ಅರ್ಥಾರ್ಥ
ಪೇಟೆಯ ಧಾರಣೆ ದುರಾಸೆಗೆ
ಬಟವಾಡೆ ಆಗದೆ ಬೀದಿಪಾಲಾದ
ಹೂವುಗಳೆ, ಕೊಂಡು ತಂದು
ವಾರಕ್ಕೆ ಬೋರಾದ ವಸ್ತುಗಳೆ
ಹಣದ ಅರ್ಥವೇನು
ಷೇರುಪೇಟೆಯ ಗುಡ್ಡಗೆರೆಗಳೆ
ಹಾಳುಕೋಟೆಯ ಟಂಕಸಾಲೆಗಳೆ
ಯಾರು ಮುಟ್ಟದ ಹರಿದ ನೋಟುಗಳೆ
ಹಣದ ಅರ್ಥವೇನು
ಜೀವ ವಿಮೆ ಮಾಡಿಸಿ
ಸಾವಿಗೆ ನಮ್ಮ ಬದ್ಧರನ್ನಾಗಿಸಿದ
ಏಜೆಂಟರುಗಳೆ, ಕಟ್ಟಲಾಗದ
ಆಸ್ಪತ್ರೆ ಬಿಲ್ಲುಗಳೆ
ಹಣದ ಅರ್ಥವೇನು
ದೇವಸ್ಥಾನದ ದರಪಟ್ಟಿಗಳೆ
ಫಲಜ್ಯೋತಿಷ್ಯದ ಧನಲಾಭಗಳೆ
ಸನ್ಯಾಸಿಗಳ ಏಸಿ ಕಾರುಗಳೆ
ಹಣದ ಅರ್ಥವೇನು
ಪಾಲುವಿಭಾಗದ ಕರಾರುಪತ್ರಗಳೆ
ವೃದ್ಧರು ಕಾದಿರೋ ಪಿಂಚಣಿಗಳೆ
ಸಾಲದ ಬಾಬತ್ತಿನ ಸ್ತಿರಾಸ್ಥಿಗಳೆ
ಹಣದ ಅರ್ಥವೇನು
ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
I liked the way you teased out the dual meanings of ‘artha’ here. Enjoyed reading this poem 🙂👍🌸
Thank you so much sir 😊