Advertisement

Month: April 2026

ನಡುವೆ ಹತ್ತಿದವರು ನಡುವೆಯೇ ಇಳಿದುಹೋದರು: “ದಡ ಸೇರದ ದೋಣಿ” ಸರಣಿಯಲ್ಲಿ ವಸಂತಕುಮಾರ್‌ ಕಲ್ಯಾಣಿ ಬರಹ

ಹೀಗೆ ಕಾಲ ಓಡಿತು. ಪತ್ರಗಳು ನಿಂತು ಹೋದವು. ಫೋನ್ ನಿಂತುಹೋಯಿತು. ಅವರವರ ಕೆಲಸದಲ್ಲಿ ಅವರವರು ಬ್ಯುಸಿ ಆದರು. ಓದು, ಕೆಲಸ ಹುಡುಕುವುದು, ಹಣಕಾಸಿನ ತಾಪತ್ರಯದಲ್ಲಿ ನಾವುಗಳು ಊರಿಗೆ ಹೋಗಿ ಬರುವುದು ಕಡಿಮೆಯಾಯಿತು. ಊರಿನಲ್ಲಿ ಮೊದಲು ದೊಡ್ಡ ದೊಡ್ಡಮ್ಮ, ನಂತರ ಹಿರಿಯಕ್ಕ ತೀರಿಕೊಂಡ ಸುದ್ದಿ ಹೇಗೋ ನಮ್ಮನ್ನು ತಲುಪಿತು. ಅಲ್ಲಿಗೂ ಇವಳು ಹೆಚ್ಚು ಹೋಗಿ ಬಂದು ಮಾಡುತ್ತಿರಲಿಲ್ಲ, ತನ್ನ ಗಂಡನ ಮುಂದೆ ತಾಯಿ ಮನೆಯ ಹೀನಾಯ ಪರಿಸ್ಥಿತಿ ಕಾಣಬಾರದೆಂದು ಭಾವಿಸಿ…. ಅವಳ ತಮ್ಮ ಹೆಂಡತಿಯೊಂದಿಗೆ ಕಿರಿಕಿರಿ ಮಾಡಿಕೊಂಡ. ಕುಡಿತ ಹೆಚ್ಚಾಯಿತು. ಬದುಕು ಮೂರಾ ಬಟ್ಟೆಯಾಯಿತು.
“ದಡ ಸೇರದ ದೋಣಿ” ಸರಣಿಯಲ್ಲಿ ವಸಂತಕುಮಾರ್‌ ಕಲ್ಯಾಣಿ ಬರಹ

Read More

ಮಾನ್ಸೂನ್ ಮಳೆ ಬಾಲ್ಯದ ನೆನಪುಗಳನ್ನು ಹೊತ್ತು ತರುವ ತೇರು: ಮಹಾಲಕ್ಷ್ಮೀ. ಕೆ. ಎನ್. ಬರಹ

ಬೆಚ್ಚಗಿನ ಸ್ವೆಟರ್, ರಾತ್ರಿ ಚಳಿಗೆ ಬೆಚ್ಚಗಿನ ಕಂಬಳಿ, ಮನೆಯ ಹೆಂಚಿನ ಮೇಲಿಂದ ಮಳೆ ನೀರು ಇಳಿಯುವ ಜೋಗುಳದಂತಹ ಶಬ್ದ, ಅಕ್ಕನ ಎಂಟು ತಿಂಗಳ ಮಗಳು ತೊಟ್ಟಿಲಿನಿಂದ ಹೊರಗೆ ತಿಳಿ – ಬಿಳಿ ಕಣ್ಣು ಬಿಟ್ಟು ಜಿಟಿಜಿಟಿ ಮಳೆಯ ರಭಸ ನೋಡುವ ಕುತೂಹಲದ ಕೂಸು. ಹಬೆಯಾಡುವ – ಹೊಗೆಯಾಡುವ ಸ್ನಾನದ ಮನೆ ಕಂಡರೆ ಸುಡುಸುಡು ನೀರನ್ನು ಒಂದೆರಡು ಕಡಾಯ ಮೈಮೇಲೆ ಸುರಿದುಕೊಳ್ಳುವ ಬಯಕೆ – ಹೊರಗಿನ ಕೆಲಸ ಮುಗಿಸಿ ಬಂದವರ ಮನಸ್ಸನ್ನು ಆಯಸ್ಕಾಂತದಂತೆ ಎಳೆಯುತ್ತಲೇ ಇರುತ್ತದೆ.
ಮಾನ್ಸೂನ್‌ ಕುರಿತು ಮಹಾಲಕ್ಷ್ಮೀ. ಕೆ. ಎನ್. ಬರಹ ನಿಮ್ಮ ಓದಿಗೆ

