Advertisement
ದಾಕ್ಷಾಯಣಿ ಮಸೂತಿ ಬರೆದ ಈ ದಿನದ ಕವಿತೆ

ದಾಕ್ಷಾಯಣಿ ಮಸೂತಿ ಬರೆದ ಈ ದಿನದ ಕವಿತೆ

ಖಾಲಿ ಬೊಗಸೆಯ ಹನಿಗಳು

ತೇಲುತ್ತಿವೆ
ಬಯಕೆಗಳ ಹೆಣಗಳು
ಖಾಲಿ ಬೊಗಸೆಯಲಿ

ಬೊಗಸೆಯೇನೂ
ಖಾಲಿಯಿದೆ
ತುಂಬಿಸುವ
ತವಕವೇ ಜೀವಂತ-
-ಇಲ್ಲವಷ್ಟೇ !

ಖಾಲಿ ಬೊಗಸೆ
ತುಂಬಿ ತುಳುಕುತ್ತಿದೆ
ಒಡೆದ ಹೃದಯದ
ಚೂರುಗಳಿಂದ

ಸಿಂಗರಿಸಿದೆ
ಖಾಲಿ ಬೊಗಸೆಯನ್ನು
ಕೆಂಪು ಕೆಂಪಾದ ಹೂಗಳಿಂದ
ಮೆತ್ತಿದ ರಕ್ತ ಕಲೆಗಳ
ಮರೆಮಾಚಲು

ದಿಟ್ಟಿಸಿದೆ
ಖಾಲಿಬೊಗಸೆಯನ್ನು
ಕಾರುಣ್ಯದ ಕಂಗಳಿಂದ
ಬೆಳಕೊಂದು ತುಂಬಿತು

ಕಿರುಬೆರಳ ಮೋಹ
ಖಾಲಿಬೊಗಸೆಗೆ
ಹರಿಯಿತು
ಈಗ ಚಿಟ್ಟೆಗಳ
ಕಲರವ!

ದಾಕ್ಷಾಯಣಿ ಮಸೂತಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಕುರುಗೋಡು ತಾಲ್ಲೂಕಿನ ಬಾದನಹಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ‌.
“ಊದ್ಗಳಿ” ಇವರ ಪ್ರಕಟಿತ ಕವನ ಸಂಕಲನ.

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. Harinath Babu V

    ಚಿಟ್ಟೆಗಳ‌ ಕಲರವಕವಿತೆಯ ತುಂಬಾ
    ಚೆನ್ನಾಗಿದೆ

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