ಚೆನ್ನೈ ಸೂಪರ್ ಕಿಂಗ್ಸ್ – ಸಿಎಸ್ಕೆ ಟೀಮಿನ ನಾಯಕ ಮಹೇಂದ್ರ ಸಿಂಘ್ ಧೋನಿಯವರ ಕೊಡುಗೆ ಅವರ ಟೀಮಿಗೆ ಈ ಸಲ ಬಹಳ ಅಪಾರವಾದದ್ದು. ಕಾಲಿಗೆ ಏಟು ಬಿದ್ದು ಅವರು ಕೊನೆಯ ತನಕ ಕುಂಟಿಕೊಂಡೇ ಆಡಬೇಕಾಯಿತು. ಅವರಿಗೆ ರವೀಂದ್ರ ಜಡೇಜ ಮತ್ತು ಮೊಯಿನ್ ಆಲಿಯಲ್ಲಿ ಇಬ್ಬರು ಒಳ್ಳೇ ಸ್ಪಿನ್ನರ್‌ಗಳಿದ್ದರು. ಜೊತೆಗೆ ಶ್ರೀಲಂಕಾದ ತೀಕ್ಷಣ, ಪಥಿರಾಣ ಎಂಬ ಯುವಕ ಬೋಲರ್‌ಗಳಿದ್ದರು. ಬ್ಯಾಟಿಂಗ್‌ನಲ್ಲಿ ರುತುರಾಜ್ ಗಾಯ್ಕ್ವಾಡ್, ಕಾನ್ವೆ, ರಾಯುಡು, ಶುಭಂ ದೂಬೆ ಮುಂತಾದ ಒಳ್ಳೆ ಆಟಗಾರರಿದ್ದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಈ ವರ್ಷದ ಐಪಿಎಲ್ ಕುರಿತ ಬರಹ ನಿಮ್ಮ ಓದಿಗೆ
ಐಪಿಎಲ್‌ನ 16 ನೆ ವರ್ಷದ ಟೂರ್ನಮೆಂಟ್ ಈ ವರ್ಷ ಅಮೋಘವಾಗಿ ಸಾಗಿತು. ಕ್ರಿಕೆಟ್ ಪ್ರಪಂಚದಲ್ಲಿ ಫ್ರಾಂಚೈಸಿ ಲೀಗ್‌ನಲ್ಲಿ ಐಪಿಇಲ್ ತನ್ನದೇ ಒಂದು ಅಗ್ರಗಣ್ಯ ಸ್ಥಾನ ಪಡೆದುಕೊಂಡಿದೆ. ಈ 15 ವರ್ಷದಲ್ಲಿ ವಿಶ್ವದಲ್ಲಿ ಎಲ್ಲಾ ಆಟಗಳು ಸೇರಿಸಿದಾಗ, ಫ್ರಾಂಚೈಸಿ ಲೀಗಿನಲ್ಲಿ ಐಪಿಎಲ್ ಎರಡನೇ ಸ್ಥಾನ- ಅಮೆರಿಕದ ಬೇಸ್ ಬಾಲ್ ಆದ ಮೇಲೆ ಎರಡನೇ ಸ್ಥಾನದಲ್ಲಿದೆ. ಇದು ಹೋಗುವ ರೀತಿ ನೋಡಿದರೆ, ಇನ್ನೆರೆಡು ವರ್ಷದಲ್ಲಿ ಐಪಿಎಲ್ ಮೊದಲನೇ ಸ್ಥಾನ ತಲುಪುವ ಸಾಧ್ಯತೆ ಇದೆ.
ಕ್ರಿಕೆಟ್‌ನ ಎಲ್ಲಾ ಆಟಗಾರರೂ ಪ್ರತಿ ವರ್ಷ ಭಾರತಕ್ಕೆ ಬಂದು ಐಪಿಎಲ್ ಆಡಲು ಕಾತುರರಾಗಿರುತ್ತಾರೆ. ಅವರೆಲ್ಲರಿಗೂ ಚೆನ್ನಾಗಿ ದುಡ್ಡು ಬರುತ್ತೆ! ಏಪ್ರಿಲ್ ಮತ್ತು ಮೇ ತಿಂಗಳು ಐಸಿಸಿ ಐಪಿಎಲ್‌ಗಾಗಿಯೇ ಮೀಸಲಾಗಿಟ್ಟಿದ್ದಾರೆ. ಆಗ ಬೇರೆ ಎಲ್ಲೂ ಕ್ರಿಕೆಟ್ ಆಟವಿರುವುದಿಲ್ಲ. ಶುರುವಾದಾಗ ಪಾಕಿಸ್ಥಾನದ ಆಟಗಾರರೂ ಇಲ್ಲಿಗೆ ಬಂದು ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದರು. ಆಮೇಲೆ ಅವರ ಜೊತೆ ಕ್ರಿಕೆಟ್‌ನ ಸಂಬಂಧ ಭಾರತ ಇಟ್ಟುಕೊಂಡಿಲ್ಲ.
