Advertisement
ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

ಗಂಟಿಚೋರರ ತುಡುಗಿನ ಲೋಕ

ಇದೊಂದು ಭಿನ್ನವಾದ ಕಳವು. ಮೊದಲೇ ಇಂತಹ ಊರಲ್ಲಿ ನಾಟಕ, ಬಯಲಾಟ ಅಥವಾ ಪಾರಿಜಾತ ನಡೆಯುವ ಸುದ್ದಿ ತಿಳಿದು, ಆ ನಾಟಕದ ರಾತ್ರಿ ಕಳ್ಳತನ ಮಾಡುವುದಕ್ಕೆ ಆಯಾ ಊರುಗಳಲ್ಲಿ ಮೊದಲೇ ಸುತ್ತಿ ಶ್ರೀಮಂತರ ಮನೆಗಳನ್ನು ಗುರುತು ಮಾಡಿ ತುಡುಗು ಮಾಡುತ್ತಿದ್ದರು. ಮುಖ್ಯವಾಗಿ ಹಿಂದೆ ಉತ್ತರ ಕರ್ನಾಟಕದಲ್ಲಿ ನಿರಂತರವಾಗಿ ನಾಟಕಗಳು ನಡೆಯುತ್ತಿದ್ದುದರಿಂದ ಇದರ ಲಾಭವನ್ನು ಗಂಟಿಚೋರರು ತುಡುಗು ಮಾಡಲು ಬಳಸುತ್ತಿದ್ದರು. ಅರುಣ್ ಜೋಳದ ಕೂಡ್ಲಿಗಿ ಬರೆಯುವ ಗಂಟಿಚೋರರ ಕಥನದ ಐದನೆಯ ಕಂತು ಇಲ್ಲಿದೆ.

Read More

ವಡ್ಡಾರಾಧನೆಯ ವಿದ್ಯುತ್ ಚೋರನೆಂಬ ರಿಸಿಯು ಗಂಟಿಚೋರನಿರಬಹುದೇ?

ಜೈನಧರ್ಮದ ಪಾರಮ್ಯವನ್ನು ಸಾರುವ ಕೃತಿಗಳು ಕಳ್ಳತನವನ್ನು ಪಾಪವೆಂದು ಹೇಳುತ್ತವೆ. ಈ ಹಿನ್ನೆಲೆಯನ್ನು ಗಮನಿಸುತ್ತಾ ಗಂಟಿಚೋರ್ ಸಮುದಾಯದ ಜತೆ ಇದನ್ನು ತಳಕುಹಾಕಿದರೆ ಕೆಲವು ಸಂಗತಿಗಳು ಹೊಳೆಯುತ್ತವೆ. ಜಿನಧರ್ಮ ಕಳ್ಳತನವನ್ನು ‘ಪಾಪ’ ಎನ್ನುವುದಕ್ಕೆ ಪೂರಕವಾಗಿ ಎಂಬಂತೆ ಗಂಟಿಚೋರ್ ಸಮುದಾಯದಲ್ಲಿ ‘ಪಾಪನೋರು’ ಎನ್ನುವ ಬೆಡಗೊಂದು ಇರುವುದನ್ನು ಗಮನಿಸಬಹುದು. ಈ ಬೆಡಗು ತಮ್ಮನ್ನು ‘ಪಾಪದವರು’ ಅಥವಾ ಜಿನಧರ್ಮದ ಪ್ರಕಾರ ‘ಪಾಪ ಕಾರ್ಯದಲ್ಲಿ’ ತೊಡಗಿದವರು ಎನ್ನುವುದರ ಸಾಂಕೇತಿಕವಾಗಿ ಬಂದಿರಬಹುದೇ…

Read More

`ಗಂಟಿಚೋರರು’ ಮೂಲತಃ ಸೈನಿಕರಾಗಿದ್ದರೆ?

ಠಕ್ಕರ ಹಿನ್ನೆಲೆಯಲ್ಲಿ ಗಂಟಿಚೋರರನ್ನು ನೋಡಿದರೆ ಮತ್ತೊಂದು ಆಯಾಮ ತೆರೆದುಕೊಳ್ಳುತ್ತದೆ. ಠಕ್ಕರು ದೊಡ್ಡಮಟ್ಟದ ಲೂಟಿ, ಕೊಲೆ ಸುಲಿಗೆ ಮುಂತಾದವುಗಳ ಮೂಲಕ ಜನರನ್ನು ಭಯಭೀತರನ್ನಾಗಿಸುತ್ತಿದ್ದರು. ಅವರು ಹೆಚ್ಚಾಗಿ ವ್ಯಾಪಾರಿಗಳನ್ನು ಲೂಟಿ ಮಾಡುತ್ತಿದ್ದರು. ಹಾಗಾಗಿ ಇವರು ಒಂದು ರೀತಿಯಲ್ಲಿ ಅಲೆಮಾರಿ ಕಳ್ಳರಾಗಿದ್ದರು. ಆದರೆ ಗಂಟಿಚೋರರ ಹೆಸರಲ್ಲೇ ‘ಗಂಟುಕಳ್ಳರು’ ಎಂದಿರುವುದು ಇವರ ಕಳ್ಳತನದ ಸ್ವರೂಪವನ್ನು ಕಾಣಿಸುತ್ತದೆ. ಹೀಗಾಗಿಯೇ ಇವರನ್ನು ಸಂತೆಕಳ್ಳರು ಎಂದೂ ಕರೆಯುತ್ತಿದ್ದರು. 
ಅರುಣ್ ಜೋಳದ ಕೂಡ್ಲಿಗಿ ಬರೆಯುವ ಗಂಟಿಚೋರರ ಕಥನದ ಮೂರನೇಯ ಕಂತು ಇಲ್ಲಿದೆ.

