Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ದೇವರಂಥಾ ಗೆಳೆಯ… ನನ್ನ ಗಣೇಶ: ಆಶಾ ಜಗದೀಶ್ ಬರಹ

ನನ್ನ ಬಾಲ್ಯದ ಪುಟಗಳ ಮೇಲೆ ಅಚ್ಚೊತ್ತಿರುವ ಗಣೇಶನ ನೆನಪುಗಳು, ಬೆಳೆಯುತ್ತಾ ಬೆಳೆಯುತ್ತಾ ದೊಡ್ಡವರು ಎನಿಸಿಕೊಳ್ಳುವ ಹೊತ್ತಿಗೆ, ತೀವ್ರತೆಯನ್ನು ಕಳೆದುಕೊಳ್ಳತೊಡಗಿದ್ದವು. ಹಾಸ್ಟೆಲ್‌ನಲ್ಲಿ ಮನೆಯಲ್ಲಿ ಮಾಡುವಂತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಗೆಳತಿಯರ ಮುಂದೆ ನಗೆಪಾಟಲಿಗೆ ಈಡಾಗುವ ಭಯವಿತ್ತು. ಆದರೆ ಗಣೇಶ ಆ ಹೊತ್ತಿಗೆಲ್ಲಾ ಗೆಳೆಯನಂತಾಗಿ ಹೋಗಿದ್ದ. ಎಂಥದ್ದೇ ಸಮಸ್ಯೆ ಎದುರಾದರೂ, ‘ವಿಘ್ನೇಶ್ವರ ಕಾಪಾಡು ತಂದೆ’ ಎಂದುಕೊಂಡರೆ ಸಾಕು ಅವ ಕಾಪಾಡೇ ಕಾಪಾಡ್ತಾನೆ ಎನ್ನುವುದೊಂದು ಬಲವಾದ ನಂಬಿಕೆಯಾಗಿ ಮನಸಿನಲ್ಲಿ ಆಳವಾಗಿ ಬೇರೂರಿತ್ತು. ಈಗಲೂ ಹಾಗೇ, ಸಮಸ್ಯೆ ಎಂದರೆ ಸಾಕು ಮೊದಲು ನಾಲಿಗೆ ನೆನೆಸಿಕೊಳ್ಳುವುದು ಅವನನ್ನೇ.
ತಮ್ಮ ಪಾಲಿಗೆ ಗೆಳೆಯನಂತೆ ಆಗಿರುವ ಗಣೇಶನ ಕುರಿತು ಆಶಾ ಜಗದೀಶ್‌ ಬರಹ ನಿಮ್ಮ ಓದಿಗೆ

Read More

ಆಶಾ ಜಗದೀಶ್‌ ಬರೆದ ಈ ದಿನದ ಕವಿತೆ

“ಬಾನಿಗೆ ತೂಗುಬಿಟ್ಟ ತೂಗುದೀಪದ
ಸೊಡರು ತುಯ್ಯುತ್ತಲಿರುವಾಗ
ಒಂದು ಜೀವಂತ ಗ್ರಹ ಮಂಡಲನ್ನು
ಬಯಸುತ್ತಿದೆ ಪ್ರತಿ ನಕ್ಷತ್ರವೂ
ಎಷ್ಟೇ ವೇಗವಿರಲಿ ಎಷ್ಟೇ ದೈತ್ಯನಿರಲಿ
ಒಂದು ಉಸಿರಿನ ಚಲನೆಯಿಲ್ಲದೆ
ಜೀವಂತವಾಗುವುದಾರೂ ಹೇಗೆ
ನಿನ್ನ ಒಂದು ಸ್ಪರ್ಶವಾದರೂ
ತಂಗಾಳಿಯ ಹೊಟ್ಟೆ ಹೊಕ್ಕು
ಮೈತಾಗದಿದ್ದರೆ…”-ಆಶಾ ಜಗದೀಶ್‌ ಬರೆದ ಈ ದಿನದ ಕವಿತೆ

