟೊತ್ತೂ ಮನೆಯ ಒಳಗಿದ್ದು, ಕನ್ನಡಕದ ಮೂಲಕ ಜಗವ ನೋಡುತ್ತಿದ್ದ ಪದವಿಧರ ವ್ಯಕ್ತಿಯು, ಅವನ ಇಂಗ್ಲಿಷಿಗೆ ಜೋರಾಗಿ ನಗುತ್ತಾ ಹೊರಬಂದು, ‘ಸೇಟ್‌ಕೇಕ್ ಆಟ ಅಲ್ಲವೋ, ಅದು ಶೆಟಲ್‌ಕಾಕ್’ ಎನ್ನಲು ಖಾರದಪುಡಿ ಮೆತ್ತಿಸಿಕೊಂಡಿದ್ದ ಸಣ್‌ರಾಮ ‘ಕುಯ್, ಕುಯ್’ ಎನ್ನುವುದಕ್ಕೂ…

Read More

ಲಸಿಕೆ ಪರ-ವಿರೋಧಗಳ ನಡುವೆ ಹಬ್ಬ, ಮಳೆ, ಗಡಿ ತೆರವು

ಈ ಮಧ್ಯೆ ಒಳ್ಳೆಯ ಸುದ್ದಿಯೆಂದರೆ ಕೇಂದ್ರ ಸರಕಾರವು ದೇಶದ ಅಂತಾರಾಷ್ಟ್ರೀಯ ಗಡಿಯನ್ನು ತೆರೆಯುವುದಾಗಿ ಘೋಷಿಸಿದೆ. ರಾಜಕೀಯ ಬರಡು ವಾತಾವರಣದಲ್ಲಿ ಈ ಘೋಷಣೆ ಒಂದಷ್ಟು ಸಂಚಲನವನ್ನು ಹುಟ್ಟಿಸಿದೆ. ನವೆಂಬರ್ ತಿಂಗಳಿನಲ್ಲಿ ಕ್ರಿಸ್ಮಸ್ ಹಬ್ಬದ ತಯಾರಿ ಆರಂಭವಾಗುತ್ತ ಜನರೆಲ್ಲರೂ ಹಬ್ಬದಾಚರಣೆಯ ಗುಂಗಿಗೆ ಜಾರುತ್ತಾರೆ. ವರ್ಷವಿಡೀ ದುಡಿದು ವರ್ಷದ ಕಡೆಯಲ್ಲಿ ಬರುವ ಈ ಆಂಗ್ಲೋ-ಯೂರೋಪಿಯನ್ ಹಬ್ಬದ ಸಮಯಕ್ಕಾಗಿ ರಜೆಯನ್ನು ಕಾದಿರಿಸಿ ಕಾತರಿಸುತ್ತಾರೆ.

Read More

ಅಳುಕು… ಹುಳುಕು.. ತಳುಕು…

ಸ್ವಿದ್ರಿಗೈಲೋವ್‌ನನ್ನು ಭೇಟಿ ಮಾಡಲು ಧಾವಿಸುತ್ತಿದ್ದ ಅವನಿಂದ ಹೊಸದೇನನ್ನಾದರೂ ನಿರೀಕ್ಷೆ ಮಾಡಿದ್ದನೋ? ತಪ್ಪಿಸಿಕೊಳ್ಳುವ ಹೊಸ ದಿಕ್ಕು, ದಾರಿ? ಮುಳುಗುತ್ತಿರುವಾಗ ಹುಲ್ಲುಕಡ್ಡಿಯನ್ನೂ ಗಟ್ಟಿಯಾಗಿ ಹಿಡಿಯುತ್ತಾರೆ! ವಿಧಿಯೋ ಮತ್ತೇನೋ ಅವರಿಬ್ಬರನ್ನೂ ಒಟ್ಟಿಗೆ ತರುತ್ತಿತ್ತೋ? ಬರೀ ದಣಿವು, ಹತಾಶೆ ಇರಬಹುದು; ಸ್ವಿದ್ರಿಗೈಲೋವ್‍ ಅಲ್ಲದೆ ಬೇರೆ ಇನ್ಯಾರೋ ಅವನಿಗೆ ಬೇಕಾಗಿದ್ದು, ಈ ಕ್ಷಣದಲ್ಲಿ ಸ್ವಿದ್ರಿಗೈಲೋವ್ ಅಲ್ಲಿದ್ದಿರಬಹುದು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ತೀರಿಹೋದ ಗೋವಿಂದ ರಾವ್ ಕುರಿತು…

ಸಾಮಾಜಿಕ ವ್ಯವಸ್ಥೆಯ ಕಡೆಗೆ ಚಿಕಿತ್ಸಕ ನೋಟ ಹೊಂದಿದ್ದ, ತಪ್ಪುಗಳ ಕಂಡರೆ ಮನೆಯ ಹಿರಿಯರಂತೆ ಗದರುತ್ತಿದ್ದ ಜಿ.ಕೆ. ಗೋವಿಂದ ರಾವ್ ಇಂದು ತೀರಿಕೊಂಡರು. ಇಂಗ್ಲಿಷ್ ಪ್ರಾಧ್ಯಾಪಕರಾದ ಅವರು ನಾಟಕ, ಸಿನಿಮಾ, ಬರಹಗಳ ಜೊತೆ ಒಡನಾಟ ಹೊಂದಿದ್ದವರು‌. ಅದಕ್ಕೂ ಮಿಗಿಲಾಗಿ ಯುವಜನತೆಯ ಜೊತೆಗೆ ಸದಾ ಬೆರೆಯುತ್ತಿದ್ದವರು. ಚಿಂತಕ ಡಾ. ರಾಜೇಂದ್ರ ಚೆನ್ನಿ ತಮ್ಮ ಗೆಳೆಯನ ಕುರಿತ ನೆನಪುಗಳನ್ನು ಬರೆದಿದ್ದಾರೆ. ‌

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