ಹೋದ ವರ್ಷದ ಕೊನೆಯಲ್ಲಿ ಆಡಿದ ಟೀಮ್‌ಗಳು – ಗುಜರಾತ್ ಜೈಯನ್ಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) – ಈ ವರ್ಷದ ಮೊದಲನೇ ಪಂದ್ಯವನ್ನು ಶುರು ಮಾಡಿದರು. ಅದೇ ಟೀಮ್‌ಗಳು ಈ ವರ್ಷವೂ ಕೊನೆಯ ಹಂತವನ್ನು ತಲುಪಿದರು! ಆದರೆ ಹೋದ ಸಲ ಸೋತ ಚೆನೈನ ಸಿಎಸ್ಕೆ ಈ ಸರ್ತಿ ಗೆದ್ದು ಬೀಗಿತು. ದುರದೃಷ್ಟವಶಾತ್ ಗುಜರಾತ್‌ನ ಜಿಟಿ ಸೋಲನ್ನು ಅನುಭವಿಸಬೇಕಾಯಿತು. ಮಧ್ಯೆ ಮಳೆ ಬಂದ ಕಾರಣ 29, ಮೇ 2023 ಭಾನುವಾರದ ಫೈನಲ್ಸ್‌ಅನ್ನು ಮಳೆಯ ಕಾರಣದಿಂದ ಆಟವನ್ನು ರದ್ದು ಮಾಡಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗಿನ ಜಾವದವರೆಗೆ ಆಡಬೇಕಾಯಿತು. ಮತ್ತೆ ಮಧ್ಯೆ ಮಳೆಯ ಬಿದ್ದ ಕಾರಣದಿಂದ ಆಟವನ್ನು ಮೊಟುಕುಗೊಳಿಸಬೇಕಾಯಿತು. ಡಕ್ವರ್ತ-ಲೂಇಸ್ ಕೋಸ್ಟಕದ ಪ್ರಕಾರ ಗೆಲ್ಲುವುದಕ್ಕೆ ಸಿಎಸ್ಕೆಗೆ 15 ಓವರ್ಗೆ 171ರನ್ ಲಕ್ಷ್ಯವನ್ನು ಇಡಲಾಯಿತು. ಸಿಎಸ್ಕೆಗೆ ಗೆಲ್ಲಲು ಕೊನೆಯ 2 ಬಾಲ್‌ಗಳಲ್ಲಿ 10 ರನ್ ಹೊಡೆಯಬೇಕಾದ ಸ್ಥಿತಿ ಬಂತು. ಆಗ ರವೀಂದ್ರ ಜಡೇಜ 5ನೇ ಬಾಲಿನಲ್ಲಿ ಸಿಕ್ಸರ್ ಬಾರಿಸಿದರು. ಗೆಲ್ಲಲು ಬೇಕಾಗಿದ್ದ 4 ರನ್ ಅನ್ನು ಕೊನೆಯ ಬಾಲ್‌ನಲ್ಲಿ ಹೊಡೆದರು ಜಡೇಜ. ಹೀಗೆ ಪಂದ್ಯ ಅತ್ಯಂತ ರೋಚಕವಾಗಿ ಎರಡು ಟೀಮ್‌ಗಳೂ ಸೋಲು ಗೆಲುವಿನ ಛಾಯೆಯಲ್ಲಿ ಮುಳುಗಿ/ಎದ್ದು ಕೊನೆಗೆ ಜಯಮಾಲೆ ಸಿಎಸ್ಕೆ ಕೊರಳಿಗೆ ಬಿತ್ತು.