Read More

ರುಕ್ಮಣಮ್ಮಜ್ಜಿಯ ನೆನಪುಗಳು….: ಸುಮಾ ಸತೀಶ್ ಸರಣಿ

ಅಂಗಡೀಗೇ ಮಾರಾಕೆ ಮಾತ್ರ ನಮ್ಮಜ್ಜೀ ತಿಂಡೀಗ್ಳು ಮೀಸ್ಲಲ್ಲ. ಮಾರಾಕಿಂತ ರವಷ್ಟು ಜಾಸ್ತೀನೆ ದಾನ ಮಾಡ್ತಿತ್ತು. ಒಂದು ಬೇಸನ್ ತಿಂಡಿ ಮಾರಾಕಿಟ್ರೆ, ಎಲ್ಡು ಬೇಸನ್ ಅವ್ರಿವ್ರಿಗೆ ಕೊಡೋಕೇ ಸಾಲ್ತಿರ್ಲಿಲ್ಲ. ಆದ್ರೂ ಒಲೆ ಮುಂದೆ ಕುಂತ್ಕಣಾಕೆ ಎಂದ್ರೂ ಬ್ಯಾಸ್ರ ಪಟ್ಟಿದ್ದಿಲ್ಲ. ಪಕ್ಕದ್ ಮನ್ಯಾಗಿದ್ದ ವಾರ್ಗಿತ್ತೀಗೆ ಮನೆ ತುಂಬಾ ಮಕ್ಳು. ಅದ್ರಾಗೂ ಸಾಲಾಗಿ ಒಂಬತ್ತು ಹೆಣ್ಣುಮಕ್ಕಳು. ಅದ್ಕೇಯಾ ತಿಂಡೀ ತೀರ್ಥದಾಗೆ ಕೈ ಬಿಗಿ ಮಾಡ್ತಿದ್ರು. ನಮ್ಮಜ್ಜೀ ಜೀವ ನಿಲ್ತಿರ್ಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ಅಜ್ಜಿ ರುಕ್ಮಣ್ಣಮ್ಮನವರ ಕುರಿತು ಬರೆದಿದ್ದಾರೆ

Read More

ಬಲ್ಲಿರೇನು ಕಾಡ ಹಣ್ಣುಗಳ ರುಚಿಯ?: ರೂಪಾ ರವೀಂದ್ರ ಜೋಶಿ ಸರಣಿ

ಎಳೆಯ ಕಾಯಿಗಳು ಬಲಿತು, ಕರ್ರಗೆ ಹೊಳೆಯುವ ಆ ಹಣ್ಣುಗಳು ಕಣ್ಣಿಗೆ ಬಿದ್ದರೆ ಮುಗಿಯಿತು. ಸ್ಪರ್ಧೆಗೆ ಬಿದ್ದವರಂತೇ, ನುಗ್ಗಿ ನುಗ್ಗಿ ಹಣ್ಣುಗಳನ್ನು ಕೊಯ್ದು ಚಪ್ಪರಿಸುತ್ತಿದ್ದೆವು. ಹುಳಿಯ ಜೊತೆಗೆ ಸವಿ ಬೆರೆತ ಆ ಮಧುರ ರುಚಿ ನೆನೆದರೆ, ಈಗಲೂ ಬಾಯಲ್ಲಿ ನೀರೂರುತ್ತದೆ. ಈ ಕವಳಿ ಕಾಯಿ ಕೊಯ್ದರೆ, ಹಾಲಿನಂಥ ಜಿಗುಟು ವಸರುತ್ತದೆ. ಈ ಜಿಗುಟಿನಿಂದ ನಮ್ಮ ಅಂಗಿಯೆಲ್ಲ ಕಲೆಯಾಗಿ, ಮನೆಯಲ್ಲಿ ನಿತ್ಯ ಬೈಗುಳದ ಹೂ ತಲೆಗೇರುತ್ತಿತ್ತು. ಆ ರುಚಿ ಹಣ್ಣಿನ ಮುಂದೆ, ಬೈಗುಳ, ಬಡಿತ ಇವೆಲ್ಲ ಯಾವ ಲೆಕ್ಕದ್ದು ಹೇಳಿ?
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಐದನೆಯ ಕಂತು

Read More

ಅನ್ನ, ನೀರಿಗೇಕೆ ಅನಾದರ ತೋರುವಿರಿ?: ಬಸವನಗೌಡ ಹೆಬ್ಬಳಗೆರೆ ಸರಣಿ

ದಿನಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿಯೊಂದರ ಪ್ರಕಾರ 2019 ರಲ್ಲಿ ಜಗತ್ತಿನಾದ್ಯಂತ 93.1 ಕೋಟಿ ಟನ್‌ನಷ್ಟು ಆಹಾರ ಪೋಲಾಗಿದೆ! ಇದೇ ವರ್ಷ 69 ಕೋಟಿ ಜನರು ಆಹಾರದ ಕೊರತೆ ಎದುರಿಸಿದ್ದಾರೆ!! ಇದರಲ್ಲಿ ಮನೆಗಳಲ್ಲಿ ಪೋಲಾಗುವ ಆಹಾರದ ಪ್ರಮಾಣವೇ ಹೆಚ್ಚು ಎಂಬ ವರದಿಯಿದೆ. ಭಾರತದಲ್ಲಿ ಮನೆಗಳಲ್ಲಿ ಪೋಲಾಗುವ ಆಹಾರದ ಪ್ರಮಾಣ ವಾರ್ಷಿಕ ತಲಾವಾರು 50 ಕೆಜಿಯಷ್ಟು ಎಂದು ಅಂದಾಜಿಸಲಾಗಿದೆಯಂತೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