ಅಂಗಳದ ಜಿಟಿಜಿಟಿ ಮಳೆಗೆ
ಒಳಗೆ ಭೋರ್ಗರೆವ ಅಲೆಗೆ
ನನ್ನೊಳಗಿನ ಭಾವ
ತಪಸ್ವಿ!

ಜಗವೆಲ್ಲಾ ಹಾಡು, ಹಬ್ಬ
ನಾ ಸದಾ ಭ್ರಮಿತ
ಒಳಗೆಲ್ಲಾ ರಾಶಿ ಹೂವು
ಹೂರಗೆ ಓಗೊಡದ ಸ್ವರ
ಶಬ್ದವಿಲ್ಲದ ಈ ಮಾತು ಅಸಹನೀಯ
ಹೀಗೆಕೆ ನಾ ಮೌನಿ?

ಕೇಳು ಈ ಪರಿಭಾಷೆ,
ಕಡಲು ಹರಿದಷ್ಟು ತೊರೆ
ದಡ ಮುಟ್ಟದ ನದಿ, ಖಾಲಿಯಾಗುವುದೇನು?
ತುಂಬಿಕೋ ಒಳಜಗವ, ಹೂರಕ್ಕೆ ಅಂತರವಿರಲಿ
ಭಾರವೇನಲ್ಲ, ಬರೆದೇ ಬರಿದಾಗು ಒಮ್ಮೆ
ಹೊರನಡೆದುಬಿಡು ಮೌನವಾಗಿ,
ಬದುಕಿಗೊಂದೆ ದಾರಿ
ನಿನ್ನೊಳದಾರಿ!