ಸುಮಾರು ಎರಡು ತಿಂಗಳು ಉರಿಯುವ ಬೇಸಿಗೆಯಲ್ಲಿ 10 ತಂಡಗಳು ಬೇರೆ ಬೇರೆ ನಗರಗಳಲ್ಲಿ ಆಡಿದರು. ಕಳೆದ ಎರಡು ವರ್ಷ, ಕೋವಿಡ್-19ರ ಪ್ರಭಾವದಿಂದ ಭಾರತದಲ್ಲಿ ಐಪಿಎಲ್ ಪಂದ್ಯಗಳು ದುಬೈನಲ್ಲಿ ಆಡಲಾಗಿತ್ತು. ಕೋವಿಡ್ ಬಂದ ಮೇಲೆ ಇದೇ ಮೊದಲಬಾರಿ ಭಾರತದಲ್ಲಿ ಆಡಿದ್ದರಿಂದ, ಪ್ರೇಕ್ಷಕರಲ್ಲಿ ಬಹಳ ಉತ್ಸಾಹ ತುಂಬಿತ್ತು. ಪ್ರತಿ ಕ್ರೀಡಾಂಗಣದಲ್ಲೂ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು.
ಒಟ್ಟು 10 ಟೀಮ್ಗಳು ಪಾಲ್ಗೊಂಡಿದ್ದವು.
ಬೆಂಗಳೂರು: ರಾಯಲ್ ಛಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ)
ಮುಂಬೈ: ಮುಂಬೈ ಇಂಡಿಯನ್ಸ್ (ಎಮ್ ಐ)
ರಾಜಸ್ಥಾನ: ರಾಜಸ್ಥಾನ್ ರಾಯಲ್ಸ್ (ಆರ್ ಆರ್)
ಕೊಲ್ಕೊತ: ಕೊಲ್ಕೊತ ನೈಟ್ ರೈಡರ್ಸ್ (ಕೆಕೆಆರ್)
ದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ)
ಗುಜರಾತ್: ಗುಜರಾತ್ ಟೈಟನ್ಸ್ (ಜಿಟಿ)
ಪಂಜಾಬ್: ಪಂಜಾಬ್ ಕಿಂಗ್ಸ್ (ಪಕಿ)
ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ (ಎಸ್ ಆರ್ ಎಚ್)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ)
ಲಕ್ನೊ: ಲಕ್ನೊ ಸೂಪರ್ ಜೈಂಟ್ಸ್ (ಎಲ್ ಎಸ್ ಜೆ)
ಯಥಾ ಪ್ರಕಾರ ವಿದೇಶಿ ಆಟಗಾರರಿಗೆ ಒಂದು ಟೀಮಿನಲ್ಲಿ ಕೇವಲ 4 ಆಟಗಾರರಿಗೆ ಮಾತ್ರ ಮೀಸಲಾಗಿಟ್ಟಿತ್ತು.
ಈ ಸಲ ಹೊರ ದೇಶದಿಂದ ಬಂದವರಲ್ಲಿ ಕೆಲವು ಪ್ರಸಿದ್ಧ ಹೆಸರುಗಳು:
ಸಿಎಸ್ಕೆ: ಧೋನಿ (ನಾಯಕ) ಬೆನ್ ಸ್ಟೋಕ್ಸ್, ದೇವನ್ ಕಾನ್ವಾಯ್, ಮೊಯೀನ್ ಆಲಿ, ಶ್ರೀಲಂಕೆಯ ಬೋಲರ್‌ಗಳಾದ ಪಥಿರಾಣ ಮತ್ತು ತೀಕ್ಷಣ, ಕೈಲಿ ಜಾಮ್ಸನ್.
ಡಿಸಿ: ಡೇವಿಡ್ ವಾರ್ನ್‌ರ್ (ನಾಯಕ), ರೈಲಿ ರೋಸ್ಸೊ, ಮಿಚೆಲ್ ಮಾರ್ಷ್ , ನೋರ್ಜೆ, ಫಿಲ್ ಸಾಲ್ಟ್, ಮುಸ್ಟಫಿಝೂರ್ ರೆಹ್ಮಾನ್.
ಜಿಟಿ: ಹಾರ್ದಿಕ್ ಪಂಡ್ಯ (ನಾಯಕ), ರಷೀದ್ ಖಾನ್, ಡೇವಿಡ್ ಮಿಲ್ಲರ್, ವಿಲಿಯಂಸನ್, ನೂರ್ ಅಹಮದ್.
ಕೆಕೆಆರ್: ಹರ್ಷಿತ್ ರಾಣ (ನಾಯಕ), ರಸಲ್, ಫರ್ಗೂಸನ್, ಸುನಿಲ್ ನಾರಾಯನ್, ಜೇಸನ್ ರಾಯ್, ಟಿಮ್ ಸೌತಿ
ಎಲ್ ಎಸ್ ಜೆ: ಕೆಎಲ್ ರಾಹುಲ್ (ನಾಯಕ), ಡಿ ಕಾಕ್, ಸ್ಟೊಯ್ನಿಸ್, ನವೀನ್ ಉಲ್ಹಕ್, ಮೈಯರ್ಸ್, ಪೂರಣ್, ಮಾರ್ಕ್ ವುಡ್.
