ಇರದಾಗ ಇರಿದವರು
ಬಿದ್ದಾಗ ಬರದವರು
ಇದ್ದರು ಇರದ೦ತಿರುವವರು
ಕೂಡಿಟ್ಟರು ಕೊಡದವರು
ಬೆಳೆದರೆ ಬುಡ ಕಡಿಯುವವರು
ಗೆದ್ದಾಗ ಗುಮ್ಮನಂತೆ
ಬೆನ್ನ ಹತ್ತಿ ಬರುವವರು
ಹೆಣದ ಮೇಲಿನ ಶೃಂಗಾರದಷ್ಟೆ ನಿಗೂಢವಾಗಿ ಕಾಣುವರೇಕೆ?
ಇದ್ದಷ್ಟೆ ಇರುವರಂತೆ
ಕೊಟ್ಟಷ್ಟೆ ಕಾಯುವರಂತೆ,
ಪಡೆದಷ್ಟೆ ಪ್ರೀತಿಸುವರಂತೆ
ಕೂಡಿ ಕಳೆವ ಗುಣಿಸಿ
ಭಾಗಿಸುವ ಈ ಗಣಿತದಲ್ಲಿ
ಕೊನೆಗೆ ಸೊನ್ನೆಯಷ್ಟೆ ಸೀಮಿತವೇಕೆ?
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