Read More

ಠಕ್ಕರ ಸಲಹುವ `ಕಾಳಿ’ ಮತ್ತು ಠಕ್ಕದೀಕ್ಷೆ

ಸರ್ವಶಕ್ತನ ಹೆಂಡತಿಯನ್ನು ದೇವಿ, ಭವಾನಿ, ಕಾಳಿ- ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಅವಳು ಒಂದು ಬೊಂಬೆಯನ್ನು ಮಾಡಿದಳು. ಅದಕ್ಕೆ ಜೀವಶಕ್ತಿ ತುಂಬಿದಳು. ಅದು ಜೀವ ತುಂಬಿಕೊಂಡ ಕೂಡಲೇ, ತನ್ನ ಬಹಳ ಮಂದಿ ಭಕ್ತರನ್ನು ಕೂಡಿಸಿದಳು. ಅವಳು ಅವರಿಗೆ ಠಕ್ಕರು ಎಂದು ಹೆಸರಿಟ್ಟಳು. ಅವರಿಗೆಲ್ಲಾ ಠಕ್ಕ ವೃತ್ತಿಯನ್ನು ಅದರ ಚಮತ್ಕಾರಗಳನ್ನು ಕಲಿಸಿದಳು. ಅದರ ಗುಟ್ಟುಗಳನ್ನು ಅವರೆಲ್ಲಾ ಸರಿಯಾಗಿ ಅರಿತುಕೊಳ್ಳುವಂತೆ ಮಾಡಲು, ತಾನು ರೂಪಿಸಿ ಜೀವ ನೀಡಿದ್ದ ಬೊಂಬೆಯನ್ನು ತನ್ನ ಕೈಯಾರೆ ನಾಶ ಮಾಡಿದಳು. ಅವಳು ಠಕ್ಕರಿಗೆ…

Read More

ಅರುಣ್ ಜೋಳದಕೂಡ್ಲಿಗಿ ಬರೆಯುವ ಹೊಸ ಸರಣಿ ‘ಗಂಟಿಚೋರರ ಕಥನಗಳು’

ಭಾರತದ ಕೃಷಿ ಮತ್ತು ವ್ಯವಸಾಯದ ಜತೆ ಬೆಸೆದುಕೊಂಡಿದ್ದ ಕುಶಲಕರ್ಮಿಗಳನ್ನೂ, ಅರಣ್ಯವಾಸಿ, ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳನ್ನು ನಿಯಂತ್ರಿಸಲು ಬ್ರಿಟಿಷ್ ಆಡಳಿತ ರೂಪಿಸಿದ ಕಾಯ್ದೆ ‘ಕ್ರಿಮಿನಲ್ ಟ್ರೈಬ್ಸ್ ಆಕ್ಟ್’. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕವೂ ಇದು ಮುಂದುವರೆಯಿತು. ಇದರಿಂದಾಗಿ ಅಲೆಮಾರಿ ಸಮುದಾಯಕ್ಕೆ ಸೇರಿದ ಗಂಟಿಚೋರರು ಹಾಗೂ ಅಂತಹುದೇ ಇತರ ಸಮುದಾಯದ ಜನರು ಪಡಿಪಾಟಲು ಅನುಭವಿಸಬೇಕಾಯಿತು.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನುಡಿ ರಂಗವಲ್ಲಿ: ಶ್ರುತಿ ಬಿ.ಆರ್.‌ ಕಥಾಸಂಕಲನಕ್ಕೆ ಡಾ. ರಾಜೇಂದ್ರ ಚೆನ್ನಿ ಮುನ್ನುಡಿ

‘ಎಲ್ಲೆಗಳ ದಾಟಿದವಳು’ ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ಹಾಗೂ ತುಂಟತನದ ಸಂಬಂಧವನ್ನು ಕತೆಯ ಅರ್ಥಪೂರ್ಣ ಭಾಗವನ್ನಾಗಿಸುತ್ತದೆ. ಏಕೆಂದರೆ ಕತೆಯ ಮುಖ್ಯ…

Read More

ಬರಹ ಭಂಡಾರ