ಎಮ್‌ಐ: ರೋಹಿತ್ ಶರ್ಮ ( ನಾಯಕ), ಟಿಮ್ ಡೇವಿಡ್, ಕೆಮರೂನ್ ಗ್ರೀನ್, ಬೆಹ್ರೆನ್ ಡಾರ್ಫ್, ಸ್ಟಬ್ಸ್, ಬ್ರೆವಿಸ್.
ಪಂಜಾಬ್: ಶಿಖರ್ ಧವನ್ (ನಾಯಕ), ಲಿವಿಂಗ್ಸ್ಟನ್, ಕ್ಯುರಾನ್, ಷಾರ್ಟ್, ಎಲ್ಲಿಸ್, ರಾಜಪಕ್ಷ.
ಆರ್ ಆರ್: ಸಂಜು ಸ್ಯಾಂಸನ್ (ನಾಯಕ), ಜೊಸ್ ಬಟ್ಲರ್, ಟ್ರೆಂಟ್ ಬೌಲ್ಟ್, ಜೇಸನ್ ಹೋಲ್ಡರ್, ಜಾಂಪ.
ಆರ್ ಸಿ ಬಿ: ಡೂಪ್ಲೆಸ್ಯ (ನಾಯಕ), ಮ್ಯಾಕ್ಸ್‌ವೆಲ್, ಪಾರ್ನೆಲ್, ಹಸರಂಗ, ಹೇಝಲ್ವುಡ್, ಬ್ರೇಸ್ವೆಲ್.
ಎಸ್ ಆರ್ ಏಚ್ : ಎಯ್ಡೆನ್ ಮಕ್ರಾಮ್ (ನಾಯಕ), ಜಾನ್ಸೆನ್, ಫಿಲಿಪ್ಸ್, ಬ್ರೂಕ್, ಕ್ಲಾಸೆನ್, ಹೊಸೆನ್.
ಈ ಸಲ ಆಡಿದವರಲ್ಲಿ ಕೆಲವು ವಿದೇಶಿ ಆಟಗಾರರು ಮತ್ತು ಅವರನ್ನು ಕೊಂಡುಕೊಂಡ ಮೊತ್ತ, ರೂಪಾಯಿಯಲ್ಲಿ.
ಸ್ಯಾಮ್ ಕ್ಯುರಾನ್ (18,25 ಕೋಟಿ)
ಕೆಮರೂನ್ ಗ್ರೀನ್ (17.50 ಕೋಟಿ)
ಬೆನ್ ಸ್ಟೋಕ್ಸ್ (16.25 ಕೋಟಿ)
ರಷೀದ್ ಖಾನ್ (15 ಕೋಟಿ)
ಹ್ಯಾರಿ ಬ್ರೂಕ್ (13.25 ಕೋಟಿ)
ಆಂಡ್ರೆ ರಸಲ್ (12 ಕೋಟಿ)
ಲಾಕಿ ಫರ್ಗೂಸನ್ (10 ಕೋಟಿ)
ಪೂರನ್ (16 ಕೋಟಿ)
ಕಗಿಸೋ ರಬಾಡ (9.25 ಕೋಟಿ)
ಲಿವಿಂಗ್ಸ್ಟನ್ (11.5 ಕೋಟಿ)
ಜೋಸ್ ಬಟ್ಲರ್ (10 ಕೋಟಿ)
ಷಿಮ್ರೋನ್ ಹಿಟ್ಮ್ಯರ್ (8.5 ಕೋಟಿ)
ಗ್ಲೆನ್ ಮ್ಯಾಕ್ಸ್‌ವೆಲ್ ( 11 ಕೋಟಿ)
ಡಿ ಕಾಕ್ (6.75 ಕೋಟಿ)
ಟಿಮ್ ಡೇವಿಡ್ (8.25 ಕೋಟಿ)
ಈ ವರ್ಷದ ಆಟದಲ್ಲಿ ಆರ್ ಆರ್ ಬಹಳ ಚೆನ್ನಾಗಿ ಶುರುಮಾಡಿದರು. ಅವರ ಟೀಮ್ ಮೊದಲ ವರ್ಷವೇ- 2008ರಲ್ಲಿ- ಐಪಿಎಲ್ ಕಪ್ ಗೆದ್ದರು. ಆಗ ಅವರ ಟೀಮಿನ ನಾಯಕ ಮತ್ತು ಕೋಚ್ ಆಸ್ಟ್ರೇಲಿಯಾದ ಸುಪ್ರಸಿದ್ಧ ಲೆಗ್-ಸ್ಪಿನ್ನರ್ ಶೇನ್ ವಾರ್ನ್ ಆಗಿದ್ದರು. ಶೇನ್ ವಾರ್ನ್ ಎರಡು ವರ್ಷದ ಹಿಂದೆ ಹಠಾತ್ತನೆ ಕಾಲವಾಸಿಯಾದರು. ಅವರ ನೆನಪಿನಲ್ಲಿ ಆಡಿದ ಆರ್‌ಆರ್ ಚೆನ್ನಾಗಿ ಆಡಿ ಅವರು ಪ್ಲೇ-ಆಫ್ ತಲುಪುವ ನಿರೀಕ್ಷೆಯಿತ್ತು. ಆದರೆ ಕೊನೆಯ ಒಂದೆರೆಡು ಮ್ಯಾಚ್‌ನಲ್ಲಿ ದುರದೃಷ್ಟವಷಾತ್ ಸೋತು ಅವರು ಕೊನೆಯ 4 ಟೀಮಿನಲ್ಲಿ ಬರಲಾಗಲಿಲ್ಲ, ಅವರ ಟೀಮಿನ ನಾಯಕ ಸಂಜು ಸ್ಯಾಂಸನ್, ಜೊಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಟ್ರೆಂಟ್ ಬೌಲ್ಟ್, ಜೇಸನ್ ಹೋಲ್ಡರ್ ಚೆನ್ನಾಗಿ ಆಡಿದರು.
ಮೇ 2023 ಭಾನುವಾರದ ಫೈನಲ್ಸ್‌ಅನ್ನು ಮಳೆಯ ಕಾರಣದಿಂದ ಆಟವನ್ನು ರದ್ದು ಮಾಡಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗಿನ ಜಾವದವರೆಗೆ ಆಡಬೇಕಾಯಿತು. ಮತ್ತೆ ಮಧ್ಯೆ ಮಳೆಯ ಬಿದ್ದ ಕಾರಣದಿಂದ ಆಟವನ್ನು ಮೊಟುಕುಗೊಳಿಸಬೇಕಾಯಿತು. ಡಕ್ವರ್ತ-ಲೂಇಸ್ ಕೋಸ್ಟಕದ ಪ್ರಕಾರ ಗೆಲ್ಲುವುದಕ್ಕೆ ಸಿಎಸ್ಕೆಗೆ 15 ಓವರ್ಗೆ 171ರನ್ ಲಕ್ಷ್ಯವನ್ನು ಇಡಲಾಯಿತು. ಸಿಎಸ್ಕೆಗೆ ಗೆಲ್ಲಲು ಕೊನೆಯ 2 ಬಾಲ್‌ಗಳಲ್ಲಿ 10 ರನ್ ಹೊಡೆಯಬೇಕಾದ ಸ್ಥಿತಿ ಬಂತು. ಆಗ ರವೀಂದ್ರ ಜಡೇಜ 5ನೇ ಬಾಲಿನಲ್ಲಿ ಸಿಕ್ಸರ್ ಬಾರಿಸಿದರು.
5 ಸಾರಿ ಐಪಿಎಲ್ ಗೆದ್ದ ಮುಂಬೈ ಇಂಡಿಯನ್ಸ್ (ಎಮ್‍ಐ) ಶುರುವಿನಿಂದ ಚೆನ್ನಾಗಿ ಆಡದೆ ಅವರು ಪ್ಲೇ-ಆಫ್ ತಲುಪುವ ಭರವಸೆ ಇರಲಿಲ್ಲ. ಆದರೆ ಕೊನೆಯ ಎರಡು ಮೂರು ಪಂದ್ಯದಲ್ಲಿ ಚೆನ್ನಾಗಿ ಆಡಿ ಪ್ಲೇ-ಆಫ್ ತಲುಪಿದರು. ಅವರ ಮುಖ್ಯ ಬ್ಯಾಟ್ಸ್ಮನ್‌ಗಳಾದ ಸೂರ್ಯಕುಮಾರ್ ( ಸ್ಕೈ), ಟಿಮ್ ಡೇವಿಡ್, ಕೇಮರೂನ್ ಗ್ರೀನ್, ತಿಲಕ್ ಅವರುಗಳು ಚೆನ್ನಾಗಿ ಆಡಿದ್ದರಿಂದ ಪ್ಲೆ-ಆಫ್ ತಲುಪಲು ಸಾಧ್ಯವಾಯಿತು. ಆದರೆ ಅವರು ಗುಜರಾತ್ ಟೈಟನ್ಸ್ ಟೀಮಿನ ಮೇಲೆ ಸೋತು ಟೂರ್ನಮೆಂಟಿನಿಂದ ಹೊರಬಿದ್ದರು. ಪಿಯೂಷ್ ಚಾವ್ಲರ ಒಳ್ಳೆ ಸ್ಪಿನ್ ಬೋಲಿಂಗ್ ಮಾಡಿದ್ದರಿಂದ ಅನೇಕ ಮ್ಯಾಚ್‌ಗಳು ಗೆಲ್ಲಲು ಸಾಧ್ಯವಾಯಿತು.
ಆರ್ ಸಿ ಬಿ ಗೆಲ್ಲುತ್ತಾರೆಂದು ಬಹಳ ನಿರೀಕ್ಷೆಯನ್ನು ಇಟ್ಟಿದ್ದರು ಅವರ ಅಭಿಮಾನಿಗಳು. ಆದರೆ ಪ್ರತಿವರ್ಷದಂತೆ ಅವರ ಕನಸು ಈ ಬಾರಿಯೂ ಇಡೇರಲಿಲ್ಲ. ಅವರ ಮುಖ್ಯ ಬ್ಯಾಟ್ಸ್ಮನ್‌ಗಳಾದ ವಿರಾಟ್ ಕೊಹ್ಲಿ, ಫಾಫ್ ಡ್ಯುಪ್ಲೆಸಿ ಮತ್ತು ಮ್ಯಾಕ್ಸ್‌ವೆಲ್ ಬಿಟ್ಟರೆ ಬೇರೆ ಯಾರೂ ರನ್ ಗಳಿಸುತ್ತಿರಲಿಲ್ಲ. ಅವರ ಬೊಲಿಂಗ್‌ನಲ್ಲೂ ಸಿರಾಜರನ್ನು ಬಿಟ್ಟರೆ ಬೇರೆ ಯಾರೂ ಅಷ್ಟು ಪ್ರತಿಭಾವಂತರಿರಲಿಲ್ಲ. ಆದ್ದರಿಂದ ಅವರ ಕನಸು, ‘ಈ ಸಾರಿ ಕಪ್ ನಮ್ಮದೇ’ ಮತ್ತೆ ಹುಸಿಯಾಗೇ ಉಳಿಯಿತು. ಆರ್ ಸಿ ಬಿ ಪ್ಲೇ-ಆಫ್‌ಗೇನೋ ಬಂದರು. ಅವರು ಶುರುವಿನಿಂದ ಚೆನ್ನಾಗಿ ಆಡದೆ, ಮಧ್ಯೆ ಎಚ್ಚೆತ್ತುಕೊಂಡು ಚೆನ್ನಾಗಿ ಆಡಿ ಪ್ಲೇ-ಆಫ್‌ಗೆ ಬಂದರು. ಅಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋತು ಹೋದರು.
ಗುಜರಾತ್‌ನ ಶುಭಮನ್ ಗಿಲ್ ಎರಡು ಶತಕಗಳನ್ನು ಬಾರಿಸಿ ಅವರ ಗೆಲುವಿಗೆ ಬಹುಮಟ್ಟಿಗೆ ಕಾರಣಕರ್ತರಾದರು. ಒಳ್ಳೆ ಆಟಗಾರರಿದ್ದ ಟೀಮ್‌ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ, ರಷೀದ್ ಖಾನ್, ಶುಭಮನ್ ಗಿಲ್, ಸಾಹ, ಡೇವಿಡ್ ಮಿಲ್ಲರ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಮಹಮದ್ ಶಮಿ ಮುಂತಾದವರು ಚೆನ್ನಾಗಿ ಆಡಿ ಫೈನಲ್ಸ್‌ಅನ್ನು ತಲುಪಲು ಸಹಾಯವಾಯಿತು.
