ಆನಂದ್ ಕುಂಚನೂರ ಬರೆದ ಎರಡು ಕವಿತೆಗಳು
“ಮುಟ್ಟಾಟದ ಆಟ ಮುಂದುವರಿಯುತ್ತಲೇ ಇದೆ
ಬಾಲ್ಯದಲ್ಲಿ
ಅವಳು ಇತರರನ್ನು ಮುಟ್ಟಿ ಓಡುತ್ತಿದ್ದಳು.
ಈಗ
ತನ್ನನ್ನೇ ಯಾರೂ ಮುಟ್ಟದಂತೆ ನೋಡಿಕೊಂಡು ಓಡಬೇಕು
ಬಾಲ್ಯದಲ್ಲಿ
ಸಿಕ್ಕಿಬೀಳುವುದೇ ಆಟದ ಉಲ್ಲಾಸ.
ಈಗ
ಸಿಕ್ಕಿಬೀಳದಿರುವುದೇ ಬದುಕಿನ ಕೌಶಲ್ಯ.” -ಆನಂದ್ ಕುಂಚನೂರ ಬರೆದ ಎರಡು ಕವಿತೆಗಳು

