ನಿಸ್ಸಂಶಯವಾಗಿ ಕನ್ನಡದ ಕೆಲವೇ ಕೆಲವು ಮೇರು ಕಥನ ಪತಿಭೆಗಳಲ್ಲಿ ಡಾ. ರಾಜಶೇಖರ್ ನೀರಮಾನ್ವಿ ಒಬ್ಬರು. ಒಂದರ್ಥದಲ್ಲಿ ಅತ್ಯಂತ ಕಡಿಮೆ ಬರೆದ ನಮ್ಮ ಕಾಲದ ಬಹಳ ದೊಡ್ಡ ಲೇಖಕ. ಇನ್ನೊಂದರ್ಥದಲ್ಲಿ ಜೀನಿಯಸ್. ಸದಾ ಕಾಡುವ ಆ ನಿಗೂಢ ಗುಣ ಅವರ ಬರಹ ಮತ್ತು ಬದುಕಿಗಿರುವುದರಿಂದಲೇ, ಅವರನ್ನು ಮರೆಯುವುದು ಯಾರಿಗೂ ಅಷ್ಟು ಸುಲಭವಲ್ಲ!

ಇವರ ಒಂದು ಕಥೆಯನ್ನು ಆಧರಿಸಿ ಖ್ಯಾತ ನಿರ್ದೇಶಕ ಬಸು ಚಾಟರ್ಜಿ ಹಿಂದಿ ಸಿನಿಮಾ ಮಾಡಿದ್ದಾರೆ.

ಒಂದು ಅನಿರೀಕ್ಷಿತ ಅಪಘಾತದ ನಂತರ ನೀರ ಮಾನ್ವಿಯವರು ೫೦ ವರ್ಷ ಏನೂ ಬರೆಯದೆ ಮೌನವಾಗುಳಿದರು. ಅಪಾರ ಕ್ರಿಯಾಶೀಲ ಒತ್ತಡವಿದ್ದೂ, ಏನೂ ಮಾಡದೇ ಸುಮ್ಮನಿರುವುದು, ನಿಜಕ್ಕೂ ಆಘಾತಕಾರಿ ಅನುಭವ ಹಾಗೂ ಕನ್ನಡ ವಾಚಕ ಪ್ರಪಂಚದ ದುರಾದೃಷ್ಟವೇ ಸೈ.

ಕನ್ನಡದ ದೊಡ್ಡ ವಿಮರ್ಶಕರಂತೆ ಇವರನ್ನು ‘ನವ್ಯ ಕತೆಗಾರ’ ಎಂದು ಕರೆಯಲು ನನ್ನ ಮನಸ್ಸು ಯಾಕೊ ಒಪ್ಪುತ್ತಿಲ್ಲ… ಸಾರಿ..

ಈ ಅಪರೂಪದ ಹಿರಿಯ ಸಾಹಿತ್ಯ ಸಂಗಾತಿಗೆ ಅಂತಿಮ‌ ನಮನಗಳು.

-ಆರಿಫ್‌ ರಾಜಾ, ಕವಿ