Read More

ಪ್ರೀತಿಯೆಂಬ ಭಾವ ಮಾತ್ರ ಸ್ಥಾಯಿಯಾಗಲಿ…: ಆಶಾ ಜಗದೀಶ್ ಅಂಕಣ

ನಂತರದ ನಾಲ್ಕೈದು ದಿನಗಳು ನಿತ್ಯದ ನಿಯತಿಯಲ್ಲಿಯೇ ಕಳೆದವು. ಅವಳು ನಮ್ಮಲ್ಲೇ ಒಬ್ಬಳಂತಾಗಿ ಹೋಗಿದ್ದಳು. ಯಾವ ಜನ್ಮದ ಋಣವೋ ಎಂಬಂತೆ. ಪ್ರತಿ ನಿತ್ಯ ಅವಳನ್ನು, ಅವಳ ಮಕ್ಕಳನ್ನು ನೋಡುವುದು ಅಭ್ಯಾಸವಾಯಿತು. ಇವತ್ತೂ ಎಂದಿನಂತೆಯೇ ಕೋಣೆಯ ಒಳ ಹೋಗಿ ಬಗ್ಗಿ ನೋಡಿದೆ. ಅವಳಾಗಲೀ ಅವಳ ಒಂದೇ ಒಂದು ಕೂಸೇ ಆಗಲೀ ಎಲ್ಲಿಯೂ ಕಾಣಲಿಲ್ಲ… ಮನಸು ಮುದುಡಿ ಕಣ್ಣುಗಳು ತುಂಬಿಕೊಂಡವು.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

Read More

ಹರಿಸಲಾರದ ಸಮುದ್ರವಿದೆ ಅವನಲ್ಲೂ..: ಆಶಾ ಜಗದೀಶ್ ಅಂಕಣ

ಇಷ್ಟೆಲ್ಲ ಗೊಂದಲ, ಪ್ರಶ್ನೆಗಳ ನಡುವೆಯೂ ನಾನೇಕೆ ಪತಿಪೂಜೆ ಮಾಡುತ್ತೇನೆ ಎಂದರೆ ಅದು ಧಾರ್ಮಿಕ ಕಟ್ಟಳೆಯಲ್ಲ ಅದು ಹೃದಯದ ನಿವೇದನೆ. ನನ್ನವನೆದುರು ನನ್ನ ಪ್ರೀತಿಯನ್ನು ತೋರಿಸಿಕೊಳ್ಳುವ ಒಂದು ವಿಧಾನ. ನಾವು ಹೆಣ್ಣುಮಕ್ಕಳಿಗೆ ಇಂತಹ ಹಲವಾರು ದಾರಿಗಳಿವೆ. ನಾವು ಯಾವುದನ್ನೂ ಮುಚ್ಚಿಟ್ಟುಕೊಳ್ಳಲಾರೆವು. ಕೋಪ, ಅಸಹನೆ, ನೋವು, ನಗು, ಅಳು… ಎಲ್ಲವನ್ನೂ ತೋರಿಸಿಕೊಂಡುಬಿಡುತ್ತೇವೆ. ಆದರೆ ಗಂಡಿಗೆ ಹಾಗಲ್ಲ. ಅವನು ತನ್ನ ನೋವನ್ನಾಗಲೀ, ಅಳುವನ್ನಾಗಲೀ, ಕಣ್ಣೀರನ್ನಾಗಲೀ ತೋರಿಸುವಂತೆಯೇ ಇಲ್ಲ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

Read More

ಪ್ರೀತಿಯ ಅರ್ಥವಾದರೂ ಏನು ಹೇಳು?: ಆಶಾ ಜಗದೀಶ್ ಅಂಕಣ

ಏನೆಲ್ಲಾ ನಮ್ಮ ಆಕಾಂಕ್ಷೆಗಳನ್ನು ನಮ್ಮ ಮಕ್ಕಳ ತಲೆ ಮೇಲೆ ಹೇರಿ ಬೆಳೆಸುತ್ತಾ ಹೋಗುತ್ತೇವೆ. ಆದರೆ ಮುಖ್ಯವಾಗಿ ಏನನ್ನು ಕಲಿಸಬೇಕಿತ್ತೋ ಅದನ್ನೇ ಕಲಿಸದೆ ಹೋಗುತ್ತೇವೆ. ನಾವು ಕಲಿಸಲೇ ಬೇಕಾದದ್ದು ಎನ್ನುವ ಎಷ್ಟೋ ಇದೆ. ನಮ್ಮನ್ನು ಜೋಪಾನ ಮಾಡುವ ಅದಷ್ಟೋ ಗುಣಗಳಿವೆ. ಒಬ್ಬರನ್ನು ನಿಷ್ಕಲ್ಮಷವಾಗಿ ಇಷ್ಟಪಡುವುದನ್ನು, ಪ್ರೀತಿಸುವುದನ್ನು ಕಲಿಸುವುದೇ ಇಲ್ಲ ಯಾಕೆ… ಹುಟ್ಟಂದಿನಿಂದ ಬಂದ ಮುಗ್ಧತೆಯನ್ನ ಕೊಂದು ಅಲ್ಲಿ ಸ್ವಾರ್ಥ ಮತ್ತು ಲೋಭವನ್ನ ಮಾತ್ರ ತುಂಬಿ ನೀರೆರೆದು ಬೆಳೆಸುತ್ತಾ ಹೋಗುತ್ತೇವೆ ಯಾಕೆ…
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