“ಹಳೆಯ ಪುಟಗಳಿಂದ…” ಸರಣಿಯಲ್ಲಿ ಡಾ. ರಾಜೇಂದ್ರ ಚೆನ್ನಿ ಬರಹ
ಅಂಗಡಿ ಎಂದರೆ ಒಂದು ಗುಡಿಸಲು. ಅದಕ್ಕೆ ಸಿನಿಮಾ ಟಿಕೇಟ್ ಕೌಂಟರ್‌ನಂಥ ಒಂದೇ ಕಿಟಕಿ. ಅದರ ಹಿಂದೆ ಮೆಕ್ಸಿಕೊ ದೇಶದವರಂಥ ಕಟೆದು ಮಾಡಿದಂತಹ ಮುಖದ ಗಿರಿಜಾ ಮೀಸೆಯ ಒಬ್ಬನು ಕುಳಿತಿದ್ದ. ಅವನು ಮಾತೇ ಆಡುತ್ತಿರಲಿಲ್ಲ. ಮುಖದ ಮೇಲೆ ಯಾವ ಭಾವವೂ ಇರಲಿಲ್ಲ. ಬೆರಳಿನಲ್ಲೇ ಇಷ್ಟು ರೂಪಾಯಿ ಎಂದು ತೋರಿಸುತ್ತಿದ್ದ. ಅಷ್ಟು ರೂಪಾಯಿ ಕಿಟಕಿಯಲ್ಲಿ ತೂರಿದರೆ ಆ ಕಡೆಯಿಂದ ಒಂದು ಗ್ಲಾಸ್ ನಲ್ಲಿ ಬಿಳಿ ಬಣ್ಣದ ದ್ರವವನ್ನು ಸುರಿದುಕೊಡುತ್ತಿದ್ದ. ಷೇಕ್ಸಪೀಯರ್ ಹೆಸರಿನಲ್ಲಿ ಅದನ್ನು ಗುಟುಕರಿಸಿದೆವು.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಡಾ. ರಾಜೇಂದ್ರ ಚೆನ್ನಿ ಬರಹ