ಚೆನ್ನೈ ಸೂಪರ್ ಕಿಂಗ್ಸ್ – ಸಿಎಸ್ಕೆ ಟೀಮಿನ ನಾಯಕ ಮಹೇಂದ್ರ ಸಿಂಘ್ ಧೋನಿಯವರ ಕೊಡುಗೆ ಅವರ ಟೀಮಿಗೆ ಈ ಸಲ ಬಹಳ ಅಪಾರವಾದದ್ದು. ಕಾಲಿಗೆ ಏಟು ಬಿದ್ದು ಅವರು ಕೊನೆಯ ತನಕ ಕುಂಟಿಕೊಂಡೇ ಆಡಬೇಕಾಯಿತು. ಅವರಿಗೆ ರವೀಂದ್ರ ಜಡೇಜ ಮತ್ತು ಮೊಯಿನ್ ಆಲಿಯಲ್ಲಿ ಇಬ್ಬರು ಒಳ್ಳೇ ಸ್ಪಿನ್ನರ್‌ಗಳಿದ್ದರು. ಜೊತೆಗೆ ಶ್ರೀಲಂಕಾದ ತೀಕ್ಷಣ, ಪಥಿರಾಣ ಎಂಬ ಯುವಕ ಬೋಲರ್‌ಗಳಿದ್ದರು. ಬ್ಯಾಟಿಂಗ್‌ನಲ್ಲಿ ರುತುರಾಜ್ ಗಾಯ್ಕ್ವಾಡ್, ಕಾನ್ವೆ, ರಾಯುಡು, ಶುಭಂ ದೂಬೆ ಮುಂತಾದ ಒಳ್ಳೆ ಆಟಗಾರರಿದ್ದರು. ಇದರ ಜೊತೆ ಧೋಣಿಯವರ ನುರಿತ ನಾಯಕತ್ವದಲ್ಲಿ ಗುಜರಾತ್ ಟೈಟನ್ಸನ್ನು ಎರಡು ಬಾರಿ ಸೋಲಿಸಿ, ಐಪಿಎಲ್ ಕಪ್ಪನ್ನು ಐದನೇ ಬಾರಿ ಗೆದ್ದರು. ಮುಂಬೈ ಮತ್ತು ಚೆನ್ನೈ ತಲಾ ಐದು ಸಲ ಐಪಿ ಎಲ್ ಟ್ರೋಫಿ ಗೆದ್ದಿದ್ದಾರೆ.
ಈ ವರ್ಷ ಆಡಿದ ಭರವಸೆಯುಳ್ಳ ಯಶಸ್ವಿ ಜೈಸ್ವಾಲ್, ರಿಂಕು ಸಿಂಘ್, ಶುಭಂ ದ್ಯೂಬೆ, ಸಾಯಿ ಸುದರ್ಶನ್, ರುತುರಾಜ್ ಗಾಯಕ್ವಾಡ್ ಮುಂತಾದರು ಮುಂದೆ ಭಾರತಕ್ಕೆ ಆಡುವ ನಿರೀಕ್ಷೆಯಿದೆ. ಇವರುಗಳ ಪ್ರತಿಭೆಯನ್ನು ಅರಿತು ಅದನ್ನು ಚೆನ್ನಾಗಿ ಕಾಪಾಡಿದರೆ ಮುಂದೆ ಇವರೆಲ್ಲಾ ಒಳ್ಳೆಯ ಆಟಗಾರರಾಗುವುದರಲ್ಲಿ ಸಂದೇಹವೇ ಇಲ್ಲ.
ಲಕ್ನೌ ಟೀಮಿನ ನಾಯಕ ಕೆ ಎಲ್ ರಾಹುಲ್ ಕಾಲಿಗೆ ಏಟು ಬಿದ್ದು ಅವರು ಶಸ್ತ್ರ ಚಿಕಿತ್ಸೆಗೆ ಇಂಗ್ಲೆಂಡಿಗೆ ಹೋಗಬೇಕಾಯಿತು. ವಿಲಿಯಂಸನ್ ಅವರಿಗೂ ಏಟು ಬಿದ್ದು ಅವರು ಮನೆಗೆ ತೆರಳಬೇಕಾಯಿತು. ಸಿಎಸ್ಕೆನ ಬೆನ್ ಸ್ಟೋಕ್ಸ್ ಒಂದು ಪಂದ್ಯದಲ್ಲಿ 15 ರನ್ ಹೊಡೆದರು. ಇನ್ನೊಂದರಲ್ಲಿ 1 ಓವರ್ ಬೋಲಿಂಗ್ ಮಾಡಿದರು. ಇದು ಅವರ ಈ ವರ್ಷದ ಕೊಡುಗೆ. 16 ಕೋಟಿ ಕೊಟ್ಟು ಅವರನ್ನು ಖರೀದಿ ಮಾಡಿದ್ದರು ಸಿಎಸ್ಕೆ!
ಈ ವರ್ಷದಲ್ಲಿ ಬಹುಮಾನ ಗಳಿಸಿದ ಟೀಮ್ /ಆಟಗಾರರು:
ಐಪಿಎಲ್ ವಿಜೇತ ಟೀಮ್: ಚೆನ್ನೈ ಸೂಪರ್ ಕಿಂಗ್ಸ್
ಗುಜರಾತ್ ಟೈಟನ್ಸ್: ಎರಡನೇ ಸ್ಥಾನ.
ಎಲ್ಲರಿಗಿಂತ ಹೆಚ್ಚು ರನ್ ಮಾಡಿದವರು: ಆರೆಂಜ್ ಕ್ಯಾಪ್: ಶುಭಮನ್ ಗಿಲ್ (890 ರನ್)
ಎಲ್ಲರಿಗಿಂತ ಹೆಚ್ಚು ವಿಕೆಟ್ ಪಡೆದವರು: ಪರ್ಪಲ್ ಕ್ಯಾಪ್: ಮೊಹಮ್ಮದ್ ಶಮಿ (28 ವಿಕೆಟ್)
ಹೊಸಬರಲ್ಲಿ ಅತ್ಯುತ್ತಮ ಪ್ಲೇಯರ್: ಯಶಸ್ವಿ ಜೈಸ್ವಾಲ್
ಫ್ರಾಂಚೈಸಿ ಕ್ರಿಕೆಟ್‌ನ ಆಟ ಬಹಳ ಕಠಿಣವಾಗಿರುತ್ತೆ. ಎರಡು ತಿಂಗಳು ಬಿಸಿಲಲ್ಲಿ ಆಡಿ, ಮತ್ತೆ ಬೇರೆ ನಗರಕ್ಕೆ ಹೋಗಿ ತಕ್ಷಣವೇ ಆಡಬೇಕಾಗುತ್ತೆ. ಇದಕ್ಕೆ ಉತ್ತಮ ಆರೋಗ್ಯದ ಜೊತೆ ತಾಳ್ಮೆ, ಸಹಿಷ್ಣುತೆ ಬೇಕಾಗುತ್ತೆ. ಆಟದಲ್ಲಿ ಏರುಪೇರಾಗುವುದು ಸಹಜ. ಅದನ್ನು ಮರೆತು ಮತ್ತೆ ಒಳ್ಳೆಯ ಪ್ರದರ್ಶನ ನೀಡಲು ಪ್ರಯತ್ನ ಪಡಬೇಕು. ಇದರಲ್ಲಿ ಚೆನ್ನಾಗಿ ಆಡಿದವರು ಬಹಳಷ್ಟು ಹುಡುಗರು ಮುಂದೆ ಬಂದಿದ್ದಾರೆ. ಒಳ್ಳೆಯ ಆಟಗಾರನಿಗೆ ಆರ್ಥಿಕ ಸ್ಥಿತಿಯೂ ಬಹಳ ಬೇಗ ಸುಧಾರಿಸಬಹುದು. ಈ ತರಹ ಟೂರ್ನಮೆಂಟಿನಲ್ಲಿ ಪ್ರತಿ ವರ್ಷವೂ ಹೊಸ ಪ್ರತಿಭಾವಂತರನ್ನು ಹುಡುಕಿ ಆಡಲು ತರುತ್ತಾರೆ. ಅಂದರೆ ಪ್ರತಿಭೆ ಇದ್ದರೆ ಅವಕಾಶ ಸಿಕ್ಕೇ ಸಿಗುತ್ತೆ ಎಂದು ಆಯಿತು.
ಫಿಲಿಪ್ಸ್ ಕಂಪನಿಯಿಂದ ನಿವೃತ್ತರಾದ ನಂತರ ಮೈಸೂರಿನಲ್ಲಿ ನೆಲೆಸಿದ್ದಾರೆ. ಅವರು `ಶಂಕರ್ಸ್ ವೀಕ್ಲಿ’ಯಲ್ಲಿ ಹಾಸ್ಯ ಲೇಖನವನ್ನು ಬರೆಯುತ್ತಿದ್ದರು. ಈಗ ಅಪರಂಜಿ ಮಾಸಿಕ ಪತ್ರಿಕೆಗೆ ಹಾಸ್ಯ ಲೇಖನ ಬರೆಯುತ್ತಾರೆ. ಚುರುಮುರಿ, ಹಿಂದುಸ್ತಾನ್ ಟೈಮ್ಸ್, ಸಿಎನೆನ್ ಮತ್ತು ನ್ಯೂಸ್ ೧೮ ನಲ್ಲಿಯೂ ಅವರ ಲೇಖನಗಳು ಪ್ರಕಟವಾಗಿವೆ. ‘ಅಜ್ಜಿ ಮತ್ತು ಇತರ ಕತೆಗಳು’ ಅವರ ಪ್ರಕಟಿತ ಕೃತಿ.